എസ് .ഡി. പി. എച്ച്. എസ്. ധർമ്മത്തടുക്ക

Schoolwiki സംരംഭത്തിൽ നിന്ന്
(11051 എന്ന താളിൽ നിന്നും തിരിച്ചുവിട്ടതു പ്രകാരം)
സ്കൂളിനെക്കുറിച്ച്സൗകര്യങ്ങൾപ്രവർത്തനങ്ങൾഹൈസ്കൂൾഹയർസെക്കന്ററിചരിത്രംഅംഗീകാരങ്ങൾ
എസ് .ഡി. പി. എച്ച്. എസ്. ധർമ്മത്തടുക്ക
11051 School1.jpg
വിലാസം
DHARMATHADKA

DHARMATHADKA പി.ഒ.
,
671324
സ്ഥാപിതം1976
വിവരങ്ങൾ
ഫോൺ04998 264080
ഇമെയിൽ11051dharmathadka@gmail.com
കോഡുകൾ
സ്കൂൾ കോഡ്11051 (സമേതം)
എച്ച് എസ് എസ് കോഡ്14111
യുഡൈസ് കോഡ്32010100610
വിക്കിഡാറ്റQ87645660
വിദ്യാഭ്യാസ ഭരണസംവിധാനം
റവന്യൂ ജില്ലകാസർഗോഡ്
വിദ്യാഭ്യാസ ജില്ല കാസർഗോഡ്
ഉപജില്ല മഞ്ചേശ്വരം
ഭരണസംവിധാനം
ലോകസഭാമണ്ഡലംകാസർഗോഡ്
നിയമസഭാമണ്ഡലംമഞ്ചേശ്വരം
താലൂക്ക്കാസർഗോഡ്
ബ്ലോക്ക് പഞ്ചായത്ത്മഞ്ചേശ്വരം
തദ്ദേശസ്വയംഭരണസ്ഥാപനംപുത്തിഗെ പഞ്ചായത്ത്
വാർഡ്01
സ്കൂൾ ഭരണ വിഭാഗം
സ്കൂൾ ഭരണ വിഭാഗംഎയ്ഡഡ്
സ്കൂൾ വിഭാഗംപൊതുവിദ്യാലയം
സ്കൂൾ തലം8 മുതൽ 12 വരെ 8 to 12
മാദ്ധ്യമംഇംഗ്ലീഷ് ENGLISH, കന്നട KANNADA
സ്ഥിതിവിവരക്കണക്ക്
ആൺകുട്ടികൾ344
പെൺകുട്ടികൾ345
ആകെ വിദ്യാർത്ഥികൾ689
അദ്ധ്യാപകർ25
ഹയർസെക്കന്ററി
ആൺകുട്ടികൾ116
പെൺകുട്ടികൾ112
ആകെ വിദ്യാർത്ഥികൾ228
സ്കൂൾ നേതൃത്വം
പ്രിൻസിപ്പൽRAMACHANDRA BHAT N
പ്രധാന അദ്ധ്യാപകൻGOVINDA BHAT E H
പി.ടി.എ. പ്രസിഡണ്ട്SHIVAPRASAD SHETTY K
എം.പി.ടി.എ. പ്രസിഡണ്ട്PUSHPA
അവസാനം തിരുത്തിയത്
10-01-2024Ranjithsiji



കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് SDPHSS DHARMATHADKA . 1976 ലാണ് ഈ വിദ്യാലയം സ്ഥാപിതമായത്. പുത്തിഗെ PUTHIGE പഞ്ചായത്തിലെ DHARMATHADKA എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 8 മുതൽ 12 വരെ 8 to 12 ക്ലാസുകൾ നിലവിലുണ്ട്.


History

The school.. Readmore

Management

Shree Durgaparameshwari Aided Higher secondary school is situated in Badoor village of Puthige Grama panchayath in Kasaragod District.This institution was founded by Late Sri.Nerolu Niduvaje Ramachandra Bhat on 11.6.1976.Pupils of Dharmathadka area had learning fecility upto 7 th standard.Under the management of Late.Sri. Ramachandra Bhat N there was an Upper Primary school in Dharmathadka.Pupils of this locality had to go Paivalike,Angadimogar.Perla etc which were too far from Dharmathadka,for higher education .So as per the demand of locals, Late.Sri. Ramachandra Bhat started 8 th standard in 1976,9 th stad in 1977 and 10 th standard in 1978.In 1981 the school got the permanent recognition.Late Sri.N Ramachandra Bhat was the founder manager of this school.To construct a good building people of Dharmathadka and nearby areas contributed a lot.From 7.8.1994 Late Sri Nerolu Niduvaje Subbanna Bhat took the charge of the manager of this school.He was the headmaster of AUP School Dharmathadka for 37 years and tried hard to   uplift this institution.By his determination and hard work the school was upgraded as higher secondary school from 26.8.2014.From 31.5.2008 onwards Sri.Shankaranarayana Bhat N is the Manager of the school.The school has very good infrastructure fecilities and well equipped with modern learning fecilities.

