"ജി.എച്ച്.എസ്. എസ്. ബേകൂർ/അക്ഷരവൃക്ഷം/ ಬೆಳ್ಳಗಿರುವುದೆಲ್ಲ ಹಾಲಲ್ಲ" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
('{{BoxTop1 | തലക്കെട്ട്= Bellagirudella Halalla | color= 4 }} ಬೆಳ್ಳಗಿರುವುದೆ...' താൾ സൃഷ്ടിച്ചിരിക്കുന്നു)
 
No edit summary
വരി 23: വരി 23:
| color= 2     
| color= 2     
}}
}}
{{Verification4|name=Latheefkp|തരം= കഥ}}

17:35, 5 മേയ് 2020-നു നിലവിലുണ്ടായിരുന്ന രൂപം

Bellagirudella Halalla

ಬೆಳ್ಳಗಿರುವುದೆಲ್ಲ ಹಾಲಲ್ಲ ಒಂದು ಕಾಲೇಜಿನಲ್ಲಿ ರಕ್ಷಿತಾ ,ಹರಿಣಿ ಸಂತೋಷ್ ಎಂಬ ಆತ್ಮೀಯ ಸ್ನೇಹಿತರಿದ್ದರು. ಹಾಗೂ ನಿಖಿಲ್ ಎಂಬವನು ಕಲಿಯುವುದರಲ್ಲಿ ಮುಂದಿದ್ದನು .ಅಧ್ಯಾಪಿಕೆ ಯಾವ ಪ್ರಶ್ನೆ ಕೇಳಿದರು ನಿಖಿಲ್ ಉತ್ತರಿಸುತ್ತಿದ್ಧನು .ಇದನ್ನು ನೋಡುತಿದ್ದ ಸಂತೋಷಿಗೆ ಹೊಟ್ಟೆ ಕಿಚ್ಚು ಆಯಿತು .ತಾನು ತರಗತಿಯಲ್ಲಿ ಮುಂದೆ ಬರಬೇಕೆಂದು ಸಂತೋಷನ ಆಸೆ .ಆದರೆ ನಿಖಿಲ್ ಅದಕ್ಕೆ ಅಡ್ಡಿ ಬರುತ್ತಿದ್ದಾನೆ ಎಂದು ಸಂತೋಷನ ಅನಿಸಿಕೆ .ನಿಖಿಲ್ಗೆ ತಕ್ಕ ಪಾಠ ಕಲಿಸಬೇಕೆಂದು ತನ್ನ ಗೆಳತಿಯರೊಂದಿಗೆ ಕೂಡಿ ಅವರು ಒಂದು ಉಪಾಯವನ್ನು ಮಾಡಿದರು. ಅದೇನೆಂದರೆ ನಿಖಿಲನ್ನು ಪ್ರೀತಿಯ ಬಲೆಗೆ ಬೀಳುವಂತೆ ಮಾಡುವುದು. ಮೂವರು ಸೇರಿಕೊಂಡು ಹಾಗೆ ಮಾಡಿದರು. ಮೂವರು ನಿಖಿಲ್ನ ಬಳಿಗೆ ಹೋಗಿ "ನೀನು ಎಷ್ಟು ಕಲಿಯುತ್ತನೇ ಇರುತ್ತಿ. ನೀನು ಇನ್ನಾದರೂ ಪ್ರೀತಿ ಮಾಡು ಅಂತ ಹೇಳಿ ನಿಖಿಲ್ ತಲೆ ಕೆಡಿಸುತ್ತಾರೆ. ಆಗ ನಿಖಿಲ್ "ನನಗೆ ಪ್ರೀತಿ ,ಮದುವೆ ಇದೆಲ್ಲ ಮತ್ತೆ .ನಾನೀಗ ಒಳ್ಳೆ ಕಲಿತು ದೊಡ್ಡ ಕೆಲಸ ಸಿಕ್ಕಿ ನನ್ನ ತಂದೆ ,ತಾಯಿಯನ್ನು ಖುಷಿಯಾಗಿಡಬೇಕು,ಎಂದಾಗ ಸಂತೋಷ್ ಹಾಗೂ ಅವನ ಗೆಳತಿಯರು ಹೇಗಾದರೂ ಮಾಡಿ ನಿಖಿಲ್ ತಲೆ ಕೆಡಿಸಿ ಪ್ರೀತಿಯ ಬಲೆಗೆ ಬೀಳುವ ಹಾಗೆ ಮಾಡಿದರು . ಆಗ ನಿಖಿಲ್ ಜಾನಕಿ ಎಂಬವಳನ್ನು ಪ್ರೀತಿಸಿ ಅವನ ಮನಸ್ಸಿನಲ್ಲಿರುವುದನ್ನು ಹೇಳಿದನು. ಆದರೆ ಜಾನಕಿ ಇದಕ್ಕೆ ಒಪ್ಪಲಿಲ್ಲ .ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಈ ಕಡೆ ಹಣವಿಲ್ಲದೆ ಒದ್ದಾಡಿ ಕೊನೆಗೆ ನಿಖಿಲ್ ಹುಚ್ಚನಾಗಿ ಬಿಟ್ಟ .ಈ ಕಡೆ ಸಂತೋಷ್ ಕೂಡ ಒಂದು ಹುಡುಗಿಗೆ ತನ್ನ ಮನಸ್ಸಿನಲ್ಲಿರುವುದನ್ನು ಹೇಳಿದನು. ಆದರೆ ಆ ಹುಡುಗಿ ಒಪ್ಪದೇ ಅವನಿಗೆ ಬುದ್ಧಿವಾದ ಹೇಳಿದಳು ."ನೀನು ಪ್ರೀತಿ ,ಗೀತಿ ಎಂದೆಲ್ಲ ಅಲೆದಾಡಬೇಡ .ನೀನು ಮೊದಲು ಚೆನ್ನಾಗಿ ಕಲಿತು ತಂದೆ ತಾಯಿಯನ್ನು ಚೆನ್ನಾಗಿ ನೋಡುಕೊ .ಅವರು ನಿನಗಾಗಿ ತುಂಬಾ ಕಷ್ಟ ಪಟ್ಟಿದ್ದಾರೆ ‘ಎಂದೆಲ್ಲ ಬುದ್ಧಿವಾದ ಹೇಳಿದಳು .ಸಂತೋಷಿಗೆ ತನ್ನ ತಪ್ಪಿನ ಅರಿವಾಯಿತು. ಆದರೆ ಕಾಲ ಮಿಂಚಿ ಹೋಗಿತ್ತು .ನಿಖಿಲ್ ಹುಚ್ಚನಾಗಿ ತಲೆಗೆ ಏಟು ಬಿದ್ದು ಆಸ್ಪತ್ರೆಗೆ ಸೇರಿದ. ಮೂವರು ಗೆಳಯರಿಗೆ ಈಗ ತಪ್ಪಿನ ಅರಿವಾದರೂ ಪ್ರಯೋಜನವಿರಲಿಲ್ಲ. ಮೂವರು ಆಸ್ಪತ್ರೆಗೆ ಹೋದಾಗ ನಿಖಿಲನ್ನು ಉಳಿಸುವುದೇ ಕಷ್ಟ . ಅವನು ಬದುಕಲೇ ಬೇಕಾದರೆ ಶಸ್ತ್ರ ಚಿಕಿತ್ಸೆ ಮಾಡಬೇಕು .ಆದರೆ ಅವನ ತಂದೆ ,ತಾಯಿಯ ಬಳಿ ಅಷ್ಟೊಂದು ಹಣವಿರಲಿಲ್ಲ. ಇದನ್ನು ತಿಳಿದ ರಕ್ಷಿತಾ ,ಸಂತೋಷ್ ,ಹರಿಣಿ ಇವರು ಹಾಗೂ ಎಲ್ಲ ವಿದ್ಯಾರ್ಥಿಗಳು ನಿಖಿಲನ್ನು ಉಳಿಸಲು ಅವರೇ ಧನ ಸಹಾಯ ಮಾಡಲು ಸಿದ್ಧರಾದರು . ಕೊನೆಗೆ ನಿಖಿಲ್ ಹುಷಾರಾದ. ಆ ಕಾರಣಕ್ಕಾಗಿಯೇ ಹೇಳುವುದು ನಾವು ಯಾರನ್ನು ಅತಿಯಾಗಿ ನಂಬಬಾರದು. ನಿಖಿಲ್ ತನ್ನ ಗೆಳೆಯರನ್ನು ಬೆಳ್ಳಗಿರುವುದೆಲ್ಲ ಹಾಲೆಂದು ಅವರನ್ನು ನಂಬಿದ್ದನು . ಅನನ್ಯ ಯು ೯ ಬಿ


Ananya U
9 B ജി.എച്ച്.എസ്. എസ്. ബേകൂർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - Latheefkp തീയ്യതി: 05/ 05/ 2020 >> രചനാവിഭാഗം - കഥ