ജി.എച്ച്.എസ്. എസ്. ബെള്ളൂർ/അക്ഷരവൃക്ഷം/ ನೀನಾರಿಗಾದೆಯೋ ಎಲೆ ಮಾನವಾ.......

Schoolwiki സംരംഭത്തിൽ നിന്ന്
ನೀನಾರಿಗಾದೆಯೋ ಎಲೆ ಮಾನವಾ.......

ದೇವ ಭೂಮಿ ನಮ್ಮ ಭಾರತ. ಆಯುರ್ವೇದದ ಜನ್ಮಸ್ಥಳ. ಅನೇಕ ರೀತಿಯ ಸಸ್ಯ - ಜೀವಜಾಲಗಳಿಗೆ ಜನ್ಮವಿತ್ತ ಪವಿತ್ರ ತಾಣ.ಭಾರತ ಮಾತೆಯ ನಾಡಿದು ನಮ್ಮ ಭಾರತ. ಈ ಪುಣ್ಯ ಸ್ಥಳದ ಸೃಷ್ಟಿಯಿಂದ ಇಲ್ಲಿಯವರೆಗೂ ಉಂಟಾದ ಬದಲಾವಣೆಗಳು ಒಂದೆರಡಲ್ಲ. ಇಂದಿನ ಕಾಲದ ಮಾನವನ ಮೂಲ ರೂಪವೇ ಕಾಡು ಮನುಷ್ಯರು. ಅಂದಿನ ಕಾಲದಲ್ಲಿ ಕಾಡು ಮನುಷ್ಯರು ಕಾಡುಪ್ರಾಣಿಗಳನ್ನು ಬೇಟೆಯಾಡಿ ಮಾಂಸವನ್ನು ಆಹಾರವಾಗಿ ಸೇವಿಸುತ್ತಿದ್ದರು. ಇದರಿಂದ ಪ್ರಕೃತಿಯ ಸೊತ್ತಿಗೆ ಹಾನಿಕರವಾಗುತ್ತಿರಲಿಲ್ಲ. ಕಾಲ ಬದಲಾದಂತೆ ಮನುಷ್ಯನ ಚಿಂತನೆಗಳು ವಿಕಾಸಗೊಳ್ಳಲಾರಂಭಿಸಿದವು. ಹೊಸ ಹೊಸ ತಂತ್ರಜ್ಞಾನಗಳ ಸೃಷ್ಟಿಯಾದವು. ಅಂದಿನ ಕಾಲದ ಜನರು ಕಾಡುಗಳನ್ನು ಸಂರಕ್ಷಿಸುತ್ತಿದ್ದರು. ಗಿಡ ಮರಗಳನ್ನು ನೆಟ್ಟು ಬೆಳೆಸುತ್ತಿದ್ದರು. ಪ್ರಾಣಿ ಪಕ್ಷಿಗಳನ್ನು ಹಿತ ಮಿತವಾಗಿ ಆಹಾರಕ್ಕಾಗಿ ಬಳಸುತ್ತಿದ್ದರು. ಇದರಿಂದಾಗಿ ಜೀವಕ್ಕೆ ಹಾನಿಕರವಾಗುವಂತಃ ಯಾವುದೇ ದುಷ್ಪರಿಣಾಮಗಳಿರಲಿಲ್ಲ. ಆರೋಗ್ಯವಂತರಾಗಿ ಜೀವಿಸುತ್ತಿದ್ದರು. ಹೆಚ್ಚಿನವರು ಕೃಷಿಯನ್ನೇ ಆಶ್ರಯಿಸಿದ್ದರು. ಅವರಿಗೆ ಬೇಕಾದ ಆಹಾರ ಬೆಳೆಗಳನ್ನು ಅವರವರೇ ಬೆಳೆಸುತ್ತಿದ್ದರು. ಆದರೆ ಅವರ ಸಂತೋಷಕ್ಕೆ ಯಾವುದೇ ರೀತಿಯ ಕೊರತೆಗಳಿರಲಿಲ್ಲ. ಇಂದಿನ ಕಾಲದಲ್ಲಿ ಅದೆಷ್ಟು ಬದಲಾವಣೆಗಳು! ಗಿಡ-ಮರಗಳನ್ನು ಹೆಚ್ಚಾಗಿ ಪ್ರೀತಿಸಿ ಬೆಳೆಸಬೇಕಾದ ಮನುಷ್ಯನು ಸಂಘರ್ಷಕ್ಕಿಳಿದವರಂತೆ ಪ್ರಕೃತಿಯ ಮೇಲೆ ನಿರಂತರವಾಗಿ ದಾಳಿಮಾಡುತ್ತಿದ್ದಾನೆ. ಇದರಿಂದ ಗಿಡ, ಮರ, ಗಾಳಿ, ನೀರು