ദുർഗ്ഗ എച്. എസ്. എസ്. കാഞ്ഞങ്ങാട്/അക്ഷരവൃക്ഷം/ Maari

11:58, 6 മേയ് 2020-നു ഉണ്ടായിരുന്ന രൂപം സൃഷ്ടിച്ചത്:- Lalkpza (സംവാദം | സംഭാവനകൾ)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
ಮಾರಿ

  
    
ನೀ ಜನಿಸಿದೆ ವುಹಾನ್ ನಲ್ಲಿ
ಭಯ ಹುಟ್ಟಿಸಿದೆ ಜನರ ಮನದಲ್ಲಿ
ಕಡೆಗಣಿಸಿದರು ನಿನ್ನ ಮೊದಲು
ಭಯಪಡುವರು ಈಗ ರಾತ್ರಿ ಹಗಲು
ಪರದೇಶೀ ನಿನ್ನ ಪುಷ್ಪಕ ವಿಮಾನ
ಮಾಡಿದೆಯಲ್ಲಾ ಊರೆಲ್ಲಾ ಸ್ಮಶಾನ
ಮುಂದುವರಿಯಿತೋ ವಿಜ್ಞಾನದ ಜಗತ್ತು
ಕೊಡಲ್ಲಿಲ್ಲ ನಿನಗೆ ಮದ್ದಿನ ಗುದ್ದು
ಪ್ರಕೃತಿಗೆ ಆದೇ ನೀ ತಂಗಾಳಿ
ಅಹಂಕಾರಿಗಳಿಗೆ ಆದೇ ನೀ ಬಿರುಗಾಳಿ
ತನ್ನ ತನ ಮರೆತು ಎಲ್ಲರಿದ್ದರು ಹೊರಗೆ
ಗತ ಕಾಲದ ಕ್ಷಣಗಳ ನೆನೆಯುತ್ತಾ ಕುಳಿತರೊಳಗೆ
ಮನೆಯಲ್ಲೇ ಇದ್ದು ಕಲಿಸಿದೆ ಮನಗಳ ಬೆಲೆಯ
ಆಗು ನೀ ಜಗದಿಂದ ಮಾಯ
ಬಿದ್ದಿತು ಜಗಕ್ಕೆ ಬೀಗ
ನಿಂತಿತು ನಿನ್ನ ವೇಗ
ತೊಲಗು ನೀ ನಮ್ಮಿಂದ
ಆಗ ಬೇಕಿದೆ ಸ್ವಚ್ಚ ಇಂದಿನಿಂದ
ಮಾಡೋಣ ಹೊಸ ಜಗದ ಸೃಷ್ಟಿ
ಹೋಗಲಿ ನಿನ್ನ ವಕ್ರ ದೃಷ್ಟಿ
            
                                    ಅಂಕಿತ.ಕೆ

ANKITHA K
9 J ദുർഗ്ഗ എച്. എസ്. എസ്. കാഞ്ഞങ്ങാട്
ഹോസ്ദുർഗ്ഗ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - lalkpza തീയ്യതി: 06/ 05/ 2020 >> രചനാവിഭാഗം - കവിത