ജി ഡബ്ല്യു എൽ പി എസ് കജമ്പാടി ಜಿ.ಡಬ್ಲ್ಯು. ಎಲ್.ಪಿ.ಎಸ್.ಕಜಂಪಾಡಿ
സ്കൂൾ | സൗകര്യങ്ങൾ | പ്രവർത്തനങ്ങൾ | ക്ലബ്ബുകൾ | ചരിത്രം | അംഗീകാരം |
ജി ഡബ്ല്യു എൽ പി എസ് കജമ്പാടി ಜಿ.ಡಬ್ಲ್ಯು. ಎಲ್.ಪಿ.ಎಸ್.ಕಜಂಪಾಡಿ | |
---|---|
വിലാസം | |
Kajampady PADRE പി.ഒ. , 671552 , കാസർഗോഡ് ജില്ല | |
സ്ഥാപിതം | 01 - 06 - 1935 |
വിവരങ്ങൾ | |
ഫോൺ | 8921999324 |
ഇമെയിൽ | 11346gwlp@gmail.com |
കോഡുകൾ | |
സ്കൂൾ കോഡ് | 11346 (സമേതം) |
യുഡൈസ് കോഡ് | 32010200301 |
വിക്കിഡാറ്റ | Q64398561 |
വിദ്യാഭ്യാസ ഭരണസംവിധാനം | |
റവന്യൂ ജില്ല | കാസർഗോഡ് |
വിദ്യാഭ്യാസ ജില്ല | കാസർഗോഡ് |
ഉപജില്ല | കുമ്പള |
ഭരണസംവിധാനം | |
ലോകസഭാമണ്ഡലം | കാസർഗോഡ് |
നിയമസഭാമണ്ഡലം | മഞ്ചേശ്വരം |
താലൂക്ക് | മഞ്ചേശ്വരം |
ബ്ലോക്ക് പഞ്ചായത്ത് | മഞ്ചേശ്വരം |
തദ്ദേശസ്വയംഭരണസ്ഥാപനം | എൻമകജെ പഞ്ചായത്ത് |
വാർഡ് | 8 |
സ്കൂൾ ഭരണ വിഭാഗം | |
സ്കൂൾ ഭരണ വിഭാഗം | സർക്കാർ |
സ്കൂൾ വിഭാഗം | പൊതുവിദ്യാലയം |
പഠന വിഭാഗങ്ങൾ | എൽ.പി |
സ്കൂൾ തലം | 1 മുതൽ 5 വരെ 1 to 5 |
മാദ്ധ്യമം | കന്നട KANNADA |
സ്ഥിതിവിവരക്കണക്ക് | |
ആൺകുട്ടികൾ | 18 |
പെൺകുട്ടികൾ | 18 |
ആകെ വിദ്യാർത്ഥികൾ | 36 |
ഹയർസെക്കന്ററി | |
ആകെ വിദ്യാർത്ഥികൾ | 0 |
സ്കൂൾ നേതൃത്വം | |
പ്രധാന അദ്ധ്യാപകൻ | MANJUNATHA B |
പി.ടി.എ. പ്രസിഡണ്ട് | Chandrashekhara K C |
എം.പി.ടി.എ. പ്രസിഡണ്ട് | Jayanthi |
അവസാനം തിരുത്തിയത് | |
27-07-2024 | Ranjithsiji |
ചരിത്രം (ಇತಿಹಾಸ)
ಕಜಂಪಾಡಿಯ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆಯು ಈ ಊರಿನ ಕೆಲವು ವಿದ್ಯಾಭಿಮಾನಿಗಳ ಕನಸಿನ ಕೂಸಾಗಿ ೧೯೩೫ ನೇ ಇಸವಿಯಲ್ಲಿ ಸ್ಥಾಪಿಸಲ್ಪಟ್ಟಿತು. ಆರಂಭಿಕ ಹಂತದಲ್ಲಿ ಮುಳಿಹುಲ್ಲಿನ ಮಾಡಿನ ಕಟ್ಟಡದಲ್ಲಿ ಆರಂಭವಾದ ಕಲಿಕಾ ಪ್ರಕ್ರಿಯೆಯು ಹರಿಜನ ವೆಲ್ಫೇರ್ ಶಾಲೆ ಎಂದೂ ಬಳಿಕ ಸರಕಾರಿ ವೆಲ್ಫೇರ್ ಶಾಲೆಯಾಗಿಯೂ, ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾ ಈ ಸಾಕಷ್ಟು ತರಗತಿ ಕೋಣೆಗಳು ಹಾಗೂ ಕಟ್ಟಡಗಳನ್ನು ಒಳಗೊಂಡ ಸುಸಜ್ಜಿತ ವಿದ್ಯಾಲಯವಾಗಿ ಬೆಳೆದು ನಿಂತಿದೆ. ಸರಿ ಸುಮಾರು ಒಂಭತ್ತು ದಶಕಗಳ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣವನ್ನು ಪಡೆದು ವಿವಿಧ ವೃತ್ತಿ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಕಜಂಪಾಡಿ ಪ್ರದೇಶದ ಬಗ್ಗೆ ಹೇಳುವುದಾದರೆ, ಇದೊಂದು ತೀರಾ ವಿರಳ ಜನಸಂಖ್ಯೆಯಿರುವ ಪ್ರದೇಶವಾಗಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಇಲ್ಲದಿರುವುದು ಬೇಸರದ ಸಂಗತಿ. ಇಲ್ಲಿನ ಜನರು ಸರಕಾರಿ ಸೇವೆಗಳನ್ನು ಪಡೆಯಲು ಮತ್ತು ಸಾರ್ವಜನಿಕ ಕಾರ್ಯಗಳಿಗೆ ಇಲ್ಲಿಂದ ಸುಮಾರು ಎಂಟು ಕಿಲೋಮೀಟರ್ ದೂರವಿರುವ ಪೆರ್ಲಕ್ಕೆ ಹೋಗಬೇಕು. ಅಂತಹ ಹಲವು ಕೊರತೆಗಳೆಡೆಯಲ್ಲಿ ಈ ಪ್ರದೇಶದ ಪುಟಾಣಿ ಮಕ್ಕಳಿಗೆ ಒಂದರಿಂದ ಐದನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುವ ರೀತಿಯಲ್ಲಿ ನಮ್ಮೀ ವಿದ್ಯಾಲಯವು ಒಂದು ವರದಾನವೆಂದೇ ಹೇಳಬಹುದು.
ಶಾಲಾರಂಭದಿಂದ ತೊಡಗಿ ಇದುವರೆಗೆ ಈ ಊರಿನ ಹಾಗೂ ಪರವೂರಿನ ಹತ್ತಾರು ಅಧ್ಯಾಪಕರು ನಮ್ಮೀ ವಿದ್ಯಾಲಯದಲ್ಲಿ ಉತ್ತಮ ಗುಣಮಟ್ಟದ ಅಧ್ಯಾಪನ ಸೇವೆ ಸಲ್ಲಿಸಿ ಊರ ವಿದ್ಯಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಒಟ್ಟಿನಲ್ಲಿ ಕಜಂಪಾಡಿ ಶಾಲೆಯು ಈ ಪ್ರದೇಶದ ಜನರಿಗೆ ಅಚ್ಚುಮೆಚ್ಚಿನ ಸಾರ್ವಜನಿಕ ಕೇಂದ್ರವಾಗಿ ಹೊರಹೊಮ್ಮಿದೆ ಎಂಬುವುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಚಾರ.