ಹಾಗೂ ಶಬ್ದ ಮಾಲಿನ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುತ್ತಿರುವುದು ಶೋಚನೀಯವಾದ ಸಂಗತಿ. ಇದು ಭವಿಷ್ಯದ ದಿನಗಳಲ್ಲಿ ಇನ್ನೂ ಘನ ಘೋರ ಘಟನೆಗಳು ಈ ನಾಡಿನಲ್ಲಿ ಸಂಭವಿಸುವ ಸಾಧ್ಯತೆಗಳಿವೆ. ಎರಡು ವರ್ಷಗಳ ಹಿಂದೆ ಅನುಭವಿಸಿದ ಜಲ ಪ್ರಳಯ ೨೦೨೦ ರಲ್ಲಿ ಅನುಭವಿಸುತ್ತಿರುವ ಕೊರೋನ ವೈರಸ್ ಗಿಂತ ಬೇರೆ ಉದಾಹರಣೆ ಬೇಕೇ?...... ಪ್ರಕೃತಿಯ ವಿಕೋಪಕ್ಕೆ ಬಲಿಯಾಗುತ್ತಿರುವ ಮಾನವ ಅದರ ಒಂದು ಭಾಗ ಎನ್ನುವುದನ್ನು ಬಹುಷಃ ಮರೆತಿದ್ದಾನೆ. ತನ್ನ ಬುದ್ಧಿವಂತಿಕೆಯ ಆಧಾರದ ಮೇಲೆ ಮಾನವನು ಉಳಿದ ಪ್ರಾಣಿಗಳಿಗಿಂತ ತಾನೇ ಶ್ರೇಷ್ಠನೆಂದು ತಿಳಿದುಕೊಂಡಿದ್ದಾನೆ. ಮಾನವನು ಇಂದು ಉಪಯೋಗಿಸುತ್ತಿರುವ ಅದೆಷ್ಟೋ ಕೃತಕ ವಸ್ತುಗಳು ದಿನೇ ದಿನೇ ಸೃಷ್ಟಿಯ ನಿಯಮದ ವಿರುದ್ಧ ಹೆಜ್ಜೆ ಹಾಕುತ್ತಿದೆ. ತಾನು ಉತ್ಪಾದಿಸಿದ ವಸ್ತು ಪರಿಸರಕ್ಕೆ ಹಾನಿಯೇ, ಹಿತಕರವೇ ಎಂದು ಯೋಚಿಸದೆ ಉತ್ಪಾದಿಸುತ್ತಾನೆ. ಯಾವಾಗ ಮನುಷ್ಯನು ಪ್ರಕೃತಿಯ ಸಹನೆಯ ಮಿತಿಯನ್ನು ಮೀರಿ ವರ್ತಿಸುವನೋ ಆ ಸಂದರ್ಭದಲ್ಲಿ ಪ್ರಕೃತಿ ನೀಡುವ ನಮಗೆ ಉಡುಗೊರೆಯೇ ಬರಗಾಲ, ಅನಾವೃಷ್ಟಿ, ಸುಂಟರಗಾಳಿ, ಜಲಪ್ರಳಯ, ಕೊರೋನಾದಂತಃ ದುಷ್ಟ ವೈರಸ್ ಗಳು. ಇಷ್ಟೆಲ್ಲಾ ಅನುಭವಿಸಿದರೂ ಮಾನವನ ಅತಿ ಆಸೆ ಹೆಚ್ಚುವುದೇ ಹೊರತು ಕಡಿಮೆಯಾಗಲಿಲ್ಲ. ಎಲ್ಲವನ್ನೂ ದುರ್ಬಳಕೆ ಮಾಡುತ್ತಾ ಆಡಂಬರದ ಜೀವನವನ್ನು ಬಯಸುತ್ತಿದ್ದಾನೆ. ಇಂದು ಮಾನವ ಹೊಸ ಹೊಸ ಆವಿಷ್ಕಾರಗಳನ್ನು ಕಂಡುಹಿಡಿಯುವುದು ಉಚಿತವೇ ಆದರೂ ಅದು ಪರಿಸರ ಸ್ನೇಹಿ ಆಗುವ ಬದಲು ಪರಿಸರಕ್ಕೆ ಮಾರಕವಾಗುತ್ತಿರುವುದು ವಿಪರ್ಯಾಸದ ಸಂಗತಿಯೇ ಹೌದು. ವಾಹನಗಳಿಂದ ಹಾಗೂ ಕಾರ್ಖಾನೆಗಳಿಂದ ಹೊರ ಹೊಮ್ಮುವ ರಾಸಾಯನಿಕ ವಸ್ತುಗಳು