ವಿಶ್ವದ ಸೃಷ್ಟಿಯೇ ಸ್ತ್ರೀ
ಜೀವಿಗೆ ಜನ್ಮವ ನೀಡುವ ಸ್ತ್ರೀ
ಯುಗದಲಿ ಸೊಬಗನು ನೀಡುವ ಸ್ತ್ರೀ
ಭಾರತ ಮಾತೆಯ ಮುಗ್ಧೆಯು ಸ್ತ್ರೀ
ಸ್ತ್ರೀ ಮೊದಲ ಸ್ಥಾನ
ಎಲ್ಲಿಯೂ ಮೊದಲ ಸ್ಥಾನ
ಸ್ತ್ರೀ ಇಲ್ಲದಿದ್ದರೆ ಪ್ರಪಂಚವೇ
ಬರೀ ಹೋಳು
ಸ್ತ್ರೀಯ ಪೂಜಿಸುವರು
ಸ್ತ್ರೀಯೇ ಮೊದಲ ಗುರು
ಸ್ತ್ರೀಯೇ ಅಪರಂಜಿ
ಅವಳ ಪ್ರೀತಿಯೇ ಗುಲಗಂಜಿ
ವನವಾಸವನ್ನು ಕಳೆದಳು ಸ್ತ್ರೀ
ಕಷ್ಟವ ನೀಗುವ ಸ್ತ್ರೀ
ಸ್ತ್ರೀಯೇ ನಮ್ಮ ಪಾಲಿನ ಸೊತ್ತು