എസ് വി എൽ പി എസ് ബേരിപ്പദവ് (ಎಸ್.ವಿ.ಎ.ಎಲ್.ಪಿ.ಎಸ್ ಬೆರಿಪದವು)

Schoolwiki സംരംഭത്തിൽ നിന്ന്
17:45, 12 ഫെബ്രുവരി 2017-നു ഉണ്ടായിരുന്ന രൂപം സൃഷ്ടിച്ചത്:- 11241 (സംവാദം | സംഭാവനകൾ)
എസ് വി എൽ പി എസ് ബേരിപ്പദവ് (ಎಸ್.ವಿ.ಎ.ಎಲ್.ಪಿ.ಎಸ್ ಬೆರಿಪದವು)
സ്കൂൾ ചിത്രം
സ്കൂൾ ചിത്രം
Established
School Code 11241
Place BERIPADAVU
Address BERIPADAVU
PIN Code 671322
School Phone
School Email 11241beripadavu@gmail.com
Web Site
District Kasargod
Educational District Kasargod
Sub District MANJESHWAR

Catogery Aided
Type General
Sections 1 - 4
Aided
Medium Kannada
No of Boys 40
No of Girls 40
Total Students 40+40
No of Teachers
Principal
Head Master UMESHA K
P.T.A. President
പ്രോജക്ടുകൾ
E-Vidhyarangam Help
12/ 02/ 2017 ന് 11241
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

SCHOOL HISTORY

ಪ್ರಕೃತಿ ರಮಣೀಯವಾದ ಕೇರಳ ಪ್ರಾಂತ್ಯದ , ಕಾಸರಗೋಡು ಜಿಲ್ಲೆಯ ಬಾಯಾರು ಗ್ರಾಮದ ಬೆರಿಪದವು ಎಂಬಲ್ಲಿ ಕಾರ್ಯವೆಸಗುವ ವಿದ್ಯಾರಣ್ಯ ಎ.ಎಲ್.ಪಿ ಶಾಲೆಯು ಕಳೆದ ನಾಲ್ಕು ದಶಕಗಳಿಂದ ಊರಜನರ ಸಹಾಯ ಸಹಕಾರಗಳಿಂದ ಯಶಸ್ವಿಯಾಗಿಮುನ್ನಡೆಯುತ್ತಿದ್ದು , ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಪ್ರದೇಶಕ್ಕೆ ಪುನರುತ್ಥಾನದ ಸಂಸ್ಥೆಯಾಗಿ ಬೆಳೆದು ನಿಂತಿದೆ. 1954 ರಲ್ಲಿ ಶ್ರೀ ವಿದ್ವಾನ್ ಶ್ರೀ ಕೃಷ್ಣ ಭಟ್ ರಿಂದ ಸ್ಥಾಪಿಸಲ್ಪಟ್ಟು ತಾಳ್ತಜೆ ಕೃಷ್ಣ ಭಟ್ ರ ಆಡಳಿತದಲ್ಲಿ ವಿದ್ಯಾದಾನ ಮಾಡಲಾರಂಭಿಸಿತು. ಬಳಿಕ ಕಾರಣಾಂತರಗಳಿಂದ ಶಾಲೆ ಮುಚ್ಚಲ್ಪಟ್ಟಿತು. ನಂತರ ಪ್ರಕಟಣೆಗೊಂಡ ಕೇರಳಸರಕಾರದ ಗಜೆಟ್ ನ ಪ್ರಕಾರ ಕೇರಳ ಸರಕಾರ ಬೆರಿಪದವಿನಲ್ಲಿ ಶಾಲೆಯೊಂದನ್ನು ತೆರೆಯಲು ಅವಕಾಶ ಕಲ್ಪಿಸಿತು. ಶ್ರೀ ಕೆ.ಎಂ.ಗೋವಿಂದ ಭಟ್ ಹಾಗೂ ಶ್ರೀ ಚಂದ್ರಶೇಖರ ಭಟ್ ಎಂಬ ತರಬೇತಿ ಮುಗಿಸಿದ ಉತ್ಸಾಹಿ ತರುಣ ಅಧ್ಯಾಪಕರು, ಕಾರ್ಯರಂಗಕ್ಕೆ ಇಳಿದು ಶಾಲೆಯ ಪುನರಾರಂಭಕ್ಕೆ ಕಾರಣೀಕರ್ತರಾದರು.ಊರವರ ಪ್ರೋತ್ಸಾಹ ವ್ಯವಸ್ಥಾಪಕರಾದ ತಾಳ್ತಜೆ ಕೃಷ್ಣ ಭಟ್ ರ ಧರ್ಮಪತ್ನಿ ಶ್ರೀಮತಿ ಪರಮೇಶ್ವರಿ ಅಮ್ಮನವರ ಇಚ್ಛಾಶಕ್ತಿ ಜತೆಸೇರಿದಾಗ ವಿದ್ಯಾರಣ್ಯ ಎ.ಎಲ್.ಪಿ ಶಾಲೆ ಎಂಬ ಹೆಸರಿನ್ನಲ್ಲಿ ಸಂಸ್ಥೆ ಪುನರ್ಜನ್ಮ ಪಡೆಯಲು ಸಮಯ ಕೂಡಿಬಂದಿತು. ಆ ಸಂದರ್ಭದಲ್ಲಿ ಮಂಜೇಶ್ವರ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿಯಾಗಿದ್ದ ದಿ. ವಿಷ್ಣು ಭಟ್ಟರ ಸಂಪೂರ್ಣ ಸಹಕಾರದೊಂದಿಗೆ ಶಾಲೆ ನಡೆಸಲು ಅನುಮತಿ ಪಡೆಯಲಾಯಿತು. ಬಳಿಕ ಶಾಲಾ ನಿವೇಶನದ ಸಮಸ್ಯೆ ಬಂದೊದಗಿದಾಗ ಅದನ್ನು ಪರಿಹರಿಸಲು ಸಹಕರಿಸಿದ ದಿ..ಶ್ರೀ ಗುರುರಂಗಯ್ಯ ಬಲ್ಲಾಳ ಹಾಗೂ ಡಾ.ಎಂ.ರಾಮ ರನ್ನು ಸ್ಮರಿಸಲೇಬೇಕಾಗಿದೆ.ತರುವಾಯ 1976 ಸಪ್ಟೆಂಬರ್ 28 ರಲ್ಲಿ ಒಂದನೇ ತರಗತಿಗೆ ಅನುಮತಿ ಲಭಿಸಿ ಕೆ.ಎಂ.ಗೋವಿಂದ ಭಟ್ ರವರು ಮುಖ್ಯೋಪಾಧ್ಯಾಯರಾಗಿ ನಿಯುಕ್ತಿಗೊಂಡರು. ಅಂದು ಒಂದನೇ ತರಗತಿಗೆ ದಾಖಲಾದ ಮಕ್ಕಳ ಸಂಖ್ಯೆ 52. ಆ ಸಮಯದಲ್ಲಿ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಯಾಗಿದ್ದ ಶ್ರೀ ವಿ.ಡಿ ಜಾರ್ಜ್ ರ ದಿವ್ಯಹಸ್ತದಿಂದ 1976 ಅಕ್ಟೋಬರ್ 28 ರಂದು ಉದ್ಘಾಟನೆಗೊಂಡಿತು. 1977-78ರಲ್ಲಿ ಶ್ರೀ ಚಂದ್ರಶೇಖರ ಭಟ್ ಎರಡನೇ ತರಗತಿ ಅಧ್ಯಾಪಕರಾಗಿ ನಿಯುಕ್ತಿಗೊಂಡರು. ಅಲ್ಲದೆ ಶ್ರೀ ಕುಂಞಿ ಸೀದಿಕೋಯ ತಂಙಳ್ ಅರಬಿಕ್ ಅಧ್ಯಾಪಕರಾಗಿ ನಿಯುಕ್ತಿಗೊಂಡರು. ನಂತರದ ವರ್ಷಗಳಲ್ಲಿ .ಶ್ರೀಮತಿ ಕಮಲ ಟಿ ಹಾಗೂ ಶ್ರೀ ರಾಘವ ಎನ್ ನೇಮಕಗೊಳ್ಳುವುದರೊಂದಿಗೆ ಪೂರ್ಣಪ್ರಮಾಣದ ಕಿರಿಯ ಪ್ರಾಥಮಿಕ ಶಾಲೆಯಾಗಿ ಸರಕಾರದಿಂದ ಅಂಗೀಕರಿಸಲ್ಪಟ್ಟಿತು. ಹೀಗೆ ಅನೇಕ ಮಹಾನುಭಾವರ ಹೋರಾಟ ತ್ಯಾಗಗಳಿಂದ ಬೆಳೆದ ವಿದ್ಯಾರಣ್ಯ ಎ.ಎಲ್.ಪಿ ಶಾಲೆ ಇಂದು ಸಮಾಜದ ಸಂಪೂರ್ಣ ಸಹಕಾರದಿಂದ ಮುನ್ನಡೆಯುತ್ತಿದೆ. 1954 ರಲ್ಲಿ ಆರಂಭವಾಗಿದ್ದ ಶ್ರೀ ಕೃಷ್ಣ ಎಯ್ಡೆಡ್ ಪ್ರೈಮರಿ ಶಾಲೆಯಲ್ಲಿ ಸೇವೆಸಲ್ಲಿಸಿದ್ದ ಅಧ್ಯಾಪಕರು

ದಿನಕರ ಭಟ್

ಕೆ.ಕೃಷ್ಣ ಭಟ್

ಕೆ.ಕೃಷ್ಣ ಭಟ್ ಕಳಂದೂರು

ಜಿ. ಕೃಷ್ಣ ಭಟ್ ಗಂಗರಮಜಲು

ಮಹಾಲಿಂಗೇಶ್ವರ ಭಟ್ ಬದಿಯಡ್ಕ

ಕೆ.ಪಿ. ಭಟ್ ಕೊಡಂಗೆ

ಮಹಾಬಲೇಶ್ವರ ಭಟ್ ಒಡಿಯೂರು

ಆನಂದ ರಾವ್ ಬದಿಯಾರು

ಪರಮೇಶ್ವರಯ್ಯ ಬಳ್ಳೂರು

ಕೃಷ್ಣ ಎಂ

ಎಲಿಸಾ ಮಂಗಳೂರು

ಕಿಟ್ಟಣ್ಣ ಶೆಟ್ಟಿ ಜತ್ತಿ

INFRASTRUCTURE

CO-CURRICULAR ACTIVITIES

MANAGEMENT

FORMAR HEADMASTERS

 

FAMOUS OLD STUDENTS