ബി.ഇ.എം. എച്ച്. എസ്. കാസർഗോഡ്/അക്ഷരവൃക്ഷം/ ಪರಿಸರ ಸಂರಕ್ಷಣೆ (environment protection )

Schoolwiki സംരംഭത്തിൽ നിന്ന്
ಪರಿಸರ ಸಂರಕ್ಷಣೆ (environment protection )
ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಎಂದು ಕರೆಯುತ್ತಾರೆ. ಈ ಪರಿಸರದಲ್ಲಿ ಗಿಡಮರಗಳು, ನದಿ ತೋಡುಗಳು, ಬೆಟ್ಟಗುಡ್ಡಗಳು ಸೇರಿಕೊಂಡಿವೆ. ಇವುಗಳೆಲ್ಲವನ್ನು ಒಟ್ಟು ಸೇರಿ ಪರಿಸರ ಎಂದು ಕರೆಯುತ್ತಾರೆ. ಮಾನವನು ಸೇರಿ, ಎಲ್ಲಾ ಜೀವರಾಶಿಗಳ ಉಳಿವಿಗಾಗಿ, ಏಳಿಗೆಗಾಗಿ ಪರಿಸರವನ್ನು ಆಶ್ರಯಿಸಿವೆ. ಪರಿಸರದ ಹೊರತಾದ ಜೀವಜಗತ್ತು ಇರುವುದೇ ಸಾಧ್ಯವಿಲ್ಲ. ಆದರೆ, ಅದು ನಮ್ಮಆಸ್ತಿಯಲ್ಲ. ಪೀಳಿಗೆಯಿಂದ ಎರವಲಾಗಿ ಪಡೆದಿದ್ದು. ಅದನ್ನು ಅಷ್ಟೇ ಸುರಕ್ಷಿತವಾಗಿ, ಜೋಪಾನವಾಗಿ ಹಿಂದಿರುಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮಾನವನ ದುರಾಸೆಯ ಫಲವಾಗಿ, ಇಂದು ನಿರಂತರವಾಗಿ ಪರಿಸರ ಮಾಲಿನ್ಯ ಗೊಳ್ಳುತ್ತದೆ.
ಪರಿಸರವು ಮುಖ್ಯವಾಗಿ ಈ ಮೂರು ರೀತಿಯಲ್ಲಿ ಮಲಿನಗೊಳ್ಳುತ್ತದೆ. ವಾಯುಮಾಲಿನ್ಯ, 

ಜಲಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಕಾರ್ಖಾನೆಗಳಿಂದ ಬರುವ ಹೊಗೆ, ಇಂಧನಗಳ ಅತಿಯಾದ ಬಳಕೆ, ಪ್ಲಾಸ್ಟಿಕ್ ಮತ್ತು ಇನ್ನಿತರ ವಸ್ತುಗಳನ್ನು ಉರಿಸಿದಾಗ ಉಂಟಾಗುವ ಹೊಗೆಯಿಂದ ವಾಯುಮಾಲಿನ್ಯ ಉಂಟಾಗುತ್ತದೆ. ತ್ಯಾಜ್ಯವಸ್ತುಗಳನ್ನು ನೀರಿಗೆ ಹಾಕುವುದು, ಕಾರ್ಖಾನೆಗಳಿಂದ ಬರುವ ನೀರು, ವಾಹನಗಳನ್ನು ತೊಳೆಯುವುದರಿಂದ ಜಲಮಾಲಿನ್ಯ ಉಂಟಾಗುತ್ತದೆ. ವಾಹನಗಳ ಸದ್ದು, ಯಂತ್ರಗಳ ಸದ್ದು, ಸುಡುಮದ್ದು ಪ್ರಯೋಗದಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ ದಾಹ ತೀರಿಕೆಗಾಗಿ ಅಂತರ್ಜಲ ಬರಿದು ಮಾಡುತ್ತಿದ್ದೇವೆ. ಖಣಿಜ ಸಂಪತ್ತಿಗಾಗಿ ಭೂಮಿ ಬಗೆಯುತ್ತಿದ್ದೇವೆ. ಪರಿಣಾಮವಾಗಿ, ಬಹಳಷ್ಟು ಕಾಡುಗಳು ಇಲ್ಲವಾಗಿವೆ. ವನ್ಯಜೀವಿಗಳು ಸಂತತಿ ದಿನದಿನ ಕ್ಷೀಣಿಸುತ್ತಿವೆ. ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಾಗಿ, ಹಸಿರು ಮನೆ ಪರಿಣಾಮ ಉಂಟಾಗಿದೆ. ವಾತಾವರಣದಲ್ಲಿ ಕ್ಲೋರೋ ಕಾರ್ಬನ್ ಅಧಿಕವಾಗಿ, ಬರುವ ಸೂರ್ಯನ ಅತಿನೇರಳೆ ಕಿರಣಗಳನ್ನು ತಡೆಯುವ ಓಝೋನ್ ಪದರ ಕೂಡ ಚಿದರವಾಗುತ್ತಿವೆ. ಹಿಮದ ಗಡ್ಡೆಗಳು ಕರಗಿ ಸಮುದ್ರ ಮಟ್ಟ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್ನ ಅತಿಯಾದ ಬಳಕೆ, ರಾಸಾಯನಿಕ ಗೊಬ್ಬರಗಳ ಬಳಕೆ, ಉಪಯೋಗಿಸಿ ಉಳಿದ ಭಾಗಗಳನ್ನು ರಾಶಿ ಹಾಕುವುದು. ಪರಿಣಾಮವಾಗಿ, ಮಾನವ ಇಂದು ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪ್ರಾಣಿ-ಪಕ್ಷಿಗಳು ನಲುಗುತ್ತಿವೆ. ಈ ಮಾಲಿನ್ಯಗಳನ್ನು ಸಂಸ್ಕರಣೆ ಮಾಡಬೇಕಾದುದು ಅತಿ ಅಗತ್ಯ. ಇಂಧನ ಬಳಕೆ ಗಳನ್ನು ಕಡಿಮೆ ಮಾಡುವುದು, ಕಾರ್ಖಾನೆಗಳಿಂದ ಬರುವ ಹೊಗೆ, ನೀರು ಇತ್ಯಾದಿಗಳನ್ನು ಶುದ್ಧೀಕರಿಸುವುದು, ಮರುಬಳಕೆ ಮಾಡುವುದನ್ನು ಮರುಬಳಕೆ ಮಾಡುವುದು, ಮಣ್ಣಿನಲ್ಲಿ ಕರಗುವ ವಸ್ತುಗಳನ್ನು ಮಣ್ಣಿನಲ್ಲಿ ಹಾಕಿ ಮುಚ್ಚುವುದು, ಸೀಯಾಳದ ಅವಶೇಷಗಳನ್ನು ಒಣಗಿಸಿ ಇಂಧನಗಳಲ್ಲಿ ಬಳಸುವುದು, ಜಲಮೂಲಗಳನ್ನು ಸಂರಕ್ಷಿಸುವುದು, ಸಾಕಷ್ಟು ಗಿಡಮರಗಳನ್ನು ನೆಡುವುದು, ಮಾಲಿನ್ಯದ ಬಗ್ಗೆ ಜನರಿಗೆ ಸಾಕಷ್ಟು ತಿಳುವಳಿಕೆ ನೀಡಬೇಕು. ಇತ್ಯಾದಿ ಕೆಲಸಗಳ ಮೂಲಕ ನಮಗೆ ಪರಿಸರವನ್ನು ಶುಚಿಗೊಳಿಸಬಹುದು. ಮುಂದಿನ ಪೀಳಿಗೆಗಾಗಿ, ಜೀವ ಸಂಕುಲಕ್ಕಾಗಿ, ಇಳೆಗಾಗಿ, ಮಳೆಗಾಗಿ, ಸುಖದ ನಾಡಿಗಾಗಿ, ಪರಿಸರವನ್ನು ಸಂರಕ್ಷಿಸಬೇಕಿದೆ. ಪರಿಸರ ಸಂರಕ್ಷಣೆ ನಮ್ಮ ಉಸಿರಾಗಬೇಕಿದೆ. " ಗಿಡ ಮರ ಬೆಳೆಸಿ ಪರಿಸರ ಸಂರಕ್ಷಿಸಿ"


YASHASWI. V. RAI
8 D ബി.ഇ.എം. എച്ച്. എസ്. കാസർഗോഡ്
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം