ജി.എച്ച്.എസ്. എസ്. പൈവളികെ
| സ്കൂൾ | സൗകര്യങ്ങൾ | പ്രവർത്തനങ്ങൾ | പ്രൈമറി | എച്ച്.എസ് | എച്ച്.എസ്.എസ്. | ചരിത്രം | അംഗീകാരം |
| ജി.എച്ച്.എസ്. എസ്. പൈവളികെ | |
|---|---|
| വിലാസം | |
.KAYARKATTE .PAIVALIKE പി.ഒ. , 6711348 , കാസർഗോഡ് ജില്ല | |
| സ്ഥാപിതം | . - . - .1957 |
| വിവരങ്ങൾ | |
| ഫോൺ | . |
| ഇമെയിൽ | @11017paivalike@gmail.com |
| വെബ്സൈറ്റ് | . |
| കോഡുകൾ | |
| സ്കൂൾ കോഡ് | 11017 (സമേതം) |
| എച്ച് എസ് എസ് കോഡ് | 11017 |
| വി എച്ച് എസ് എസ് കോഡ് | [[.]] |
| യുഡൈസ് കോഡ് | 32010100421 |
| വിക്കിഡാറ്റ | . |
| വിദ്യാഭ്യാസ ഭരണസംവിധാനം | |
| റവന്യൂ ജില്ല | കാസർഗോഡ് |
| വിദ്യാഭ്യാസ ജില്ല | കാസർഗോഡ് |
| ഉപജില്ല | മഞ്ചേശ്വരം |
| ഭരണസംവിധാനം | |
| ലോകസഭാമണ്ഡലം | കാസർഗോഡ് |
| നിയമസഭാമണ്ഡലം | മഞ്ചേശ്വരം |
| താലൂക്ക് | മഞ്ചേശ്വരം |
| ബ്ലോക്ക് പഞ്ചായത്ത് | മഞ്ചേശ്വരം |
| തദ്ദേശസ്വയംഭരണസ്ഥാപനം | പഞ്ചായത്ത് |
| വാർഡ് | .chippar |
| സ്കൂൾ ഭരണ വിഭാഗം | |
| സ്കൂൾ ഭരണ വിഭാഗം | സർക്കാർ |
| സ്കൂൾ വിഭാഗം | പൊതുവിദ്യാലയം |
| പഠന വിഭാഗങ്ങൾ | യു.പി ഹൈസ്കൂൾ ഹയർസെക്കന്ററി |
| സ്കൂൾ തലം | 5 മുതൽ 12 വരെ 5 to 12 |
| മാദ്ധ്യമം | കന്നട KANNADA |
| ഹയർസെക്കന്ററി | |
| ആൺകുട്ടികൾ | . |
| പെൺകുട്ടികൾ | . |
| ആകെ വിദ്യാർത്ഥികൾ | .252 |
| അദ്ധ്യാപകർ | . |
| സ്കൂൾ നേതൃത്വം | |
| പ്രിൻസിപ്പൽ | DOMINIC AGASTIN |
| പ്രധാന അദ്ധ്യാപകൻ | . |
| പ്രധാന അദ്ധ്യാപിക | BHAGYALAXMI |
| പി.ടി.എ. പ്രസിഡണ്ട് | ADAM BALLOR |
| എം.പി.ടി.എ. പ്രസിഡണ്ട് | . |
| അവസാനം തിരുത്തിയത് | |
| 18-07-2025 | Ayshabanu |
| ക്ലബ്ബുകൾ | |||||||||||||||||||||||||||||||||
|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
| (സഹായം?) | |||||||||||||||||||||||||||||||||
| (സഹായം?) | |||||||||||||||||||||||||||||||||
| (സഹായം?) | |||||||||||||||||||||||||||||||||
| (സഹായം?) | |||||||||||||||||||||||||||||||||
| (സഹായം?) | |||||||||||||||||||||||||||||||||
| (സഹായം?) | |||||||||||||||||||||||||||||||||
| (സഹായം?)
| |||||||||||||||||||||||||||||||||
|
| പ്രോജക്ടുകൾ | |||||||||||
|---|---|---|---|---|---|---|---|---|---|---|---|
| (സഹായം) | |||||||||||
| (സഹായം) | |||||||||||
| (സഹായം) | |||||||||||
| (സഹായം) | |||||||||||
| (സഹായം) | |||||||||||
| (സഹായം)
| |||||||||||
|
''''ಜಿ ಎಚ್ ಎಸ್ ಎಸ್ ಪೈವಳಿಕೆ''''
കാസർഗോഡ് റവന്യൂ ജില്ലയിൽ മഞ്ചേശ്വരം ഉപ ജില്ലയിലെ പ്രസിദ്ധമായ ഒരു പൊതുവിദ്യാലയം ആണ് GHSS PAIVALIKE . 1957 ലാണ് ഈ വിദ്യാലയം സ്ഥാപിതമായത്. പൈവളികെ PAIVALIKE പഞ്ചായത്തിലെ KAYARKATTE എന്ന സ്ഥലത്താണ് ഈ സ്കൂൾ സ്ഥിതി ചെയ്യുന്നത്. ഇവിടെ 5 to 12 ക്ലാസുകൾ നിലവിലുണ്ട്.
ಗಡಿನಾಡು ಕಾಸರಗೋಡಿನ ಅತ್ಯಂತ ಹಳೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆ ನಮ್ಮದು. ಹಳೆಯ ಕಾಲಕ್ಕಿಂತಲೂ ವಿದ್ಯಾರ್ಥಿಗಳ ಸಂಖ್ಯೆ ಇದೀಗ ಕಡಿಮೆಯಾದರೂ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಉತ್ತಮ ಪರೀಕ್ಷಾ ಫಲಿತಾಂಶ ಹಾಗೂ ವಿದ್ಯಾರ್ಥಿ ಶಿಸ್ತಿನ ಮೂಲಕ ಒಳ್ಳೆಯ ರೀತಿಯಲ್ಲಿ ಶಾಲೆ ಮುನ್ನಡೆಯುತ್ತಾ ಬಂದಿದೆ. 2025-26 ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಶೈಕ್ಷಣಿಕ ಸಾಧನೆ ಹಾಗೂ ಮಕ್ಕಳ ಪಠ್ಯೇತರ ಚಟುವಟಿಕೆಗಳು ಉತ್ತಮ ಪಡಿಸಿಕೊಂಡು ಶಾಲೆಯನ್ನು ಮಂದೆಕೊಂಡು ಹೋಗಬೇಕು ಎಂಬುದು ನಮ್ಮ ಇರಾದೆ. ಜನರ ಸಹಭಾಗಿತ್ವ ಹಾಗೂ ಸರಕಾರದ ಸಹಕಾರದೊಂದಿಗೆ ಇನ್ನಷ್ಟು ಉತ್ತಮ ಮಟ್ಟಕ್ಕೆ ತಲುಪಿಸಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.
ಕಟ್ಟೆ ವಿಷನ್
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಳ್ಳುವ ಈ ಯೋಜನೆಯನ್ನು ಈಗಾಗಲೇ ಚರ್ಚಿಸಿ ಅಂತಿಮ ರೂಪುರೇಷೆ ನೀಡಲಾಗಿದೆ. ಶಾಲೆಯ ಅಭಿವೃದ್ಧಿಯಲ್ಲಿ ಜನರ ಸಹಭಾಗಿತ್ವ ಉತ್ತಮ ಪಡಿಸಲು ಶಾಲಾ ಪ್ರೊಟೆಕ್ಷನ್ ಕಮಿಟಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಚಟುವಟಿಕೆಗಳನ್ನು ಸಕ್ರಿಯಗೊಳಿಸಲಾಗುವುದು.ಹೆತ್ತವರನ್ನು, ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವ ಹಾಗೂ ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸುವ ಉದ್ದೇಶದೊಂದಿಗೆ ಶಾಲೆಯ ಪರಿಸರವನ್ನು ಹಚ್ಚ ಹಸಿರಾಗಿಸುವ ಗ್ರೀನ್ ಮಿಷನ್ ನಮ್ಮ ಮುಂದಿದೆ. ಹೈಯರ್ ಸೆಕೆಂಡರಿ ವಿಭಾಗದಲ್ಲಿ ಉತ್ತಮ ರೀತಿಯ ಶಿಸ್ತನ್ನು ಖಾತರಿಪಡಿಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ.ಶಿಸ್ತು ಮತ್ತು ಕಲಿಕಾ ಗುಣಮಟ್ಟ ಎರಡು ವಿಚಾರದಲ್ಲಿ ಪ್ರಾಯೋಗಿಕವಾದ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು. ಸರಿಸುಮಾರು ಎಂಟು ಎಕ್ರೆಗಿಂತಲೂ ಮಿಗಿಲಾದ ಜಾಗವನ್ನು ಶಾಲೆ ಹೊಂದಿದೆ.ಆದರೆ ಇಲ್ಲಿಯವರೆಗೆ ಜಾಗದ ಗಡಿಯನ್ನು ಗುರುತಿಸಲು, ಖಚಿತಪಡಿಸಲು ಕೆಲವೊಂದು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿಲ್ಲ. ಇದೀಗ ರೀ ಸರ್ವೇ ಮೂಲಕ ಗಡಿಯನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದ್ದು ಸರ್ಕಾರ ಹಾಗೂ ಪಂಚಾಯತಿಗಳ ಸಹಕಾರದೊಂದಿಗೆ ಶಾಲೆಗೆ ಸುತ್ತುಗೋಡೆಯನ್ನು ನಿರ್ಮಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಹೊಸ ಹೈಸ್ಕೂಲ್ ಕಟ್ಟಡದ ಮುಂಭಾಗದಲ್ಲಿ ಸುಂದರವಾದ ವೃಂದಾವನ ಹಾಗೂ ಮಕ್ಕಳಿಗೆ ಪ್ರಯೋಜನವಾಗುವಂತೆ ಉತ್ತಮ ರೀತಿಯಲ್ಲಿ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಇರಿಸಲಾಗಿದೆ.ಪಾಳುಬಿದ್ದಿರುವ ಹಳೆಯ ಶಾಲಾ ಕಟ್ಟಡಗಳನ್ನು ಹಾಗೂ ಶೌಚಾಲಯಗಳನ್ನು ತೆರವುಗೊಳಿಸಿ ಸ್ವಸಜ್ಜಿತವಾದ ಒಂದು ಕಟ್ಟಡ ಹಾಗೂ ಶೌಚಾಲಯವನ್ನು ನಿರ್ಮಿಸುವ ಯೋಜನೆಯು ನಮ್ಮ ಮುಂದಿದೆ.ಇಂತಹ ಹಲವು ಕಾರ್ಯಕ್ರಮಗಳು ಕಾಯರ್ ಕಟ್ಟೆ ವಿಷನ್ ಎಂಬ ಯೋಜನೆಯಲ್ಲಿ ಒಳಗೊಂಡಿವೆ.
ಕಲಿಕೆಯಲ್ಲಿ ಅತ್ಯಂತ ಹಿಂದುಳಿದಿರುವ 5ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿ ಹಾಗೂ ಕಲಿಕಾ ಪ್ರೋತ್ಸಾಹವನ್ನು ಕೊಟ್ಟು ಶೈಕ್ಷಣಿಕ ಸಾಧನೆಯಲ್ಲಿ ಮುಂದೆ ಬರುವಂತೆ ಈಗಾಗಲೇ ಕೆಲವು ಯೋಜನೆಯನ್ನು ಆರಂಭಿಸಲಾಗಿದೆ. ಕೃಷಿಯ ಬಗ್ಗೆ ಪರಿಸರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚು ತಿಳುವಳಿಕೆ ಮತ್ತು ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ ಶಾಲೆಯ ಪರಿಸರದಲ್ಲಿ ಅತ್ಯುತ್ತಮವಾದ ಕೃಷಿ ತೋಟವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳ ಸೃಜನಾತ್ಮಕವಾದ ಸಾಮರ್ಥ್ಯವನ್ನು ಗುರುತಿಸಲು ಹಾಗೂ ಪ್ರೋತ್ಸಾಹಿಸಲು ಸಾಹಿತ್ಯ, ವಿಜ್ಞಾನ, ಸಾಮಾಜಿಕ, ತಾಂತ್ರಿಕ ಗಣಿತ ವಿಚಾರಕ್ಕೆ ಸಂಬಂಧಿಸಿದ ಶಿಬಿರವನ್ನು ನಡೆಸಲು ಉದ್ದೇಶಿಸಲಾಗಿದೆ. ವಿವಿಧ ಹಂತಗಳಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಶಾಲೆಗೆ ಕರೆಸಿ ವಿಚಾರ ವಿನಿಮಯ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು. ಒಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಹಿರಿಮೆ, ಗರಿಮೆ ಹೊಂದಿರುವ ನಮ್ಮ ಶಾಲೆಯನ್ನು ಎಲ್ಲಾ ರೀತಿಯಲ್ಲಿ ಮುನ್ನೆಲೆಗೆ ತರುವ ಪ್ರಯತ್ನಗಳು ಈ ಶೈಕ್ಷಣಿಕ ವರ್ಷದಲ್ಲಿಯೂ ಮುಂದುವರೆಯಲಿದೆ. ಶಾಲಾ ಶಿಕ್ಷಕರಕ್ಷಕ ಸಂಘ, ಶಾಲಾ ಸಂಪನ್ಮೂಲ ಗುಂಪು, ಎಸ್ ಎಂ ಸಿ, ಊರ ಪರಊರ ಜನರ ಪೂರ್ಣ ಸಹಕಾರ ಹಾಗೂ ಸಹಭಾಗಿತ್ವದಲ್ಲಿ ಯೋಜನೆಗಳು ಅನುಷ್ಠಾನಗೊಳ್ಳಲಿದೆ.
ചരിത്രം
1957-ന് മുംബ് പൈവളികെ പഞ്ചയത്തിൽ ഹൈസ്കൂൾ ഉണ്ടയിരുന്നില്ല. 1956-ൽ ഭാഷാടീസ്ഥാനമായ ശേഷം ഈ പ്രദേശാ കേരള സസ്ഥാനത്തീന്റെ ഭാഗമായി കഴിഞ്ഞു. സ്കൂളിലേക്ക് ആവശ്യമുള്ള സ്ഥലവും മൈതാനം ആയ 1.50 ഏക്കർ സ്ഥലം ബായാർ ഗ്രാമത്തീലെ ബഹുമന്യരായ ശ്രീ ഖദ്ര്യ് ബ്യര്യ് അവർകളും ,1.35 ഏക്കർ സ്തലം ബഹുമാന്യരയ ശ്രീ കുണ്ടേരി തിരുമലെശ്വ്വാര ഭറ്റ് & അവരുടെ സഹോദരൻ ഉദാരമായീ കൊടുത്തിരുന്നു. അതിന്റെ ശേഷം ശ്രീ കുണ്ടേരി നാരായണ ഭട്ടിന്റെ നേതൃത്വത്തിൽ നാട്ടുകാരുടെ സഹകരണത്തോടെ വിദ്യലയത്തിന്റെ പ്രധാന കെട്ടിടം നിർമിതമായി. സ്കൂളിന് എതിർ വശത്ത് കാസർഗോഡിൽ ഏറ്റവും ഉയരമുള്ള സ്ഥലമായ പൊസഡിഗുമ്പെ സ്ഥിതി ച്ചെയ്യുന്നു 1959-60-ൽ സ്കൂൾ പ്രഥമ എസ്.എസ് .എൽ.സി. ബാച്ച് പരീക്ഷ എഴുതി 50% വിജയം കൈവരിച്ചു 1982-ൽ സ്ക്കൂളിലെ രജതമഹൊത്സവം ആഘൊഷിച്ചു. ഇതിന്റെ സ്മരണയ്ക്കായി ഒരു രംഗമന്ദിരം നിർമ്മിച്ചു 29/11/2007 മുതൽ സ്ക്കൂൾ ഹയർ സെക്കണ്ടരി ആയി. ഹുമാനിറ്റീസ്, , കൊമ്മെഴ്സ് എന്ന മൂന്ന് വിഭാഗങ്ങലിൽ 184 വിദ്ദ്യാർഥികൾ വിദ്യാര്ജന ചെയ്യുന്നുണ്ട് 2009-ൽ സർക്കാർ ഹയർ സെകന്റര്യ് സ്ക്കൂൾ ഇതിന്റെ സുവര്ണ്ണ ജുബിലീ ആഘൊഷതിലാണ്.
ഭൗതികസൗകര്യങ്ങൾ
6.04ഏക്കര് ഭൂമിയിലാണ് വിദ്യാലയം സ്ഥിതി ചെയ്യുന്നത്.
- Spacious playground.
- New KIFB Building.
- all classrooms are Hi-Tech.
- Assembly Hall.
- Computer Lab.
- Science Lab.
- Broadband internet facility.
- Library.
- Well facilitated Toilet.
- Auditorium.
- Midday Meal.
പാഠ്യേതര പ്രവർത്തനങ്ങൾ
- ലിറ്റിൽ കൈറ്റ്സ്
- ക്ലാസ് മാഗസിൻ.
- വിദ്യാരംഗം കലാ സാഹിത്യ വേദി.
- ക്ലബ്ബ് പ്രവർത്തനങ്ങൾ.
