എസ്. എ.ടി.എച്ച്.എസ്. മഞ്ചേശ്വർ/അക്ഷരവൃക്ഷം/ Hosa Anubhava
Hosa Anubhava
ಅಂತೂ ಇಂತೂ ಮುಗಿಯುತ್ತಾ ಬಂದಿತ್ತು ಒಂಬತ್ತನೇ ತರಗತಿಯ ಪ್ರಯಾಣ. ಇನ್ನೇನು ಪರೀಕ್ಷೆಗಳು ಪ್ರಾರಂಭವಾಗಿದ್ದುವು ಒಂದು ಕಡೆ ಆತಂಕ , ಭಯ ಹಾಗೂ ಒಳ್ಳೆ ಅಂಕ ಗಳಿಸಬೇಕೆಂಬ ಹಟ ಮನ ತುಂಬಿತ್ತು.ಪರೀಕ್ಷಾ ವೇಳಾಪಟ್ಟಿ ಮೊದಲೇ ನಮ್ಮ ಕೈ ಸೇರಿತ್ತು. ವೇಳಾಪಟ್ಟಿ ದೊರಕಿದ ಕೂಡಲೇ ಕಲಿಯಲು ದೊರಕುವ ಸಮಯ, ಪರೀಕ್ಷೆ ಬರೆಯುವ ಅವಧಿ ಇವೆಲ್ಲವುಗಳು ಮನದಲ್ಲಿ ಮನೆಮಾಡಿತ್ತು. ಒಂದೊಂದೇ ಪರೀಕ್ಷೆಗಳನ್ನು ಒಳ್ಳೆಯ ರೀತಿಯಲ್ಲಿ ಬರೆದೆವು. ದಿನಗಳು ಬಹುಬೇಗನೆ ಕಳೆದಂತೆ ಆಗುತ್ತಿತ್ತು. ಕೊನೆಗೂ ಇನ್ನೂ ಎರಡು ಪರೀಕ್ಷೆ ಮಾತ್ರವೇ ಬಾಕಿ ಇದ್ದವು. ಮನದಲ್ಲಿ ಒಂದು ತರಹದ ಖುಷಿ ಯಾಕೆಂದರೆ ಇನ್ನು ನಾವು ಹತ್ತನೇ ತರಗತಿಗೆ ಹೋಗುವವರೆಂದು. ಆದರೆ .... ಕೊನೇ ಕ್ಷಣದಲ್ಲಿ ನಮಗೆ ಕಾದಿತ್ತು ಭಯಾನಕವಾದ ಸನ್ನಿವೇಶ. ಇಡೀ ದೇಶವೇ ಕೋರೋನ ಎಂಬ ರೋಗದ ಕೈವಶವಾಗಿತ್ತು. ಹಲವು ತಿರುವುಗಳು ಎದುರಾಗಿತ್ತು. ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆಯೇ ಇಲ್ಲವಾಯಿತು, ದುಡಿಯುವವರಿಗೆ ದುಡಿಮೆಯೇ ಇಲ್ಲವಾಯಿತು ಭಾರತದಲ್ಲಿ ಬೀಗಮುದ್ರೆ ಮಾಡಲಾಯಿತು. ನಮ್ಮ ಕುಟುಂಬಸ್ಥರನ್ನು ನೋಡಲಾಗದಂತಾಯಿತು. ಕೆಲಸಕ್ಕಾಗಿ ಹೊರನಾಡುಗಳಿಗೆ ಹೋದವರು ಅಲ್ಲಿಯೇ ಒಬ್ಬಂಟಿಯಾಗಿ ಇರಬೇಕಾಯಿತು. ಕನಸಲ್ಲೂ ನೆನೆಸದಂತಹ ಜೀವನ ನಮ್ಮದಾಯಿತು. ಇದರಿಂದ ಮನದಲ್ಲಿ ಕಸಿವಿಸಿ ತುಂಬಿಹೋಯಿತು. ಯಾರಲ್ಲೂ ಮಾತನಾಡದಂತ ಸ್ಥಿತಿ. ದಿನ ಬೆಳಗೆದ್ದು ಶಾಲೆಗಳಿಗೆ ,ಕೆಲಸಕ್ಕೆ ,ಕಾಲೇಜುಗಳಿಗೆ ಹೊರಡುತ್ತಿದ್ದ ನಾವು ಮನೆಯಲ್ಲೇ ಇರಬೇಕಾಯಿತು. ಈ ಪರಿಸ್ಥಿತಿ ನಮಗೆ ದೇವರು ಕೊಟ್ಟ ವರವೋ ಶಾಪವೋ ಎಂದು ತಿಳಿಯದಾಯಿತು. ಮೊದಮೊದಲು ಮನೆಯಲ್ಲಿ ಕಾಲಹರಣ ವೇ ಆಗುತ್ತಿರಲಿಲ್ಲ. ದಿನನಿತ್ಯ ಮಾತು ಆಟ ಆಡುತ್ತಿದ್ದ ಗೆಳೆಯ-ಗೆಳತಿಯರು ನೆನಪಾಗುತ್ತಿದ್ದರು. ಶಾಲಾ ವೇಳಾಪಟ್ಟಿ ನೋಡಿದಾಗ ಅಧ್ಯಾಪಕರು ಮಾಡುತ್ತಿದ್ದ ಪಾಠ ತುಂಬಾ ನೆನಪಾಗುತ್ತಿತ್ತು. ಬೆಳಗ್ಗೆ ಮಧ್ಯಾಹ್ನ ಸಂಜೆ ಎಲ್ಲವೂ ಒಂದೇ ತರಹ ವಿರುವಂತೆ ಆಗುತ್ತಿತ್ತು ಅಮ್ಮ ,ಅಜ್ಜಿ ,ಅತ್ತೆ ಇವರೆಲ್ಲ ಸೇರಿ ಹಲಸಿನಕಾಯಿಯ ಚಿಪ್ಸ್, ಹಪ್ಪಳ ತಯಾರಿಸುತ್ತಿದ್ದರು. ಅವರೊಂದಿಗೆ ನಾನು ಸೇರಿಕೊಂಡೆನು. ಆ ಮೂಲಕ ನನಗೆ ಹೊಸ ಅನುಭವ ವಾಯಿತು. ಒಂದು ತರಹ ಈ ಬೀಗಮುದ್ರೆ ಒಳ್ಳೇದನಿಸಿತು ಯಾಕೆಂದರೆ ಮನೆಯವರೊಂದಿಗೆ ಕಾಲ ಕಳೆಯುವ ಒಂದು ಸುವರ್ಣವಕಾಶ ದೊರಕಿದಂತಾಯಿತು. ಬೆಳಿಗ್ಗೆ ಅಮ್ಮ ಮಾಡುತ್ತಿದ್ದ ಕೆಲಸಗಳ ಅರಿವಾಯಿತು. ಮನೆಮಂದಿ ಎಲ್ಲಾ ಒಟ್ಟಾಗಿ ಸೇರಿ ಊಟ ತಿಂಡಿ ಆಟಗಳನ್ನು ಮಾಡುವಂತಾಯಿತು. ಒಂದು ತರಹ ಒಂದು ಹೊಸ ಅನುಭವವೇ ದೊರಕಿತು. ಎಲ್ಲರೂ ಒಟ್ಟಾಗಿ ಅಂಗಳದಲ್ಲಿ ಕುಳಿತಾಗ ತಂಪಾದ ಗಾಳಿ, ನಾನಾ ರೀತಿಯ ಹಕ್ಕಿಗಳು ಅವುಗಳ ಕೂಗುಗಳು ಹಾಗೂ ವಸಂತಕಾಲದ ಸೊಗಡು ಸವಿಯುವಂತಾಯಿತು. ದಿನಾಲು ಬೇಕರಿ ಆಹಾರವನ್ನು ಸೇವಿಸುತ್ತಿದ್ದ ನಮಗೆ ಮನೆಯಲ್ಲಿ ನಾನಾ ರೀತಿಯ ಆಹಾರ ತಯಾರಿಸುವ ಹುರುಪು ತುಂಬಿತು. ಟಿವಿ ಮೊಬೈಲ್ ಇವುಗಳೇ ಕಾಲಹರಣಕ್ಕೆ ಬೇಕಾಗಿತ್ತು. ಮೊಬೈಲ್ ಗಳು ನಮ್ಮ ಸ್ನೇಹಿತರನ್ನು ಬಂಧು-ಮಿತ್ರರನ್ನು ಸಂಪರ್ಕಿಸುವ ದಾರಿಯಾಗಿತ್ತು ವಿಜ್ಞಾನಿಗಳು ಹೇಳುವ ಪ್ರಕಾರ ಇನ್ನು ಮುಂದಿನ ದಿನಗಳಲ್ಲಿ ಯಾರು ಯಾರನ್ನು ಮಾತನಾಡುವಾಗಲೂ ಸಂಶಯದಿಂದ ನೋಡ ಬೇಕಾಗುವ ಪರಿಸ್ಥಿತಿ ಬರಬಹುದು. ನಾವು ಇಲ್ಲಿವರೆಗೆ ಕಳೆದ ಕ್ಷಣಗಳು ಇನ್ನು ಮರುಕಳಿಸುವುದೇ ಕನಸಿನ ಮಾತಾಗಬಹುದು. ಎಲ್ಲವೂ ಆ ದೇವರು ಕೈಯಲ್ಲಿದೆ .ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ. ನಮ್ಮ ಆರೋಗ್ಯವನ್ನು ನಾವೇ ರಕ್ಷಿಸೋಣ. ಮನೆಯಲ್ಲೆ ಕೂತು ಮುಂಜಾಗ್ರತಾ ಕ್ರಮ ವಹಿಸೋಣ.ನಮ್ಮ ಸರಕಾರದ ಆದೇಶಗಳನ್ನು ತಪ್ಪದೆ ಪಾಲಿಸೋಣ
സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - ലേഖനം |
- അക്ഷരവൃക്ഷം പദ്ധതിയിലെ സൃഷ്ടികൾ
- കാസർഗോഡ് ജില്ലയിലെ അക്ഷരവൃക്ഷം-2020 സൃഷ്ടികൾ
- മഞ്ചേശ്വരം ഉപജില്ലയിലെ അക്ഷരവൃക്ഷം-2020 സൃഷ്ടികൾ
- അക്ഷരവൃക്ഷം പദ്ധതിയിലെ ലേഖനംകൾ
- കാസർഗോഡ് ജില്ലയിലെ അക്ഷരവൃക്ഷം ലേഖനംകൾ
- കാസർഗോഡ് ജില്ലയിലെ അക്ഷരവൃക്ഷം സൃഷ്ടികൾ
- മഞ്ചേശ്വരം ഉപജില്ലയിലെ അക്ഷരവൃക്ഷം-2020 ലേഖനംകൾ
- കാസർഗോഡ് ജില്ലയിൽ 05/ 05/ 2020ന് ചേർത്ത അക്ഷരവൃക്ഷം സൃഷ്ടികൾ
- അക്ഷരവൃക്ഷം 2020 പദ്ധതിയിൽ നാലാം ഘട്ടത്തിൽ പരിശോധിച്ച സൃഷ്ടികൾ
- അക്ഷരവൃക്ഷം 2020 പദ്ധതിയിൽ നാലാംഘട്ടത്തിൽ പരിശോധിച്ച ലേഖനം
- അക്ഷരവൃക്ഷം 2020 കന്നട രചനകൾ