== JUNE MONTH ACTIVITIES

 ಪ್ರವೇಶೋತ್ಸವ ==
ಪ್ರವೇಶೋತ್ಸವ 2025
2025 2025-26ನೇ ಪ್ರವೇಶೋತ್ಸವವು ಜೂನ್ ಎರಡು ಸೋಮವಾರದಂದು ನಡೆಯಿತು ಕಾರ್ಯಕ್ರಮವನ್ನು ಬಹಳ ವಿಬ್ರಂಜನೆಯಿಂದ ನಡೆಸಲಾಯಿತು
ಕನ್ನಡ ಅಧ್ಯಾಪಕರು ಅಶ್ರಫ್ ಸರ್ ಕಾರ್ಯಕ್ರಮವನ್ನು ನಿರೂಪಿಸಿದರು ಮುಖ್ಯೋಪಾಧ್ಯಾಯನಿ ಪ್ರಾಂಶುಪಾಲರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು ಹೊಸ ಮಕ್ಕಳಿಗೆ ಪುಸ್ತಕ ಮತ್ತು ಪೆನ್ನುಗಳನ್ನು ನೀಡಿ ಸ್ವಾಗತಿಸಲಾಯಿತು ಎಲ್ಲರಿಗೂ ಸಿಹಿತಿಂಡಿಯನ್ನು ವಿತರಿಸಲಾಯಿತು


ENVIRONMENT DAY JUNE5 2025ಪರಿಸರ ದಿನಾಚರಣೆ ವಿಶ್ವ ಪರಿಸರ ದಿನವನ್ನು ಜೂನ್ 5ರಂದು ಐವಲಿಕೆ ಶಾಲೆಯಲ್ಲಿ ಬಹಳ ಸಡಗರದಿಂದ ಆಚರಿಸಲಾಯಿತು . ಶಾಲಾ ಮುಖ್ಯೋಪಾಧ್ಯಾಯಣಿ ಭಾಗ್ಯಲಕ್ಷ್ಮಿ ಟೀಚರ್ ಅವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಎಲ್ಲಾ ತರಗತಿಯ ಮಕ್ಕಳು ವಿಧವಿಧದ ಗಿಡಗಳನ್ನು ತಂದು ತಮ್ಮ ಪರಿಸರ ದಿನದ ಮಹತ್ವವನ್ನು ಅರಿಯುವುದರ ಮೂಲಕ ಹೂದೋಟವನ್ನು ನಿರ್ಮಿಸಿದರು ಶಾಲಾ ಕಚೇರಿಯ ಮುಂದೆ ಮನೆಯಿಂದ ತಂದ ಮಾವಿನ ಗಿಡ ಪೇರಳೆ ಗಿಡ ಹಲಸು ಮುಂತಾದ ಗಿಡಗಳನ್ನು ನೆಟ್ಟರು ಮುಖ್ಯೋಪಾಧ್ಯಾಯನಿ ಅವರು ಗಿಡವನ್ನು ನೆಟ್ಟರು ಯುಪಿ ವಿಭಾಗದ ಮಕ್ಕಳಿಗಾಗಿ ಪೋಸ್ಟರ್ ಕಾಂಪಿಟೇಶನ್ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಡಿಜಿಟಲ್ ಪೋಸ್ಟರ್ ಕಾಂಪಿಟೇಶನ್ ಕೂಡ ನಡೆಸಲಾಯಿತು .
YOGA DAY
ವಿಶ್ವ ಯೋಗ ದಿನದ ಭಾಗವಾಗಿ ಶಾಲೆಯಲ್ಲಿ ಯೋಗಚರಣೆಯನ್ನು ನಡೆಸಲಾಯಿತು . ನಿವೃತ್ತ ಶಿಕ್ಷಕರಾದ ಶ್ರೀ ಮಹೇಶ್ವರ ಅವರು ಮಹೇಶ್ ಸರ್ ಅವರು ಮಕ್ಕಳಿಗೆ ವಿವಿಧ ಯೋಗಾಸನಗಳನ್ನು ಮಾಡಿ ತೋರಿಸಿದರು ಯೋಗದ ಮಹತ್ವತೆಯನ್ನು ವಿಶೇಷ ಅಸೆಂಬ್ಲಿಯ ಮೂಲಕ ಮಕ್ಕಳಿಗೆ ತಿಳಿಸಲಾಯಿತು
ವಾಚನ ವಾರಚರಣೆಯ ಅಂಗವಾಗಿ ದಿನಾಂಕ 1925 ರಿಂದ ಎರಡು ವಾರದ ತನಕ ಆಚರಿಸಲಾಯಿತು ಈ ಸಂದರ್ಭದಲ್ಲಿಬೃಹತ್ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ವಿ ಬಿ ಕುಲಮರ್ವ ಅವರು ಉದ್ಘಾಟನೆ ಮಾಡಿದರು ಪ್ರಾಂಶುಪಾಲರು ಡೊಮಿನಿಕ್ ಅಗಸ್ಥಿನ್ ಮುಖ್ಯೋಪಾಧ್ಯಾಯಣಿ ಭಾಗ್ಯಲಕ್ಷ್ಮಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯಣಿ ಶ್ರೀಮತಿ ಲಲಿತ ಲಕ್ಷ್ಮಿ ಸುಭಾಶಂಸನೆಯನ್ನು ಕೋರಿದರು ಇದರೊಂದಿಗೆ ವಿವಿಧ ಕ್ಲಬ್ ಗಳ ಉದ್ಘಾಟನೆಯನ್ನು ವಿವಿಧ ಪ್ರಯೋಗಗಳ ಮೂಲಕ ಮಾಡಿದರು ವಾಚನವಾರದ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು
ಮಾದಕ ವಸ್ತು ವಿರೋಧಿ ದಿನ ವಿಶ್ವ ಮಾದಕ ವಸ್ತು ವಿರೋಧಿ ದಿನದ ಭಾಗವಾಗಿ ಜೂನ್ 26ರಂದು ಭಯವಳಿಕೆ ಶಾಲೆಯಲ್ಲಿ ವಿಶೇಷ ಅಸೆಂಬ್ಲಿಯನ್ನು ಆಯೋಜಿಸಲಾಯಿತು ಝುಂಬಾ ಡ್ಯಾನ್ಸಿನ ಮೂಲಕ ಮಾದಕ ವಸ್ತುಗಳು ಜೀವನಕ್ಕೆ ಹಾನಿಕರ ಮತ್ತು ಅದನ್ನು ತಡೆಗಟ್ಟಬೇಕು ಮತ್ತು ಆರೋಗ್ಯವನ್ನು ಕಾಪಾಡಬೇಕೆಂಬ ಸಂದೇಶವನ್ನು ಸಾರಿದರು ಎಲ್ಲಾ ಮಕ್ಕಳು ಝುಮ್ಬಾ ಡೇಸ್ ಅನ್ನು ಚೆನ್ನಾಗಿ ಮಾಡಿದರು ಹೈಸ್ಕೂಲ್ ಮಕ್ಕಳ ಹೆತ್ತವರಿಗೆ ನಡೆಸಲಾಯಿತು . ಇದರ ಭಾಗವಾಗಿ ಘೋಷಣಾ ಫಲಕಗಳನ್ನು ಹಿಡಿದು ಮೆರವಣಿಗೆಯನ್ನು ನಡೆಸಲಾಯಿತು.
ZUMBA DANCE ON ANTI DRUG DAY