എസ്. എ.ടി.എച്ച്.എസ്. മഞ്ചേശ്വർ/അക്ഷരവൃക്ഷം/ Odaluri (ಒಡಲುರಿ)

Schoolwiki സംരംഭത്തിൽ നിന്ന്
Odaluri (ಒಡಲುರಿ)
 

 ನೀರವ ರಾತ್ರಿಯ ಕಾರ್ಮುಗಿಲಿನಲೆಗಳನು
       ಗುಡುಗು,ಮಿಂಚುಗಳು ಸಿಡಿದೆಬ್ಬಿಸುತ್ತಿತ್ತು
       ಒಡೆದು ಚೂರಾದ ಮಾಡುಗಳೆಡೆಯಿಂದ
       ಮಳೆ ನೀರ ಜಲಧಾರೆ ಮನೆಯೊಳಗಿತ್ತು

                           ಒಳಕೋಣೆಯ ಚಿಂದಿ ಹಾಸಿನಲ್ಲಿ
                           ಲೋಖ ತಿಳಿಯದ ಮಗು ನಿದ್ರಿಸಿತ್ತು
                          ನೀರ ಧಾರೆಯನ್ನು ಕೋಣೆಯೊಳು ಹರಿಯದೆ ;
                          ತಾಯಿ ಕರುಳು ಪ್ರತಿಭಟಿಸುತ್ತಿತ್ತು

     ತನ್ನೆಲ್ಲಾ ತುಣುಕು ಬಟ್ಟೆಗಳ ಚೂರನ್ನು
     ಒಂದಾಗಿಸಿ ಒಂದೊಂದಾಗಿಸಿ... ಕೂಸಿನ
     ಮೈಮೇಲೆ ಹಾಕುವ ತಾಯಿ ;
     ತನ್ನೆಲ್ಲಾ ಚಳಿಯನ್ನು ಮಡುವು ಗಟ್ಟಿದ ನೀರಲಿ
     ಬಿಸಿಯಾಗಿಸಿ....ಬಿಸಿಯನ್ನಾರಿಸಿ....

                          ಪ್ರೌಢತೆಯ ಪ್ರಬುದ್ಧತೆ ತಲುಪಿದ ಮಗು
                           ಅವನಾದನು..ನವ ಯುವಕನಾದನು
                           ತಾರುಣ್ಯ, ಯವ್ವನ ಕಳೆದ ತಾಯಿ
                           ಹಿರಿಯಳಾದಳು...ತುಚ್ಛ ಮುದುಕಿಯಾದಳು

      ಗೆಲ್ಲುಗಳಿಗಾಸರೆ ನೀಡಿದ ಬೇರು
     ಬಿರುಗಾಳಿಗೆ ಅಲುಗಾಡಿದಾಗ...;
     ಗೆಲ್ಲುಗಳು ಕೆಳಗೆ ಮುರಿದು ಬಿಲ್ದುವ ತರಃ
     ಸಂತಾನ ಗೆಲ್ಲು ಮುರಿಯುತ್ತಿತ್ತು

                             ಮನೆಯಲ್ಲಿ ತಾಯಿಗೆ ಯಾಕೆ ಕಿರಿಕಿರಿ ?
                             ಕೆಮ್ಮುವ ಮುದಿಜೇವ ಮಗನಿಗೂ ತುರಿತುರಿ
                             ವಾಚಾಳ ತಾಯಿ ಹೆಂಡತಿಗೆ ಅಡಕತ್ತರಿ
                             ವೃದ್ಧಾಶ್ರಮವೇ ತಾಯಿಗೆ ಸೂಕ್ತ ರೀತಿ....

   ಕರುಣೆಯ ಪ್ರತಿರೂಪ ತಾಯಿ
   ವಾತ್ಸಲ್ಯದ ಕರುಣಾಮಯಿ ತಾಯಿ
   ಮಮತೆಯ ಮಧುವರ್ಣ ತಾಯಿ
   ಪ್ರೀತಿಯ ವೈಶಾಲ್ಯವೇ ಈ ತಾಯಿ

                              ನವ ಮಾಸ ತಾಯಿ ಗಭ೯ದಾಳದಿ
                               ನೆತ್ತರು ,ಲವಣಗಳ ಆಹಾರದಿ
                               ಜನನೀ ದಾತೆಯ ಆರೈಕೆಯಲಿ
                               ನವ ಕೂಸು ಕಂಡಿತೀ ಪೃಥ್ವಿಯಲಿ

 ನವ ಮಾಸ ಹೊತ್ತ ಈ ಜೀವದ
 ಒಡಲಾಳದ ಬಿಸಿ ತಾಗದೆ ಹೋಯ್ತೇ
  ಬಹು ಮಹಡಿ ಆಡಂಬರ ಮಳಿಗೆಯಲಿ
 ಈ ಮುದಿ ಜೀವಕಾಸರೆ ಇಲ್ಲವಾಯ್ತೇ

Fathimath Raliya
9 B എസ്. എ.ടി.എച്ച്.എസ്. മഞ്ചേശ്വർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കവിത