"എസ് .ഡി. പി. എച്ച്. എസ്. ധർമ്മത്തടുക്ക/പ്രവർത്തനങ്ങൾ/2024-25" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
വരി 13: വരി 13:


<font size="5" color="black" face="Noto Serif Kannada" font>ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ವಿವಿಧ ಕ್ಲಬ್ ಗಳ ಉದ್ಘಾಟನೆಯು ಜರಗಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಗೋವಿಂಧ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಮ್ಯಾನೇಜರ್ ಶಂಕರ ನಾರಾಯಣ ಭಟ್ ಮಾತನಾಡಿ "ಕ್ಲಬ್ ಗಳು ಮಕ್ಕಳ ಸೃಜನಶೀಲತೆಯ ಅನಾವರಣಕ್ಕೆ ಪೂರಕ ವೇದಿಕೆಯಾಗಿದೆ,ವಿದ್ಯಾರ್ಥಿಗಳು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು" ಎಂದು ಶುಭವನ್ನು ಹಾರೈಸಿದರು. ಶಿಕ್ಷಕಿ ಸುನೀತಾ ಟೀಚರ್ ಶುಭನುಡಿಗಳನ್ನಾಡಿದರು. ವಿಜ್ಞಾನ ಅಧ್ಯಾಪಕರಾದ ಸೂರ್ಯನಾರಾಯಣ ಭಟ್ ವಿಜ್ಞಾನ ಪ್ರಯೋಗದ ಪ್ರಾತ್ಯಕ್ಷಿಕೆಯನ್ನು ನಡೆಸಿದರು. ಕುಮಾರಿ ವೃಷ್ಠಿ ಯಸ್ ರೈ ಸ್ವಾಗತಿಸಿ, ಕುಮಾರಿ ಮನ್ನಿಪಾಡಿ ವೈಷ್ಣವಿ ವಂದಿಸಿದರು. ಕುಮಾರಿ ಅನನ್ಯ ಭಟ್ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.</font>
<font size="5" color="black" face="Noto Serif Kannada" font>ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ವಿವಿಧ ಕ್ಲಬ್ ಗಳ ಉದ್ಘಾಟನೆಯು ಜರಗಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಗೋವಿಂಧ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಮ್ಯಾನೇಜರ್ ಶಂಕರ ನಾರಾಯಣ ಭಟ್ ಮಾತನಾಡಿ "ಕ್ಲಬ್ ಗಳು ಮಕ್ಕಳ ಸೃಜನಶೀಲತೆಯ ಅನಾವರಣಕ್ಕೆ ಪೂರಕ ವೇದಿಕೆಯಾಗಿದೆ,ವಿದ್ಯಾರ್ಥಿಗಳು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು" ಎಂದು ಶುಭವನ್ನು ಹಾರೈಸಿದರು. ಶಿಕ್ಷಕಿ ಸುನೀತಾ ಟೀಚರ್ ಶುಭನುಡಿಗಳನ್ನಾಡಿದರು. ವಿಜ್ಞಾನ ಅಧ್ಯಾಪಕರಾದ ಸೂರ್ಯನಾರಾಯಣ ಭಟ್ ವಿಜ್ಞಾನ ಪ್ರಯೋಗದ ಪ್ರಾತ್ಯಕ್ಷಿಕೆಯನ್ನು ನಡೆಸಿದರು. ಕುಮಾರಿ ವೃಷ್ಠಿ ಯಸ್ ರೈ ಸ್ವಾಗತಿಸಿ, ಕುಮಾರಿ ಮನ್ನಿಪಾಡಿ ವೈಷ್ಣವಿ ವಂದಿಸಿದರು. ಕುಮಾರಿ ಅನನ್ಯ ಭಟ್ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.</font>
<center><gallery mode="packed-overlay" widths="350" heights="280">
<center><gallery mode="packed-overlay" widths="250" heights="200">
പ്രമാണം:11051 INAUGURATION OF CLUB.jpg|alt=|'''<b class="term"><font size="3" color="blue" face="Century Schoolbook L" font></font></b></h1>'''
പ്രമാണം:11051 INAUGURATION OF CLUB.jpg|alt=|'''<b class="term"><font size="3" color="blue" face="Century Schoolbook L" font></font></b></h1>'''
പ്രമാണം:11051 INAUGURATION OF CLUB1.jpg|alt=
പ്രമാണം:11051 INAUGURATION OF CLUB1.jpg|alt=

15:36, 7 സെപ്റ്റംബർ 2024-നു നിലവിലുണ്ടായിരുന്ന രൂപം

ಧರ್ಮತ್ತಡ್ಕದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಿರೀಕ್ಷೆ ತರಗತಿ :

ಗುರುಹಿರಿಯರು, ಹೆತ್ತವರ ಬಗ್ಗೆ ಸಮರ್ಪಣಾ ಭಾವ ತುಂಬಿರಬೇಕು - ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ : ಮಾರ್ಚ್ ತಿಂಗಳಲ್ಲಿ ಜರಗಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪೂರ್ವಭಾವಿಯಾಗಿ ಕಲಿಕಾ ಸಿದ್ಧತೆಯ ವಿವಿಧ ಆಯಾಮಗಳ ಕುರಿತು ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿನ ವಿದ್ಯಾರ್ಥಿಗಳಿಗೆ ಮುಳ್ಳೇರಿಯ ಮಂಡಲ ವಿದ್ಯಾರ್ಥಿ ವಾಹಿನಿ ಮತ್ತು ಗುಂಪೆ ವಲಯದ ನೇತೃತ್ವದಲ್ಲಿ `ಪರೀಕ್ಷೆ ನಿರೀಕ್ಷೆ' ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಿವೃತ್ತ ಪ್ರಾಂಶುಪಾಲ ಯಸ್ ವಿಶ್ವೇಶ್ವರ ಭಟ್ ಉಂಡೆಮನೆ ಪರೀಕ್ಷೆಯ ತಯಾರಿಯ ಬಗ್ಗೆ ಮಕ್ಕಳಿಗೆ ಧೈರ್ಯ ತುಂಬಿದರು. ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ತರಗತಿ ನಡೆಸಿಕೊಡುತ್ತಾ ಶಿಕ್ಷಣವು ವ್ಯಕ್ತಿತ್ವ ವಿಕಾಸದ ನಿರಂತರ ಹಾದಿಯಾಗಿದೆ, ಕಲಿಕೆ ಬದುಕನ್ನು ರೂಪಿಸುತ್ತದೆ, ಗುರು ಹಿರಿಯರು, ಹೆತ್ತವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಮರ್ಪಣಾಭಾವ ತುಂಬಿರಬೇಕು ಎಂದರು. ಹತ್ತನೇ ತರಗತಿಯ ಕಲಿಕೆಯ ನಂತರ ಮುಂದಿನ ಶಿಕ್ಷಣದ ವಿವಿಧ ಸಾಧ್ಯತೆಯ ಬಗ್ಗೆಯೂ ಮಾಹಿತಿಯನ್ನು ನೀಡಿದರು. ಸುಮಾರು ಇನ್ನೂರ ನಲುವತ್ತು ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಶಾಲಾ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. ಮುಖ್ಯೋಪಾಧ್ಯಾಯ ಇ ಎಚ್ ಗೋವಿಂದ ಭಟ್ ಸ್ವಾಗತಿಸಿ, ಅಭ್ಯಾಗತರನ್ನು ಪರಿಚಯಿಸಿದರು. ಕಲ್ಲಕಟ್ಟ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ, ಮುಳ್ಳೇರಿಯ ಹವ್ಯಕ ವಲಯದ ಪ್ರದಾನ ಶ್ಯಾಮಪ್ರಸಾದ ಕುಳಮರ್ವ ಶುಭನುಡಿಗಳನ್ನಡಿದರು. ಶಿಕ್ಷಕಿ ಉಮಾದೇವಿ ನಿರೂಪಿಸಿದರು. ಶಿಲ್ಪ ವಂದಿಸಿದರು. ಇ ಕೇಶವ ಪ್ರಸಾದ್ ಕಾರ್ಯಕ್ರಮವನ್ನು ಸಂಯೋಜಿಸಿದರು. ರಾಮಕೃಷ್ಣ ಭಟ್, ಪ್ರದೀಪ, ಶಿವಪ್ರಸಾದ್ ಸಿ, ಸೂರ್ಯನಾರಾಯಣ ಭಟ್, ಪ್ರಶಾಂತ ಹೊಳ್ಳನೀರಾಳ ಹಾಗೂ ದಿನೇಶ್ ಕೆ ಸಹಕರಿಸಿದರು. ಶಾಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

ಧರ್ಮತ್ತಡ್ಕ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

ಮೇ 29 ; ಇಂದು ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆ ಧರ್ಮತ್ತಡ್ಕದಲ್ಲಿ 2024-25 ನೇ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಹೆತ್ತವರಿಗಾಗಿ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭ 2023-24ನೇ ಶೈಕ್ಷಣಿಕ ವರ್ಷದ SSLC ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ A+ ಪಡೆದ ಒಟ್ಟು 32 ವಿದ್ಯಾರ್ಥಿಗಳಿಗೆ ಹಾಗೂ 9 ವಿಷಯಗಳಲ್ಲಿ A+ ಪಡೆದ 11 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೇ ಆರ್ಥಿಕವಾಗಿ ಹಿಂದುಳಿದ,ಕನ್ನಡ ಮಾಧ್ಯಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ "ಮೇಪೋಡು ಶ್ರೀ ಸುಬ್ರಾಯ ಮಯ್ಯ" ದತ್ತಿನಿಧಿಯನ್ನು ಆಯ್ದ 2 ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕಿ ಶ್ರೀಮತಿ ಈಶ್ವರಿ.ಡಿ ವಿತರಿಸಿದರು. ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಲ್ಲಿ ಭಾಗವಹಿಸಿ ಸಂಸ್ಥೆಗೆ ಕೀರ್ತಿಯನ್ನು ತಂದ ಪ್ರತಿಭಾನ್ವಿತ ವಿದ್ಯಾರ್ಥಿ ಸುಶ್ರೀತ್ ಎಸ್ ಐಲ್ ನ್ನು ಈ ಸುಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು. 2022-23 ನೇ ಸಾಲಿನ USS ಪರೀಕ್ಷೆಯನ್ನು ತೇರ್ಗಡೆ ಹೊಂದಿದ ಎಲ್ಲಾ 8 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 2023-24 ನೇ ಸಾಲಿನ ರಾಷ್ಟ್ರೀಯ ಮಟ್ಟದ NMMS ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು Scholarship ಗೆ ಅರ್ಹತೆಯನ್ನು ಪಡೆದ ಈಶಾನ್ ಶರ್ಮ ಈತನನ್ನು ಅಭಿನಂದಿಸಲಾಯಿತು. ಇದರೊಂದಿಗೆ ಸುಮಾರು 15 ವರ್ಷಗಳ ಕಾಲ ನಮ್ಮ ಶಾಲೆಯಲ್ಲಿ ಅಡುಗೆ ಸಹಾಯಕರಾಗಿ ಕರ್ತವ್ಯವನ್ನು ನಿರ್ವಹಿಸಿ ಇದೀಗ ನಿವೃತ್ತಿಹೊಂದುತ್ತಿರುವ ಶ್ರೀ ಸುಬ್ರಹ್ಮಣ್ಯ ಭಟ್ ಇವರನ್ನು ಗೌರವಿಸಲಾಯಿತು. ಪಿ.ಟಿ.ಎ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಕುಡಾಲು ಇವರು ಸಭಾಧ್ಯಕ್ಷತೆಯನ್ನು ವಹಿಸಿದರು. ಮುಖ್ಯೋಪಾಧ್ಯಾಯ ಶ್ರೀ ಇ.ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶಾಲಾ‌‌ ಮೇನೇಜರ್ ಶಂಕರನಾರಾಯಣ ಭಟ್ ಶುಭ ಹಾರೈಸಿದರು.ಮೂಡಂಬೈಲ್ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಜೋರ್ಜ್ ಕ್ರಾಸ್ತಾ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಶುಭವನ್ನು ಕೋರಿದರು. ಪ್ರಾಂಶುಪಾಲ ಶ್ರೀ ರಾಮಚಂದ್ರ ಭಟ್,ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ, ಪಿ.ಟಿ.ಎ ಉಪಾಧ್ಯಕ್ಷ ಶ್ರೀ ವೇಣುಗೋಪಾಲ ಶೆಟ್ಟಿ‌,ಶಿಕ್ಷಕಿ ಶ್ರೀಮತಿ ಉಮಾದೇವಿ ಶುಭನುಡಿಗಳನ್ನಾಡಿದರು. ಶ್ರೀಮತಿ ಸುನಿತಾ ಸ್ವಾಗತಿಸಿ ,ಶ್ರೀ ಪ್ರದೀಪ್ ವಂದಿಸಿದರು.ಶ್ರೀ ಪ್ರಶಾಂತ್ ಹೊಳ್ಳ ಎನ್ ನಿರೂಪಿಸಿದರು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

ವಿವಿಧ ಕ್ಲಬ್ ಗಳ ಉದ್ಘಾಟನೆ 2024

ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ವಿವಿಧ ಕ್ಲಬ್ ಗಳ ಉದ್ಘಾಟನೆಯು ಜರಗಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಗೋವಿಂಧ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ಮ್ಯಾನೇಜರ್ ಶಂಕರ ನಾರಾಯಣ ಭಟ್ ಮಾತನಾಡಿ "ಕ್ಲಬ್ ಗಳು ಮಕ್ಕಳ ಸೃಜನಶೀಲತೆಯ ಅನಾವರಣಕ್ಕೆ ಪೂರಕ ವೇದಿಕೆಯಾಗಿದೆ,ವಿದ್ಯಾರ್ಥಿಗಳು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು" ಎಂದು ಶುಭವನ್ನು ಹಾರೈಸಿದರು. ಶಿಕ್ಷಕಿ ಸುನೀತಾ ಟೀಚರ್ ಶುಭನುಡಿಗಳನ್ನಾಡಿದರು. ವಿಜ್ಞಾನ ಅಧ್ಯಾಪಕರಾದ ಸೂರ್ಯನಾರಾಯಣ ಭಟ್ ವಿಜ್ಞಾನ ಪ್ರಯೋಗದ ಪ್ರಾತ್ಯಕ್ಷಿಕೆಯನ್ನು ನಡೆಸಿದರು. ಕುಮಾರಿ ವೃಷ್ಠಿ ಯಸ್ ರೈ ಸ್ವಾಗತಿಸಿ, ಕುಮಾರಿ ಮನ್ನಿಪಾಡಿ ವೈಷ್ಣವಿ ವಂದಿಸಿದರು. ಕುಮಾರಿ ಅನನ್ಯ ಭಟ್ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.


Distribution of Educational Kit

Sri Ashokan PET distributed Educational Kit with Uniforms to 3 Economically backward students and Educational Kit to 7 Economically backward students of our institution in memory of his Late Father & Mother today.May the God give more strength to him and his family to continue this socially useful work in future also.


ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2024

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಹಮ್ಮಿಕೊಳ್ಳಲಾಯಿತು. ಶ್ರೀಮತಿ ಶಾರದಾ ಎಸ್ ಭಟ್ ಕಾಡಮನೆ ,ಯೋಗದ ಮಹತ್ವವನ್ನು ತಿಳಿಸಿದರು. "ಯೋಗವು ಆರೋಗ್ಯವನ್ನು ವೃದ್ಧಿಸುತ್ತದೆ, ಯೋಗದಿಂದ ರೋಗ ದೂರ, ನಿತ್ಯಯೋಗಾಭ್ಯಾಸಿಗಳಾಗಿ ಎಂದರು". ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿ "ಜಗತ್ತಿಗೆ ಯೋಗವು ಭಾರತದ ಕೊಡುಗೆಯಾಗಿದೆ" ಎಂದರು. ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಶಶಿಕುಮಾರ್, ಶ್ರೀಮತಿ ಎನ್ ಗಂಗಮ್ಮ ಶುಭಾಶಂಸನೆಗೈದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಶಿವಪ್ರಸಾದ್ ಸಿ ಸ್ವಾಗತಿಸಿ, ಪ್ರಶಾಂತ ಹೊಳ್ಳ ಎನ್ ನಿರೂಪಿಸಿದರು, ಶಶಿಧರ ಕೆ ವಂದಿಸಿದರು. ನಂತರ ಯೋಗ ಶಿಕ್ಷಕಿ ಶ್ರೀಮತಿ ಶಾರದಾ ಕಾಡಮನೆ ಅವರು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.


ಕಾರ್ಗಿಲ್ ವಿಜಯೋತ್ಸವ

ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ. ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆಯಲ್ಲಿ ಸಮಾಜ ವಿಜ್ಞಾನ ಸಂಘದ ನೇತೃತ್ವದಲ್ಲಿ ಕಾರ್ಗಿಲ್ ವಿಜಯೋತ್ಸವ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. "ನಾವಿಂದು ನಮ್ಮ ಮನೆ ಮನಗಳಲ್ಲಿ ದೇಶ ಪ್ರೇಮ ಬೆಳೆಸಬೇಕು. ಕೇವಲ ಯೋಧರಾಗಿ ಮಾತ್ರ ದೇಶ ಸೇವೆ ಮಾಡುವುದಲ್ಲ ದೇಶದ ಪ್ರತಿಯೊಂದು ಸಂಪತ್ತನ್ನು ಉಳಿಸಿಕೊಂಡು, ಪ್ರತಿಯೊಬ್ಬ ವಿದ್ಯಾರ್ಥಿಯೂ ಯೋಧನಾಗಿ ಸೇವೆ ಮಾಡುವುದು ಕೂಡಾ ನಮ್ಮ ಹೆಮ್ಮೆ" ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ವ್ಯವಸ್ಥಾಪಕರಾದ ಶ್ರೀ ಎನ್ ಶಂಕರನಾರಾಯಣ ಭಟ್ ಅಭಿಪ್ರಾಯಪಟ್ಟರು. ಸಮಾಜ ವಿಜ್ಞಾನ ಅಧ್ಯಾಪಿಕೆ ಶ್ರೀ ಮತಿ ವಿಚೇತ ಬಿ ಕಾರ್ಗಿಲ್ ಹೋರಾಟದ ಅನಿವಾರ್ಯತೆ, ಹೋರಾಟದಲ್ಲಿ ಮಡಿದ ವೀರ ಸೈನಿಕರ ಬಲಿದಾನ, ಕೆಚ್ಚೆದೆಯ ಶೌರ್ಯದ ಬಗ್ಗೆ ತಿಳಿಸಿ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಭಾವನೆ ಮೂಡಿಸಿದರು. ಶ್ರೀ ಶಶಿಕುಮಾರ್ ಪಿ, ಶ್ರೀಮತಿ ಸುನಿತಾ ಕೆ ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸಲಾಯಿತು.ರಾಜ್ ಕುಮಾರ್, ಪ್ರದೀಪ್, ದಿನೇಶ್ ಕೆ, ಕೇಶವಪ್ರಸಾದ ಎಡಕ್ಕಾನ ಸಹಕರಿಸಿದರು. ಶಿವಪ್ರಸಾದ್ ಸಿ ಕಾರ್ಯಕ್ರಮವನ್ನು ನೇತೃತ್ವ ವಹಿಸಿದರು. ಶಶಿಧರ್ ಕೆ ಸ್ವಾಗತಿಸಿ, ಪ್ರಶಾಂತ ಹೊಳ್ಳ ಎನ್ ವಂದಿಸಿದರು.