Manager Period Photo
Nerolu Niduvaje Ramachandra Bhat 11-6-1976 to 6-8-1994
Ramachandrabhat.jpg
N Subbanna Bhat 7-8-1994 to 30-5-2008
IMG-20220131-WA0004.jpg
Shankara Narayana Bhat N 31-05-2008 onwards
Nshankaranarayana bhat.jpg

School Staff

The list of school staff for the academic year 2021-22
Name of the Teacher Subject
E H Govinda Bhat Head Master
K Ramakrishna Bhat HST Natural Science
Sheeja T K HST Hindi
Shashi Kumar P HST Mathematics
Usha K R HST English
N Gangamma HST Hindi
Ishwari D HST Kannada
Thulasi K HST English
Vidya Saraswathi HST Physical Science
Usha Padma G HST Physical Science
Sunitha K HST Social Science
Shwetha Kumari M HST Kannada
Pradeep K HST Mathematics
Umadevi M L HST English
Soumia M HST Kannada
Shivanarayana Bhat HST Sansrit
Shivaprasad C HST Social Science
Vichetha B HST Social Science
Prashanth Holla N HST Kannada
Shilpa B N HST Natural Science
Rakshith Kumar M HST Mathematics
Shashidhara K HST Mathematics
Sooryanarayana Bhat P HST Physical Science
Raja Kumara K HST Drawing
Santhosh Kumar M HST Physical Education
Vijayashree B Clerk
Keshav Prasad E Office attendent
Latha M Office attendent
Dinesh K FTM

Former Head Masters

The list of Headmaster of our school from 1976 onwards
Name of the Head Masters Period
E Rama Bhat 1-6-1976 to 31-3-1981
S Subrahmanya Bhat 1-4-1981 to 31-3-2003
Subrahm.jpg
Ramachandra U 1-04-2003to 31-03-2010
Rama (1).jpg
Ramachandra Bhat N 1-4-2010 to 05-9-2019
NRB.jpg
Govinda Bhat E H 06-09-2019 onwards


Acheivements

  • Our school student Mr Vinyas K H has awarded the Inspire Award for the year 2021-22.


  • Hitesh Shetty, a 10th standard student of Sri Durgaparameshwari Higher Secondary School Dharmathadka , has been selected from the Kerala State boys team to take part in the 34th National Sub Junior Softball Championships to be held from December 15 to 18 in Gujarat


Previous SSLC Results

The SSLC Results for the year 2021-22

Congratulations to all students for historic achievement in the SSLC Exam ,March 2022,during this covid pandemic.Heartful of thanks to everyone behind this success, Especially Parents,HM and all the staff.216out of 216 ts Eligible for Higher studies.16 students got full A+,4 students just missed in one subject and got 9 A+.All the best for future studies.





The SSLC Results for the year 2020-21

SSLc.png

Congratulations to all students for historic achievement in the SSLC Exam ,March 2021,during this covid pandemic.Heartful of thanks to everyone behind this success, Especially Parents,HM and all the staff.180 out of 180 Students Eligible for Higher studies.31 students got full A+,18 students just missed in one subject and got 9 A+.All the best for future studies.