ಇಂಗಾಲದ ಡೈ ಆಕ್ಸೈಡನ್ನು ಹೀರುತ್ತದೆ. ಮಾನವನ ಜೀವಾನಿಲವಾದ ಆಮ್ಲಜನಕದ ಕೊರತೆಗೆ ಕಾರಣವಾಗುತ್ತದೆ. ಆಮ್ಲಜನಕದ ಮೂಲರೂಪವೇ ಗಿಡ ಮರಗಳು. ಗಿಡ ಮರಗಳ ನಾಶ ಉಂಟಾದರೆ ಆಮ್ಲಜನಕವು ಲಭಿಸುವುದು ಎಲ್ಲಿಂದ? ಇದರಿಂದಾಗಿ ಪ್ರಕೃತಿಯಲ್ಲಿ ಉಷ್ಣಾಂಶ ಹೆಚ್ಚಾಗಲು ಕಾರಣವಾಗುತ್ತಿದೆ. ಇದರಿಂದ ಹಲವಾರು ಸಮಸ್ಯೆಗಳನ್ನು ಅನುಭವಿಸಿದರೂ ಮಾನವನು ತನ್ನ ಜೀವ ಶೈಲಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳದೇ ಇರುವುದು ಅತ್ಯಂತ ದುಃಖಕರವಾದ ಸಂಗತಿ. ಮಾನವ ತನ್ನ ಜೀವನದಲ್ಲಿ ಪ್ರಗತಿ ಸಾಧಿಸುವ ಛಲದಲ್ಲಿ ಪ್ರಕೃತಿಯೊಂದಿಗೆ ಸದ್ದಿಲ್ಲದೆ ಸಂಘರ್ಷಕ್ಕೆ ಇಳಿದಿದ್ದಾನೆ. ಅವನ ಹೊಸ ಆವಿಷ್ಕಾರಗಳು ಮನುಕುಲದ ಮೇಲೆ, ಪ್ರಾಣಿ ಪಕ್ಷಿ ಜಗತ್ತಿಗೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ತನ್ನ ಮನಸ್ಸಿಗೆ ಬಂದಂತೆ ಒಳಿತು ಕೆಡುಕುಗಳನ್ನು ಯೋಚಿಸದೆ ಅವನ ಕಾರ್ಯದಲ್ಲಿ ತೊಡಗಿದ್ದಾನೆ. ಹಿಂದಿನ ಕಾಲದ ಪ್ರಕೃತಿಯ ಸೌಂದರ್ಯ ಈಗ ಮಾಯವಾಗಿ ಹೋಗಿದೆ. ಎತ್ತ ನೋಡಿದರೂ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ ಗಿಡ ಮರಗಳು ಇಂದು ಎಲ್ಲಿಗೆ ಹೋಗಿದೆ? ಎಲ್ಲವೂ ಕೃತಕ. ಪರಿಸರದ ನಾಶವಾಗಿದೆ. ಇಂದು ಎತ್ತ ನೋಡಿದರೂ ಆಕಾಶದೆತ್ತರಕ್ಕೆ ಬೆಳೆದು ನಿಂತ ಕಟ್ಟಡಗಳನ್ನು ಮಾತ್ರ ಕಾಣಬಹುದು. ನೈಸರ್ಗಿಕ ಆಮ್ಲಜನಕ ಇಲ್ಲದಂತಾಗಿದೆ. ಕೃತಕ ಆಮ್ಲಜನಕದ ವ್ಯವಸ್ಥೆ ಇಲ್ಲಾವಾದರೆ ಮುಂದೇನು ಗತಿ? ಕಾಡುಗಳ ಅಂತ್ಯವಾದಂತೆ ಕಾಡಿನಲ್ಲಿ ವಾಸಿಸುತ್ತಿದ್ದ ಪ್ರಾಣಿ ಪಕ್ಷಿಗಳ ಅಂತ್ಯವೂ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರಾಣಿ ಪಕ್ಷಿಗಳ ನಿನಾದವನ್ನು ಕೇಳದೆ ವರ್ಷಗಳೇ ಕಳೆದು