ജി. എച്ച്. എസ്. എസ്. ബന്തടുക്ക/അക്ഷരവൃക്ഷം/ ಕಣ್ಣು ತೆರೆದಾಗ...

Schoolwiki സംരംഭത്തിൽ നിന്ന്
ಕಣ್ಣು ತೆರೆದಾಗ...

ಶರವಣ ನಗರದಿಂದ ಹಿಂತಿರುಗಿ ತನ್ನ ಊರಾದ ರಾಮಪುರಕ್ಕೆ ಹೊರಟಂತಹ ಶಿವರಾಮನಿಗೆ ಕಾಡುದಾರಿಯ ಮೂಲಕ ನಡೆದು ಹೋಗಬೇಕಾಗಿತ್ತು. ಕಾಡು ಸೇರಿದಾಗಲೇ ಸಂಜೆಯಾಗಿತ್ತು. ಬಹಳ ದೂರ ನಡೆದ ಆಯಾಸದಿಂದ ಕಾಲುಗಳು ಸೋತುಹೋಗಿದ್ದುವು. ಮುಂದೆ ನಡೆಯಲಾರದೆ ಅಲ್ಲೊಂದು ಮಾವಿನ ಮರದ ಕೆಳಗೆ ಕುಳಿತನು. ಅಲ್ಲೇ ಬಿದ್ದಿದ್ದ ಸವಿಯಾದ ಮಾವಿನ ಹಣ್ಣುಗಳನ್ನು ತಿಂದನು. ಕಣ್ಣು ರೆಪ್ಪೆಗಳು ಭಾರವಾದುದರಿಂದ ಅಲ್ಲೇ ಮಾವಿನ ಮರಕ್ಕೆ ಒರಗಿ ಕುಳಿತನು. ಅವನಿಗೆ ಗೊತ್ತಿಲ್ಲದಂತೆಯೇ ಗಾಢವಾದ ನಿದ್ದೆ ಅವನನ್ನು ಆವರಿಸಿತು. ನಿದ್ದೆಯ ಮಂಪರಿನಲ್ಲಿ ಯಾರೋ ಆತನನ್ನು "ಮಗನೇ" ಎಂದು ಕರೆದಂತೆ ಅನಿಸಿತು. ಆ ಕತ್ತಲಲ್ಲಿ ಕರೆಯುವವರು ಯಾರೆಂದು ಆತನಿಗೆ ಬೇಗ ಗೊತ್ತಾಗಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಮಾತನಾಡುವುದು ಮಾವಿನಮರವೆಂದು ಅವನಿಗೆ ಗೊತ್ತಾಯಿತು. ಆಗ ಆತನು ಮಾವಿನ ಮರದೊಡನೆ, "ನೀನು ಮನುಷ್ಯರಂತೆ ಹೇಗೆ ಮಾತನಾಡಲು ಸಾಧ್ಯ"ವೆಂದು ಕೇಳಿದನು. ಆಗ ಮಾವಿನ ಮರವು, "ಹಲವು ವರ್ಷಗಳಿಂದ ನಾನು ಮಾಡಿದ ಸೇವೆಗೂ ಸಹಿಸಿದ ತ್ಯಾಗಕ್ಕೂ ಲಭಿಸಿದ ವರವಿದು" ಎಂದಿತು. ಅದಕ್ಕೆ ಶಿವರಾಮನು, “ನೀನು ಅಷ್ಟಕ್ಕೂ ಈ ಕಾಡಿನಲ್ಲಿರುವ ಉಳಿದ ಮರಗಳಂತೆ ಅಲ್ಲವೇ? ನಿನಗೆಂತಹ ಕಷ್ಟಗಳು ಬಂದೊದಗಲು ಸಾಧ್ಯ? ನೀನು ಮಾಡಿದ ತ್ಯಾಗವೇನು?” ಎಂದು ಕೇಳಿದನು. "ನಾನು ಬೆಳೆದು ನಿಂತ ಬಳಿಕ ಹಲವು ಬಾರಿ ಜನರು ನನ್ನನ್ನು ಕಡಿಯಲು ಬಂದರು. ಆದರೆ ನಾನು ಮಾಡಿದ ಸೇವೆಯಿಂದಲೇ ನನಗೆ ಕೊಡಲಿಯೇಟು ಬೀಳುವ ಸದ್ದು ಕೇಳಿದೊಡನೆ ಈ ಕಾಡಿನ ಪ್ರಾಣಿಗಳು ಬಂದು ಅವರನ್ನು ಓಡಿಸುತ್ತಿದ್ದುವು. ನನ್ನ ಶರೀರದಲ್ಲಿರುವ ಕೊಡಲಿಯೇಟುಗಳ ಗುರುತುಗಳೇ ಅದಕ್ಕೆ ಸಾಕ್ಷಿ. ಎಷ್ಟೋ ಹಕ್ಕಿಗಳು, ಪ್ರಾಣಿಗಳು ನನ್ನ ಮೇಲೆ ವಾಸಮಾಡುತ್ತವೆ. ನಾನು ಕೊಡುವ ಹಣ್ಣುಗಳನ್ನು ತಿಂದು ಹಸಿವನ್ನು ನೀಗಿಸುತ್ತವೆ" ಎಂದಿತು ಮಾವಿನ ಮರ. ಅದಕ್ಕೆ ಅವನು, “ಅದು ಎಲ್ಲ ಮರಗಳು ಮಾಡುವ ಕೆಲಸವಲ್ಲವೇ? ಮರವಾಗಿ ಹುಟ್ಟಿದ ನೀನು ಇದನ್ನು ಮಾಡಲೇಬೇಕು" ಎಂದನು. ಆಗ ಮಾವಿನ ಮರವು, “ಹೌದು, ಮರವಾಗಿ ಹುಟ್ಟಿದ ನಾನು ನನ್ನ ಕೆಲಸವನ್ನು ಮಾಡುತ್ತಿರುವೆನು. ಆದರೆ ಮಾನವರಾಗಿ ಹುಟ್ಟಿದ ನೀವು ನನ್ನ ಜೀವನದ ಉದ್ದೇಶಕ್ಕೆ ಅಡ್ಡಿಪಡಿಸುತ್ತಿರುವಿರಲ್ಲವೇ?” ಎಂದಿತು. ಹಕ್ಕಿಗಳೆಲ್ಲ ಒಟ್ಟಾಗಿ ತನ್ನ ಮೇಲೆ ಆಕ್ರಮಣ ಮಾಡಲು ಬರುತ್ತಿರುವಂತೆ ಚಿಲಿಪಿಲಿ ಸದ್ದು ಕೇಳಿಸಿ ಕಣ್ಣು ತೆರೆದು ನೋಡಿದನು. ಆಗಲೇ ಸೂರ್ಯೋದಯವಾಗಲು ಆರಂಭವಾಗಿತ್ತು...

ವಂದನ ಕೆ ವಿ
9 ಕನ್ನಡ ജി.എച്ച്.എസ്. എസ്. ബന്തടുക്ക
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - Latheefkp തീയ്യതി: 01/ 02/ 2022 >> രചനാവിഭാഗം - കഥ