Programmes

  1. International Yoga Day celebrations: *ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ* ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಹಮ್ಮಿಕೊಳ್ಳಲಾಯಿತು.ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಯೋಗ ಗುರುವಾಗಿರುವ ಪ್ರವೀಣ್ ಸೊಂಕಲ್ ,ಯೋಗದ ಮಹತ್ವವನ್ನು ತಿಳಿಸುತ್ತಾ "ಯೋಗದಿಂದ ರೋಗ ದೂರ, ನಮ್ಮ ದೇಹ ಹುಟ್ಟಿನಿಂದ ಸಾವಿನ ವರೆಗೆ ಸಮತೋಲನದಿಂದ ಸಾಗಲು ಯೋಗವು ಪ್ರಧಾನ ಪಾತ್ರವಹಿಸುತ್ತದೆ, ನಿತ್ಯಯೋಗಾಭ್ಯಾಸಿಗಳಾಗಿ ಎಂದರು". ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ - "ವಿಶ್ವಕ್ಕೆ ಯೋಗವು ಭಾರತದ ಕೊಡುಗೆಯಾಗಿದೆ, ಆಧ್ಯಾತ್ಮದೊಂದಿಗೆ ಸಮ್ಮಿಳಿತವಾದ ವಿಜ್ಞಾನವೇ ಯೋಗ"ಎಂಬ ಸಂದೇಶ ನೀಡಿದರು. ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕ ಶ್ರೀ ರಾಮಕೃಷ್ಣ ಭಟ್ ಶುಭಾಶಂಸನೆಗೈದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಶಿವನಾರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ವಿಚೇತ ಸ್ವಾಗತಿಸಿ, ಸಂತೋಷ್ ಕುಮಾರ್ ಎಂ ವಂದಿಸಿದರು. ಬಳಿಕ ಪ್ರವೀಣ್ ಆಚಾರ್ಯ ಅವರು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.
  2. School level club inaugurations: ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿಯ ಪ್ರೌಢಶಾಲಾ ವಿಭಾಗದ 2022-23 ಶೈಕ್ಷಣಿಕ ವರ್ಷದ ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯರಾಗಿರುವ "ಇ.ಎಚ್ ಗೋವಿಂದ ಭಟ್" ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ - "ತರಗತಿ ಕೊಠಡಿಯಲ್ಲಿ ಅಭ್ಯಸಿಸುವ ವಿಷಯಗಳ ಪ್ರಾಯೋಗಿಕ ಉಪಯೋಗವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಕ್ಲಬ್ ‌ಗಳು ಉಪಯುಕ್ತವಾದುದು , ಇಂತಹ ಚಟುವಟಿಕೆಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು" ಎಂದು ಹುರಿದುಂಬಿಸಿದರು.ಜೀವಶಾಸ್ತ್ರ ಅಧ್ಯಾಪಕ ರಾಮಕೃಷ್ಣ ಭಟ್,ಸಂಸ್ಕೃತ ಅಧ್ಯಾಪಕ ಶಿವನಾರಾಯಣ ಭಟ್ ಇವರು ಶುಭಾಶಂಸನೆಗೈದರು. ವಿಜ್ಞಾನ,ಗಣಿತ,ಸಮಾಜ ವಿಜ್ಞಾನ,ವಿದ್ಯಾರಂಗ,ಸಂಸ್ಕೃತ,ಐ.ಟಿ,ಆರೋಗ್ಯ,ಆರ್ಟ್ಸ್ ಕ್ಲಬ್,ಸ್ಪೋರ್ಟ್ಸ್ ಕ್ಲಬ್, ಎಕೋ ಕ್ಲಬ್,ಎಂಬೀ ಕ್ಲಬ್ ಗಳಿಗೆ ವಿದ್ಯಾರ್ಥಿ ಪದಾಧಿಕಾರಿಗಳನ್ನು ಈ‌ ಸಂದರ್ಭದಲ್ಲಿ ಆರಿಸಲಾಯಿತು. ಗಣಿತ ಅಧ್ಯಾಪಕ ಶಶಿಕುಮಾರ್, ಸಮಾಜ ವಿಜ್ಞಾನ ಶಿಕ್ಷಕಿ ಸುನಿತಾ ,ಕನ್ನಡ ಅಧ್ಯಾಪಿಕೆ ಶ್ವೇತಕುಮಾರಿ ಇವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರದಲ್ಲಿ ರಾಮ್ ಸ್ವರೂಪ ಆಳ್ವ ಸ್ವಾಗತಿಸಿ ಕು.ಲಾಸ್ಯ ವಂದಿಸಿದಳು.ಕು.ಪ್ರವೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದಳು. ಎಲ್ಲಾ ಶಿಕ್ಷಕ,ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
