എ യു പി എസ് കുരുടപ്പദവ്(ಎ.ಯು.ಪಿ.ಎಸ್ ಕುರುಡಪದವು)

Schoolwiki സംരംഭത്തിൽ നിന്ന്
21:54, 18 ജനുവരി 2017-നു ഉണ്ടായിരുന്ന രൂപം സൃഷ്ടിച്ചത്:- 11258 (സംവാദം | സംഭാവനകൾ)
എ യു പി എസ് കുരുടപ്പദവ്(ಎ.ಯು.ಪಿ.ಎಸ್ ಕುರುಡಪದವು)
സ്കൂൾ ചിത്രം
സ്കൂൾ ചിത്രം
Established 1923
School Code 11258
Place Kurudapadavu
Address krudapadavu Post , via- Uppala
PIN Code 671322
School Phone 9400508105
School Email aupsk11258@gmail.com
Web Site
District Kasargod
Educational District Kasargod
Sub District Manjeshwaram

Catogery Aided
Type General
Sections

Medium Kannada
No of Boys
No of Girls
Total Students
No of Teachers 11
Principal
Head Master K. SHANKARANARAYANA BHAT
P.T.A. President JAGADEESHA ACHARYA . K
പ്രോജക്ടുകൾ
E-Vidhyarangam Help
18/ 01/ 2017 ന് 11258
ഈ താളിൽ അവസാനമായി മാറ്റം വരുത്തി
അക്ഷരവൃക്ഷം സഹായം

ചരിത്രം (ಇತಿಹಾಸ)

                                              ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದಿದ್ದ ಗ್ರಾಮೀಣ ಪ್ರದೇಶವಾದ ಕುರುಡಪದವುಯೆಂಬ ಸ್ಥಳವು ಕಾಸರಗೋಡು ಜಿಲ್ಲೆಯ ಪೈವಳಿಕೆ ಪಂಚಾಯತಿ ವ್ಯಾಪ್ತಿಯ ಲ್ಲಿರುವ ಒಂದು ಪುಟ್ಟ ಸ್ಥಳ. ಯಾವುದೇ ಪ್ರಾಥಮಿಕ ಸೌಲಭ್ಯಗಳು ಇಲ್ಲದೆ ಇರುವ ಈ ಸ್ಥಳದಲ್ಲಿ ಸಾಮಾನ್ಯವಾಗಿ ಅಡಿಕೆ, ತೆಂಗು, ಭತ್ತದ ಕೃಷಿಯೇ ಮೊದಲಾದ ಕೃಷಿ ಚಟುವಟಿಕೆಗಳನ್ನು ನಡೆಸಿ ಜನರು ಜೀವನ ನಡೆಸುತ್ತಿದ್ದರು. ಸರಿಸುಮಾರು 100 

ವರ್ಷಗಳ ಕಾಲ ಹಿಂದೆ ಈ ಪ್ರದೇಶದ ಜನರಿಗೆ ಶಾಲಾ ಶಿಕ್ಷಣವೆಂಬುದು ಹಗಲು ಕನಸಾಗಿತ್ತು. ಬೆಟ್ಟ, ಗುಡ್ಡ ,ಹೊಳೆ ,ಹಳ್ಳಗಳನ್ನು ದಾಟಿ ದೂರದ ಮಂಜೇಶ್ವರವೋ, ಬಂಟ್ವಾಳವೋ, ನೀಲೇಶ್ವರವೋ, ಮಂಗಳೂರನ್ನೋ, ಸೇರಿ ಶಿಕ್ಷಣ ಪಡೆಯುವುದು ಅಸಾಧ್ಯದ ಮಾತಾಗಿತ್ತು.ಆದರೆ ಇಲ್ಲಿನವರಲ್ಲಿ ಶಿಕ್ಷಣ ಪಡೆಯುವುದರಲ್ಲಿ ತುಡಿತ ಇತ್ತು.

