G. L. P. S. Mulinja/എന്റെ ഗ്രാമം

Schoolwiki സംരംഭത്തിൽ നിന്ന്

ನನ್ನ ಊರು

ನಮ್ಮ ಶಾಲೆ ಮುಳಿಂಜ . ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೆಶ್ವರ್ ತಾಲೂಕಿನ ಮಂಗಲ್ಪಾಡಿ ಪಂಚಾಯತಿನ ಉಪ್ಪಳ ಟೌನ್ ಗ್ರಾಮದ ಮುಳಿಂಜದಲ್ಲಿದೆ . ಮುಳಿಂಜ ಪುಟ್ಟ ಊರು . ಸಮೃದ್ಧವಾದ ಹಳ್ಳಿ ಇದಾಗಿದೆ . ಎಲ್ಲಾ ಜಾತಿಯವರು ಮತದವರು ಇಲ್ಲಿ ನೆಲೆಸಿದ್ದಾರೆ . ಕನ್ನಡ ,ಮಲೆಯಾಳಂ ,ಹಿಂದಿ ಕೊಂಕಣಿ ತುಳು ನಾಡು ಇದಾಗಿದೆ . ಶಾಲೆಯ ಪಕ್ಕದಲ್ಲಿಯೇ ಉಪ್ಪಳ ಬಸ್ ನಿಲ್ದಾಣ ಹಾಗೂ ತುಸುದೂರದಲ್ಲಿ ಉಪ್ಪಳ ರೈಲ್ವೆ ನಿಲ್ದಾಣವಿದೆ . ಹಾಗಾಗಿ ಎಲ್ಲಾ ಸೌಕರ್ಯ ಇರುವ ನಾಡು ಇದಾಗಿದೆ . ಅಲ್ಲದೇ ಕರಾವಳಿ ಪ್ರದೇಶವಾಗಿದ್ದು ಅನತಿದೂರದಲ್ಲಿ ಅರಬೀ ಸಮುದ್ರವಿದೆ .ಇ ತ್ತೀಚಿನ ವರ್ಷ ಶಾಲೆಗೆ ಹಾಜರಾಗುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿದಿದೆ . ನಮ್ಮ ಶಾಲೆಯಲ್ಲಿ ಕನ್ನಡ ಮಲೆಯಾಳ ಮಾಧ್ಯಮಗಳಿವೆ . ಮುಳಿಂಜ ಊರು ಕಲೆಗಳ ಸಂಸ್ಕೃತಿಗಳ ಕಲಾಗಾರರ ನಾಡು . ಕಥಕ್ಕಳಿಯು ಕೇರಳ ರಾಜ್ಯದ ಕಲೆಯಾಗಿದೆ . ಯಕ್ಷಗಾನ ಕಾಸರಗೋಡು ಜಿಲ್ಲೆಯ ಪ್ರಸಿದ್ದವಾದ ಕಲೆಯಾಗಿದೆ .ಯಕ್ಷಗಾನದ ಇನ್ನೊಂದುಪ್ರಕಾರವಾದ ತಾಳೆಮದ್ದಳೆಯು ಬಹಳ ಪ್ರಸಿದ್ದಿ ಪಡೆದಿದೆ .

Wikitaalamaddale.jpg

ಇಂದಿಗೂ ಹಲವಾರು ಯುವಕ ಯುವತಿಯರು ಕಲೆಯನ್ನು ವ್ಯಾಸಂಗ ಮಾಡುತ್ತಿದ್ದಾರೆ . ನೆರೆಯ ಉಪ್ಪಳ ಟೌನ್ ನಲ್ಲಿ ಇಂದಿಗೂ ಯಕ್ಷಗಾನ ಸಜೀವವಾಗಿ ನೆಲೆನಿಂತಿದೆ .

Yakshagaana.jpg


ಅದೇ ರೀತಿ ಹರಿಕಥೆ ಎಂಬ ಕಲಾರೂಪವು ಈ ನಾಡಿನಲ್ಲಿ ಪ್ರಸಿದ್ಧಿಹೊಂದಿದ್ದು ,ಇಂದಿಗೂ ಜನರು ಹರಿಕಥೆ ಮಾಡುತ್ತಾರೆ . ಮಾಪಿಲಪಾಟು ಒಪ್ಪನ ಕೂಡ ಈ ಪ್ರದೇಶಗಳಲ್ಲಿ ಬಹಳ ಪ್ರಸಿದ್ದಿ ಪಡೆದುಕೊಂಡಂತಹ ಕಲಾರೂಪಗಳಾಗಿವೆ .ಹಾಗೆ ನಮ್ಮ ಊರು ಭೂತ ಕೋಲ ಗಳ ನಾಡು .

Wikioppan.jpg
112mulinja.jpg
Harikate.jpg


ಕೊರಗಜ್ಜ ಆರಾಧನೆಯ ಬೀಡು . ಈ ದೇವರುಗಳ ಉತ್ಸವಗಳು ಇಲ್ಲಿ ಬಹಳ ಸಂಭ್ರಮಗಳಿಂದ ನಡೆಯುತ್ತದೆ. ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ . ಸಂಸ್ಕೃತಿಗಳು ನಾಡಿನ ಜನರನ್ನು ಸುಸಂಕೃತರನ್ನಾಗಿ ಮಾಡುತ್ತದೆ . ಕಲೆಗಳು ನಮ್ಮ ಸಂಸ್ಕೃತಿಗಳ ಪ್ರತಿಬಿಂಬವಾಗಿದೆ .ನಮ್ಮ ಊರಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದು ಮಹಾಲಿಂಗೇಶ್ವರ ದೇವಾಲಯ . ಶಾಲೆಯ ಹತ್ತಿರದಲ್ಲಿ ಕೊಂಡೆವೂರು ನಿತ್ಯಾನಂದ ಆಶ್ಶಮವಿದೆ. ಉಪ್ಪಳ ಟೌನ್ ಜುಮಾ ಮಸೀದಿ ಇಲ್ಲಿನ ಪ್ರಸಿದ್ಧ ಮಸೀದಿ ಯಾಗಿದೆ.