- seed club
- Ecoclub
PREVIOUS HEAD OF INSTITUTION
സ്കൂളിന്റെ മുൻ പ്രധാനാദ്ധ്യാപകർ :
| 1 | കെ. അച്ചുത്ത ശെണായ് | 7/6/1957 | 31/05/1980 |
| 2 | കെ കെശവ ഭറ്റ് | 26/08/1957 | 13/03/1958 |
| 3 | ശിവഷങ്കരന്ž നായര്ž | 14/03/1958 | 3/10/1958 |
| 4 | കെ .എം. പദകണ്ണയ | 16/07/1962 | 18/11/1963 |
| 5 | ഗുരുരങ്ങയ്യ ബല്ലല് | 1/7/1962 | 18/11/1963 |
| 6 | കെ.മാധവന്ž | 21/01/1972 | 18/02/1972 |
| 7 | എ.കെ. അബ്ദുല്ല | 10/5/1978 | 9/8/1978 |
| 8 | അഹമ്മെദ് കുഞി | 1/6/1980 | 5/4/1981 |
| 9 | ഗുരുരങയ്യ ബല്ലല് | 1/7/1981 | 6/11/1984 |
| 10 | കെ.ശ്യാമ ഭറ്റ് | 06/11/1984 | 31/03/1990 |
| 11 | സ്രിനിവസ ഭറ്റ് | 1/4/1990 | 04/06/0990 |
| 12 | എ.കെ. അബ്ദുല്ല | 9/6/1993 | 18/11/1993 |
| 13 | കെ.വി. കുമാരന്ž | 18/11/1993 | 15/06/1994 |
| 14 | കെ. രമേശ് | 18/11/1993 | 15/06/1994 |
| 15 | ടി. നാരയന ഭറ്റ് | 15/06/1994 | 3/6/1999 |
| 16 | സീ നാരായണ കജെ | 30/06/1999 | 27/09/1999 |
| 17 | ശങ്കര ഭറ്റ് | 27/09/1999 | 3/11/1999 |
| 18 | ഈശ്വര ഭറ്റ് | 3/11/1999 | 30/04/2001 |
| 19 | പ്രഭാവതി | 30/04/2001 | 13/07/2001 |
| 20 | സീ.നാരായണ കജെ | 13/07/2001 | 17/07/2007 |
| 21 | സദാശിവ നായിക് (ഇന് ചാര്ജെ;) | 18/07/2007 | 29/08/2007 |
| 22 | ലലിതാ ലക്ഷ്മി (പ്രധാനാധ്യാപിക) | 2008 | 03/2014 |
| 23 | Venktramana Nayak | 04/2014 | 30/04/2020 |
| 24 | Dr. Shashiraja Nelangala | 11/06/2020 | |
| 25 | Shahul Hameed | 2023 | |
| 26 | BHAGYALAKSHMI | 12/09/2024 |
FAMOUS OLD STUDENTS
- Dr. MOOSA KUNCHI (CARDIOLOGIST)
- Dr. SHANKARA NARAYANA BHAT U (SCIENTIST)
- Dr. SUDHA HOLLA (GYNAECOLOGIST)
- P. N MOODITTAYA ( Rtd. PRINCIPAL )
- SHREENIVASA K ( Rtd. DDE PALAKKAD)
- T NARAYANA BHAT (Rtd. DEO, KASARAGOD)
ACHIEVEMENTS
- ഭൂരിഭാഗം വിദ്യാർത്ഥികളും ജില്ലാതലം വരെയുള്ള വിവിധ ഇനങ്ങളിൽ പങ്കെടുക്കുകയും തങ്ങളുടെ കഴിവുകൾ പ്രകടിപ്പിക്കുകയും ചെയ്തു.ശാസ്ത്രമേളയിലും പ്രവൃത്തിപരിചയത്തിലും സ്കൂളിന് പലപ്പോഴും ഒന്നാം സ്ഥാനം ലഭിച്ചു.2020-21ജില്ലാതലത്തിൽ ഇൻസ്പയർ അവാർഡിന് 4 വിദ്യാർത്ഥികളെ തിരഞ്ഞെടുത്തു.
2024-2025
ಮಂಜೇಶ್ವರ ಉಪಜಿಲ್ಲಾ ಖೋಖೊ ಸ್ಪರ್ಧೆ
ಜಿ ಎಚ್ ಎಸ್ ಎಸ್ ಕಾಯರ್ ಕಟ್ಟೆ ಚಾಂಪಿಯನ್
ಉಪ್ಪಳ: ಐಲ ಮೈದಾನದಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಖೋಖೋ ಸ್ಪರ್ಧೆಯಲ್ಲಿ ಹುಡುಗಿಯರ ಜೂನಿಯರ್ ಹಾಗೂ ಸಬ್ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಹಾಗೂ ಹುಡುಗರ ಜೂನಿಯರ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿ ಪೈವಳಿಕೆ ಕಾಯರ್ ಕಟ್ಟೆ ಉನ್ನತ ಪ್ರೌಢಶಾಲೆ ಉತ್ತಮ ಸಾಧನೆಗೈದಿದೆ. ಮೂರು ವಿಭಾಗಗಳಲ್ಲಿ ಒಟ್ಟು 10 ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿರುತ್ತಾರೆ.
