ಸ್ವಚ್ಛ ಪರಿಸರ ಮಾಡೋಣ ಬನ್ನೀ
ನೀವು ನಾವೆಲ್ಲಾ ಸೇರಿ
ಗಿಡನೆಟ್ಟು ಬೆಳೆಸೋಣ
ಪ್ಲಾಸ್ಟಿಕನ್ನು ತ್ಯಜಿಸೋಣ
ಆರೋಗ್ಯದಿಂದ ಇರೋಣ.
ಮನೆ ಸುತ್ತ ಮುತ್ತ ಶುಚಿತ್ವ ಮಾಡಿರಿ
ಬಯಲಲ್ಲಿ ಮಲ ಮೂತ್ರ ಮಾಡದಿರಿ
ಶುಚಿತ್ವ ಕಾಪಾಡಿರಿ
ಕೈ ಕಾಲು ಮುಖ ತೊಳೆಯಿರಿ
ಆನಂದಪಡೆಯಿರಿ.
ಮಳೆಗಾಲ ಬಂತು ನೀರೆಲ್ಲ ತುಂಬಿತು
ಸೊಳ್ಳೆಗಳು ತುಂಬಿತು
ನೀರು ನಿಲ್ಲದಂತೆ ನೋಡಿಕೊಳ್ಳಿ
ರೋಗ ಹರಡದಂತೆ ಜಾಗ್ರತೆ ವಹಿಸಿಕೊಳ್ಳಿ
ಅರೋಗ್ಯ ಕಾಪಾಡಿಕೊಳ್ಳಿ.