ಹೀಗೆ ವಿವಿಧ ಸಂಸ್ಕೃತಿ ಕಲೆಗಳ ಮತಗಳ ಜಾತಿಗಳ ನೆಲೆವೀಡಾದ ಮುಳಿಂಜದಲ್ಲಿ ಈಗ ಸಾಕಷ್ಟು ಅನ್ಯ ರಾಜ್ಯದ ಜನರು ಹೊಟ್ಟೆಪಾಡಿಗಾಗಿ ಕೆಲಸವನ್ನು ಆರಿಸಿಕೊಂಡು ನಮ್ಮಲ್ಲಿಗೆ ಬಂದಿದ್ದಾರೆ . ಜಾರ್ಕಂಡ ,ಮಹಾರಾಷ್ಟ್ರ , ಬಿಹಾರ , ಉತ್ತರಪ್ರದೇಶ , ಹಾವೇರಿ , ಹೀಗೆ ಹಲವು ಕಡೆಗಳಿಂದ ಬಂದು ಇಲ್ಲಿ ಕೆಲಸಮಾಡಿ ಜೀವನಸಾಗಿಸುತ್ತಾರೆ . ಅಂತವರ ಮಕ್ಕಳು ಕಲಿಕೆಗೆ ನಮ್ಮ ಶಾಲೆಯನ್ನು ಆಶ್ರಹಿಸುತ್ತಿದ್ದಾರೆ .

ಮರಾಠಿ ಬಿಹಾರಿ ಹಿಂದಿ ಮಾತನಾಡುವ ಈ ಮಕ್ಕಳನ್ನು ಕಲಿಕೆಯ ಮುಖ್ಯ ಧಾರೆಗೆ ತರಲು ಹರಸಾಹಸ ಅಗತ್ಯ. ಅವರು ಆರ್ಥಿಕವಾಗಿ ಕಡುಬಡವರು.ಕೇವಲ ಒಂದೇ ಒಂದು ಚಿಕ್ಕ ಕೋಣೆಯಲ್ಲಿ ವಾಸ್ತವ್ಯ. ಆ ಗುಡಿಸಲಿನ ಗೋಡೆಗಳಿಗೆ ಸಾರಣೆಯೇ ಕಾಣದ ಶೋಚನೀಯ ಸ್ಥಿತಿ.ಬೆಳ್ಳಂಬೆಳಗ್ಗೆ ಹೆತ್ತವರು ಕೂಲಿ ಕೆಲಸಕ್ಕೆ ಹೋಗುತ್ತಾರೆ. ಮನೆಯ ಕೀ ಮಕ್ಕಳ ಕೈಯಲ್ಲಿ. ಹಲವು ಸಲ ಬೆಳಗ್ಗೆ ತಿಂಡಿಯೂ ಆಗುವುದಿಲ್ಲ. ಹೀಗಿರುವ ಸ್ಥಿತಿಯಲ್ಲಿ ಅವರ ಕಲಿಕೆಯ ಬಗ್ಗೆ ಗಮನ ಕೊಡುವುದು ಸಾಧ್ಯವೇ? ಇಲ್ಲ, ಇವರ ಸಂಕಷ್ಟಗಳನ್ನು ಮನೆ ಸಂದರ್ಶಿಸಿ ತಿಳಿದ ನಮ್ಮ ಶಿಕ್ಷಕರು ಶಾಲೆಯಲ್ಲಿ ಬೆಳಗ್ಗಿನ ಉಪಹಾರ ವ್ಯವಸ್ಥೆ ಮಾಡಲಾಯಿತು.ಕಲಿಕೋಪಕರಣ ಗಳನ್ನು ಉಚಿತವಾಗಿ ಶಾಲಾ ವತಿಯಿಂದ ಕಳೆದ ಕೆಲವು ವರ್ಷಗಳಿಂದ ನೀಡುತ್ತಾ ಬಂದಿದೆ.ಅದನ್ನು ಮತ್ತಷ್ಟು ಪುಷ್ಟಿ ಗೊಳಿಸಬೇಕು. ಮಕ್ಕಳ ಕಲಿಕೆಗಾಗಿ ಹೆಚ್ಚು ಸೌಲಭ್ಯ ಒದಗಿಸಬೇಕು ಮತ್ತು ಇದಕ್ಕಾಗಿ ಎಲ್ಲರ ಸಹಾಯ ಸಹಕಾರ ಅಗತ್ಯ. ಆ ಮಕ್ಕಳನ್ನು ಇತರರಂತೆ ಸಮಾಜದ ಧಾರೆಯಲ್ಲಿ ತರಲು ಅವರಿಗೆ ವಿಶೇಷ ತರಗತಿಗಳು ಕಾರ್ಯಗಾರಗಳನ್ನು ಏರ್ಪಡಿಸಬೇಕು. ಮಾನಸಿಕವಾಗಿ ಸುಭದ್ರಗೊಳಿಸುವ ಕಾರ್ಯ ನಮ್ಮಿಂದ ಆಗಬೇಕು.

"https://schoolwiki.in/index.php?title=G._L._P._S._Mulinja/എന്റെ_ഗ്രാമം&oldid=1632524" എന്ന താളിൽനിന്ന് ശേഖരിച്ചത്