  3. School Pravesholthavam 2022: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್‌ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ ಪ್ರವೇಶೋತ್ಸವವು ಇಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಇವರು ವಹಿಸಿದರು. ಪಠ್ಯಾಧಾರಿತ ಕಲಿಕೆಯ ಜೊತೆಗೆ ವಿದ್ಯಾರ್ಥಿಗಳು ಶಿಸ್ತು - ಪ್ರೌಢಿಮತೆಯನ್ನೂ ಮೈಗೂಡಿಸಿಕೊಳ್ಳಬೇಕು ಎಂಬುದಾಗಿ ಉಪದೇಶಿಸಿದರು. ಶಾಲಾ ವ್ಯವಸ್ಥಾಪಕರಾಗಿರುವ ಎನ್ ಶಂಕರನಾರಾಯಣ ಭಟ್ ಇವರು " ಸಮರ್ಪಕ ಸಂಪನ್ಮೂಲಗಳ ಬಳಕೆಯ ಮೂಲಕ ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಬೇಕು" ಎಂದು ಕರೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾಗಿರುವ "ಇ.ಎಚ್ ಗೋವಿಂದ ಭಟ್" ಪ್ರಾಸ್ತಾವಿಕ ಮಾತುಗಳನ್ನಾಡಿ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ನಡೆಯ ಬಗ್ಗೆ ಸಲಹೆ ಸೂಚನೆಗಳನ್ನು ಇತ್ತರು. ಪ್ರವೇಶೋತ್ಸವ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ "ಶಶಿಧರ ಕೆ" ಸ್ವಾಗತಿಸಿ "ವಿಚೇತ. ಬಿ" ವಂದಿಸಿದರು. ಮಧ್ಯಾನ ಪಾಯಸದ ಊಟವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು
  4. Inaguration of various clubs: ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿಯ ಪ್ರೌಢಶಾಲಾ ವಿಭಾಗದ 2022-23 ಶೈಕ್ಷಣಿಕ ವರ್ಷದ ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯರಾಗಿರುವ "ಇ.ಎಚ್ ಗೋವಿಂದ ಭಟ್" ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ - "ತರಗತಿ ಕೊಠಡಿಯಲ್ಲಿ ಅಭ್ಯಸಿಸುವ ವಿಷಯಗಳ ಪ್ರಾಯೋಗಿಕ ಉಪಯೋಗವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಕ್ಲಬ್ ‌ಗಳು ಉಪಯುಕ್ತವಾದುದು , ಇಂತಹ ಚಟುವಟಿಕೆಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು" ಎಂದು ಹುರಿದುಂಬಿಸಿದರು.ಜೀವಶಾಸ್ತ್ರ ಅಧ್ಯಾಪಕ ರಾಮಕೃಷ್ಣ ಭಟ್,ಸಂಸ್ಕೃತ ಅಧ್ಯಾಪಕ ಶಿವನಾರಾಯಣ ಭಟ್ ಇವರು ಶುಭಾಶಂಸನೆಗೈದರು.ವಿಜ್ಞಾನ,ಗಣಿತ,ಸಮಾಜ ವಿಜ್ಞಾನ,ವಿದ್ಯಾರಂಗ,ಸಂಸ್ಕೃತ,ಐ.ಟಿ,ಆರೋಗ್ಯ,ಆರ್ಟ್ಸ್ ಕ್ಲಬ್,ಸ್ಪೋರ್ಟ್ಸ್ ಕ್ಲಬ್, ಎಕೋ ಕ್ಲಬ್,ಎಂಬೀ ಕ್ಲಬ್ ಗಳಿಗೆ ವಿದ್ಯಾರ್ಥಿ ಪದಾಧಿಕಾರಿಗಳನ್ನು ಈ‌ ಸಂದರ್ಭದಲ್ಲಿ ಆರಿಸಲಾಯಿತು.ಗಣಿತ ಅಧ್ಯಾಪಕ ಶಶಿಕುಮಾರ್, ಸಮಾಜ ವಿಜ್ಞಾನ ಶಿಕ್ಷಕಿ ಸುನಿತಾ ,ಕನ್ನಡ ಅಧ್ಯಾಪಿಕೆ ಶ್ವೇತಕುಮಾರಿ ಇವರು ಉಪಸ್ಥಿತರಿದ್ದರು.ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರದಲ್ಲಿ ರಾಮ್ ಸ್ವರೂಪ ಆಳ್ವ ಸ್ವಾಗತಿಸಿ ಕು.ಲಾಸ್ಯ ವಂದಿಸಿದಳು.ಕು.ಪ್ರವೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದಳು.ಎಲ್ಲಾ ಶಿಕ್ಷಕ,ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
  5. International Yoga day :ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಹಮ್ಮಿಕೊಳ್ಳಲಾಯಿತು.ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ಯೋಗ ಗುರುವಾಗಿರುವ ಪ್ರವೀಣ್ ಸೊಂಕಲ್ ,ಯೋಗದ ಮಹತ್ವವನ್ನು ತಿಳಿಸುತ್ತಾ "ಯೋಗದಿಂದ ರೋಗ ದೂರ, ನಮ್ಮ ದೇಹ ಹುಟ್ಟಿನಿಂದ ಸಾವಿನ ವರೆಗೆ ಸಮತೋಲನದಿಂದ ಸಾಗಲು ಯೋಗವು ಪ್ರಧಾನ ಪಾತ್ರವಹಿಸುತ್ತದೆ, ನಿತ್ಯಯೋಗಾಭ್ಯಾಸಿಗಳಾಗಿ ಎಂದರು". ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ - "ವಿಶ್ವಕ್ಕೆ ಯೋಗವು ಭಾರತದ ಕೊಡುಗೆಯಾಗಿದೆ, ಆಧ್ಯಾತ್ಮದೊಂದಿಗೆ ಸಮ್ಮಿಳಿತವಾದ ವಿಜ್ಞಾನವೇ ಯೋಗ"ಎಂಬ ಸಂದೇಶ ನೀಡಿದರು.ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕ ಶ್ರೀ ರಾಮಕೃಷ್ಣ ಭಟ್ ಶುಭಾಶಂಸನೆಗೈದರು.ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಶಿವನಾರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ವಿಚೇತ ಸ್ವಾಗತಿಸಿ, ಸಂತೋಷ್ ಕುಮಾರ್ ಎಂ ವಂದಿಸಿದರು.ಬಳಿಕ ಪ್ರವೀಣ್ ಆಚಾರ್ಯ ಅವರು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.
  6. PTA meeting and felicitation to SSLC A+ winners:ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.2022-23 ಶೈಕ್ಷಣಿಕ ವರ್ಷದ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಇಂದು(21/07/2022) ಶಾಲಾ ಸಭಾಂಗಣದಲ್ಲಿ ಜರಗಿತು.ಇದೇ ಸಂದರ್ಭ 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಹಾಗೂ ಪ್ಲಸ್ ಟು ಪರೀಕ್ಷೆಯಲ್ಲಿ ಉನ್ನತ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು.ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ A+ ಪಡೆದ 16 ವಿದ್ಯಾರ್ಥಿಗಳನ್ನು ,ಒಂಭತ್ತು ವಿಷಯಗಳಲ್ಲಿ A+ ಪಡೆದ 4 ವಿದ್ಯಾರ್ಥಿಗಳನ್ನು ಮತ್ತು ಹೈಯರ್ ಸೆಕೆಂಡರಿ ವಿಭಾಗದಲ್ಲಿ ಎಲ್ಲಾ ವಿಷಯಗಳಲ್ಲೂ A+ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಹಾಗೂ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.