എസ് .ഡി. പി. എച്ച്. എസ്. ധർമ്മത്തടുക്ക/അക്ഷരവൃക്ഷം/ ಮೋಸಗಾರ ನರಿ

Schoolwiki സംരംഭത്തിൽ നിന്ന്
ಮೋಸಗಾರ ನರಿ

ಒಂದು ಊರಿನಲ್ಲಿ ಒಂದು ಕಾಗೆಯಿತ್ತು.ಅದು ಒಮ್ಮೆ ಕಟುಕನ ಅಂಗಡಿಯಿಂದ ಮಾಂಸದ ತುಂಡನ್ನು ಎತ್ತಿಕೊಂಡು ಮರದ ಮೇಲೆ ಬಂದು ಕುಳಿತಿತ್ತು.ಹೆಚ್ಚು ಹಸಿವಿನಿಂದ ಬಳಲಿ ಬೆಂಡಾಗಿದ್ದ ನರಿಯೊಂದು ಅದೇ ದಾರಿಯಲ್ಲಿ ಬರುತ್ತಿತ್ತು. ಕಾಗೆಯ ಬಾಯಲ್ಲಿ ಇದ್ದ ಮಾಂಸದ ತುಂಡನ್ನು ಕಂಡು ನರಿಯ ಬಾಯಲ್ಲಿ ನೀರು ಬಂತು. ನರಿಯು ತನ್ನ ಹಸಿವನ್ನು ನೀಗಿಸಲು ಒಂದು ಉಪಾಯ ಆಲೋಚಿಸಿತು. ಕಾಗೆಯನ್ನು ಕಂಡು ನರಿಯು ,ಕಾಗೆಯಲ್ಲಿ 'ಇಷ್ಟು ದಿನ ಎಲ್ಲಿ ಹೋಗಿದ್ದೆ. ನಿನ್ನನ್ನು ನೋಡಿ ನನಗೆ ಬಹು ಸಂತೋಷವಾಯಿತು. ನೀನು ಬಹು ಚೆನ್ನಾಗಿ ಹಾಡುತ್ತಿಯಂತೆ.ಎಲ್ಲಿ ಒಂದು ಹಾಡನ್ನು ಹಾಡುತ್ತಿಯಂತೆ ಎಂದಿತು. ನರಿಯ ಹೊಗಳಿಕೆ ಮಾತಿಗೆ ಉಬ್ಬಿಹೋದ ಕಾಗೆಯು ಬಾಯಿ ತೆರೆಯಿತು. ತಕ್ಷಣ ಅದರ ಬಾಯಲ್ಲಿದ್ದ ಮಾಂಸದ ತುಂಡು ಕೆಳಗೆ ಬಿತ್ತು. ನರಿಯು ಅದನ್ನು ತೆಗೆದುಕೊಂಡು ಕಾಡಿಗೆ ಹೋಯಿತು.


POORNIMA K M
9 C എസ് .ഡി. പി. എച്ച്. എസ്. ധർമ്മത്തടുക്ക
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം

 സാങ്കേതിക പരിശോധന - Nixon C. K. തീയ്യതി: 05/ 05/ 2020 >> രചനാവിഭാഗം - ലേഖനം