ജി.വി. എച്ച്. എസ്. കുഞ്ചത്തൂർ/അക്ഷരവൃക്ഷം/ ಕೃಷಿಯೊಂದು ಜೀವನ ಮಾರ್ಗ

Schoolwiki സംരംഭത്തിൽ നിന്ന്
ಕೃಷಿಯೊಂದು ಜೀವನ ಮಾರ್ಗ


ದೇಶಕ್ಕೆ ಬೆನ್ನೆಲುಬು ನಮ್ಮ ಕೃಷಿಕ.ಕೃಷಿಕರಿಲ್ಲದೆ ನಾವಿಲ್ಲ.ಮನುಷ್ಯನು ಸ್ವತಃ ಆಹಾರವನ್ನು ಉತ್ಪಾದಿಸುವಂತಹ ಸ್ವಾವಲಂಬಿ.ಸಮಾಜದಲ್ಲಿ ಹಲವರು ಹಲವಾರು ಕೆಲಸಗಳನ್ನು ಮಾಡುವವರೇ ಆದರೇ ಒಬ್ಬ ವ್ಯಕ್ತಿಯ ಹೊಟ್ಟೆ ತುಂಬಿಸುವಂತಹ ಆಹಾರವನ್ನು ಕೃಷಿಕನಿಂದಲೇ ತಯಾರಿಸಲು ಸಾಧ್ಯ.ಆದರೆ ಆ ಕೃಷಿ ಈಗ ಯಾರಿಗೂ ಆಸಕ್ತಿ ಇಲ್ಲದಂತಹ ಕೆಲಸವಾಗಿದೆ. ಜಾಗತೀಕರಣದ ಮಾಯಾಜಾಲಕ್ಕೆ ಒಳಗಾಗುತ್ತಿರುವ ಇಂದಿನ ಜೀವನ ಗತಿಯಲ್ಲಿ ಕೃಷಿ ಎಂಬುದು ಕೃಷಿಕ ಎಂಬವನು ಕಾಲ ಕಸವಾಗಿದ್ದಾನೆ.ಕೃಷಿಕನು ಹಗಲು ರಾತ್ರಿ ಎನ್ನದೆ ಬೆವರು ಸುರಿಸಿ ತಮ್ಮ ಜೀವವನ್ನೂ ಜೀವನವನ್ನು ಬಯಲಿನಲ್ಲೇ ಕಳೆಯುವಂಥಹ ತ್ಯಾಗಿ.ತಾನು ಬೆಳೆಸಿದ ಕೃಷಿಯನ್ನು ತನಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಹಂಚಿ ತಿನ್ನುವ ದಾನಿ.ಆದರೆ ಕೃಷಿಯನ್ನು ಮಾಡುವ ವ್ಯಕ್ತಿಯು ಈಗ ಬಹಳ ವಿರಳ. ಯಾಕೆಂದರೆ ಕೃಷಿ ಮಾಡಿದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂಬ ನಂಬಿಕೆಗೆ ಜನರು ಒಳಗಾಗಿದ್ದಾರೆ. ಕೃಷಿಯು ಈಗ ಹಲವಾರು ಸಮಸ್ಯೆಗಳನ್ನು ಎದುರಿಸುತಿವೆ.ಮನುಷ್ಯರಾದ ನಾವು ಕಾಡುಗಳನ್ನು ಕಡಿದು ಕಾಂಕ್ರಿಟ್ ಕಾಡುಗಳನ್ನು ಬೆಳೆಸುತಿದ್ದೇವೆ.ಹಾಗಾಗಿ ಕಾಡುಗಳಲ್ಲಿರುವ ಮೃಗಗಳು ನಾಡಿಗೆ ದಾಳಿನಡೆಸುವಾಗ ಕೃಷಿಯು ಸಂಪೂರ್ಣ ನಾಶವಾಗುತದೆ.