ಈ ಸುಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಅಶೋಕನ್ ಅವರ ಹೆತ್ತವರಾದ ಶ್ರೀಮತಿ ನಾರಾಯಣಿ ಅಮ್ಮ ಹಾಗೂ ಶ್ರೀ ಕಣ್ಣನ್ ದಂಪತಿಗಳ ಸ್ಮರಣಾರ್ಥ ನಗದು ಹಾಗೂ ಸ್ಮರಣಿಕೆಯನ್ನು ಎಲ್ಲಾ ವಿಷಯಗಳಲ್ಲಿ A+ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಇದರೊಂದಿಗೆ "ಮೇಪೋಡು ಶ್ರೀ ಸುಬ್ರಾಯ ಮಯ್ಯ' ದತ್ತಿನಿಧಿಯನ್ನು,ಕನ್ನಡ ಮಾಧ್ಯಮದಲ್ಲಿ ಉನ್ನತ ಸಾಧನೆಗೈದ ಆಯ್ದ ಎರಡು ವಿದ್ಯಾರ್ಥಿಗಳಿಗೆ ಶ್ರೀಮತಿ ಈಶ್ವರಿ ಟೀಚರ್ ವಿತರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಇಬ್ರಾಹಿಂ ಎನ್ ವಹಿಸಿದರು.ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್, ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ಎನ್ ರಾಮಚಂದ್ರ ಭಟ್, ಯು ಪಿ ಶಾಲೆಯ ವ್ಯವಸ್ಥಾಪಿಕೆ ಶ್ರೀಮತಿ ವಿಜಯ ಶ್ರೀ, ಹೈಯರ್ ಸೆಕೆಂಡರಿ ಶಿಕ್ಷಕರಾದ ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ಶುಭಾಶಂಸನೆಗೈದರು.ಕನ್ನಡ ಅಧ್ಯಾಪಿಕೆ ಶ್ರೀಮತಿ ಶ್ವೇತಾ ಕುಮಾರಿ ಎಂ. ವರಿದಿ ವಾಚಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತ ಗಣಿತ ಶಿಕ್ಷಕ ಅಶೋಕ್ ಕುಮಾರ್ ಟಿ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ರಕ್ಷಕ ಶಿಕ್ಷಕ ಸಂಘದ ಸಮಿತಿಯನ್ನು ಈ ಸಂದರ್ಭದಲ್ಲಿ ರೂಪಿಸಲಾಯಿತು.ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಶಾಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ ಹೆತ್ತವರ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಯಿತು.ಕಾರ್ಯಕ್ರಮಕ್ಕೆ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಶ್ರೀ ರಾಮಕೃಷ್ಣ ಭಟ್ ಸ್ವಾಗತಿಸಿ, ಶ್ರೀಮತಿ ಸೌಮ್ಯ ಎಂ ವಂದಿಸಿದರು, ಶಿವಪ್ರಸಾದ್ ಸಿ, ಪ್ರಶಾಂತ ಹೊಳ್ಳ ಎನ್ ಹಾಗೂ ಶಶಿಧರ ಕೆ ನಿರೂಪಣೆಯಲ್ಲಿ ಸಹಕರಿಸಿದರು.
  7. Sanskrit Quiz Programme:ಶ್ರೀರಾಮಾಯಣ ಮಾಸಾಚರಣೆಯ ಪ್ರಯುಕ್ತ ಸಂಸ್ಕೃತ ಸಂಘದ ವತಿಯಿಂದ ನಡೆಸಲ್ಪಟ್ಟ ರಾಮಾಯಣ ಪ್ರಶ್ನೋತ್ತರಿ ಸ್ಪರ್ಧೆಯಲ್ಲಿ ಹೆಚ್ಚಿನ ಮಕ್ಕಳು ಭಾಗವಹಿಸಿದರು. ವಿದ್ಯಾಲಯದ ಮುಖ್ಯ ಶಿಕ್ಷಕರಾದ ಶ್ರೀ ಗೋವಿಂದ ಭಟ್ ಆಶೀರ್ವಾದ ಪೂರ್ವಕ ಶುಭಾಶಂಸನೆ ಗೈದು ಚಾಲನೆಯನ್ನಿತ್ತರು. ಸಂಸ್ಕೃತ ಗುರುಗಳಾದ ಶ್ರೀ ಶಿವನಾರಾಯಣ ಭಟ್ಟ ಇವರು ವಿದ್ಯಾಲಯದ ಸರ್ವ ಗುರುಜನರ ಸಹಕಾರದೊಂದಿಗೆ ಸ್ಪರ್ಧೆ ಸಂಪನ್ನಗೊಳಿಸಿದರು. ವಿನ್ಯಾಸ್ 10 ಡಿ ಪ್ರಥಮತನುಶ್ ಕುಮಾರ್ 9 ಸಿ ದ್ವಿತೀಯ ಪ್ರತೀಕ್ಷಾ 8 ಡಿ ತೃತೀಯ. ಇವರಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿದ ವಿನ್ಯಾಸ್ ಮತ್ತು ತನುಶ್ ಕುಮಾರ್ ಉಪಜಿಲ್ಲಾ ಮಟ್ಟಕ್ಕೆ ಅರ್ಹತೆಗಳಿಸಿರುತ್ತಾರೆ.
  8. School Level Sastrolsavam:ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಧರ್ಮತ್ತಡ್ಕದಲ್ಲಿ ಶಾಲಾಮಟ್ಟದ ಶಾಸ್ತ್ರ ಮೇಳವು ಇಂದು(30/07/2022) ನಡೆಯಿತು. ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಾಲಾ ವ್ಯವಸ್ಥಾಪಕರಾದ ಶಂಕರನಾರಾಯಣ ಭಟ್ ಇವರು "ಪಠ್ಯಧಾರಿತ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು‌".ಶಾಲಾ ಮುಖ್ಯೋಪಾಧ್ಯಾಯರಾದ ಇ.ಎಚ್ ಗೋವಿಂದ ಭಟ್ ಇವರು ಸ್ಪರ್ಧೆಗಳಲ್ಲಿ‌ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಹಾರೈಸಿದರು.ಸ್ಟಾಫ್ ಸೆಕ್ರೆಟರಿ ರಾಮಕೃಷ್ಣ ಭಟ್ ಶುಭಾಶಂಸನೆಗೈದರು.ಶಾಲಾ ನಾಯಕಿ ಹರ್ನಿತ ಅಭ್ಯಾಗತರನ್ನು ಸ್ವಾಗತಿಸಿ,ರಾಮ್ ಸ್ವರೂಪ್ ಆಳ್ವ ವಂದಿಸಿದನು.ಲಾಸ್ಯ ಕಾರ್ಯಕ್ರಮವನ್ನು‌ ನಿರೂಪಿಸಿದಳು.ಈ ಸಂದರ್ಭ ಸುಮಾರು 200 ಕ್ಕೂ‌ ಹೆಚ್ಚು ಮಕ್ಕಳು ವಿಜ್ಞಾನ,ಗಣಿತ,ಐಟಿ,ಸಮಾಜ ವಿಜ್ಞಾನ,ವರ್ಕ್ ಎಕ್ಸ್ ಪೀರಿಯೆನ್ಸ್ ವಿಭಾಗಗಳಲ್ಲಿ ಸಕ್ರಿಯವಾಗಿ ಭಾಗವಹಿದಸಿ ತಮ್ಮ ಕೌಶಲವನ್ನು‌ ಪ್ರದರ್ಶಿಸಿದರು.
  9. Azadi Ka Amrith Maholsav:ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 76ನೆಯ ಸ್ವಾತಂತ್ರ್ಯ ಮಹೋತ್ಸವವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಯಿತು.ಹೈಯರ್ ಸೆಕೆಂಡರಿ ಪ್ರಾಂಶುಪಾಲ "ಶ್ರೀ ಎನ್ ರಾಮಚಂದ್ರ ಭಟ್" ದ್ವಜಾರೋಹಣ ಗೈದರು. ಶಾಲಾ ಮಕ್ಕಳು ವಿವಿಧ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಸಂಚರಿಸಿ ಸಂಭ್ರಮದ ಆಚರಣೆಯ ಮೆರುಗನ್ನು ಹೆಚ್ಚಿಸಿದರು.ನಂತರ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಎನ್ ಸುಬ್ರಾಯ ಭಟ್ "ಸಮರ ವೀರರ ಬಲಿದಾನದ ಫಲಿತಾಂಶವೇ ಇಂದಿನ ನಮ್ಮ ಸ್ವಾತಂತ್ಯ; ಇದನ್ನು ಅತಂತ್ರವಾಗಲು ಬಿಡಬಾರದು, ಸ್ವಾತಂತ್ರ್ಯ ಸಿಗುವುದರ ಹಿಂದಿನ ನಮ್ಮ ಹಿರಿಯರ ತ್ಯಾಗವನ್ನು ಇಂದಿನ ಮಕ್ಕಳು ಅರಿತು ಗೌರವಿಸಬೇಕು" ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮಕ್ಕೆ ಆಗಮಿಸಿದ ನಿವೃತ್ತ ಸೈನಿಕರಾದ "ಶ್ರೀ ಜಿ ಅಪ್ಪಯ್ಯ ಮಣಿಯಾಣಿ" ಇವರು - "ಭಾರತದ ವೀರ ಯೋಧರ ತ್ಯಾಗ ಬಲಿದಾನಗಳು, ಅವರ ಬದುಕಿನ ಮಾರ್ಗ ನಮಗೆ ಆದರ್ಶವಾಗಬೇಕು,ಭವಿಷ್ಯದಲ್ಲಿ ಹೆಚ್ಚು ಹೆಚ್ಚು ಯುವಕರು ಸೇನೆಯನ್ನು ಸೇರಿ ರಾಷ್ಟ್ರ ಸೇವೆಯನ್ನು ಗೈಯುವಲ್ಲಿ‌‌ ಮನ ಮಾಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಗಣ್ಯ ವ್ಯಕ್ತಿ ,ಕೃಷಿಕ " ಶ್ರೀ ಸುಧಾಕರ ಪಾರಿಂಜೆ" ಇವರು ಶುಭ ಹಾರೈಸಿದರು. ಈರ್ವರನ್ನೂ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಇಬ್ರಾಹಿಂ ಎನ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ಪ್ರಾಂಶುಪಾಲ ಶ್ರೀ ಎನ್ ರಾಮಚಂದ್ರ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವ್ಯವಸ್ಥಾಪಕರಾದ ಶ್ರೀ ಎನ್ ಶಂಕರ ನಾರಾಯಣ ಭಟ್ ಶುಭ ಹಾರೈಸಿದರು.ಅಭ್ಯಾಗತರ ಕಿರು ಪರಿಚಯವನ್ನು ಶ್ರೀಮತಿ ವಿಚೇತ ಬಿ ಹಾಗೂ ಶ್ರೀಮತಿ ಉಷಾಪದ್ಮ ವಾಚಿಸಿದರು.