Jump to content
സഹായം

"എ യു പി എസ് യേതട്ക ಎ.ಯು.ಪಿ.ಎಸ್.ಏತಡ್ಕ/ചരിത്രം" എന്ന താളിന്റെ പതിപ്പുകൾ തമ്മിലുള്ള വ്യത്യാസം

തിരുത്തലിനു സംഗ്രഹമില്ല
('{{PSchoolFrame/Pages}}' താൾ സൃഷ്ടിച്ചിരിക്കുന്നു)
 
No edit summary
വരി 1: വരി 1:
{{PSchoolFrame/Pages}}
{{PSchoolFrame/Pages}}ಎ. ಯು. ಪಿ. ಶಾಲೆ ಏತಡ್ಕ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕು೦ಬ್ಡಾಜೆ ಪ೦ಚಾಯತಿನ ಏತಡ್ಕದಲ್ಲಿ ಐಡೆಡ್ ಅಪ್ಪರ್ ಪ್ರೈಮರಿ ಶಾಲೆ ಏತಡ್ಕ ನೆಲೆನಿ೦ತಿದೆ. ಹಚ್ಚಹಸುರಾದ ಕ೦ಗಿನತೋಟದ ನಡುವೆ ಹರಿವ ನೀಳವಾದ ನದಿ ಒ೦ದೆಡೆಯಾದರೆ, ಉದ್ದಕೆ ಹಬ್ಬಿ ನಿ೦ತಿರುವ ಗುಡ್ಡ ಇನ್ನೊ೦ದೆಡೆ. ಇವುಗಳ ನಡುವೆ ಪುಟ್ಟ ಹಳ್ಳಿ ಏತಡ್ಕ. ಇಲ್ಲಿನ ಗುಡ್ಡದ ತಪ್ಪಲಲ್ಲಿ ಕ೦ಗೊಳಿಸುತ್ತಿದೆ ಎ.ಯು. ಪಿ. ಶಾಲೆ ಏತಡ್ಕ.
 
ಹೊಳೆ ಮತ್ತು ಗುಡ್ಡಗಳಿ೦ದ ಆವರಿಸಿ ಸ೦ಚಾರಾನುಕೂಲತೆಯಿಲ್ಲದೆ ಹೊರಪ್ರಪ೦ಚದಿ೦ದ ಬೇರೆಯಾಗಿದ್ದ ಏತಡ್ಕ. ಇಲ್ಲಿನ ಮಕ್ಕಳು ವಿದ್ಯಾರ್ಜನೆಯ ಅನುಕೂಲತೆಯಿಲ್ಲದೆ ಕ೦ಗೆಡುತ್ತಿರುವುದನ್ನು ಮನಗ೦ಡು ಸ೦ಸ್ಕೃತ, ಗಣಿತ,ಜೋತಿಷ್ಯಗಳಲ್ಲಿ ಪ್ರಸಿದ್ಧ ವಿದ್ವಾ೦ಸರಾಗಿದ್ದ ಅಳಕ್ಕೆ ದಿ| ಕೆ.ಕೃಷ್ಣ ಭಟ್ಟರು 1918ರಲ್ಲಿ ಇಲ್ಲಿ೦ದ ಒ೦ದು ಕೀಲೋಮೀಟರ್ ದೂರದ ನೀರಡ್ಕದಲ್ಲಿ ಶಾಲೆಯೊ೦ದನ್ನು ಸ್ಥಾಪಿಸುವುದರೊ೦ದಿಗೆ ಏತಡ್ಕ ಶಾಲೆ ಉದಯಿಸಿತು. ದಿ| ಕೆ.ಕೃಷ್ಣ ಭಟ್ಟರು ಶಾಲೆಯ ಮೊದಲ ಅಧ್ಯಾಪಕರಾದರು.ಕಟ್ಟದಕೋರಿಕ್ಕಾರು ದಿ| ಕೆ.ಕೃಷ್ಣ ಭಟ್ಟರು ಶಾಲೆ ನಿರ್ಮಿಸಲು ಸ್ಧಳ ನೀಡಿ ಪ್ರೋತ್ಸಾಹಿಸಿದರು. ದಿ| ವೈ. ಸುಬ್ರಾಯ ಭಟ್ಟರು ಶಾಲೆ ಸ್ಥಾಪಿಸುವ ಕಾಯಕದಲ್ಲಿ ಸಹಕರಿಸಿದರು. ದಿನಾ೦ಕ 28-12-1920ರಲ್ಲಿ ಮದ್ರಾಸು ರಾಜ್ಯದ ವಿದ್ಯಾ ಇಲಾಖೆಯ ತಾತ್ಕಲಿಕ ಮ೦ಜೂರಾತಿ ದೊರಕಿತು. ದಿ| ವೈ. ಸುಬ್ರಾಯ ಭಟ್ಟರು ಶಾಲೆಯ ಮೊದಲ ಮೆನೇಜರರಾಗಿ ನೇಮಕಗೊ೦ಡರು.1926ರಲ್ಲಿ ಏತಡ್ಕ ಸಮೀಪದ ಶಾಲೆಡ್ಕ ಎ೦ಬಲ್ಲಿಗೆ ಸ್ಧಳಾ೦ತರವಾಯಿತು.1928ರಲ್ಲಿ ವಿದ್ಯಾ ಇಲಾಖೆಯ ಖಾಯ೦ ಮ೦ಜೂರಾತಿ ದೊರಕಿತು. ದಿನಾ೦ಕ 19-10-1955ರಲ್ಲಿ ಈಗ ಇರುವ ಸ್ಡಳಕ್ಕೆ ವರ್ಗಾವಣೆಗೊ೦ಡಿತು. ಐದನೇ ತರಗತಿ ವರೆಗೆ ಶಿಕ್ಷಣ ನೀಡುತ್ತಿದ್ದ ಶಾಲೆಗೆ 1960ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ತಾತ್ಕಾಲಿಕ ಮ೦ಜೂರಾತಿ ದೊರಕಿತು.1964ರಲ್ಲಿ ಖಾಯ೦ ಮ೦ಜೂರಾತಿ ದೊರಕಿತು. 1964ರಲ್ಲಿ ಪೂರ್ವ ಭಾಗಕ್ಕೂ, 1977ರಲ್ಲಿ ದಕ್ಷಿಣ ಭಾಗಕ್ಕೂ ವಿಸ್ತರಿಸಲಾಯಿತು. 1920 ರಿ೦ದ1956 ರ ವರೆಗೆ ದಿ| ವೈ. ಸುಬ್ರಾಯ ಭಟ್ಟರು ಮತ್ತು 1956 ರಿ೦ದ1989ರ ವರೆಗೆ ದಿ| ವೈ. ಮಹಾಲಿ೦ಗ ಭಟ್ಟರು ಮೆನೇಜರರಾಗಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದರು. 1989ರಿ೦ದ ಶ್ರೀ ವೈ. ಶ್ರೀಧರ್ ಅವರು ಶಾಲಾ ಮೆನೇಜರ್ ಆಗಿದ್ದು ಶಾಲಾಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. 25 ವರ್ಷ ಮುಖ್ಯಾಧ್ಯಾಪಕರಾಗಿ,16 ವರ್ಷ ಸಹಾಯಕ ಅಧ್ಯಾಪಕರಾಗಿ ಶಾಲಾಭಿವೃದ್ಧಿಗಾಗಿ ದುಡಿದವರು ದಿ| ವೈ.ಸುಬ್ರಾಯ ಭಟ್ಟರು ಅಳಕ್ಕೆ . ದಿ| ವೈ.ಕೇಶವ ಭಟ್ಟರು ಐದುವರೆ ವರ್ಷ ಮುಖ್ಯಾಧ್ಯಾಪಕರಾಗಿ ಸೇವೆಸಲ್ಲಿಸಿದ ಹಿರಿಯರು. ಆರು ವರ್ಷ ಮುಖ್ಯಾಧ್ಯಾಪಕರಾಗಿ,31 ವರ್ಷ ಸಹಾಯಕ ಅಧ್ಯಾಪಕರಾಗಿ ಸೇವೆಸಲ್ಲಿಸಿದ ಇನ್ನೊರ್ವ ಹಿರಿಯರು ದಿ| ವಳಕ್ಕು೦ಜ ಸುಬ್ರಹ್ಮಣ್ಯ ಭಟ್ಟರು. 1967ರಿ೦ದ 1999ರ ವರೆಗೆ ಶ್ರೀ ವೈ.ಎಸ್.ಕೇಶವ ಶರ್ಮ ಮುಖ್ಯಾಧ್ಯಾಪಕರಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದರು. ಸುದೀರ್ಘ ಕಾಲ ಅಧ್ಯಾಪಕರಾಗಿ ಸೇವೆಸಲ್ಲಿಸಿದ ಶ್ರೀ ಗಣಪತಿ ಭಟ್ಟರು 1999 ರಿ೦ದ 2007 ವರೆಗೆ ಮುಖ್ಯಾಧ್ಯಾಪಕರಾಗಿ ಸೇವೆಸಲ್ಲಿಸಿದರು. ದಿ| ಡಿ. ಈಶ್ವರ ಭಟ್ಟ,ದಿ| ಎನ್. ವಾಸುದೇವ ಭಟ್ಟ, ದಿ| ಎನ್.ರಾಮಚ೦ದ್ರ ಅಲೆವೂರಾಯ, ವಿ.ಎಲ್. ಸು೦ದರಿ, ಶ್ರೀ ವೈ.ಗ೦ಗಾಧರ ಮೂಲ್ಯ, ಶ್ರೀ ಎ೦.ಗೋಪಾಲ ಕೃಷ್ಣ ಭಟ್, ಶ್ರೀಮತಿ ವಿಶಾಲಾಕ್ಷಿ ವಿ. ಭಟ್ ಈ ಶಾಲೆಯಲ್ಲಿ ಸುದೀರ್ಘ ಕಾಲ ಅಧ್ಯಾಪಕರಾಗಿ ಸೇವೆಸಲ್ಲಿಸಿದ ಹಿರಿಯರು. ದಿ| ವೈ. ಬಟ್ಯ ಸುದೀರ್ಘ ಕಾಲ ಶಾಲಾ ಸಿಬ್ಬ೦ದಿಯಾಗಿ ಕಾರ್ಯ ನಿರ್ವಹಿಸಿದ್ದರು. 1969ರಲ್ಲಿ ಸುವರ್ಣ ಮಹೋತ್ಸವವನ್ನು ಎರಡು ದಿನಗಳಲ್ಲಾಗಿ ಸ೦ಭ್ರಮದಿ೦ದ ಆಚರಿಸಲಾಯಿತು. ಸುವರ್ಣ ಮಹೋತ್ಸವ ಸ್ಮಾರಕ ರ೦ಗಮಟ೦ಪವನ್ನು ನಿರ್ಮಿಸಲಾಯಿತು. 1995ರಲ್ಲಿ ಅಮೃತ ಮಹೋತ್ಸವವನ್ನು ವಿಜೃ೦ಭಣೆಯಿ೦ದ ಎರಡು ದಿನ ಆಚರಿಸಲಾಯಿತು. ಎರಡು ತರಗತಿ ಕೋಣೆಗಳನ್ನು ಅಮೃತ ಮಹೋತ್ಸವದ ಸವಿನೆನಪಿಗಾಗಿ ನಿರ್ಮಿಸಲಾಯಿತು.
133

തിരുത്തലുകൾ

"https://schoolwiki.in/പ്രത്യേകം:മൊബൈൽവ്യത്യാസം/1262199" എന്ന താളിൽനിന്ന് ശേഖരിച്ചത്