ಮನುಷ್ಯನ ದುಷ್ಕೃತ್ಯಗಳಿಗೆ ಕೋಪಗೊಂಡ ವಸುಧೆಯು ಅವಳ ಕೋಪವನ್ನು ಪ್ರಾಕೃತಿಕ ವಿಕೋಪದ ಮೂಲಕ ಅಭಿವ್ಯಕ್ತ ಪಡಿಸುತ್ತಾಳೆ.ಆದರೆ ಅವಳ ಈ ಸ್ಥಿತಿಗೆ ಕಾರಣಕರ್ತನಾದ ಹುಲುಮಾನವನು ಅದರ ಅರಿವೇ ಇಲ್ಲದೆ ತನ್ನ ಕೆಟ್ಟ ಕೆಲಸಗಳನ್ನು ಮುಂದುವರಿಸುತ್ತಲೇ ಇದ್ದಾನೆ.ಕೃಷಿ ಚೆನ್ನಾಗಿ ಬೆಳೆದರು ಆ ಕೃಷಿಗೆ ತಕ್ಕ ಪ್ರತಿಫಲ ಸಿಗದೇ ಕೃಷಿಕರು ಮೋಸಹೋಗುತಾರೆ.ಈ ರೀತಿ ವಂಚನೆಗೆ ಒಳಗಾಗುವ ಕೃಷಿಕರು ಆತ್ಮಹತ್ಯೆಗೆಯ್ಯುತಾರೆ. ಈ ರೀತಿ ಶೋಷಣೆಗೊಳಗಾಗುವ ಕೃಷಿಕರಿಗೆ ಸಹಾಯಮಾಡಲು ಸರಕಾರವು ಪರಿಹಾರ ಯೋಜನೆಗಳನ್ನು ಸೃಷ್ಟಿಸಬೇಕು.ಕೃಷಿಕರ ಸಾಲವನ್ನು ಮನ್ನಾಮಾಡುವಂಥಹ ಯೋಜನೆಗಳನ್ನು ಜಾರಿಗೊಳಿಸಿ ಅವರ ಕಷ್ಟಗಳನ್ನು ದೂರ ಮಾಡಬೇಕು.ಇಂದಿನ ಯುವ ಪೀಳಿಗೆಗೆ ಕೆಸರು ಮಣ್ಣು ಎಲ್ಲವೂ ಗಲೀಜು ಅಥವಾ ಕೊಳಕು ಎಂಬ ದೃಷ್ಟಿಯಿಂದ ಗದ್ದೆಗೆ ಇಳಿಯುವುದಾಗಲಿ ಕೃಷಿಮಾಡುವುದಾಗಲಿ ಇಂತಹ ಕಾರ್ಯಕ್ಕೆ ಯಾರೂ ಕೈ ಹಾಕುವುದಿಲ್ಲ. ಆದರೆ ಅವರಿಗೇನು ಗೊತ್ತು ಕೈಕೆಸರಾದರೆ ಬಾಯಿ ಮೊಸರು ಎಂದು.ಇಂದಿನ ತಂತ್ರಜ್ಞಾನದ ಕಲಿಕೆಯೊಂದಿಗೆ ಕೃಷಿ ಮಹತ್ವವನ್ನು ಶಾಲಾ ಕಾಲೇಜುಗಳಲ್ಲಿ ಕಲಿಸಿಕೊಟ್ಟರೆ ಮುಂದಿನ ಯುವ ಜನತೆಗೆ ಕೃಷಿ ಹಾಗು ಕೃಷಿಕರ ಮೇಲೆ ಗೌರವ ಹೆಚ್ಚುವುದು ಹಾಗು ನಮ್ಮ ದೇಶದ ಬೆನ್ನೆಲುಬು ದೃಢವಾಗುವುದು.


Harshitha
10 B ജി.വി. എച്ച. എസ്. കുഞ്ചത്തൂർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം


 സാങ്കേതിക പരിശോധന - Mohammedrafi തീയ്യതി: 07/ 01/ 2022 >> രചനാവിഭാഗം - ലേഖനം