ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಎಸ್ ಎ ಟಿ ಶಾಲೆಯಲ್ಲಿ ಸ್ಕೌಟ್ ಮತ್ತು ಗೈಡ್ ದಳದ ವತಿಯಿಂದ ಯೋಗ ದಿನ ಆಚರಣೆಯನ್ನು ನಡೆಸಲಾಯಿತು. ಯೋಗ ತರಬೇತಿ ಪಡೆದ ಅಧ್ಯಾಪಕರಾದ ಈಶ್ವರ ಕಿದೂರು ಹಾಗೂ ಜಯಪ್ರಕಾಶ್ ಶೆಟ್ಟಿ ಬೇಳ ಇವರಿಂದ ಯೋಗಾ ತರಬೇತಿಯು ನಡೆಯಿತು.Anti Drugs programme 2024ಮಾದಕ ವಿರೋಧಿ ದಿನದ ಅಂಗವಾಗಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಹಮ್ಮಿಕೊಂಡ ಪೋಸ್ಟರ್ ರಚನೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು.Rabis ವಿರುದ್ಧ ಜಾಗೃತಿ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ನಡೆಯಿತು..ನಮ್ಮ ನಡೆ ಕೃಷಿಯ ಕಡೆಈಗಿನ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಎಸ್ ಏ ಟಿ ಶಾಲೆಯ ಸ್ಕೌಟ್ ಹಾಗೂ ಗೈಡ್ ದಳದ ವತಿಯಿಂದ ತಾರೀಕು ಇಂದು ಶ್ರೀಮತ್ ಅನಂತೇಶ್ವರ ದೇವಳದ ಗದ್ದೆಯಲ್ಲಿ ನೇಜಿ ನೇಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸುಮಾರು 50 ಮಂದಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಸೇರಿಕೊಂಡು ಗದ್ದೆಯಲ್ಲಿ ನೇಜಿಯನ್ನು ನೆಟ್ಟು ಸಂಭ್ರಮಿಸಿದರು. ಸದಾಶಿವ ಮೂಲ್ಯ ಇವರು ಕೃಷಿಯ ಕುರಿತು ಮಾಹಿತಿ ಮತ್ತು ನೇಜಿ ನೆಡುವ ಪ್ರಾತ್ಯಕ್ಷಿಕೆ ಯನ್ನು ನಡೆಸಿದರು. ಸ್ಕೌಟ್ ಅಧ್ಯಾಪಕರಾದ ಲಕ್ಷ್ಮಿ ದಾಸ್ ಪ್ರಭು ಹಾಗೂ ಗೈಡ್ ಅಧ್ಯಾಪಿಕೆ ಸುಕನ್ಯಾ ಕೆ ಟಿ ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದರು.