ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆ ಯಲ್ಲಿ ಮಾದಕ ವಸ್ತು ವಿರೋಧಿ ಪೋಸ್ಟರ್ ರಚನೆ ಕಾರ್ಯಕ್ರಮ ವು ತಾರೀಕು 25/10/2022ರಂದು ಜರಗಿತು. ಅಧ್ಯಪಿಕೆಯರಾದ ಚಿತ್ರಾ,ಫೌಸಿಯ, ಜಯಲಕ್ಷ್ಮಿ ಮುಂತಾದವರು ಕಾರ್ಯಾಗಾರವನ್ನು ನಡೆಸಿಕೊಟ್ಟರು. ಶಾಲಾ ಮಕ್ಕಳು ಗುಂಪುಗಳಲ್ಲಿ ಕುಳಿತು ಮಾದಕ ವಸ್ತು ವಿರೋಧಿ ಪೋಸ್ಟರ್ ಗಳನ್ನು ತಯಾರಿಸಿದರು.ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆಯಲ್ಲಿ ಲಹರಿ ಮುಕ್ತ ಕೇರಳ ಎಂಬ ನೂತನ ಅಭಿಯಾನದ ಪ್ರಯುಕ್ತ ಉದ್ಘಾಟನಾ ಕಾರ್ಯಕ್ರಮ ಹಾಗೂ ರಕ್ಷಕರಿಗೆ ಮಾಹಿತಿ ಶಿಬಿರವನ್ನು ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪ್ರಭಂಧಕರಾದ ಶ್ರೀ ದೇವಪ್ಪ ಶೆಟ್ಟಿ ಯವರು ನೆರವೇರಿಸಿದರು. ಕೇದುಂಬಡಿ ವಾರ್ಡ್ ಸದಸ್ಯ ಶ್ರೀ ಶಿವರಾಜ್ ಹಾಗೂ ಮಾತೃ ಪಿ.ಟಿ. ಎ ಅಧ್ಯಕ್ಷೆ ಶ್ರೀಮತಿ ತೇಜಾಕ್ಷಿ ಯವರು ಶುಭ ಹಾರೈಸಿದರು. ಶಾಲಾ ಅಧ್ಯಾಪಕಿ ಶ್ರೀಮತಿ ಜಯಲಕ್ಷ್ಮಿಯವರು ಹೆತ್ತವರಿಗೆ ಮಾದಕ ವಸ್ತುಗಳಿಂದ ಮಕ್ಕಳನ್ನು ಕಾಪಾಡುವುದರ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಶ್ರೀ ಶೈಲೇಶ್ ರವರು ಸ್ವಾಗತಿಸಿದ ಕಾರ್ಯಕ್ರಮ ಕ್ಕೆ ಶಾಲಾ ಅಧ್ಯಾಪಕಿ ಶ್ರೀ ಮತಿ ಫೌಸಿಯ ಧನ್ಯವಾದವಿತ್ತರು.