എസ് .ഡി. പി. എച്ച്. എസ്. ധർമ്മത്തടുക്ക/അക്ഷരവൃക്ഷം/ ಸಂಜೆ ಮೌನ

19:51, 17 ഏപ്രിൽ 2020-നു ഉണ്ടായിരുന്ന രൂപം സൃഷ്ടിച്ചത്:- Ajamalne (സംവാദം | സംഭാവനകൾ) ('{{BoxTop1 | തലക്കെട്ട്= ಸಂಜೆ ಮೌನ | color= 2 }} <poem> <center> ದಟ್ಟ ಹಸು...' താൾ സൃഷ്ടിച്ചിരിക്കുന്നു)
ಸಂಜೆ ಮೌನ
 


ದಟ್ಟ ಹಸುರನು ತೊಟ್ಟು ಪುಷ್ಟವಾಗಿಹ ಗುಡ್ಡ
ಮೈಯ ಚಾಚಿಹವಿಲ್ಲಿ ಸಾಲುಸಾಲು.
ಹಚ್ಚ ಹಸುರಲ್ಲ ಇದು, ಹುಚ್ಚಹಸುರಿನ ಬುಗ್ಗೆ
ಲಗ್ಗೆ ನುಗ್ಗಿಹುದ್ದಿಲ್ಲಿ ಎತ್ತೆತ್ತಲೂ!

ಒಂದೆ ಬಾಳಿನ ಬಿಂಬ ನೂರು ಮೈ ತಳೆದಂತೆ
ನೂರು ಬಗೆ ಆಕಾರ, ನೂರು ಚೆಲುವು.
ಗುಡ್ಡದೀ ಕಣಿವೆಯಲಿ ನಿಂತ ಮಿಂಚಿನ ಸರಸಿ
ಯಂತಿರುವ ಸಂಜೆಯಲಿ ರಸದ ನಲವು!

ಮೌನ ಸಂಜೆಯ ಮೌನ, ನಗರ ನಾಗರಿಕತೆಯ
ಯಂತ್ರಗಳು ಕದಡದಿಹ ಮಂತ್ರಮೌನ
ಎಲ್ಲ ನಾದಂಗಳಿಗು ಮಾತೃಕೆಯವೋಲಿರುವ
ಚಿನ್ಮೌನವಾಗಿಹುದು ಈ ಕಾನನ!

ಬಾನ ಮೌನದ ಗೆಜ್ಜೆ ಝಲ್ಲೆಂದು ಜಾರಿದೊಲು
ಅಲ್ಲೊಂದು ಇಲ್ಲೊಂದು ಹಕ್ಕಿ ನಿನದ!
ಬುವಿಯ ಎದೆ ಹಿಗ್ಗೆದ್ದು ಬುಗ್ಗೆಯಾದೊಲು ಎಲ್ಲೊ
ನವಿಲ ಕೇಕೆಯ ಸದ್ದು ಗುಡ್ಡದೊಳಗೆ!

ಈ ಮೌನ-ನಾದಗಳ ದ್ವಂದ್ವ ಲೀಲೆಗೆ ಸಂದು
ಮುಗ್ಧವಾಗಿದೆ ಮನವು ಬೆರಗಿನಲ್ಲಿ.
ನೂರು ಬಗೆ ನಾದದಲಿ ಈ ಮೌನ ಹೊಮ್ಮದಿರೆ
ಜಗದ ಚೆಲುವಿಗೆ ಬೇರೆ ವಾಣಿಯೆಲ್ಲಿ?

VIDYASHREE.M
9 C എസ് .ഡി. പി. എച്ച്. എസ്. ധർമ്മത്തടുക്ക
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത