സഹായം Reading Problems? Click here


എ യു പി എസ് ധർമ്മത്തടുക്ക(ಎ.ಯು.ಪಿ.ಎಸ್ ಧರ್ಮತ್ತಡ್ಕ)

Schoolwiki സംരംഭത്തിൽ നിന്ന്
(11257 എന്ന താളിൽ നിന്നും തിരിച്ചുവിട്ടതു പ്രകാരം)
Jump to navigation Jump to search
എ യു പി എസ് ധർമ്മത്തടുക്ക(ಎ.ಯು.ಪಿ.ಎಸ್ ಧರ್ಮತ್ತಡ್ಕ)
സ്കൂൾ ചിത്രം
Established 3.11.1934
School Code 11257
Place DHARMATHADKA
Address DHARMATHADKA AUPSCHOOL ,P.O.DHARMATHADKA.BADOOR VILLAGE.Via MANGALPADY.PIN 671324 KASARAGOD DIST.
PIN Code 671324
School Phone 04998264700
School Email aupsdharmathadka@gmail.com
Web Site www.11257aupsdharmathadka.blogspot.in
District Kasargod
Educational District Kasargod
Sub District Manjeshwaram

Catogery AIDED
Type General
Sections

Medium Kannada
No of Boys 130
No of Girls 148
Total Students 278
No of Teachers 14
Principal
Head Master N.MAHALINGA BHAT
P.T.A. President JOHN D'SOUZA
പ്രോജക്ടുകൾ
E-Vidhyarangam Help
30/ 01/ 2017 ന് 11257
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

ചരിത്രം (ಇತಿಹಾಸ)

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪುತ್ತಿಗೆ ಪಂಚಾಯತಿನ ಎರಡನೆ ವಾರ್ಡಿನಲ್ಲಿ ಧರ್ಮತ್ತಡ್ಕ ಎ.ಯು.ಪಿ ಶಾಲೆ ಇದೆ. ಇದು ಮಂಜೇಶ್ವರ ಉಪಜಿಲ್ಲೆಗೆ ಒಳಪಟ್ಟ ಶಾಲೆಯಾಗಿದೆ. ಪ್ರಕೃತಿ ರಮಣೀಯವಾದ ಪೊಸಡಿಗುಂಪೆಯ ತಪ್ಪಲಲ್ಲಿದ್ದು ಊರ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ 1934 ರಲ್ಲಿ ನೇರೋಳು ನಿಡುವಜೆ ರಾಮಚಂದ್ರ ಭಟ್ಟರಿಂದ ಸ್ಥಾಪಿಸಲ್ಪಟ್ಟಿತು. ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಂಡ ಈ ಶಾಲೆಯು ಊರಿನವರ ಪ್ರೋತ್ಸಾಹದಿಂದ 1957 ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿಹೊಂದಿತು. 2005 ರಲ್ಲಿ ಈ ಶಾಲೆಯು ಭಾಷಾ ಅಲ್ಪಸಂಖ್ಯಾತ ಶಾಲೆಯಾಗಿ ಸರಕಾರದಿಂದ ಅಂಗೀಕರಿಸಲ್ಪಟ್ಟಿತು. 80 ವರ್ಷಗಳಿಂದ ಸಾವಿರಾರು ಮಕ್ಕಳಿಗೆ ವಿದ್ಯಾದಾನವನ್ನು ಮಾಡಿ ಸುಸಂಸ್ಕೃತ ಸಮಾಜವನ್ನು ರೂಪೀಕರಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ.

ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು)

2.29 ಎಕರೆ ಸ್ಥಳದಲ್ಲಿ ಈ ವಿದ್ಯಾಲಯವು ಸ್ಥಾಪಿಸಲ್ಪಟ್ಟಿದೆ.ಶಾಲೆಯ ಒಂದು ಹಾಲ್ ಪ್ರಿ ಕೆ.ಇ.ಆರ್ ಕಟ್ಟಡವಾಗಿದ್ದು ಅದರಲ್ಲಿ ಯಲ್.ಪಿ.ವಿಭಾಗದ ನಾಲ್ಕು ತರಗತಿಗಳು ಕಾರ್ಯವೆಸಗುತ್ತಿವೆ. ಉಳಿದ ಮೂರು ಕಟ್ಟಡಗಳು ಹಾಲ್ ಗಳಾಗಿವೆ. ಅದರಲ್ಲಿ ಯು.ಪಿ.ವಿಭಾಗದ ತರಗತಿಗಳು (5,6,7) ನಡೆಯುತ್ತಿದೆ. ಶಾಲೆಯಲ್ಲಿ ಒಂದು ಕಂಪ್ಯೂಟರ್ ಲ್ಯಾಬ್ ಇದ್ದು ಒಂದು ಲ್ಯಾಪ್ ಟಾಪ್ , ನಾಲ್ಕು ಡೆಸ್ಕ್ ಟಾಪ್ ಕಂಪ್ಯೂಟರುಗಳು ಮತ್ತು ಒಂದು ಪ್ರಿಂಟರ್ ಇದೆ. ಶಾಲೆಗೆ ದೂರವಾಣಿ ಸಂಪರ್ಕವಿದ್ದು ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೌಕರ್ಯ ಇದೆ. ಇದು 2016 ನವೆಂಬರ್ ತಿಂಗಳಿನಿಂದ ಐಟಿ @ ಸ್ಕೂಲ್ ಯೋಜನೆಗೆ ಪರಿವರ್ತನೆಗೊಂಡಿದೆ.ಶಾಲೆಗೆ ವಿಶಾಲವಾದ ಆಟದ ಬಯಲು ಇದೆ. ಹುಡುಗರಿಗೂ ಹುಡುಗಿಯರಿಗೂ ಪ್ರತ್ಯೇಕವಾದ ಮೂತ್ರದೊಡ್ಡಿ ಹಾಗೂ ಪಾಯಿಖಾನೆಗಳು ಇವೆ. ಕುಡಿಯುವ ನೀರಿಗಾಗಿ ಒಂದು ಬಾವಿ ಇದ್ದು ಮೋಟಾರು ಸಹಾಯದಿಂದ ನೀರನ್ನು ಟಾಂಕಿಯಲ್ಲಿ ತುಂಬಿಸಿ ನಳ್ಳಿಗಳ ಮೂಲಕ ವಿತರಿಸಲಾಗುವುದು.ಒಂದು ತಾತ್ಕಾಲಿಕ ಶೆಡ್ಡಿನಲ್ಲಿ ಮಧ್ಯಾಹ್ನ ಬಿಸಿಯೂಟವನ್ನು ತಯಾರಿಸಿ ವಿತರಿಸಲಾಗುತ್ತಿದೆ.


പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)

 • ಸ್ಕೌಟ್ ಮತ್ತು ಗೈಡ್,
 • ಆರೋಗ್ಯ ಸಂಘ,
 • ಹುಡುಗಿಯರ ಸಮಾಲೋಚನಾ ಕೇಂದ್ರ,
 • ಶುಚಿತ್ವ ಸೇನೆ,
 • ಇಕೋ ಕ್ಲಬ್,
 • ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ,
 • ಶಾಲಾ ಪಾರ್ಲಿಮೆಂಟು,
 • ಬಾಲ ಸಭೆ,
 • ಯಕ್ಷಗಾನ ತರಬೇತಿ,
 • ಇಂಗ್ಲೀಷ್ ಕ್ಲಬ್,
 • ವಿಜ್ಞಾನ ಸಂಘ,
 • ಗಣಿತ ಸಂಘ.

മാനേജ്‌മെന്റ് (ಆಡಳಿತ ವರ್ಗ)

ಈ ವಿದ್ಯಾಲಯವು ಏಕವ್ಯಕ್ತಿ ಮೆನೇಜ್ ಮೆಂಟ್ ಶಾಲೆಯಾಗಿದ್ದು ಪ್ರಸ್ತುತ ಶ್ರೀಮತಿ ವಿಜಯಶ್ರೀ ಬಿ ಅವರು ಶಾಲಾ ಮೆನೆಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)

ಶ್ರೀಯುತ ನೇರೋಳು ನಿಡುವಜೆ ರಾಮಚಂದ್ರ ಭಟ್ಟರು ಈ ಶಾಲೆಯ ಸ್ಥಾಪಕರಾಗಿದ್ದಾರೆ

സ്കൂളിന്റെ മുന്‍ പ്രധാനാദ്ധ്യാപകര്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು) :

 • ಶ್ರೀಯುತ ನೇರೋಳು ನಿಡುವಜೆ ರಾಮಚಂದ್ರ ಭಟ್ಟ
 • ಶ್ರೀಯುತ ನೇರೋಳು ನಿಡುವಜೆ ಸುಬ್ಬಣ್ಣ ಭಟ್ಟ
 • .ಶ್ರಿಯುತ ಎ. ನಾರಾಯಣ ಭಟ್ಟ
 • ಶ್ರೀಯುತ ಕೆ.ಕೇಶವ ಭಟ್ಟ
 • ಶ್ರೀಯುತ ಯನ್.ಯಚ್.ಲಕ್ಷ್ಮೀನಾರಾಯಣ ಭಟ್ಟ

പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಸಿದ್ಧರಾದ ಪೂರ್ವ ವಿದ್ಯಾರ್ಥಿಗಳು)

 • ಶ್ರೀ ಯನ್.ಸುಬ್ಬಣ್ಣ ಭಟ್ಟ ( ಪುತ್ತಿಗೆ ಗ್ರಾಮ ಪಂಚಾಯತು ಮಾಜಿ ಉಪಾಧ್ಯಕ್ಷರು),
 • ಶ್ರೀ ಕೋಳಾರು ಸತೀಶ್ಚಂದ್ರ ಭಂಡಾರಿ ( ಕ್ಯಾಂಪ್ಕೋ ದ ನಿರ್ದೇಶಕರು),
 • ಶ್ರೀ ಯಸ್.ಕೃಷ್ಣ ನಾಯ್ಕ ( ಕಸ್ಟಂಸ್ ಅಧಿಕಾರಿ, ಗುಜರಾತ್),
 • ಶ್ರೀ ಜಯಪ್ರಕಾಶ ಶೆಟ್ಟಿ ಪೆರ್ಮುದೆ. (ಖ್ಯಾತ ತೆಂಕು ತಿಟ್ಟು ಯಕ್ಷಗಾನ ಕಲಾವಿದ),
 • ಶ್ರೀಮತಿ ಪಾರ್ವತಿ.ಜಿ.ಐತಾಳ್ (ಖ್ಯಾತ ಬರಹಗಾರ್ತಿ, ಲೇಖಕಿ, ಪ್ರೊಫೆಸರ್, ಭಂಡಾರ್ಕಾರ್ ಕಾಲೇಜು, ಕುಂದಾಪುರ),.
 • ಶ್ರೀ ಕೆ.ಯಂ.ಗೋವಿಂದ ಭಟ್ (ಪೈವಳಿಕೆ ಪಂಚಾಯತು ಮಾಜಿ ಸದಸ್ಯರು)

How to reach

ಮಂಗಳೂರು - ಕಾಸರಗೋಡು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಂದ್ಯೋಡ್ ಜಂಕ್ಷನ್ ನಿಂದ 17 KM ಪೂರ್ವ ದಿಕ್ಕಿಗೆ, ಕುಂಬಳೆ - ಬದಿಯಡ್ಕ ದಾರಿಯಲ್ಲಿ ಸೀತಂಗೋಳಿ ಜಂಕ್ಷನ್ ನಿಂದ 14 KM ಉತ್ತರ ದಿಕ್ಕಿಗೆ ಎ.ಯು.ಪಿ.ಶಾಲೆ ಧರ್ಮತ್ತಡ್ಕ ಇದೆ. (ಕುಂಬಳೆ ರೈಲು ನಿಲ್ದಾಣದಿಂದ 25 KM , ಉಪ್ಪಳ ರೈಲು ನಿಲ್ದಾಣದಿಂದ 25 KM)

Map

https://www.google.co.in/maps/dir/Kasaragod,+Kerala/Dharmathadka,+Kerala/@12.5887905,74.9775345,13z/data=!4m8!4m7!1m2!1m1!1s0x3ba482155de6aad1:0x3a07d5464844020a!1m2!1m1!1s0x3ba49e90d8f64ec5:0x22a26690a8ca6fc3!3e0