                   ಇಂತಹ ವಿಷಮ ಪರಿಸ್ಥಿತಿಯ ಊರಿನ ಗೌರವಾನ್ವಿತ ಕಾಡೂರು ಮನೆಯ ಹಿರಿಯರಾದ ಕಾಡೂರು ಶಂಭು ಭಟ್, ಅವರು ತಮ್ಮವರೆನ್ನೆಲ್ಲಾ ಸೇರಿಸಿಕೊಂಡು ಊರಿನಲ್ಲಿ  ಶಾಲೆಯನ್ನು ಪ್ರಾರಂಭಿಸುವ ಕುರಿತು ಮಾತುಕತೆಯನ್ನು ನಡೆಸಿದರು. ತಮ್ಮ ಸ್ವಂತ ಹೆಸರಿಗೆ ಸರಕಾರದಿಂದ ಲಭಿಸಿದ 89 ಸೆಂಟ್ಸ್ ಪಟ್ಟಾ ಸ್ಥಳವನ್ನು ಶಾಲೆಗಾಗಿ ಅವರು ಮೀಸಲಿಟ್ಟು 1920ರ ಸುಮಾರಿಗೆ ಶೆಡ್ ಕಟ್ಟಿ ಕೇವಲ 4ಮಕ್ಕಳೊಂದಿಗೆ ಶಾಲೆ ಪ್ರಾರಂಭಿಸಿದರು. ಆದರೆ ಸರಕಾರದ ಅಧಿಸೂಚನೆಯಂತೆ ಶಾಲೆಯು            12-11-1923 ರಂದು ಒಂದು ಮತ್ತು ಎರಡನೇ ತರಗತಿಗಳೊಂದಿಗೆ ಪ್ರಾರಂಭಿಸಲ್ಪಟ್ಟಿತು. ಇದರ ಅಧ್ಯಾಪಕರಾಗಿ ಸ್ವತ: ಕಾಡೂರು ಶಂಭು ಭಟ್ ರವರೆ ಇದ್ದರು. ಅವರು ಊರಿನ ಗುರಿಕಾರರೂ, ಜನಮನ್ನಣೆಯನ್ನು ಪಡೆದ ವ್ಯಕ್ತಿಯಾಗಿದ್ದು, ಊರಿನ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಿದ್ದರು. ಹೀಗೆ ಮುಂದುವರಿದ ಶಾಲೆಯು ಕುಂಟುತ್ತಾ ಸಾಗಿ 1935 ರಲ್ಲಿ ಮೂರು ಮತ್ತು ನಾಲ್ಕನೇ ತರಗತಿಯನ್ನು ಹೊಂದಿತು. 1938 ರಲ್ಲಿ ಐದನೇ ತರಗತಿಯೂ ಪ್ರಾರಂಭವಾಗಿ ಪೂರ್ಣಪ್ರಮಾಣದ LP ಶಾಲೆಯಾಗಿ ಅಂಗೀಕೃತ ವಾಯಿತು. ಆಗ ಅಧ್ಯಾಪಕರಾಗಿ ಕಾಡೂರು ಶಂಭು ಭಟ್, ಅವರ ಮಗ ಕಾಡೂರು ಪಿ.ಕೆ. ಸುಬ್ರಾಯ ಭಟ್ , ಪಾರೆಕೋಡಿ ಸುಬ್ಬಣ್ಣ ಭಟ್ ಮೊದಲಾದವರಿದ್ದರು. ಕಾಡೂರು ಶಂಭು ಭಟ್ ರವರ ನಿವೃತ್ತಿಯ ನಂತರ ಪಿ.ಕೆ. ಸುಬ್ರಾಯ ಭಟ್ ಶಾಲಾ ಮುಖ್ಯೋಪಾಧ್ಯಾಯರಾದರು.
                     1960-61 ನೇ ಇಸವಿಯಿಂದ ಶಾಲೆಯು ಪೂರ್ಣಪ್ರಮಾಣದ ಯು . ಪಿ . ಶಾಲೆAiÀiÁV  ಮಾರ್ಪಟ್ಟು 1967 ರಲ್ಲಿ ಇದು ಸರಕಾರದಿಂದ ಅಂಗೀಕೃತವಾಯಿತು. ಈ ನಡುವೆ ಶಾಲಾ ಸ್ಥಾಪಕರಾಗಿದ್ದ ಕಾಡೂರು ಶಂಭು ಭಟ್ ರು 1956 ರಲ್ಲಿ ನಿಧನ ಹೊಂದಿದ್ದರಿಂದ ಶಾಲಾ ಆಡಳಿತವನ್ನು ಅವರ ಮಗ ಕಾಡೂರು ಗಣಪತಿ ಭಟ್ ವಹಿಸಿಕೊಂಡು, ಅವರೇ ಮುಖ್ಯೋಪಾಧ್ಯಾಯರಾಗಿಯೂ, ಅವರ ಪತ್ನಿ ಶ್ರೀಮತಿ ಸರಸ್ವತಿ ಅಮ್ಮನವರು ಶಾಲಾ ಮೆನೇಜರ್ ರಾಗಿಯೂ ಶಾಲೆಯನ್ನು ಮುನ್ನಡೆಸಿದರು.  

ಇವರ ಕಾಲದಲ್ಲಿ ಶಾಲೆಗೆ ಶಾಶ್ವತವಾದ ಕಟ್ಟಡಗಳು ನಿರ್ಮಿಸಲ್ಪಟ್ಟವು. ಮಕ್ಕಳ ಸಂಖ್ಯೆಗೆ ಅನುಸಾರವಾಗಿ ಹೊಸ ಹೊಸ ಅಧ್ಯಾಪಕರು ನೇಮಿಸಲ್ಪಟ್ಟರು. 1974 ರಲ್ಲಿ ಅವರ ನಿವೃತ್ತಿಯ ನಂತರ 1980 ರ ವರೆಗೆ ಎನ್ . ಕೃಷ್ಣ ಭಟ್ ರವರು , ಮುಖ್ಯ ಅಧ್ಯಾಪಕರಾಗಿದ್ದರು. ತದನಂತರ ಕೆ. ಲೂಯಿಸ್ ಡಿ 'ಸೋಜ , ಕೆ . ಪರಮೇಶ್ವರ ಭಚ್ , ಚೆಲ್ಲಪ್ಪನ್ ಚೆಟ್ಟಿಯಾರ್ ರವರುಗಳು ಶಾಲಾ ಪ್ರಧಾನ ಅಧ್ಯಾಪಕರಾಗಿ ಶಾಲೆಯನ್ನು ಮುನ್ನಡಿಸಿದ್ದಾರೆ. ಪ್ರಸ್ತುತ ಶ್ರೀ PÉ. ±ÀAPÀgÀ£ÁgÁAiÀÄt ¨sÀmïಯವರು ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ .

                       1990 ರಲ್ಲಿ ಶಾಲಾ ಮೆನೇಜರ್ ರಾಗಿದ್ದ ಶ್ರೀಮತಿ ಸರಸ್ವತಿ ಅಮ್ಮನವರ ಅಕಾಲ ನಿಧನದ ನಂತರ ಶಾಲಾ ಆಡಳಿತವನ್ನು ಸುಸೂತ್ರವಾಗಿ ನಡೆಸಿಕೊಂಡು ಬರಲು ಕಾಡೂರು ಗಣಪತಿ ಭಟ್ ಮತ್ತು ಅವರ ಐವರು ಗಂಡು ಮಕ್ಕಳನ್ನೊಳಗೊಂಡ ಕುಟುಂಬ ಟ್ರಸ್ಟ ಆದ ಶ್ರೀ ದುರ್ಗಾ ಎಜುಕೇಶನ್ ಟ್ರಸ್ಟ್ (ರಿ) ಕಾಡೂರು ಎಂಬ ಟ್ರಸ್ಟ್ ಸ್ಥಾಪನೆಯಾಯಿತು. ಪ್ರಸ್ತುತ ಕಾಡೂರು ಶಂಕರನಾರಾಯಣ ಭಟ್ ರವರ ಪತ್ನಿ ಹಾಗೂ ಟ್ರಸ್ಟಿನ ಸದಸ್ಯೆಯಾದ ಶ್ರೀಮತಿ ಪರಮೇಶ್ವರಿ ಪಿ . ಎಚ್ . ಶಾಲಾ ಮನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ . ಪ್ರಸ್ತುತ ಟ್ರಸ್ಟಿನ ಅಧ್ಯಕ್ಷರಾಗಿ ಕಾಡೂರು ಪುರುಷೋತ್ತಮ ಭಟ್ ,  ಸದಸ್ಯರಾಗಿ ಕೆ . ಸೀತಾರಾಮ ಭಟ್ , ಕೆ . ಶಂಕರನಾರಾಯಣ ಭಟ್ ,  

ಕೆ . ಬಾಲಕೃಷ್ಣ ಹಾಗೂ ಜಿ . ಕೆ . ಪ್ರಸಾದ್ ಕಾಡೂರು ಇವರುಗಳಿದ್ದಾರೆ .2007ರಲ್ಲಿ ಶಾಲೆಯ ಹಳೆ ಕಟ್ಟಡಗಳನ್ನು ಕೆಡಹಿ ಹೊಸಕಟ್ಟಡಗಳನ್ನು ಕಟ್ಟಲಾಗಿದೆ . ಶಾಲೆಯಲ್ಲಿ ಲೈಬ್ರರಿ ,ಪ್ರಯೋಗಾಲಯ ಹಾಗೂ ಕಂಪ್ಯೂಟರ್ ಲ್ಯಾಬ್ , HEAD MASTER ROOM , STAFF ROOM ವ್ಯವಸ್ಥೆಗಳಿವೆ . ಶಾಲೆಯ ಎಲ್ಲಾ ತರಗತಿಗಳಿಗೆ ವಿದ್ಯುಧ್ಧೀಕರಣವಾಗಿದೆ . 2007 ರಲ್ಲಿ ಶಾಲಾ ಮಕ್ಕಳ ಉಪಯೋಗಕ್ಕಾಗಿ MLA FUND ನಿಂದ ಆಗಿನ MLA ಆಗಿದ್ದ ಶ್ರೀ. ಸಿ . ಎಚ್ . ಕುಂಞಂಬುರವರು 3 COMPUTER , 1 PRINTER ಹಾಗೂ ಮುಂದಿನ ವರ್ಷ ಕುಡಿನೀರು ಪದ್ಧತಿಗಾಗಿ ಕೊಳವೆ ಬಾವಿ ಹಾಗೂ ಪೈಪ್ ವ್ಯವಸ್ಥೆಗೆ ಅನುದಾನವನ್ನು ಒದಗಿಸಿರುತ್ತಾರೆ . ಶಾಲಾ ಮುಖ್ಯೋಪಾಧ್ಯಾಯಿನಿಯರಾಗಿರುವ ಶ್ರೀಮತಿ ಜಯಲಕ್ಷ್ಮಿ . ಕೆ . ಯವರು 1 COMPUTER ಕೊಟ್ಟಿರುತ್ತಾರೆ . ಹಾಗೇ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ದಿ . ಶ್ಯಾಮ್ ಭಟ್ , ಕೆ . ಸೀತಾರಾಮ ಭಟ್ , ಪುರುಷೋತ್ತಮ ಭಟ್ ರವರು ಶಾಲೆಯ ಅಗತ್ಯಕ್ಕನುಗುಣವಾಗಿ ಧನ ಸಹಾಯವನ್ನಿತ್ತಿದ್ದಾರೆ . ಶಾಲೆಯನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಲು ಶಾಲಾ ಆಡಳಿತ ಮಂಡಳಿ, ಮೆನೇಜರ್ , ಮುಖ್ಯೋಪಾಧ್ಯಾಯರು , ಅಧ್ಯಾಪಕ ವೃಂದ , ಸಿಬ್ಬಂದಿ ವರ್ಗ ಹಾಗೂ ಊರವರು ಬಹಳಷ್ಟು ಶ್ರಮ ವಹಿಸುತ್ತಿದ್ದಾರೆ.

                           ಈ ಶೈಕ್ಷಣಿಕ ವರ್ಷದಲ್ಲಿ LKG & UKG ತರಗತಿಗಳಲ್ಲಿ 18 ವಿದ್ಯಾರ್ಥಿಗಳೂ , 1 ತಿಂದ 7 ರ ವರೆಗೆ 171ವಿದ್ಯಾರ್ಥಿಗಳೂ ಈ ಶಾಲೆಯಲ್ಲಿ 

ಕಲಿಯುತ್ತಿದ್ದಾರೆ . ಸರಕಾರದಿಂದ ಅಂಗೀಕೃತಗೊಂಡ 11 ಜನ ಅಧ್ಯಾಪಕರೂ ಒರ್ವ ಕಛೇರಿ ಸಿಬ್ಬಂದಿ ಅಲ್ಲದೆ ತಾತ್ಕಾಲಿಕ ನೆಲೆಯಲ್ಲಿ Pre-Primary Teacher , ಅಲ್ಲದೆ NMP Cook ಕೆಲಸ ಮಾಡುತ್ತಿದ್ದಾರೆ .

ഭൗതികസൗകര്യങ്ങള്‍ (ಭೌತಿಕ ಸೌಕರ್ಯಗಳು)

പാഠ്യേതര പ്രവര്‍ത്തനങ്ങള്‍ (ಪಾಠ್ಯೇತರ ಚಟುವಟಿಕೆಗಳು)

മാനേജ്‌മെന്റ് (ಆಡಳಿತ ವರ್ಗ)

മുന്‍സാരഥികള്‍ (ಹಿಂದಿನ ಮುಖ್ಯೋಪಾಧ್ಯಾಯರುಗಳು)

പ്രശസ്തരായ പൂര്‍വവിദ്യാര്‍ത്ഥികള്‍ (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)