ಹೋಗಿದೆ. ಕೊರೋನಾದಂತಃ ರೋಗ ಹರಡಲು ಬೇರೆ ಕಾರಣ ಬೇಕೇ? ನಾಸ್ತಿ ಸಸ್ಯಮನೌಷಧಮ್ ಎಂದು ಪ್ರಾಚೀನ ಭಾರತೀಯರು ಹೇಳುತ್ತಿದ್ದರು. ಅಂದರೆ ಔಷಧೀಯ ಗುಣಗಳಿಲ್ಲದ ಸಸ್ಯಗಳಿಲ್ಲ ಎಂದರ್ಥ. ಇಂದು ಸಸ್ಯಗಳೇ ಕಡಿಮೆಯಾದಾಗ ರೋಗಗಳನ್ನು ಗುಣಮಖಗೊಳಿಸುವುದು ಅಷ್ಟು ಸುಲಭವಲ್ಲ. ಆದರೂ ಮಾನವನ ಹೊಸ ಹೊಸ ಆವಿಷ್ಕಾರಗಳು ಇಂತಹ ಚಟುವಟಿಕೆಗಳಿಗೆ ಸಹಾಯಕವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಮಾನವನಿಗೆ ಸೇವಿಸಲು ಸೂಕ್ತವಾದ ಉತ್ತಮವಾದ ಆಹಾರ ಲಭಿಸುತ್ತಿದ್ದರೂ ಯಾಕಾಗಿ ಇತರ ಜೀವವನ್ನು ಕೊಲ್ಲುತ್ತಿದ್ದಾನೆ? ಯಾರಿಗೆ ಗೊತ್ತು? ಇಂದಿನ ಕಾಲದಲ್ಲಿ ಎಲ್ಲರೂ ಕಲಿತು ವಿದ್ಯಾವಂತರಾಗಿ ಒಳ್ಳೆಯ ಹುದ್ದೆಗೆ ಸೇರಿ ಹಣ ಸಂಪದಿಸುತ್ತಾರೆ. ಆಹಾರದ ಬದಲು ಹಣವನ್ನು ಸೇವಿಸಲು ಸಾಧ್ಯವೇ? ಭಾರತವು ಜಗತ್ತಿನ ಜನಸಂಖ್ಯೆಯಲ್ಲಿ ಅತಿ ದೊಡ್ಡ ಎರಡನೇ ರಾಷ್ಟ್ರ. ಇಷ್ಟು ಜನಸಂಖ್ಯೆಯಿದ್ದರೂ ಆಹಾರ ಲಭ್ಯತೆಯ ಸಲುವಾಗಿ ದುಡಿಯುವವರ ಸಂಖ್ಯೆ ಅತೀ ಕಡಿಮೆ. ಯಾರಿಗೂ ಕೃಷಿಯ ಮೇಲೆ ಆಸಕ್ತಿ ಇಲ್ಲದಂತಾಗಿದೆ. ದೇಶದ ಬೆನ್ನೆಲುಬು ರೈತ. ರೈತನೇ ಇಲ್ಲವಾದರೆ ದೇಶವೇ ಇಲ್ಲವಾಗುವುದರಲ್ಲಿ ಸಂಶಯವಿಲ್ಲ. ಎತ್ತ ನೋಡಿದರೂ ಕಟ್ಟಡಗಳು, ನಗರಗಳು. ಹಳ್ಳಿ ಎಂಬ ಪದಕ್ಕೆ ಇನ್ನು ಮುಂದೆ ಬೆಲೆಯಿಲ್ಲದಂತಾಗುತ್ತದೋ? ಅವಿಭಕ್ತ ಕುಟುಂಬಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗಿ ವಿಭಕ್ತ ಕುಟುಂಬಗಳು ಸೃಷ್ಟಿಯಾಗುತ್ತಿವೆ. ಇವೆಲ್ಲಾ ಸಂಭವಿಸಿದಾಗ ಜೀವನ ನರಕದಂತೆ. ಇದನ್ನೆಲ್ಲಾ ಮಾನವ ಅರಿತು ಈ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕಿ ಆ ಮಾರ್ಗದಂತೆ ನಡೆದರೆ ಸುಖಕರವಾದ ಜೀವನ ಸಿಗುವುದು ಖಂಡಿತ. ಅದಕ್ಕೆಲ್ಲಾ ನಾವು ಸಿದ್ಧರಾಗಬೇಕು ಅಷ್ಟೆ. ಪ್ರಕೃತಿ ಸಂರಕ್ಷಣೆ ಎಂಬ ಪವಿತ್ರ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಪ್ರಕೃತಿಯಿದ್ದರೆ ಮಾನವ, ಮಾನವನಿದ್ದರೆ ಪ್ರಕೃತಿ. ಆದುದರಿಂದ ಮಾನವನು ಪ್ರಕೃತಿ ಸಂರಕ್ಷಣೆಯ ಕಾರ್ಯದಲ್ಲಿ ನಿರತನಾಗಬೇಕು. ಅನಾವಶ್ಯಕವಾದ ಕಟ್ಟಡಗಳನ್ನು ತೆರವುಗೊಳಿಸಿ ಯೋಗ್ಯ ಸ್ಥಳದಲ್ಲಿ ಗಿಡ – ಮರಗಳನ್ನು ನೆಟ್ಟು ಬೆಳೆಸಬೇಕು. ವಿಭಕ್ತ ಕುಟುಂಬಗಳು ಅವಿಭಕ್ತ ಕುಟುಂಬಗಳಾಗಬೇಕು. ಪರಿಸರವನ್ನು ಸಂರಕ್ಷಿಸಬೇಕು. ಹಣ ಸಂಪಾದನೆ ಮಾಡುವುದೆಂಬ ಛಲವನ್ನು ಬಿಟ್ಟು ಕೃಷಿ ಮಾಡುತ್ತಾ ತನಗೆ ಬೇಕಾದ ಆಹಾರಬೆಳೆಗಳನ್ನು ತಾನೇ ಬೆಳೆಸಬೇಕು. ಯಂತ್ರಗಳ, ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು. ಕೃಷಿಕಾರ್ಯಗಳಲ್ಲಿ ಪ್ರತಿಯೊಬ್ಬನೂ ಸ್ವ ಹಿತಾಸಕ್ತಿಯಿಂದ ತೊಡಗಿಸಿಕೊಳ್ಳಬೇಕು. ಪರಿಸರ ಸಂರಕ್ಷಣೆ, ಕೃಷಿ ಒಂದು ಮಹಾ ಆಂದೋಲನವಾಗಿ ರೂಪುಗೊಂಡರೆ ಮುಂದಿನ ದಿನಗಳಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯವಿದೆ. ಪ್ರಕೃತಿಯನ್ನು ನಾಶಮಾಡದಿರೋಣ, ಕಳೆದು ಹೋದ ಆ ಪ್ರಕೃತಿ ಸೌಂದರ್ಯವನ್ನು ಮರಳಿ ಪಡೆಯಲು ಪ್ರಯತ್ನಿಸೋಣ. ಭಾರತಮಾತೆಯ ಸೌಂದರ್ಯವನ್ನು ಅವಳಿಗೆ ಪುನಃ ನೀಡಿ ಅವಳ ಮುಖದಲ್ಲಿ ನಗುವನ್ನು ತರೋಣ. ಎಲ್ಲರೂ ಸುಖವಾಗಿ ಜೀವಿಸೋಣ. ಈ ಛಲವನ್ನು ಸಾಧನೆಯೆಂದು ತಿಳಿದು ನುಡಿದಂತೆ ನಡೆಯೋಣ......................


VAISHNAVI. J
10 K ജി.എച്ച്.എസ്. എസ്. ബെള്ളൂർ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം


 സാങ്കേതിക പരിശോധന - Latheefkp തീയ്യതി: 05/ 05/ 2020 >> രചനാവിഭാഗം - ലേഖനം