ജി.എച്ച്.എസ്. എസ്. ഉപ്പള/അക്ഷരവൃക്ഷം/ ಭೂಮಾತೆ ಮುನಿಸಿಕೊಂಡಾಗ

Schoolwiki സംരംഭത്തിൽ നിന്ന്
ಭೂಮಾತೆ ಮುನಿಸಿಕೊಂಡಾಗ

ಭೂಮಾತೆ ಅವಳು ನಮ್ಮ ಮಾತೆ
ನಮ್ಮನು ಪೊರೆವ ದಯಾದಾತೆ
ಜನನವು ಇಲ್ಲೆ ಮರಣವು ಇಲ್ಲೆ
ಜೀವನ ಪೂರ್ತಿ ಇರುವೆವು ಇಲ್ಲೆ


ಎಲ್ಲವೂ ಬಲು ಸುಂದರ
ಎಲ್ಲರಿಗೂ ಅದು ಮಂದಿರ
ಆಲವೂ ಸುಂದರ ನೆಲವೂ ಸುಂದರ
ಕಾಣದಿರುವುದು ಅದು ನಮಗೆ ಹತ್ತಿರ


ಸುಂದರವಾಗಿರುವುದು ಪ್ರಕೃತಿ
ನಾಶವಾದರೆ ಅದರ ಹೆಸರು ವಿಕೃತಿ
ನಾಶ ಮಾಡುವುದೂ ನಾವೇ
ನಾಶವಾಗುವುದೂ ನಾವೇ


ಬೀಸುವ ಗಾಳಿ ಬಲು ತಂಪು
ಅದ ಕೆಡಿಸಲು ಹೋದರೆ ಜೀವವೇ ತಂಪು
ನಮಗೆ ಬೇಕಾದುದು ಇರುವುದು ಅವಳಲಿ
ನಾವು ಇರುವುದು ಅವಳ ಮಡಿಲಲಿ


ಶಾಂತವಾಗಿದ್ದರವಳು ಬಲು ಮನೋಹರ
ಕೋಪಗೊಂಡರೆ ನಮ್ಮ ನಾಶ ಸರಳ
ಗಾನವನವಳೆ ಹಾಡುವಳು
ನಾಶವನವಳೆ ಮಾಡುವಳು


ನಾಶವಾಗಿದೆ ಹಲವಾರು ಬಾರಿ
ಹಕ್ಕಿ ಬದುಕಿದೆ ಹಾರಿ ಹಾರಿ
ಮಾನವನಿಗೇನೂ ಮಾಡಲಾಗದು
ಎಲ್ಲವನೂ ಇಳೆಯೇ ಮಾಡುವುದು


ಮರಣವಾಗಿದೆ ಹಲವಾರು ಇಲ್ಲಿ
ಆದರೆ ಉಳಿದವರು ಈಗ ಎಲ್ಲಿ
ಸುಂದರವಾದಾಗ ಅಲ್ಲಿಗೆ ಬರುವರು
ನಾಶವಾದಾಗ ಅದನು ಬಿಟ್ಟು ಹೋಗುವರು

 
SHREYAS U
10 C ജി.എച്ച്.എസ്. എസ്. ഉപ്പള
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത

 സാങ്കേതിക പരിശോധന - Subhashthrissur തീയ്യതി: 05/ 05/ 2020 >> രചനാവിഭാഗം - കവിത