ಒಲಿಂಪಿಕ್ ಜ್ಯೋತಿ ಬೆಳಗಿಸುವ ಕಾರ್ಯಕ್ರಮ

ಪ್ಯಾರಿಸ್ ನಲ್ಲಿ ಜರಗುವ ಒಲಿಂಪಿಕ್ಸ್ ಪಂದ್ಯಾಟದ ಅಂಗವಾಗಿ, ಶಾಲಾಮಟ್ಟದಲ್ಲಿ ಕ್ರೀಡಾ ಪ್ರತಿಜ್ಞೆ ಹಾಗೂ ವಿಶೇಷ ಅಸೆಂಬ್ಲಿಯನ್ನು ಹಮ್ಮಿಕೊಳ್ಳಲಾಯಿತು. ಶಾಲಾ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಕ್ರೀಡಾ ಜ್ಯೋತಿ ಬೆಳಗಿದರು. ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಮತ್ತು ದೈಹಿಕ ಶಿಕ್ಷಕ ಶ್ರೀ ಸಂತೋಷ್ ಕುಮಾರ್ ಒಲಿಂಪಿಕ್ಸ್ ಸ್ಪರ್ಧೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

Leap Assessment Test

Leap Assessment Test ಎಂಬುದು ಮಕ್ಕಳ ಅಭಿರುಚಿಗೆ ಅನುಸಾರವಾಗಿ ಮುಂದೆ ಅವರು ಯಾವ ಉದ್ಯೋಗದಲ್ಲಿ ಮುಂದುವರಿಯಬಹುದು,ಅದೇ ರೀತಿಯಲ್ಲಿ ಆ ಉದ್ಯೋಗವನ್ನು ಪಡೆಯಬೇಕಾದರೆ ಯಾವ ರೀತಿಯಲ್ಲಿ ಕಲಿಕೆಯಲ್ಲಿ ತೊಡಗಬೇಕು ಇತ್ಯಾದಿ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವ ಒಂದು ಟೆಸ್ಟ್ ಆಗಿದೆ. ಇದು BRC ಯ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮವಾಗಿದೆ. ಮಂಜೇಶ್ವರ ಬಿ. ಆರ್.ಸಿ ಯ 4 ಶಾಲೆ ಗಳಲ್ಲಿ 8 ನೇ ತರಗತಿಯ 100 ವಿದ್ಯಾರ್ಥಿಗಳಿಗೆ ಕಳೆದ ಅಧ್ಯಯನ ವರ್ಷದ ಮಾರ್ಚ್ ಮತ್ತು ಮೇ ತಿಂಗಳಿನಲ್ಲಿ leap assessment test ನಡೆಸಲಾಗಿತ್ತು.

ಧರ್ಮತಡ್ಕ: ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತಡ್ಕದಲ್ಲಿ ದಿನಾಂಕ 7/8/2024 ಮತ್ತು 8/8/2024ರಂದು leap assessment test ನ ಮುಂದುವರಿದ ಭಾಗವಾಗಿ ಟೆಸ್ಟ್ ನಲ್ಲಿ ಭಾಗವಹಿಸಿದ ಮಕ್ಕಳ ಹೆತ್ತವರಿಗೆ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲಾ ವ್ಯವಸ್ಥಾಪಕರಾದ ಶ್ರೀ ಎನ್ ಶಂಕರ ನಾರಾಯಣ ಭಟ್ ಅಧ್ಯಕ್ಷತೆಯನ್ನು ವಹಿಸಿ , ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.ಮುಖ್ಯೋಪಾಧ್ಯಾಯರಾದ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕರಾದ ಶ್ರೀ ಶಶಿಕುಮಾರ್ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಹೆತ್ತವರಿಗೆ leap assessment test ನ ಕುರಿತು ವಿವರವಾದ ಮಾಹಿತಿಗಳನ್ನು ನೀಡಿದರು. ಮಾತ್ರವಲ್ಲದೆ ಅದರ ಕುರಿತು ಹೆತ್ತವರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದ್ದ ಸಂಶಯಗಳನ್ನು ನಿವಾರಿಸಿದರು. ಮಂಜೇಶ್ವರ ಬಿ ಆರ್ ಸಿ ಯ ಶ್ರೀಮತಿ ವಿದ್ಯಾ ಹಾಗೂ ಶ್ರೀಮತಿ ದಿವ್ಯಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀಮತಿ ಶಿಲ್ಪಾ ಸ್ವಾಗತಿಸಿ ಶ್ರೀಮತಿ ವಿಚೇತಾ ವಂದಿಸಿದರು. ಎರಡು ದಿನಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 65ರಷ್ಟು ಹೆತ್ತವರು ಭಾಗವಹಿಸಿದರು. ಲಿಟ್ಲ್ ಕೈಟ್ಸ್ ಕ್ಲಬ್ ನ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.

ಧರ್ಮತ್ತಡ್ಕ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಶ್ರೀ ದುರ್ಗಾಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ  78 ನೇ ವರ್ಷದ  ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲರಾದ ಶ್ರೀ ರಾಮಚಂದ್ರಭಟ್ ಧ್ವಜಾರೋಹಣವನ್ನು ನೆರವೇರಿಸಿ ಶುಭಹಾರೈಸಿದರು

ಸ್ವಾತಂತ್ರ್ಯೋತ್ಸವದ ಪ್ರಯುಕ್ತವಾಗಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿರುವ ಶ್ರೀ ಶಿವಪ್ರಸಾದ್ ಶೆಟ್ಟಿ ಕುಡಾಲ್ ಇವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ Adv ಸುರೇಶ್ ಪಿ ಮಂಗಳೂರು ಇವರು ಮಾತನಾಡಿ ದೇಶದ ಅಭಿವೃದ್ದಿಯಲ್ಲಿ ವಿದ್ಯಾರ್ಥಿಗಳ ಪಾತ್ರವೆಂಬ ವಿಷಯದಲ್ಲಿ ಮಾತಾನಾಡಿ ಶಾಲಾ ದಿನದಿಂದಲೇ ಶಿಸ್ತು ಪ್ರಾಮಾಣಿಕತೆ ರಾಷ್ಟ್ರಭಕ್ತಿಯನ್ನು ಮೈಗೂಡಿಕೊಂಡು ಮುನ್ನಡೆಯಬೇಕಾದ ಅಗತ್ಯವನ್ನು ಬಹಳ ಮಾರ್ಮಿಕವಾಗಿ ಮಕ್ಕಳ ಮನೆಮುಟ್ಟುವಂತೆ ತಿಳಿಸಿದರು.  ಮುಖ್ಯೋಪಾಧ್ಯಾಯರಾದ ಶ್ರೀ ಇ.ಎಚ್ ಗೋವಿಂದ ಭಟ್  ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ವ್ಯವಸ್ಥಾಪಕ ಶ್ರೀ ಶಂಕರನಾರಾಯಣ ಭಟ್  , ಎಂ.ಪಿ.ಟಿ.ಎ ಅಧ್ಯಕ್ಷೆ  ಶ್ರೀಮತಿ ದಿವ್ಯ ಭಾರತಿ , ಸ್ಟಾಫ್ ಸೆಕ್ರೆಟರಿ ಶ್ರೀ ಶಶಿಕುಮಾರ್ ಪಿ , ಮಾತೃ ಮಂಡಳಿಯ ಉಪಾಧ್ಯಕ್ಷೆ ಶ್ರೀಮತಿ ರೈಯಾನ ಶುಭ ನುಡಿಗಳನ್ನು ಆಡಿದರು.

ಶ್ರೀಮತಿ ಸುನೀತಾ ಕೆ ಸ್ಟಾಗತಿಸಿ, ಶ್ರೀಮತಿ ವಿಚೇತ ವಂದಿಸಿದರು. ಅಧ್ಯಾಪಕ  ಶ್ರೀ ಶಿವಪ್ರಸಾದ್ ಚೆರುಗೋಳಿ ಕಾರ್ಯಕ್ರಮವನ್ನು ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಸ್ವಾತಂತ್ರ್ಯದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು‌. ಸಿಹಿತಿಂಡಿಯನ್ನು ವಿತರಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.

ಹೈಯರ್ ಸೆಕೆಂಡರಿ ವಿಭಾಗದ ಸಭಾಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ  ಶ್ರೀ N ರಾಮಚಂದ್ರಭಟ್ ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಶ್ರಾಂತ ಯೋಧರಾದ ಗೌರವಾನ್ವಿತ ಶ್ರೀ ಚೇತನ್ ರಾಮ್ ಉಪಸ್ಥಿತರಿದ್ದರು ವಿದ್ಯಾಸಂಸ್ಥೆಯ ಪ್ರಬಂಧಕರಾದ ಶ್ರೀ ಶಂಕರನಾರಾಯಣ ಭಟ್, ಶಾಲಾ ಪಿ ಟಿ ಎ ಅಧ್ಯಕ್ಷರಾದ ಶ್ರೀ ಶಿವಪ್ರಸಾದ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ವೇಣುಗೋಪಾಲ ಶೆಟ್ಟಿ ಮೊದಲಾದವರು ಶುಭ ಹಾರೈಸಿದ ಕಾರ್ಯಕ್ರಮಕ್ಕೆ ಅಧ್ಯಾಪಕರಾದ ಶ್ರೀ ಸತೀಶ್ ಕುಮಾರ್ ಶೆಟ್ಟಿ, ಸ್ವಾಗತಿಸಿ ನಾಗರಾಜ್ ವಂದಿಸಿದರು.

ವಿಧ್ಯಾರ್ಥಿಗಳ ಮತ್ತು ಯೋಧರ ನಡುವಿನ ಸಂವಾದ ಕಾರ್ಯಕ್ರಮ ಬಹಳ ಅರ್ಥ ಪೂರ್ಣವಾಗಿತ್ತು

ಶ್ರೀ ದುರ್ಗಾಪರಮೇಶ್ವರೀ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ಸಂಭ್ರಮ ಸಡಗರದ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಸಹಕರಿಸಿದ ರಕ್ಷಕರಿಗೂ ವಿದ್ಯಾಭಿಮಾನಿಗಳಿಗೂ, ತುಂಬು ಹೃದಯದ ಕೃತಜ್ಞತೆಯನ್ನು ಸಮರ್ಪಿಸಲಾಯಿತು..

ಅಧ್ಯಾಪಕ ದಿನಾಚರಣೆ

ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಅಧ್ಯಾಪಕ ದಿನಾಚರಣೆ ಆಚರಿಸಲಾಯಿತು

ವಯನಾಡಿನ ದುರಂತದಲ್ಲಿ ಮಡಿದವರಿಗೆ ಸಂತಾಪ....

ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದಲ್ಲಿ ಸಮಾಜ ವಿಜ್ಞಾನ ಕ್ಲಬ್ ನ ಆಶ್ರಯದಲ್ಲಿ ದಿನಾಂಕ 05/08/24 ನೇ ಸೋಮವಾರ ಶಾಲಾ ಅಸೆಂಬ್ಲಿಯಲ್ಲಿ ವಯನಾಡಿನ ದುರಂತ ದಲ್ಲಿ ಮಡಿದವರಿಗೆ ಸಂತಾಪವನ್ನು ಸೂಚಿಸಲಾಯಿತು.... ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಇ.ಎಚ್ ಗೋವಿಂದ ಭಟ್ ವಯನಾಡಿನ ದುರಂತ ದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.