ജി യു പി എസ് നുള്ളിപ്പാടി/അക്ഷരവൃക്ഷം/ ಅತಿಯಾಸೆಯ ಫಲ.Athiyaaseya fala
ಅತಿಯಾಸೆಯ ಫಲ.Athiyaaseya fala
ರಾಮಪುರ ಎಂಬ ಗ್ರಾಮದಲ್ಲಿ ಸುಬ್ಬ ಎಂಬ ಒಬ್ಬ ಕುಂಬಾರ ನಿದ್ದನು. ಅವನು ಒಂದುದಿನ ಮಡಿಕೆ ಮಾಡಲು ಆವೆ ಮಣ್ಣು ತರಲು ಹೋದನು. ಮಣ್ಣು ಅಗೆಯುವಾಗ ಅವನಿಗೆ ಹೊಳಪಾದ ವಸ್ತುವೊಂದು ಕಂಡಿತು. ಅವನು ಅದನ್ನು ಮೇಲಕ್ಕೆ ಎತ್ತಿದನು. ಅದು ಒಂದು ಚಿನ್ನದ ಪಾತ್ರವಾಗಿತ್ತು. ಅವನು ಬಹಳ ಖುಷಿಯಿಂದ ಅದನ್ನು ಮನೆಗೆ ತೆಗೆದುಕೊಂಡು ಹೋದನು. ಅದರೊಳಗೆ ಕೈ ಹಾಕಿದಾಗ ಅವನಿಗೆ ಒಂದು ಕಾಗದದ ಚೀಟಿ ಸಿಕ್ಕಿತು. ಆ ಚೀಟಿಯಲ್ಲಿ ಹೀಗೆ ಬರೆದಿತ್ತು "ಇದರಲ್ಲಿ ಯಾವುದೇ ವಸ್ತು ಹಾಕಿದರೂ ಅದು ಮೂರುಪಟ್ಟು ಹೆಚ್ಚಾಗುತ್ತದೆ, ಆದರೆ ಅತಿಯಾಸೆಯಿಂದ ಇದನ್ನು ದುರುಪಯೋಗ ಮಾಡಿದರೆ ಈ ಪಾತ್ರೆ ಮಾಯವಾಗುತ್ತದೆ" ಎಂದು. ಕುಂಬಾರನು ಒಂದು ನಾಣ್ಯವನ್ನು ಆ ಪಾತ್ರೆಯಲ್ಲಿ ಹಾಕಿದನು. ಆಗ ಅದು ಮೂರು ನಾಣ್ಯಗಳಾಗಿ ಬದಲಾಯಿತು. ಇದನ್ನ ನೋಡಿದ ಅವನು ಚೀಟಿಯಲ್ಲಿ ಬರೆದಿರುವುದನ್ನು ಮರೆತು ತನ್ನಲ್ಲಿದ್ದ ಹಣವನ್ನೆಲ್ಲ ತಂದು ಆ ಪಾತ್ರೆಯಲ್ಲಿ ಹಾಕಿದನು. ಕೂಡಲೇ ಆ ಪಾತ್ರೆ ಮಾಯವಾಯಿತು. ಆಗ ಕುಂಬಾರನಿಗೆ ತನ್ನ ತಪ್ಪಿನ ಅರಿವಾಯಿತು. ಅತಿಯಾಸೆಯಿಂದ ತನಗೆ ಆದ ನಷ್ಟವನ್ನು ಚಿಂತಿಸಿ ತನಗೆ ತಾನೇ ಶಪಿಸಿದನು. ನೀತಿ- "ಅತಿಯಾಸೆ ಯು ಯಾವಾಗಲೂ ಒಳ್ಳೆಯದಲ್ಲ "ಎಂಬ ಪಾಠ ಎಲ್ಲರಿಗೂ ನೆನಪಿರಲಿ.!! Jitheshraj K
|
വർഗ്ഗങ്ങൾ:
- അക്ഷരവൃക്ഷം പദ്ധതിയിലെ സൃഷ്ടികൾ
- കാസർഗോഡ് ജില്ലയിലെ അക്ഷരവൃക്ഷം-2020 സൃഷ്ടികൾ
- കാസർഗോഡ് ഉപജില്ലയിലെ അക്ഷരവൃക്ഷം-2020 സൃഷ്ടികൾ
- അക്ഷരവൃക്ഷം പദ്ധതിയിലെ കഥകൾ
- കാസർഗോഡ് ജില്ലയിലെ അക്ഷരവൃക്ഷം കഥകൾ
- കാസർഗോഡ് ജില്ലയിലെ അക്ഷരവൃക്ഷം സൃഷ്ടികൾ
- കാസർഗോഡ് ഉപജില്ലയിലെ അക്ഷരവൃക്ഷം-2020 കഥകൾ
- കാസർഗോഡ് ജില്ലയിൽ 19/ 04/ 2020ന് ചേർത്ത അക്ഷരവൃക്ഷം സൃഷ്ടികൾ