ಸಾಮರಸ್ಯದಿಂದ ಕೂಡಿದ
ಜೀವನವಿತ್ತು ಇಲ್ಲಿ l
ಕೊರೋನ ಬಂದ ನಂತರ
ಸ್ತಬ್ಧವಾಯಿತು ಇಲ್ಲಿ ll
ದೇಶವಿಂದು ಕೊರೋನದಿಂದ
ನಿಂತುಹೋಗಿದೆ l
ಪೋಲೀಸರಿಗೆ ವೈದ್ಯರಿಗೆ
ಕೆಲಸ ಹೆಚ್ಚಿದೆ ll
ಮಕ್ಕಳಿಗೆ ಶಿಕ್ಷಕರಿಗೆ
ರಜೆ ಸಿಕ್ಕಿದೆ l
ನಮ್ಮ ಇಡೀ ದೇಶವೇ
ಲೋಕ್ ಡೌನ್ ಆಗಿದೆ ll
ದೇಶದಲ್ಲಿ ಎಲ್ಲೆಡೆಯೂ
ಕೊರೋನದ ಭಯl
ನಾವು ಜಾಗ್ರತವಾಗಿರಬೇಕು
ಆಗ ನಮಗೆ ಜಯ ll
ವಿಶ್ವವೇ ಬೆದರಿಕೆ
ಕೊರೋನದ ದರ್ಪಕ್ಕೆl
ಮದ್ದನ್ನ ಕೊಡುತ್ತಿದೆ
ಭಾರತವು ವಿಶ್ವಕ್ಕೆll
ಕೊರೋನದ ದರ್ಪವನ್ನು
ಅಡಗಿಸಬೇಕು ನಾವು l
ದರ್ಪ ನಿಲ್ಲಬೇಕಾದರೆ
ಸಹಕರಿಸಬೇಕು ನೀವು ll
ಮುಂಜಾಗ್ರತಾ ಕರ್ಮವನ್ನು
ಸದಾ ಪಾಲಿಸಿರಿ l
ಕೇಂದ್ರದ ಆಜ್ಞೆಯನ್ನು
ಎಂದೂ ಮೀರದಿರಿll
ವಿಶ್ವಕ್ಕೆ ಮಾದರಿ
ನಮ್ಮ ದೇಶ ಭಾರತ l
ನಾವು ಕೂಡ ಸೇರಬೇಕು
ಹೆಗಲು ಕೊಟ್ಟು ನಿಲ್ಲುತll