Chinnada Balehannu
ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಮಲ್ಲೇಶ ಮತ್ತು ಶಾಂತಿ ಎಂಬ ದಂಪತಿಗಳಿದ್ದರು. ಅವರು ಬಾಳೆಗಿಡ ಕೃಷಿ ಮಾಡಿ ಜೀವಿಸುತ್ತಿದ್ದರು. ಒಂದು ವಾರ ಜೋರಾಗಿ ಗಾಳಿ ಮಳೆ ಬಂದು ಒಂದು ವಾರ ಮನೆಯಿಂದ ಹೊರಗೆ ಬರುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಒಂದು ವಾರ ಕಳೆದು ಮಳೆ ನಿಂತ ನಂತರ ಮಲ್ಲೇಶನು ಬಾಳೆಯ ತೋಟದ ಕಡೆಗೆ ಬಂದನು. ಅಲ್ಲಿಗೆ ಬಂದು ನೋಡಿದಾಗ ಬಾಳೆಗಿಡ ಗಳೆಲ್ಲವೂ ಜೋರಾದ ಗಾಳಿ ಮಳೆಗೆ ನೆಲಕ್ಕೆ ಉರುಳಿದ್ದವು .ಇದನ್ನು ನೋಡಿ ಅವನಿಗೆ ತುಂಬಾ ಬೇಸರವಾಗುತ್ತದೆ. ಒಂದು ಗಿಡ ಮಾತ್ರ ಬದುಕಿ ಉಳಿದಿರುತ್ತದೆ. ಇನ್ನು ಜೀವನ ಮಾಡುವುದು ಹೇಗೆಂದು ಯೋಚಿಸಿದನು. ಒಂದು ಬಾಳೆ ಗಿಡದಲ್ಲಿ ನಾನು ಜೀವನವನ್ನು ಸಾಗಿಸುವುದು ಹೇಗೆ? ತನಗಾಗಿರುವ ನಷ್ಟದ ಬಗ್ಗೆ ತುಂಬಾ ಯೋಚಿಸಿದನು. ಕೆಲವು ದಿನದ ಬಳಿಕ ಅವನು ತೋಟದ ಬಳಿಗೆ ಸಾಗಿದನು. ಅಲ್ಲಿ ಅವನಿಗೆ ಹೇ"ಮಲ್ಲೇಶ "ಎಂಬ ಧ್ವನಿಯೂ ಕೇಳಿಸುತ್ತದೆ. ಯಾರಿದು ನನ್ನನ್ನು ಕರೆಯುತ್ತಿರುವುದು ಎಂಬುದು ಅವನಿಗೆ ಆಶ್ಚರ್ಯವಾಯಿತು. ಆ ಬಾಳೆ ಗಿಡವು "ಇಲ್ಲಿ ಬಾ ನಾನು ಕರೆಯುತ್ತಿರುವುದು "ಎಂದಿತು. ನೀನು ಏನೂ ತಲೆ ಕೆಡಿಸ ಬೇಡ ನಿನಗೆ ನಾನು ಚಿನ್ನದ ಬಾಳೆಹಣ್ಣುಗಳನ್ನು ನೀಡುತ್ತೇನೆ!! ನೀನು ಅದನ್ನು ಮಾರಾಟ ಮಾಡಿ ನಿನ್ನ ಕುಟುಂಬದೊಂದಿಗೆ ಜೀವನ ನಡೆಸು!!! ಮತ್ತು ಮಾರಾಟ ಮಾಡಿದ ಹಣದಿಂದ ಬೇರೆ ಗಿಡಗಳನ್ನು ನೆಟ್ಟು ಬೆಳೆಸು. ಎಂದಿತು. ಇದನ್ನು ಮಲ್ಲೇಶನಿಗೆ ನಂಬಲಾಗಲಿಲ್ಲ .ಆದರೂ ಇದು ಸತ್ಯವಾಗಿತ್ತು! ಬಹಳ ಸಂತೋಷದಿಂದ ಮನೆಗೆ ಬಂದು ಹೆಂಡತಿಗೆ ಈ ವಿಷಯನ್ನು ಹೇಳಿದನು. ಹೆಂಡತಿಯು ಪುನಹ ಬಾಳೆ ಕೃಷಿ ಮಾಡಲು ಹೇಳಿದಳು .ನಂತರ ಮಲ್ಲೇಶನು ಹಣ ಬೇಕಾಗುವ ಸಂದರ್ಭದಲ್ಲಿ ಚಿನ್ನದ ಬಾಳೆಹಣ್ಣು ಮಾರಿ ಜೀವನ ನಡೆಸುತ್ತಿದ್ದನು. ಬೇರೆ ಬಾಳೆಗಿಡಗಳನ್ನು ನೆಡದೆ ಇದೇರೀತಿn ಮುಂದುವರಿಸಿದನು. ಒಂದು ದಿನ ಚಿನ್ನದ ಬಾಳೆಯನ್ನು ತರಲು ಅಲ್ಲಿಗೆ ಹೋದಾಗ ಆ ಗಿಡವು ಅಲ್ಲಿ ಕಾಣಿಸಲಿಲ್ಲ. ಅವನಿಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ .ಆಗ ಬಾಳೆಗಿಡ ಹೇ ಮಲ್ಲೇಶ ನಾನಿಲ್ಲಿರುವೆ ಇಷ್ಟು ದಿನ ನಿನಗೆ ನಾನು ಚಿನ್ನದ ಬಾಳೆಹಣ್ಣನ್ನುಚ ಕೊಡುತ್ತಿರುವೆ.ಆದರೆ ನೀನು ಬೇರೆ ಬಾಳೆಗಿಡಗಳನ್ನು ಬೆಳೆಸದೆ ನನ್ನ ಮಾತುಗಳನ್ನು ಕೇಳಲಿಲ್ಲ. ಇನ್ನು ಮುಂದೆ ನಿನಗೆ ಏನನ್ನು ಕೊಡಲಾರೆ ಎಂದು ಮಾಯವಾಯಿತು .ಅಂದಿನಿಂದ ಅವನು ಬಡಪಾಯಿ ಮಲ್ಲೇಶ ನಾಗಿ ಬಾಳೆ ಗಿಡಗಳನ್ನು ನೆಟ್ಟು ಜೀವನ ನಡೆಸಿದನು.


DEEKSHA .S
4 A ജി യു പി എസ് നുള്ളിപ്പാടി
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - Sunirmaes തീയ്യതി: 05/ 05/ 2020 >> രചനാവിഭാഗം - കഥ