ഭൗതികസൗകര്യങ്ങൾ (ಭೌತಿಕ ಸೌಕರ್ಯಗಳು)
ಪ್ರಸ್ತುತ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆ ಕಜಂಪಾಡಿಯಲ್ಲಿರುವ ಭೌತಿಕ ಸೌಕರ್ಯಗಳು
೧. ಸುಸಜ್ಜಿತ ತರಗತಿ ಕೋಣೆಗಳು
ತರಗತಿ ಕೋಣೆಗಳ ಗೋಡೆಗಳು ಪಠ್ಯಸಂಬಂಧೀ ಚಿತ್ರಗಳಿಂದ ಕೂಡಿದ್ದು, ನೆಲಕ್ಕೆ ಟೈಲ್ಸ್ ಹಾಸಲಾಗಿದೆ. ಹಂಚಿನ ಮಾಡಿನ ಒಳಭಾಗದಲ್ಲಿ ಸೀಲಿಂಗ್ ವ್ಯವಸ್ಥೆಯಿದೆ. ಪ್ರತಿಯೊಂದು ಫ್ಯಾನ್ ಹಾಗೂ ಬೆಳಕಿನ ವ್ಯವಸ್ಥೆಯಿದೆ. ಕರಿಹಲಗೆ, ತರಗತಿ ಗ್ರಂಥಾಲಯಕ್ಕೆ ಕಪಾಟು, ಗೋದ್ರೇಜ್ ಇತ್ಯಾದಿ ವ್ಯವಸ್ಥೆಗಳನ್ನು ಮಾಡಲಾಗಿದೆ.
೨. ಶಾಲಾ ವಾಹನ
ಶಾಸಕರ ನಿಧಿಯಿಂದ ಶಾಲಾ ವಾಹನವು ಲಭಿಸಿದ್ದು, ಶಾಲೆಯ ಅಸುಪಾಸಿನ ಪ್ರದೇಶಗಳಾದ ಪೆರಿಯಾಲ್, ನೆಲ್ಲಿಕುಂಜೆ, ಪುತ್ರಕ್ಕಳ ಭಾಗದಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿದೆ.
೩. ಮಧ್ಯಾಹ್ನದ ಊಟದ ಹಾಲ್
ಪಂಚಾಯತಿನಿಂದ ಶಾಲೆಗೆ ಮಕ್ಕಳ ಊಟದ ವ್ಯವಸ್ಥೆಗೆ ಅಗತ್ಯವಿರುವ ವಿಶಾಲವಾದ ಹಾಗೂ ಸಾಕಷ್ಟು ಗಾಳಿ ಬೆಳಕು ಇರುವ ಊಟದ ಕೊಠಡಿಯ ವ್ಯವಸ್ಥೆಯಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಸಾಕಷ್ಟು ಸ್ಥಳಾವಕಾಶದಲ್ಲಿ ಕುಳಿತು ಊಟ ಮಾಡಲು ಪ್ರಯೋಜನಕಾರಿಯಾಗಿದೆ.
೪. ಜೈವ ವೈವಿಧ್ಯ ಉದ್ಯಾನ
ಶಿಕ್ಷಣ ಇಲಾಖೆಯ ಜೈವ ವೈವಿಧ್ಯ ಉದ್ಯಾನ ಎಂಬ ಉದ್ದೇಶದ ಆಧಾರದಲ್ಲಿ ಕಜಂಪಾಡಿ ಶಾಲೆಯಲ್ಲಿಯೂ ವೈವಿಧ್ಯಮಯ ಹೂಗಳ, ಔಷಧಗಳ ಹಾಗೂ ಇನ್ನಿತರ ಗಿಡಗಳನ್ನು ವಿದ್ಯಾರ್ಥಿಗಳ ಮನೆಗಳಿಂದ ಸಂಗ್ರಹಿಸಿ ಶಾಲಾ ಪರಿಸರದಲ್ಲಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ, ಅಲ್ಲಿ ಬೇಲಿ ಹಾಕಿ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಉದ್ಯಾನದೊಳಗೆ ಚಿಕ್ಕ ಕೊಳವನ್ನು ಕೂಡ ನಿರ್ಮಿಸಲಾಗಿದ್ದು, ಚಿಟ್ಟೆ,, ದುಂಬಿಗಳು, ಪಕ್ಷಿಗಳು ಹಾಗೂ ಇನ್ನಿತರ ಜೀವಿಗಳು ಈ ಪರಿಸರದಲ್ಲಿ ಓಡಾಡುತ್ತಿರುವುದನ್ನು ನಮಗೆ ಕಾಣಲು ಸಾಧ್ಯವಾಗುತ್ತಿದೆ. ವಿದ್ಯಾರ್ಥಿಗಳಿಗೆ ಈ ದೃಶ್ಯಗಳನ್ನು ಕಾಣುವ ಮತ್ತು ಸೂಕ್ಷ್ಮವಾಗಿ ನಿರೀಕ್ಷಿಸುವ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಮತ್ತು ಪರಿಸರ ಪ್ರೇಮವನ್ನು ಬೆಳೆಸಲು ಪ್ರಯೋಜನಕಾರಿಯಾಗಿದೆ.
