എസ് .ഡി. പി. എച്ച്. എസ്. ധർമ്മത്തടുക്ക/അക്ഷരവൃക്ഷം/ ತುಂಬಿದ ಕೊಡ ತುಳುಕುವುದಿಲ್ಲ

Schoolwiki സംരംഭത്തിൽ നിന്ന്
ತುಂಬಿದ ಕೊಡ ತುಳುಕುವುದಿಲ್ಲ

ನೀರು ತರುವುದಕ್ಕೆ ಬಳಸುವ ಕೊಡವು ಸಂಪೂರ್ಣ ತಂಬಿದಾಗ ತುಳುಕುವುದಿಲ್ಲ. ಅದೇನಾದರೂ ಅರ್ಧಂಬರ್ಧ ತುಂಬಿದರೆ, ಮನೆಗೆ ನೀರು ತರುವವರೆಗೆ ತುಳುಕಿ ಸಾಕಷ್ಟು ಸಾಕಷ್ಟು ಶಬ್ದ ಮಾಡುತ್ತದೆ ಎನ್ನುವ ಹೊರ ಅರ್ಥವನ್ನೊಂದಿರುವ ಈ ನಾನುಡಿಯ ಒಳಾರ್ಥವು ಅಗಾಧವಾದ ಅರ್ಥಸ್ಫುರತೆಯನ್ನು ಹೊಂದಿದೆ. ತುಂಬಿದ ಕೊಡ ಎನ್ನುವುದು ಪೂರ್ಣಜ್ಞಾನ ಎಂದರ್ಥ ನೀಡುತ್ತದೆ. ಅರ್ಧಂಬರ್ಧ ತುಂಬಿದ ಕೊಡ ಎನ್ನುವುದು ಅಲ್ಪಜ್ಞಾನಿಯನ್ನು ಸಂಕೇತಿಸುತ್ತದೆ. ಪೂರ್ಣಜ್ಞಾನಿ ಸಮಚಿತ್ತತೆಯಿಂದ ಮೌನಿಯಾಗಿರುತ್ತಾನೆ. ಆತನು ಎಲ್ಲಿಯೂ ಪ್ರದರ್ಶಿಸಿ ಜನಪ್ರಿಯತೆ ಇಷ್ಟಪಡುವುದಿಲ್ಲ. ನಿರಂಹಕಾರಿಯಾದನ್ಯೂಟನ್ ಹೇಳಿದಂತೆ 'ಕಲಿಯುವುದು ಸ್ವಲ್ಪ ಕಲಿಯಬೇಕಾದುದು ಕಲ್ಪ" ಎಂದರಿತು ತುಂಬಿದ ಕೊಡದಂತಿದ್ದರೆ, ಅಲ್ಪವಿದ್ಯೆ ಮಹಾಗರ್ವಿಯಂತಿರುವ ಅಲ್ಪಜ್ಞಾನೀಯ ತನಗಿಂತ ತಿಳಿದಿರುವವರಿಲ್ಲ ಎನ್ನುತ್ತಾನೆ. ಜ್ಞಾನಿಯಂತಹ ಸೋಗಿನಲ್ಲಿ ಅಜ್ಞಾನಿಯಾಗಿರುವ ಕೆಲವರುಮಹಾನ್ ಪಂಡಿರಂತೆ ವರ್ತಿಸುತ್ತಾರೆ. ನಡೆದಾಡುವ ವಿಶ್ವಕೋಶದಂತಿರುವ ಜ್ಞಾನಿಗಳು ಎಲೆಮರೆಯ ಕಾಯಿಯಂತಿರುತ್ತಾರೆ. ಸಂಪೂರ್ಣ ಜ್ಞಾನಿಯಾಗಬೇಕೇ ಹೊರತು, ಅರ್ಧಂಬರ್ಧ ಜ್ಞಾನಿಯಾಗಿರಬಾರದು ಎಂಬುದು ಗಾದೆಯ ಎಚ್ಚರಿಕೆ ಹಾಗು ಸ್ವಪ್ರದರ್ಶನ ಸೂಕ್ತವಲ್ಲ. ತುಂಬಿದ ಕೊಡದಂತೆ ಜ್ಞಾನದಿಂದ ತುಂಬಿದ ವ್ಯಕ್ತಿ ಘನತೆಯೊಂದಿಗೆ ಮೌನಿಯಾಗಿರುವಂತೆ ಇರಬೇಕು ಎಂಬುದು ಈ ಗಾದೆಯ ಅಂತರಾರ್ಥ.


VIKASH KH
10 D എസ് .ഡി. പി. എച്ച്. എസ്. ധർമ്മത്തടുക്ക
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം