എസ്. എ.ടി.എച്ച്.എസ്. മഞ്ചേശ്വർ/അക്ഷരവൃക്ഷം/ ತಾಯಿಯೇ ದೇವರು

ತಾಯಿಯೇ ದೇವರು

ಒಂದು ಊರಿನಲ್ಲಿ ಒಬ್ಬ ಕೃಷಿಕನಿದ್ದನು.ಅವನ ಹೆಸರು ರಾಮ.ಅವನು ದುಡಿದು ಅವನ ಅಮ್ಮನನ್ನು ಶುಶ್ರೂಷೆ ಮಾಡುತಿದ್ದನು. ಅವನಿಗೆ ಮದುವೆಯಾಗಲಿಲ್ಲ.ಊರಿನ ಜನರು ಮದುವೆಯಾಗಲು ಬಲವಂತ ಮಾಡಿದರು.ಆಗ ರಾಮ ತಾಯಿಯೆ ದೇವರು ಎಂದು ಸುಮ್ಮನಿರುತ್ತಿದ್ದ.ಹತ್ತಿರದ ಮನೆಯವರು ಹೇಳಿದರು. ನಿನಗೆ ಮದುವೆಯಾದರೆ ಮತ್ತೆ ನಿನ್ನ ಅಮ್ಮನನ್ನು ನೋಡುವುದು ಮತ್ತು ಮನೆ ಕೆಲಸಗಳನ್ನು ಅವಳು ಮಾಡುವಳು.ನಿನಗೆ ಕೆಲಸ ಸುಲಭವಾಗಬಹುದು.ಅವನು ಹೇಳಿದ,ಅಯ್ಯೋ!ನೀವು ಏನು ಹೇಳುತಿದ್ದೀರಿ? ನನ್ನ ಅಮ್ಮನನ್ನು ನೋಡುವುದು ಮನೆ ಕೆಲಸ ಮಾಡುವುದು ನನಗೆ ಕಷ್ಟದ ಕೆಲಸವಲ್ಲ.ನಾನು ಮದುವೆಯಾದರೆ ಅವಳು ಹೇಳಿದಂತೆ ಕುಣಿದಾಡಬೇಕಾಗುತ್ತದೆ.ಅದಕ್ಕಾಗಿಯೇ ನಾನು ಮದುವೆಯೇ ಆಗುವುದಿಲ್ಲವೆಂದಿದ್ದೇನೆ ಎಂದನು. ಹೀಗಿರುವಾಗ ಒಂದು ದಿನ ರಾಮ ಹಾಗೂ ಅವನ ತಾಯಿಗೆ ತೀವ್ರವಾದ ಜ್ವರ ಕಾಡಿತು. ತಾಯಿಯನ್ನು ನೋಡಿಕೊಳ್ಳುವುದಿರಲಿ,ನಡೆಯಲೂ ಸಾಧ್ಯವಾಗದ ಸ್ಥಿತಿ ಬಂತು. ಆಗ ನೆರೆಹೊರೆಯವರು ಹೇಳಿದರು ನೋಡು ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಇನ್ನೊಬ್ಬರಿದ್ದರೆ ಒಳ್ಳೆಯದಲ್ಲವೆ ಎಂದು. ಆ ಸಮಯದಲ್ಲಿ ಅವನ ಸಮೀಪವಾಸಿಯಾದ ಒಬ್ಬಾಕೆ ಕುಂಟಿ ಹುಡುಗಿಯು ಅವರಿಬ್ಬರ ಸೇವೆಯನ್ನು ಯಾವುದೇ ಬೇಸರವಿಲ್ಲದೆ ಮಾಡಿ ಹೋಗುತ್ತಿದ್ದಳು.ರಾಮುವಿನ ಮನಸ್ಸಿನಲ್ಲಿ ಇವಳನ್ನೇ ತಾನು ಮದುವೆಯಾದರೆ ಹೇಗೆ? ಎಂಬ ಯೋಚನೆ ಬಂತು. ಮರುದಿನವೇ ಅವನು ಅವಳಲ್ಲಿ ""ನೀನು ನನ್ನನ್ನು ಮದುವೆಯಾಗುವೆಯಾ?” ಎಂದು ಕೇಳುತ್ತಾನೆ. ಅದಕ್ಕೆ ಆಕೆ ತಾನು ಅವನಿಗೆ ತಕ್ಕವಳಲ್ಲವೆಂದೂ ಬೇರೆ ಒಂಳ್ಳೆಯ ಹುಡುಗಿಯನ್ನು ನೋಡುವಂತೆಯೂ ತಿಳಿಸಿದಳು.ಆದರೆ ಇದರಿಂದ ರಾಮನ ಮನಸ್ಸು ಇನ್ನಷ್ಟು ಗಟ್ಟಿಯಾಯಿತು. ಅವನು ಅವಳಲ್ಲಿ ತನಗೆ ಬಾಹ್ಯ ಸೌಂದರ್ಯ ಮುಖ್ಯವಲ್ಲವೆಂದೂ ಸನ್ಮನಸ್ಸಿನ ಹುಡುಗಿಯಾದರೆ ಸಾಕೆಂದೂ ಹೇಳಿದನು.ಅದಕ್ಕೆ ಹುಡುಗಿಯ ಮೌನವೇ ಉತ್ತರವಾಗಿ ಸಮ್ಮತಿಯೂ ಸಿಕ್ಕಿತು. ರಾಮನು ತನ್ನ ಹಿತೈಷಿಗಳ ಮೂಲಕ ಅವಳ ಹೆತ್ತವರಲ್ಲಿ ಸಂಬಂಧವನ್ನು ಪ್ರಸ್ತಾಪಿಸಿ ಒಂದು ಶುಭ ದಿನದಂದು ಅವಳನ್ನು ಮನೆ ತುಂಬಿಸಿಕೊಂಡನು. ಮುಂದೆ ಮೂವರೂ ಸುಖವಾಗಿ ಬಾಳುವೆ ನಡೆಸಿದರು. ಹೀಗೆ ತಾಯಿಯ ಸುಖವೇ ತನ್ನ ಸುಖ ಎಂದು ಭಾವಿಸಿದ ರಾಮನ ಜೀವನವೂ ಸುಖಮಯವಾಯಿತು.


AMEENATH ARFANA
9 C എസ്. എ.ടി.എച്ച്.എസ്. മഞ്ചേശ്വർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കഥ