ಈ‌ ವೇಳೆಯಲ್ಲಿ, ಕೋವಿಡ್ ಸಂದಿಗ್ಧತೆಯ ಕಾಲದಲ್ಲಿ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡು ,ಪ್ರಸ್ತುತವೂ ಹವ್ಯಾಸವಾಗಿ ಅದನ್ನು ಮುಂದುವರಿಸುತ್ತಿರುವ ಶಾಲಾ ವಿದ್ಯಾರ್ಥಿ "ಅದ್ವಿತ್" ನನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.ಈತನ ಆಸಕ್ತಿ,ಪರಿಶ್ರಮದ ಕುರಿತಾದ ವರದಿ ದೃಶ್ಯ ಮಾದ್ಯಮಗಳಲ್ಲಿ ಈಗಾಗಲೇ ಬಿತ್ತರಗೊಂಡಿದ್ದವು.ಶ್ರೀಮತಿ ಶ್ವೇತಕುಮಾರಿ ಇವರು ಈತನ ಕುರಿತಾದ ವಿವರವನ್ನು‌ ವಾಚಿಸಿದರು. ಎಪ್ಪತ್ತೈದರ ಭಾರತದ ಸ್ವಾತಂತ್ಯ ಅಮೃತ ಮಹೋತ್ಸವದ ಪ್ರಯುಕ್ತ ಸಮಾಜ ವಿಜ್ಞಾನ ಕ್ಲಬ್, ಆರ್ಟ್ಸ್ ಕ್ಲಬ್ ವತಿಯಿಂದ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಅತಿಥಿಗಳ‌ ಮೂಲಕ ಬಹುಮಾನವನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ನೃತ್ಯ, ಭಾಷಣ, ದೇಶಭಕ್ತಿಗೀತೆ ಮುಂತಾದವುಗಳ ಮೂಲಕ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವದ ಆಚರಣೆಯಲ್ಲಿ ಕಳೆಮೂಡಿಸಿದರು. ವಿದ್ಯಾರ್ಥಿಗಳಾದ ರಾಮ್ ಸ್ವರೂಪ್ ಆಳ್ವ ಹಾಗೂ ಪ್ರವೀಕ್ಷಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಸ್ವಾಗತಿಸಿ, ಶಿವನಾರಾಯಣ ಭಟ್,ಪ್ರಶಾಂತ ಹೊಳ್ಳ ಎನ್ ಹಾಗೂ ಶಶಿಧರ ಕೆ ನಿರೂಪಿಸಿದರು. ಶ್ರೀಮತಿ ಸುನೀತಾ ಕೆ ವಂದಿಸಿದರು.
  10. Onam Celebration:ಕೇರಳದ ಸಾಂಸ್ಕೃತಿಕ ಹಬ್ಬ ಓಣಂನ್ನು ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ, ಪ್ರೌಢ ಶಾಲಾ ವಿಭಾಗದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.ಇದೇ ಸಂದರ್ಭ ಹೂವಿನ ರಂಗೋಲಿ(ಪೂಕಳಂ) ಹಾಗೂ ವಿವಿಧ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿತ್ತು.ಸ್ಥಳೀಯವಾಗಿ ಲಭಿಸಿದ ಹೂವುಗಳನ್ನು ಬಳಸಿ ವಿದ್ಯಾರ್ಥಿಗಳು ಹೂ-ರಂಗೋಲಿಯನ್ನು ರಚಿಸಿದರು.ಬಳಿಕ ಜರಗಿದ ಸಂಗೀತ ಕುರ್ಚಿ, ಹಗ್ಗ ಜಗ್ಗಾಟ ಹಾಗೂ ಮೊಸರು ಕುಡಿಕೆ ಒಡೆಯುವುದು.. ಇತ್ಯಾದಿ ಸ್ಪರ್ಧೆಗಳಲ್ಲಿ ಅನೇಕ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ತಂಡದಲ್ಲೂ, ವೈಯಕ್ತಿಕ‌ ನೆಲೆಯಲ್ಲೂ ಬಹುಮಾನವನ್ನು ಪಡೆದರು.ಇದೇ ಸಂದರ್ಭ ಓಣಂ ಔತಣವನ್ನು ಏರ್ಪಡಿಸಲಾಗಿತ್ತು.ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಯಣ ಭಟ್, ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಬಹುಮಾನ ವಿತರಿಸಿದರು.ಸರ್ವ ಅಧ್ಯಾಪಕ, ಸಿಬ್ಬಂದಿ ವರ್ಗದವರ ಸಹಕಾರದಿಂದ ಕಾರ್ಯಕ್ರಮವು ಸಂಪನ್ನಗೊಂಡಿತು.

വഴികാട്ടി

  • Kasaragod to Dharmathadka via Bandiyod travel by bus 25km
  • Mangalore to Dharmathadka via Bandiyod travel by bus 48km
  • Angadimogar to Dharmathadka 6 km by Auto .

Loading map...