ಕಠಿಣ ಪರಿಶ್ರಮದಿಂದ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಅಧ್ಯಾಪಕ, ಸಿಬ್ಬಂದಿ ವೃಂದ, ಶಾಲಾ ಪಿಟಿಎ ಎಸ್ಎಂಸಿ ಸಮಿತಿ ಅಭಿನಂದಿಸಿದೆ.
IN NEWS
- 2024-2025
ಮಂಜೇಶ್ವರ ಉಪಜಿಲ್ಲಾ ಖೋಖೊ ಸ್ಪರ್ಧೆ
ಜಿ ಎಚ್ ಎಸ್ ಎಸ್ ಕಾಯರ್ ಕಟ್ಟೆ ಚಾಂಪಿಯನ್
ಉಪ್ಪಳ: ಐಲ ಮೈದಾನದಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಖೋಖೋ ಸ್ಪರ್ಧೆಯಲ್ಲಿ ಹುಡುಗಿಯರ ಜೂನಿಯರ್ ಹಾಗೂ ಸಬ್ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಹಾಗೂ ಹುಡುಗರ ಜೂನಿಯರ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿ ಪೈವಳಿಕೆ ಕಾಯರ್ ಕಟ್ಟೆ ಉನ್ನತ ಪ್ರೌಢಶಾಲೆ ಉತ್ತಮ ಸಾಧನೆಗೈದಿದೆ. ಮೂರು ವಿಭಾಗಗಳಲ್ಲಿ ಒಟ್ಟು 10 ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿರುತ್ತಾರೆ.
ಕಠಿಣ ಪರಿಶ್ರಮದಿಂದ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಅಧ್ಯಾಪಕ, ಸಿಬ್ಬಂದಿ ವೃಂದ, ಶಾಲಾ ಪಿಟಿಎ ಎಸ್ಎಂಸಿ ಸಮಿತಿ ಅಭಿನಂದಿಸಿದೆ.
ಅವಿರತ ಪ್ರಯತ್ನದ ಫಲಶ್ರುತಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಹೊರಹೊಮ್ಮಿದ ಪೈವಳಿಕೆ ಕಾಯರ್ ಕಟ್ಟೆ ಶಾಲೆ ಸಾಧನೆ

ಪೈವಳಿಕೆ: ಕೇರಳ ರಾಜ್ಯ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಸರಕಾರಿ ಉನ್ನತ ಪ್ರೌಢಶಾಲೆ ಪೈವಳಿಕೆ ಕಾಯರ್ ಕಟ್ಟೆ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.ಗಡಿನಾಡಿನ ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಕನ್ನಡ ಮಾಧ್ಯಮ ಶಾಲೆ ಉತ್ತಮ ಸಾಧನೆ ತೋರಿರುವುದು ನಿರಂತರ ಪ್ರಯತ್ನದ ಫಲಶ್ರುತಿ ಎನ್ನಲಾಗಿದೆ. ಕಳೆದ ಐದಾರು ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿ ಫಲಿತಾಂಶದಲ್ಲೂ ಹಿನ್ನಡೆ ಪಡೆದಿತ್ತು.ಒಂದು ಕಾಲದಲ್ಲಿ ಸಾವಿರಾರು ಕನ್ನಡ ವಿದ್ಯಾರ್ಥಿಗಳು ಕಲಿಯುತ್ತಿದ್ದ ಶಾಲೆಯಲ್ಲಿ ಸೌಕರ್ಯಗಳ ಕೊರತೆ ಹಾಗೂ ಇತರೆ ಕಾರಣಗಳಿಂದ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿತಗೊಂಡು ಗತಕಾಲದ ವೈಭವವನ್ನು ಕಳೆದುಕೊಳ್ಳುವ ಹಂತದಲ್ಲಿತ್ತು.ಇದೀಗ ಉತ್ತಮ ಫಲಿತಾಂಶದೊಂದಿಗೆ ಶಾಲೆ ಮತ್ತೆ ಮುನ್ನೆಲೆಗೆ ಬಂದಿದೆ. ಶಾಲಾ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳ, ಊರ ವಿದ್ಯಾಭಿಮಾನಿಗಳ, ಹೆತ್ತವರ,ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿಗಳ ನೇತೃತ್ವದಲ್ಲಿ ಕ್ರಿಯಾ ಸಮಿತಿಯೊಂದನ್ನು ರಚಿಸಲಾಗಿತ್ತು. ಶಾಲೆಗೆ ಹೆಚ್ಚಿನ ಮಕ್ಕಳನ್ನು ಆಕರ್ಷಿಸಲು ದಾಖಲಾತಿ ಹಾಗೂ ಫಲಿತಾಂಶವನ್ನು ಉತ್ತಮಪಡಿಸಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಕೇರಳ ರಾಜ್ಯ ಸರಕಾರವು ಕಿಪ್ಬೀ ಅನುದಾನದೊಂದಿಗೆ ಸುಸಜ್ಜಿತ ಹೊಸ ಕಟ್ಟಡವನ್ನು ನಿರ್ಮಿಸಿ ಶಾಲೆಯ ಸೌಕರ್ಯವನ್ನು ಒದಗಿಸಿತು. ಕರ್ನಾಟಕ ಸರಕಾರದ ಗಡಿ ಅಭಿವೃದ್ಧಿ ಪ್ರಾಧಿಕಾರವು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವಂತೆ ಸ್ಮಾರ್ಟ್ ಡಿಜಿಟಲ್ ಪ್ಯಾನೆಲ್ ಗಳನ್ನು ಒದಗಿಸಿ ವಿದ್ಯಾರ್ಥಿಗಳ ಕಲಿಕೆಗೆ ಹೈಟೆಕ್ ಸೌಕರ್ಯವನ್ನು ಒದಗಿಸಿದೆ. ಶಾಲಾ ಪಿಟಿಎ ಸಮಿತಿ ಪದಾಧಿಕಾರಿಗಳು ,ಅಧ್ಯಾಪಕರು ಮನೆ ಮನೆಗಳಿಗೆ ಭೇಟಿ ನೀಡಿ ಶಾಲೆಯ ಅಭಿವೃದ್ಧಿಗೆ ಬೇಕಾಗಿ ಮನವರಿಕೆಯನ್ನು ಮಾಡುವಲ್ಲಿ ಪ್ರಯತ್ನಿಸಿದ್ದಾರೆ.ಉತ್ತಮ ಕ್ರಿಯಾ ಯೋಜನೆಯ ಫಲವಾಗಿ ಶಾಲೆಯು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಗಣನೀಯವಾದ ಸಾಧನೆಯನ್ನು ಪಡೆದು ಹೊರಹೊಮ್ಮಿದೆ. ಈ ವರ್ಷ 32 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ. ವಿದ್ಯಾರ್ಥಿನಿಗಳಾದ ಫಾತಿಮತ್ ಫಝ್ಮೀನ, ಆಸಿಯಾ ಅಲ್ಫಾ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದು ಸಾಧನೆ ತೋರಿದ್ದಾರೆ. ಇತರ ವಿದ್ಯಾರ್ಥಿಗಳು ಹೆಚ್ಚಿನ ವಿಷಯಗಳಲ್ಲಿ ಎ ಪ್ಲಸ್ ಪಡೆಯುವುದರ ಮೂಲಕ ಮಿಂಚಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎಂಟನೇ ತರಗತಿಯಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಪ್ರಾರಂಭಿಸಲು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ. ಊರವರು ಅಧ್ಯಾಪಕರು ಹೆತ್ತವರು ವಿದ್ಯಾರ್ಥಿಗಳು ಪರಸ್ಪರ ಕೈಜೋಡಿಸಿದಾಗ ಶಾಲೆಯೊಂದರ ಅಭಿವೃದ್ಧಿಯಲ್ಲಿ ಉಂಟಾಗುವ ಬದಲಾವಣೆಗೆ ಕಾಯರ್ ಕಟ್ಟೆ ಸರಕಾರಿ ಕನ್ನಡ ಮಾಧ್ಯಮ ಶಾಲೆ ಒಂದು ಮಾದರಿಯಾಗಿ ಹೊರಹೊಮ್ಮಿದೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು,ಮುಖ್ಯೋಪಾಧ್ಯಾಯರು, ಅಧ್ಯಾಪಕರು, ಅಧ್ಯಾಪಕೇತರ ಸಿಬ್ಬಂದಿ ವರ್ಗ, ಶಾಲಾ ರಕ್ಷಕ ಶಿಕ್ಷಕ ಸಂಘವು ಅಭಿನಂದಿಸಿದೆ.
