ಸಾಮರಸ್ಯದಿಂದ ಕೂಡಿದ ಜೀವನವಿತ್ತು ಇಲ್ಲಿ l ಕೊರೋನ ಬಂದ ನಂತರ ಸ್ತಬ್ಧವಾಯಿತು ಇಲ್ಲಿ ll ದೇಶವಿಂದು ಕೊರೋನದಿಂದ ನಿಂತುಹೋಗಿದೆ l ಪೋಲೀಸರಿಗೆ ವೈದ್ಯರಿಗೆ ಕೆಲಸ ಹೆಚ್ಚಿದೆ ll ಮಕ್ಕಳಿಗೆ ಶಿಕ್ಷಕರಿಗೆ ರಜೆ ಸಿಕ್ಕಿದೆ l ನಮ್ಮ ಇಡೀ ದೇಶವೇ ಲೋಕ್ ಡೌನ್ ಆಗಿದೆ ll ದೇಶದಲ್ಲಿ ಎಲ್ಲೆಡೆಯೂ ಕೊರೋನದ ಭಯl ನಾವು ಜಾಗ್ರತವಾಗಿರಬೇಕು ಆಗ ನಮಗೆ ಜಯ ll ವಿಶ್ವವೇ ಬೆದರಿಕೆ ಕೊರೋನದ ದರ್ಪಕ್ಕೆl ಮದ್ದನ್ನ ಕೊಡುತ್ತಿದೆ ಭಾರತವು ವಿಶ್ವಕ್ಕೆll ಕೊರೋನದ ದರ್ಪವನ್ನು ಅಡಗಿಸಬೇಕು ನಾವು l ದರ್ಪ ನಿಲ್ಲಬೇಕಾದರೆ ಸಹಕರಿಸಬೇಕು ನೀವು ll ಮುಂಜಾಗ್ರತಾ ಕರ್ಮವನ್ನು ಸದಾ ಪಾಲಿಸಿರಿ l ಕೇಂದ್ರದ ಆಜ್ಞೆಯನ್ನು ಎಂದೂ ಮೀರದಿರಿll ವಿಶ್ವಕ್ಕೆ ಮಾದರಿ ನಮ್ಮ ದೇಶ ಭಾರತ l ನಾವು ಕೂಡ ಸೇರಬೇಕು ಹೆಗಲು ಕೊಟ್ಟು ನಿಲ್ಲುತll
സാങ്കേതിക പരിശോധന - Vijayanrajapuram തീയ്യതി: 20/ 06/ 2020 >> രചനാവിഭാഗം - കവിത