"എസ്. വി.വി.എച്ച്. എസ്. മിയാപദവ്/അക്ഷരവൃക്ഷം/ Echarike Irali" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
No edit summary
No edit summary
വരി 20: വരി 20:
| സ്കൂൾ=  SVVHSS Miyapadavu
| സ്കൂൾ=  SVVHSS Miyapadavu
| സ്കൂൾ കോഡ്=  11010
| സ്കൂൾ കോഡ്=  11010
| ഉപജില്ല= മഞ്ചേശ്വരം
| ഉപജില്ല= മഞ്ചേശ്വരം
| ജില്ല= കാസർഗോഡ്  
| ജില്ല= കാസർഗോഡ്  
| തരം= ലേഖനം  ‍‍
| തരം= ലേഖനം  ‍‍

15:43, 5 മേയ് 2020-നു നിലവിലുണ്ടായിരുന്ന രൂപം

Echarike Irali

ಕೊರೊನ.. ಎಚ್ಚರಿಕೆ ಇರಲಿ ಮುಂದೊಂದು ದಿನ ನಾವು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡಬೇಕಾದ ಸನ್ನಿವೇಶ ಬರಬಹುದೆಂದು ಹಿಂದೆಂದೂ ಯೋಚಿಸಿರಳಲು ಸಾಧ್ಯವಿಲ್ಲ. ಅಂತಹಾ ಪರಿಸ್ಥಿತಿಯನ್ನು ತಂದುಬಿಟ್ಟಿದೆ ಈ ಕೊರೊನ ವೈರಸ್ . ಚೀನಾ ದಿಂದ ತೊಡಗಿ ಇಡೀ ವಿಶ್ವವನ್ನೇ ತಲುಪಿರುವ ಈ ವೈರಸ್ ಮನುಕೂಲವನ್ನೇ ತತ್ತರಿಸುವಂತೆ ಮಾಡಿಬಿಟ್ಟಿದೆ. ಆದರೂ ನಾವು ಭಾಗ್ಯವಂತರು ಎಂದರೆ ತಪ್ಪಾಗಲಾರದು. ಯಾಕೆಂದರೆ ಅಮೆರಿಕದಂತಾಹಾ ಮುಂದುವರಿದ ರಾಷ್ಟ್ರಗಳಲ್ಲಿ ಈ ವೈರಸೀನಿಂದಾಗಿ ಮಡಿದವರ ಸಂಖ್ಯೆ ಅಪಾರ. ಹೀಗಿರುವಾಗ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಡಿದವರ ಸಂಖ್ಯೆ ತುಂಬಾ ಕಡಿಮೆ. 130 ಕೋಟಿ ಭಾರತೀಯರಲ್ಲಿ ಸೋಂಕಿತರು ತುಂಬಾ ಕಡಿಮೆ. ಇದಕ್ಕೆ ಮುಖ್ಯ ಕಾರಣ ಪ್ರಧಾನ ಮಂತ್ರಿಯವರ ಲಾಕ್ ಡೌನ್ ವ್ಯವಸ್ಥೆ. ಏನಿದು ಕೊರೊನ ವೈರಸ್ ? ಸಾಮಾನ್ಯವಾಗಿ ಎಲ್ಲರಲ್ಲೂ ಮುದಿಬರುವ ಪ್ರಶ್ನೆ. ಕಣ್ಣಿಗೆ ಕಾಣಿಸದ, ಸೂಕ್ಷ್ಮವಾಗಿರುವ ಬಹುಬೇಗಣೆ ಹರಡುವ ಒಂದು ಏಜೆಂಟ್ ಆಗಿದೆ ಇದು. ಸಾಮಾನ್ಯವಾಗಿ ಏಡ್ಸ್ ಗೆ ಸಾಮ್ಯತೆ ಇದ್ದರೂ ಇದು ಹರಡುವ ವಿಧಾನ ವಿಭಿನ್ನವಾಗಿದೆ. ಸಾಮಾನ್ಯವಾಗಿ ಸೋಂಕು ತಾಗುಳಿದ ವ್ಯಕ್ತಿ ಕೇಮಮೂವಾಗ,ಸೀನುವಾಗ ಮತ್ತು ಆತನ ಸ್ಪರ್ಶ ದಿಂದ ಇದು ಹರಡುತ್ತದೆ. ಸೋಂಕು ತಗುಲಿದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದವರು ಕಣ್ಣು ಮೂಗು ಬಾಯಿಯನ್ನು ಸ್ಪರ್ಶಿಸುವುದರಿಂದ ಇದು ಶರೀರದ ಒಳಗೆ ಪ್ರವೇಶಿಸುತ್ತದೆ. ಇದನ್ನು ತಡೆಗಟ್ಟಲು ನಾವೆಲ್ಲರೂ ಸಹಕರಿಸಲೆ ಬೇಕು. ಕಳೆದ ಸುಮಾರು ತಿಂಗಳುಗಳಿಂದ ನಮ್ಮ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಬಡವರು, ಕೃಷಿಕರು, ಕಾರ್ಮಿಕರು, ಮುಂತಾದವರು ಇದರಿಂದ ಸಾಕಷ್ಟು ತೊಂದರೆಗೆ ಒಳಗಾದರೂ ನಮ್ಮ ಉಳಿವಿಗಾಗಿ ಇದು ಅನಿವಾರ್ಯವಾಗಿದೆ. ಎಲ್ಲರೂ ಮನೆಯಲ್ಲಿಯೇ ಕುಳಿತು ಕೊರೊನ ಸೋಂಕಿನ ವಿರುದ್ದ ಹೋರಾಡಬೇಕು. ಆಗತ್ಯದ ಸಂದರ್ಭದಲ್ಲಿ ಹೊರಗಡೆ ಹೋಗಬೇಕಾದರೆ ಮಾಸ್ಕ್ ಧರಿಸಿಯೇ ನಡೆಯಬೇಕು. ಪರಸ್ಪರ ಹಸ್ತ ಲಾಘವ ಸಲ್ಲದು. 1 ಮೀಟರ್ ಅಂತರವನ್ನು ಪಾಲಿಸಬೇಕು. ನಮ್ಮ ಶಾರೀರಿಕ ಶುಚಿತ್ವವನ್ನು ಪಾಲಿಸಬೇಕು. ಯಾರಿಗಾದರು ಜ್ವರ ಕೆಮ್ಮು ಮುಂತಾದ ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ಕೊರೊನ ಸೋಂಕಿತರೊಂದಿಗೆ ಬೆರೆಯಬಾರದು. ಈ ವೈರಸ್ ಗೆ ಸೂಕ್ತವಾದ ಔಷದಿ ದೊರೆಯದ ಕಾರಣ, ರೋಗ ಬರದಂತೆ ತಡೆಗಟ್ಟುವುದೇ ಉತ್ತಮ. ನಮ್ಮ ಮನೆಯ, ಊರಿನ ಪುಟ್ಟ ಮಕ್ಕಳು, ವೃದ್ಧರು ಬಡ ಜನರ ಪರ ಕಾಳಜಿ ವಹಿಸೋಣ. ಇಡೀ ದೇಶವೇ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಹೋರಾಡುತ್ತಿರುವಾಗ ನಾವು ನಮ್ಮ ಕೈಲಾದ ಸೇವೆಯನ್ನು ಮಾಡದಿದ್ದರೆ ಹೇಗೆ ? ಭಯ, ಸುಳ್ಳು ವದಂತಿಗೆ ಕಿವಿ ಕೊಡದೆ ಭರವಸೆಯೊಂದಿಗೆ ಮುಂದೆ ನಡೆಯೋಣ. ಉತ್ತಮ ಫಲಿತಾಂಶ ನಮ್ಮದಾಗಬಹುದು. ಲಾಕ್ ಡೌನ್ ಸಮಯವನ್ನು ಸದುಪಯೋಗಿಸಿ ಕೊರೊನದ ಬಗ್ಗೆ ಜಾಗೃತರಗೋಣ.


DEEKSHITHA
10 C SVVHSS Miyapadavu
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം ‍‍


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - ലേഖനം

‍‍‍‍‍