ಜನಪ್ರತಿನಿಧಿಗಳ, ಊರವರ, ಹೆತ್ತವರ, ಅಧ್ಯಾಪಕರ, ಅಧ್ಯಾಪಕೇತರ ಸಿಬ್ಬಂದಿಗಳ, ವಿದ್ಯಾರ್ಥಿಗಳ ಪ್ರಯತ್ನದಿಂದ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಸರಕಾರದ ಒದಗಿಸಿದ ಹೊಸ ಕಟ್ಟಡ ಹಾಗೂ ಮೂಲಭೂತ ಸೌಕರ್ಯ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ನೀಡಿದ ಹೈಟೆಕ್ ಸೌಲಭ್ಯ ವಿದ್ಯಾರ್ಥಿಗಳ ಈ ಸಾಧನೆಗೆ ಪೂರಕವಾಗಿದೆ. ಕಳೆದ ಐದಾರು ವರ್ಷಗಳ ನಂತರ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ನಮ್ಮ ಇಬ್ಬರು ವಿದ್ಯಾರ್ಥಿಗಳು ಪಡೆದಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎಂಟನೇ ತರಗತಿಯಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಪ್ರಾರಂಭಿಸುತ್ತೇವೆ
ಪೈವಳಿಕೆ ಕಾಯರ್ ಕಟ್ಟೆ ಶಾಲೆಯು ಹಳೆಯ ಕಾಲದ ಕನ್ನಡ ಮಾಧ್ಯಮ ಸರಕಾರಿ ಶಾಲೆ. ಸಾವಿರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದ ಶಾಲೆಯಲ್ಲಿ ಕ್ರಮೇಣ ಮಕ್ಕಳ ಸಂಖ್ಯೆ ಕಡಿಮೆಯಾಗಿ ಗತಕಾಲದ ವೈಭವವನ್ನು ಕಳೆದುಕೊಳ್ಳುವ ಆತಂಕವಿತ್ತು.ನಮ್ಮ ಕನ್ನಡ ವಿದ್ಯಾರ್ಥಿಗಳು ತೋರಿದ ಸಾಧನೆಯು ಹೆಚ್ಚಿನ ವಿದ್ಯಾರ್ಥಿಗಳನ್ನು ಶಾಲೆಗೆ ಆಕರ್ಷಿಸಲು ಕಾರಣವಾಗಬಹುದು.ಈಗಾಗಲೇ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರವು ಶಾಲೆಗೆ ಸುಮಾರು 5 ಲಕ್ಷದ ಡಿಜಿಟಲ್ ಪ್ಯಾನೆಲ್ ಅನ್ನು ಒದಗಿಸಿದೆ. ಇದು ಮಕ್ಕಳ ಕಲಿಕೆಗೆ ಸಹಾಯಕವಾಗಿದೆ.
ROUTE MAP
- From Kasaragod / Mangalore ( through NH) --> Kaikamba --> Paivalike Kayarkatta
- ഫലകങ്ങൾ വിളിക്കുമ്പോൾ ചരങ്ങൾ ആവർത്തിച്ചുപയോഗിക്കുന്ന താളുകൾ
- കാസർഗോഡ് വിദ്യാഭ്യാസ ജില്ലയിലെ വിദ്യാലയങ്ങൾ
- കാസർഗോഡ് വിദ്യാഭ്യാസ ജില്ലയിലെ സർക്കാർ വിദ്യാലയങ്ങൾ
- കാസർഗോഡ് റവന്യൂ ജില്ലയിലെ വിദ്യാലയങ്ങൾ
- കാസർഗോഡ് റവന്യൂ ജില്ലയിലെ സർക്കാർ വിദ്യാലയങ്ങൾ
- 11017
- .1957ൽ സ്ഥാപിച്ച വിദ്യാലയങ്ങൾ
- കാസർഗോഡ് റവന്യൂ ജില്ലയിലെ 5 മുതൽ 12 വരെ 5 to 12 ക്ലാസുകളുള്ള വിദ്യാലയങ്ങൾ
- മഞ്ചേശ്വരം ഉപജില്ലയിലെ വിദ്യാലയങ്ങൾ
- വിക്കിഡാറ്റ ക്യു ഐഡി ഉള്ള വിദ്യാലയങ്ങൾ
- സ്കൂൾ കോഡ് ഉള്ള വിദ്യാലയങ്ങൾ
- യുഡൈസ് കോഡ് ഉള്ള വിദ്യാലയങ്ങൾ
- ഭൂപടത്തോടു കൂടിയ താളുകൾ