೫. ಆಟೋಪಕರಣಗಳು
ಸೀಸೋ, ಉಯ್ಯಾಲೆ ಇತ್ಯಾದಿ ಆಟದ ಸೌಕರ್ಯಗಳ ಜೊತೆಗೆ ಕ್ರಿಕೆಟ್, ಡೋಜ್ ಬಾಲ್, ಸೈಕಲ್, ಶಟಲ್ ಇತ್ಯಾದಿ ವೈವಿಧ್ಯಮಯ ಕ್ರೀಡಾ ಉಪಕರಣಗಳ ಸಂಗ್ರಹವಿದ್ದು, ವಿದ್ಯಾರ್ಥಿಗಳ ಶಾರೀರಿಕ ಸಾಮರ್ಥ್ಯಗಳ ಬೆಳವಣಿಗೆಗೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುವುದನ್ನು ಕಾಣಬಹುದು.
പാഠ്യേതര പ്രവർത്തനങ്ങൾ (ಪಾಠ್ಯೇತರ ಚಟುವಟಿಕೆಗಳು)
ಬಾಲಸಭೆ
ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ
ಶಾಲಾ ಕಲೋತ್ಸವ
ಮೇಳಗಳು
ಶಾಲಾ ವಾರ್ಷಿಕೋತ್ಸವ
ಕ್ರೀಡಾಕೂಟಗಳು
ಬಯಲು ಪ್ರವಾಸ ಹಾಗೂ ಶೈಕ್ಷಣಿಕ ಪ್ರವಾಸಗಳು
ಕೃಷಿ ತೋಟ
മാനേജ്മെന്റ് (ಆಡಳಿತ ವರ್ಗ)
ಸರಕಾರಿ ಸ್ವಾಮ್ಯದ ವಿದ್ಯಾಲಯವಾಗಿರುವುದರಿಂದ ಶಾಲಾ ಆಡಳಿತ ನಿರ್ವಹಣೆಯು ಸರಕಾರದ ಸೂಚನೆಯಂತೆ ನಡೆಯುತ್ತಿದ್ದು, ರಕ್ಷಕ ಶಿಕ್ಷಕ ಸಂಘ, ಶಾಲಾ ಆಡಳಿತ ಸಮಿತಿ (SMC) ಇತ್ಯಾದಿಗಳ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಶಾಲಾ ಪ್ರಗತಿಯಲ್ಲಿ ಉತ್ತಮ ಸಲಹೆ ಸೂಚನೆಗಳನ್ನು ನೀಡಿ, ಶಾಲಾಭಿವೃದ್ಧಿಯಲ್ಲಿ ಉತ್ತಮ ಸಹಕಾರ ನೀಡುತ್ತಿದ್ದಾರೆ.
മുൻസാരഥികൾ (ಹಿಂದಿನ ಮುಖ್ಯೋಪಾಧ್ಯಾಯರುಗಳು)
Sl.no | Name | From | To |
---|---|---|---|
1 | Devadasa K | 14-6-2011 | 31-3-2016 |
2 | Nandagokula Y | 13-7-2016 | 16-10-2016 |
3 | Gurumoorthi M | 13-12-2016 | 1-6-2017 |
4 | Gangadhara Shetty A | 5-6-2017 | 14-6-2019 |
5 | Dinesha B | 15-6-2019 | 30-6-2022 |
പ്രശസ്തരായ പൂർവവിദ്യാർത്ഥികൾ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)
guide (ಮಾರ್ಗದರ್ಶಿ)
12.62116,75.12133