Schoolwiki സംരംഭത്തിൽ നിന്ന്
Namma Kasaragod
ನಮ್ಮ ಕಾಸರಗೋಡು
ಪರಶುರಾಮನ ಕೊಡಲಿಯ ಹೊಡೆತಕ್ಕೆ
ಹೆದರಿದ ಕಡಲಿನ ಇತಿಹಾಸ
ಕಾಸರಗೋಡಿನ ಭವ್ಯ ಸೃಷ್ಟಿಯ
ಹೊಗಳಲು ಸಾಲದು ನವಮಾಸ
ಕರಾವಳಿ ಕರೆಯಲಿ ಕಲರವ
ನುಡಿಸುವ ಚಂದ್ರಗಿರಿಯ ಕುಣಿದಾಟ
ಊರಿಂದ ಊರನೆ ಇಲ್ಲಿಗೆ ಸೆಳೆಯುವ
ಬೇಕಲ ಕೋಟೆಯ ನೋಟ
ಕವಿಕಾವ್ಯಗಳೆ ಉದಿಸಿದ ನಾಡಿದು
ಸಂಸ್ಕೃತಿಗಳಿಗೆ ತವರೂರು
ರಾಷ್ಟ್ರಕವಿ ಗೋವಿಂದ ಪೈ
ಜನಿಸಿದಂತಹ ಈ ಊರು
ಕನ್ನಡಾಂಬೆಯ ಮುದ್ದಿನ ಮಗ
ಕವಿ ಕಯ್ಯಾರರ ಈ ನಾಡು
ಮೆಲ್ಲನೆ ಬಿರಿಯುವ ಕವಿ ಮನಸುಗಳಿಗೆ
ಇದೊಂದು ಸುಂದರ ಗೂಡು
ಸುಂದರ ನಾಡಿಗೆ ಅಂಟಿದ ಶಾಪವೋ
ಒಂದೂ ಅರಿಯೆ ನಾನು
ಗಡಿನಾಡಿನಲ್ಲಿ ಮಿಡಿಯುವ ಜನರ
ಬಾಳೆ ಹೀಗೆ ಏನು?
ಅತ್ತ ಕನ್ನಡಿಗರಲ್ಲ ಇತ್ತ ಕೇರಳೀಯರು ಅಲ್ಲ
ತ್ರಿಶಂಕು ಬಾಳಿನ ಪರದಾಟ
ಯಾರೋ ಹೇರುವ ದಬ್ಬಾಳಿಕೆಗೆ
ಕನ್ನಡ ಮಕ್ಕಳ ಹೋರಾಟ
ಸಪ್ತ ಭಾಷೆಗಳ ಸಂಗಮ ಭೂಮಿ
ಎನ್ನಲು ಹೆಮ್ಮೆಯೇ ನಮಗೆಲ್ಲ
ಮಾತೃ ಭಾಷೆಯ ಉಳಿವನು ಬಯಸಲು
ತುಡಿಯುವ ಹೃದಯವೇ ನಮದೆಲ್ಲ
ಕನ್ನಡಿಗರು ಎಂದು ಕೂಗಿ ಹೇಳುವ ಹೇಳುವ
ಬಯಕೆಯು ಇದೆ ಮನದಲ್ಲಿ
ಕೂಗಲು ಜೊತೆಗೆ ದನಿಯೇ ಇರದಿರೆ
ಮುಂದಿನ ದಾರಿಯದು ಎಲ್ಲಿ
ಕೈ ತಾಳಕೆ ಕುಣಿಯುತ ಬದುಕನ್ನು
ದೂಡಲು ಕಲಿತೆವು ನಾವಿಂದು ಇಲ್ಲಿ
ಹೀಗೆ ಆದರೆ ಕಾಸರಗೋಡಿನಲ್ಲಿ
ಕನ್ನಡದ ಉಳಿವದು ಎಲ್ಲಿ
$
|