എ എൽ പി എസ് നാരാണമംഗല ಎ.ಎಲ್.ಪಿ.ಎಸ್.ನಾರಾಯಣಮಂಗಲ
ഫലകം:Infobox enSchoolನಾರಾಯಣಮಂಗಲ, ಅಂಚೆ.
ചരിത്രം (ಇತಿಹಾಸ)
ಕುಂಬಳೆ ಗ್ರಾಮ ಪಂಚಾಯತಿನಲ್ಲಿರುವ ಕೊಯಿಪಾಡಿ ಗ್ರಾಮದ ನಾರಾಯಣಮಂಗಲದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯಾಗಿದೆ. ಇದು ಕುಂಬಳೆ ಗ್ರಾಮ ಪಂಚಾಯತಿನ ಮೊದಲ ಶಾಲೆ ಆಗಿದೆ.ನಾರಾಯಣಮಂಗಲಂ, ಆಚೆಗೋಳಿ,ನಾಯಿಕಾಪು ಮತ್ತು ಭಾಸ್ಕರ ನಗರ ಅಂಗನವಾಡಿಯ ಮಕ್ಕಳು ಇಲ್ಲಿಗೆ ಪ್ರಾಥಮಿಕ ಶಿಕ್ಷಣಕ್ಕೆ ಬರುತ್ತಾರೆ. ೧೯೧೩ ರಲ್ಲಿ ಊರಿನ ಮುಂದಾಳುಗಳೂ ಶಿಕ್ಷಣ ವಿದ್ವಾಂಸರೂ ಆಗಿದ್ದ ಕಟ್ಟಂಪಾಡಿ ಸುಬ್ರಾಯ ಭಟ್ಟರು ಮತ್ತು ಕೊಡ್ಯಮ್ಮೆ ಪದ್ಮನಾಭ ಇರ್ನಿರಾಯರ ಜೊತೆಗೂಡಿ ಈ ಶಾಲೆಯನ್ನು ಸ್ಥಾಪಿಸಿದರು. ಹೆಣ್ಮಕ್ಕಳ ವಿದ್ಯಾಭ್ಯಾಸ ಕ್ಕೆ ಒತ್ತು ನೀಡಿ ಶಾಲೆ ರೂಪುಗೊಂಡಿತು. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ವೈದ್ಯರು, ಶಿಕ್ಷಕರು, ಅಭಿಯಂತರರು, ಸಾಹಿತಿಗಳು, ರಾಜಕೀಯ ಧುರೀಣರು, ಸಮಾಜ ಸೇವಕರು, ಆಗಿ ಸಮಾಜ ಸೇವೆ ಮಾಡಿರುತ್ತಾರೆ. ಮೊದಲು ಸಂಸ್ಕೃತ ಪಾಠಶಾಲೆಯಾಗಿದ್ದು ಭಾಷಾವಾರು ವಿಂಗಡನೆಯ ನಂತರ ಪ್ರಾಥಮಿಕ ಶಾಲೆಯಾಗಿ ಮಾರ್ಪಾಡುಗೊಂಡಿತು. ಶಾಲೆಯ ಸರ್ವತೋಮುಖ ಅಭಿವೃದ್ದಿಗಾಗಿ ಶಾಲೆಯನ್ನು ಆರ್ಯಕಲಾಭಿವರ್ಧಕ ಸಂಘ ಯೆಂಬ ಸಂಘಕ್ಕೆ ನೀಡಲಾಯಿತು.
ഭൗതികസൗകര്യങ്ങള് (ಭೌತಿಕ ಸೌಕರ್ಯಗಳು)
ಶಾಲೆಯಲ್ಲಿ ನಾಲ್ಲು ತರಗತಿ ಕೋಣೆಗಳು , ಶೌಚಾಲಯ , ಪಾಯಿಖಾನೆ , ಕಂಪ್ಯೂಟರ್ ಕೊಠಡಿ , ವಾಚನಾಲಯ , ವಿಶಾಲವಾದ ಆಟದ ಮೈದಾನ , ಬಯಲುರಂಗ ಮಂದಿರ , ಇಂಟರ್ನೆಟ್ ಸೌಲಭ್ಯ, ಪ್ರಿಂಟರ್ , ಆಟದ ಸಾಮಾಗ್ರಿಗಳು ಮೊದಲಾದವುಗಳಿವೆ.
പാഠ്യേതര പ്രവര്ത്തനങ്ങള് (ಪಾಠ್ಯೇತರ ಚಟುವಟಿಕೆಗಳು)
ಕಲೋತ್ಸವ , ಆಟೋಟ ಸ್ಪರ್ಧೆಗಳು , ಕಲೆ ವಿಜ್ಞಾನೋತ್ಸವ ಮೊದಲಾದವುಗಳಲ್ಲಿ ಶಾಲೆ ಹಾಗೂ ಉಪಜಿಲ್ಲಾ ಮಟ್ಟದಲ್ಲಿ ಭಾಗವಹಿಸುವಿಕೆ , ಬಯಲು ಪ್ರವಾಸ , ವಾರ್ಷಿಕೋತ್ಸವ ಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಇದೆ.
മാനേജ്മെന്റ് (ಆಡಳಿತ ವರ್ಗ)
ಆಡಳಿತ ಸಮಿತಿ. :- ಮೇನೇಜರ್.ಡಾ // ಕೆ.ವಿ.ತೇಜಸ್ವಿ.
ಅಧ್ಯಕ್ಷರು :- ಡಾ//ಸರ್ವೇಶ್ವರ ಭಟ್ಟ ಕಾರ್ಯದರ್ಶಿ :- ಶಾಮಪ್ರಸಾದ್ ಕಬೆಕ್ಕೋಡು
മുന്സാരഥികള് (ಹಿಂದಿನ ಮುಖ್ಯೋಪಾಧ್ಯಾಯರುಗಳು)
* ವೆಂಕಟರಮಣ ಭಟ್ಟ.ಕಬೆ ಕ್ಕೋಡು ಶಂಭಟ್ಟ.ಕೆ ವೆಂಕಟಕೃಷ್ಣ ಭಟ್ಟ.ಯಂ.ವಿ. ವಿಶಾಲಾಕ್ಷಿ ರಾಮಚಂದ್ರ ಹೆಗಡೆ
പ്രശസ്തരായ പൂര്വവിദ്യാര്ത്ഥികള് (ಪ್ರಶಸ್ತರಾದ ಪೂರ್ವ ವಿದ್ಯಾರ್ಥಿಗಳು)
ನಿವೃತ್ತ ಮುಖ್ಯ ಶಿಕ್ಷಕ ವೆಂಕಟರಮಣ ಭಟ್ಟ , ಸವಾಜ ಸೇವಕ ಸಾಯಿರಾಂ ಭಟ್ಟ , ಕಟ್ಟೋಣ ಸುಬ್ರಾಯ ಭಟ್ಟ , ಡಾ//ಸರ್ವೇಶ್ವರ ಭಟ್ಟ , ಡಾ// ಶ್ರೀರಾಮ ಭಟ್ಟ , ಯಕ್ಷಗಾನ ಕಲಾವಿದ ಗುಡ್ಡಪ್ಪ ಶೆಟ್ಟಿ , ಲೇಖಕಿ ಸಬಿತಾ ಮರಕ್ಕಿಣಿ , ಡಾ//ಕೆ.ವಿ. ಮಹಾಬಲ ಭಟ್ಟ , ನಿವೃತ್ತ ಆರ್.ಡಿ.ಒ.ನಾರಾಯಣ ,
വഴികാട്ടി ( ಮಾರ್ಗದರ್ಶಿ )
ಶಾಲೆಗೆ ತಲುಪಲಿರುವ ದಾರಿ ಕುಂಬಳೆಯಿಂದ ಬದಿಯಡ್ಕ ದಾರಿಯಲ್ಲಿ ೪ ಕಿಲೋಮೀಟರ್ ಬಂದು ನಾರಾಯಣಮಂಗಲಂ ಯೆಂಬಲ್ಲಿಂದ ಎಡ ಭಾಗಕ್ಕೆ ಇನ್ನೂರು ಮೀಟರ್ ಬರಬೇಕು.
{{#multimaps:12.6028,75.0504 |zoom=13}}