ഉള്ളടക്കത്തിലേക്ക് പോവുക

"ജി എൽ പി എസ് മുളിഞ്ച/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
11217 (സംവാദം | സംഭാവനകൾ)
No edit summary
11217 (സംവാദം | സംഭാവനകൾ)
No edit summary
വരി 1: വരി 1:
{{PSchoolFrame/Pages}}
{{PSchoolFrame/Pages}}
'''ಏಳಿ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ಹೋರಾಡಿ ಎಂದು ವಿವೇಕಾನಂದರು ಸಾರಿದಂತೆ ಕೇರಳ ಸಾರ್ವಜನಿಕ ವಿದ್ಯಾಭ್ಯಾಸವು ಅವಿರತ ಪ್ರಯತ್ನದಿಂದ ಹಲವಾರು ಯೋಜನೆಗಳನ್ನು ಹಾಕಿ ಮಕ್ಕಳ ಕಲಿಕೆ ಎಂಬ ಗುರಿಯನ್ನು ತಲುಪಿಸಲು ಹೋರಾಟವನ್ನು ನಡೆಸಿದೆ. ಜೊತೆಗೆ ಸಾಫಲ್ಯವನ್ನು ಕಂಡುಕೊಂಡಿದೆ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ನಮ್ಮ ರಾಜ್ಯದ ವಿದ್ಯಾಭ್ಯಾಸ ನೀತಿ ಶ್ಲಾಘನೀಯ. ಹಾಗಾಗಿಯೇ ಕೇರಳ ರಾಜ್ಯ ಶಿಕ್ಷಣ ನೀತಿಯು ದೇಶದಲ್ಲಿ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡದ್ದು, ಇದು ನಮಗೆಲ್ಲಾ ಹೆಮ್ಮೆ'''. '''ಕೊರೋನಾ ಕಾಲಘಟ್ಟದಲ್ಲಿ ನಮ್ಮ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದೆ ಪ್ರತೀಮಗುವಿಗೂ ಕಲಿಕೆ ನಡೆಯಿತು.'''
'''ವಿಕ್ಟರ್ಸ್ ಚಾನೆಲ್,''' YouTube '''ಗಳ ಮೂಲಕ ಯಥೇಷ್ಟವಾಗಿ ಲಭಿಸುವಂತಾದದ್ದು, ಕೇರಳಿಯರಾದ ನಮ್ಮ ಭಾಗ್ಯ. ಪ್ರತಿ ಮಗುವಿಗೂ ತರಗತಿ ವೀಕ್ಷಿಸುವ ಸೌಕರ್ಯ ಒದಗಿಸಿತು'''.'''ಎಲ್ಲರಿಗೂ ಮೊಬೈಲ್ ಲಭ್ಯವಾಗುವಂತೆ ಖಾತರಿ ಗೊಳಿಸುವ ಜವಾಬ್ದಾರಿಯನ್ನು ಶಾಲೆಗೆ ನೀಡುವ ಮೂಲಕ ಮಹತ್ವ ಹೆಜ್ಜೆಯನ್ನಿಟ್ಟು ಪ್ರತಿಫಲವನ್ನು ಕಂಡಿತು'''. '''ಕಲಿಕಾ ಚಟುವಟಿಕೆಗಳನ್ನು ಹೊತ್ತಿರುವ worksheet, ಗೃಹ ಸಂದರ್ಶನ ಗೂಗಲ್ ಮೀಟ್ ಇತ್ಯಾದಿಗಳ ಮೂಲಕ ಕಲಿಕೆ ಸಾಗಿತು.'''
'''ಸರಕಾರದ ನಿಲುವನ್ನು ಸಾಕಾರಗೊಳಿಸುವಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ಗಣನೀಯ ಶ್ರಮ ವಹಿಸಿದೆ. ಮನೆ ಸಂದರ್ಶನದ ಮೂಲಕ worksheet ವಿತರಿಸಿ ಗೂಗಲ್ ಮೀಟ್ ಆಯೋಜಿಸಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಪ್ರಯತ್ನ ನಡೆಯಿತು ಆದರೆ ಮಕ್ಕಳಲ್ಲಿ ಕಲಿಕಾ ಅಂತರ ಸಹಜ. ಅದು ನಮ್ಮಲ್ಲಿಯೂ ಇತ್ತು. ಅದನ್ನು ಮನಗಂಡು ಶಾಲಾ ರಕ್ಷಕ-ಶಿಕ್ಷಕ ಸಂಘದವರು ನೇತೃತ್ವದಲ್ಲಿ ಸಭೆ ನಡೆಸಿ ಮನನ ಮಾಡಿಸಲಾಯಿತು.'''
'''ಶಾಲಾ ಪುನರಾರಂಭದ ಪೂರ್ವದಲ್ಲಿ ಮುಳಿಂಜ  ಶಾಲೆಯಲ್ಲಿ  ಶಾಲಾ ಶಿಕ್ಷಕ ಹಾಗೂ ರಕ್ಷಕರು ನಡೆಸಿದ Painting... cleaning... cutting'''
'''ಶಾಲಾ ಪುನರಾರಂಭದ ಪೂರ್ವದಲ್ಲಿ ಮುಳಿಂಜ  ಶಾಲೆಯಲ್ಲಿ  ಶಾಲಾ ಶಿಕ್ಷಕ ಹಾಗೂ ರಕ್ಷಕರು ನಡೆಸಿದ Painting... cleaning... cutting'''
[[പ്രമാണം:Paint1.jpg|ലഘുചിത്രം|355x355ബിന്ദു|പകരം=|ഇടത്ത്‌]]
[[പ്രമാണം:Paint1.jpg|ലഘുചിത്രം|355x355ബിന്ദു|പകരം=|ഇടത്ത്‌]]
വരി 326: വരി 335:


paper new----add  
paper new----add  
[[പ്രമാണം:1121f4d.jpg|നടുവിൽ|ലഘുചിത്രം|450x450ബിന്ദു]]'''ಕೈಟ್ ಮಾಸ್ಟರ್ ಟ್ರೈನರ್ ರಾದಂತಹ  ಅಬ್ದುಲ್ ಜಮಾಲ್  ಮಾಸ್ಟರ್  ಮುಳಿಂಜ ಶಾಲೆಗೆ  ಭೇಟಿ  ನೀಡಿದರು''' [[പ്രമാണം:A11217.jpeg|നടുവിൽ|ലഘുചിത്രം|502x502ബിന്ദു]]mash duty ........
[[പ്രമാണം:1121f4d.jpg|നടുവിൽ|ലഘുചിത്രം|450x450ബിന്ദു]]'''ಕೈಟ್ ಮಾಸ್ಟರ್ ಟ್ರೈನರ್ ರಾದಂತಹ  ಅಬ್ದುಲ್ ಜಮಾಲ್  ಮಾಸ್ಟರ್  ಮುಳಿಂಜ ಶಾಲೆಗೆ  ಭೇಟಿ  ನೀಡಿದರು''' [[പ്രമാണം:A11217.jpeg|നടുവിൽ|ലഘുചിത്രം|502x502ബിന്ദു]]
 
 
 
 


photo and text
photo and text

11:37, 15 മാർച്ച് 2022-നു നിലവിലുണ്ടായിരുന്ന രൂപം

സ്കൂൾസൗകര്യങ്ങൾപ്രവർത്തനങ്ങൾക്ലബ്ബുകൾചരിത്രംഅംഗീകാരം

ಏಳಿ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ಹೋರಾಡಿ ಎಂದು ವಿವೇಕಾನಂದರು ಸಾರಿದಂತೆ ಕೇರಳ ಸಾರ್ವಜನಿಕ ವಿದ್ಯಾಭ್ಯಾಸವು ಅವಿರತ ಪ್ರಯತ್ನದಿಂದ ಹಲವಾರು ಯೋಜನೆಗಳನ್ನು ಹಾಕಿ ಮಕ್ಕಳ ಕಲಿಕೆ ಎಂಬ ಗುರಿಯನ್ನು ತಲುಪಿಸಲು ಹೋರಾಟವನ್ನು ನಡೆಸಿದೆ. ಜೊತೆಗೆ ಸಾಫಲ್ಯವನ್ನು ಕಂಡುಕೊಂಡಿದೆ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ನಮ್ಮ ರಾಜ್ಯದ ವಿದ್ಯಾಭ್ಯಾಸ ನೀತಿ ಶ್ಲಾಘನೀಯ. ಹಾಗಾಗಿಯೇ ಕೇರಳ ರಾಜ್ಯ ಶಿಕ್ಷಣ ನೀತಿಯು ದೇಶದಲ್ಲಿ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡದ್ದು, ಇದು ನಮಗೆಲ್ಲಾ ಹೆಮ್ಮೆ. ಕೊರೋನಾ ಕಾಲಘಟ್ಟದಲ್ಲಿ ನಮ್ಮ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದೆ ಪ್ರತೀಮಗುವಿಗೂ ಕಲಿಕೆ ನಡೆಯಿತು.

ವಿಕ್ಟರ್ಸ್ ಚಾನೆಲ್, YouTube ಗಳ ಮೂಲಕ ಯಥೇಷ್ಟವಾಗಿ ಲಭಿಸುವಂತಾದದ್ದು, ಕೇರಳಿಯರಾದ ನಮ್ಮ ಭಾಗ್ಯ. ಪ್ರತಿ ಮಗುವಿಗೂ ತರಗತಿ ವೀಕ್ಷಿಸುವ ಸೌಕರ್ಯ ಒದಗಿಸಿತು.ಎಲ್ಲರಿಗೂ ಮೊಬೈಲ್ ಲಭ್ಯವಾಗುವಂತೆ ಖಾತರಿ ಗೊಳಿಸುವ ಜವಾಬ್ದಾರಿಯನ್ನು ಶಾಲೆಗೆ ನೀಡುವ ಮೂಲಕ ಮಹತ್ವ ಹೆಜ್ಜೆಯನ್ನಿಟ್ಟು ಪ್ರತಿಫಲವನ್ನು ಕಂಡಿತು. ಕಲಿಕಾ ಚಟುವಟಿಕೆಗಳನ್ನು ಹೊತ್ತಿರುವ worksheet, ಗೃಹ ಸಂದರ್ಶನ ಗೂಗಲ್ ಮೀಟ್ ಇತ್ಯಾದಿಗಳ ಮೂಲಕ ಕಲಿಕೆ ಸಾಗಿತು.

ಸರಕಾರದ ನಿಲುವನ್ನು ಸಾಕಾರಗೊಳಿಸುವಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ಗಣನೀಯ ಶ್ರಮ ವಹಿಸಿದೆ. ಮನೆ ಸಂದರ್ಶನದ ಮೂಲಕ worksheet ವಿತರಿಸಿ ಗೂಗಲ್ ಮೀಟ್ ಆಯೋಜಿಸಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಪ್ರಯತ್ನ ನಡೆಯಿತು ಆದರೆ ಮಕ್ಕಳಲ್ಲಿ ಕಲಿಕಾ ಅಂತರ ಸಹಜ. ಅದು ನಮ್ಮಲ್ಲಿಯೂ ಇತ್ತು. ಅದನ್ನು ಮನಗಂಡು ಶಾಲಾ ರಕ್ಷಕ-ಶಿಕ್ಷಕ ಸಂಘದವರು ನೇತೃತ್ವದಲ್ಲಿ ಸಭೆ ನಡೆಸಿ ಮನನ ಮಾಡಿಸಲಾಯಿತು.



ಶಾಲಾ ಪುನರಾರಂಭದ ಪೂರ್ವದಲ್ಲಿ ಮುಳಿಂಜ ಶಾಲೆಯಲ್ಲಿ ಶಾಲಾ ಶಿಕ್ಷಕ ಹಾಗೂ ರಕ್ಷಕರು ನಡೆಸಿದ Painting... cleaning... cutting


ದಿನಾಂಕ 28-10-2021ರಂದು ಜಿ. ಎಲ್. ಪಿ. ಎಸ್ ಮುಳಿಂಜ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಯಾಗಿ ಚಿತ್ರಾವತಿ ಯಂ ಅಧಿಕಾರ ಸ್ವೀಕರಿಸಿದರು


ಸಂದಿಗ್ದ ಪರಿಸ್ಥಿತಿಯಲ್ಲಿ ಸಹಕರಿಸಿದ ಕೊಕ್ಕೆಚಾಲ್ ವಾಫಿ ಕಾಲೇಜಿನ ವಿದ್ಯಾರ್ಥಿಗಳಿಗೆ ನನ್ನ ನಮನಗಳು . ಮುಳಿಂಜ ಶಾಲೆಗೆ ನೂತನ ಮುಖ್ಯ ಶಿಕ್ಷಕಿಯಾಗಿ ಬಡ್ತಿ ಗೊಂಡ ಎರಡನೇ ದಿನದಲ್ಲಿ ಶಾಲೆ ಆರಂಭ. ಶಾಲಾ ಪರಿಸರ ಶುಚಿಗೊಳಿಸುವುದು ತಲೆನೋವಾಗಿ ಪರಿಣಾಮಿಸಿದಾಗ.. ಧಿಡೀರ್ ಸಂಜೆ ಮೂರು ಗಂಟೆಯ ನಂತರ ಬಂದು ಸಹಕರಿಸಿದ ಇವರು Compulsory Social Service ನ ಭಾಗವಾಗಿ ಸೇವೆಸಲ್ಲಿಸಿದರು. ಹೃದಯಂತರಾಳಾದ ಧನ್ಯವಾದಗಳು.

ಸಂದಿಗ್ದ ಪರಿಸ್ಥಿತಿಯಲ್ಲಿ ಸಹಕರಿಸಿದ ಕೊಕ್ಕೆಚಾಲ್ ವಾಫಿ ಕಾಲೇಜಿನ ವಿದ್ಯಾರ್ಥಿಗಳಿಗೆ ನನ್ನ ನಮನಗಳು .

ಮಂಗಲ್ಪಾಡಿ ಪಂಚಾಯತ್ ನ white guard ತಂಡವು ಕೊರೊನಾ ಮುಂಜಾಗ್ರತಾ ಕ್ರಮದ ಭಾಗವಾಗಿ ಮುಳಿಂಜ ಶಾಲೆಯನ್ನು ಅಣುಮುಕ್ತಗೊಳಿಸುವ ಕಾರ್ಯದಲ್ಲಿ ಕೈಜೋಡಿಸಿದರು.


YOUTUBE LINK:: https://youtu.be/m-35ZLODBFg

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾ ಸಂಸ್ಠೆಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವಮತ್ತು ಸಹೋದರತ್ವದ ಆಶಯ ತಿಳಿಸುವ ಉದ್ದೇಶದಿಂದ ನಡೆದ ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿನ ಉಪ್ಪಳ ಟೌನ್ ಸದಸ್ಯರಾದ ಶರೀಫ್ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಅಧ್ಯಕ್ಷತೆ ವಹಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ, ಬಿ.ರ್.ಸಿ. ತರಬೇತುದಾರ ಜೋಯ್, ಶಾಲಾ ಹಿರಿಯ ಶಿಕ್ಷಕಿ ಪುಷ್ಪಲತ ಮೊದಲಾದವರು ಶುಭ ಹಾರೈಸಿದರು. ಶಾಲಾ ಶಿಕ್ಷಕ ರಿಯಾಸ್ ಸ್ವಾಗತಿಸಿ ಅಬ್ದುಲ್ ಬಶೀರ್ ವಂದಿಸಿದರು.

YOUTUBE LINK::https://youtu.be/w1sr5r_31OY

ನವೆಂಬರ್ 14 ಶಿಶು ದಿನದ ಅಂಗವಾಗಿ ಮುಳಿಂಜ ಶಾಲೆಯಲ್ಲಿ ರಸ ಪ್ರಶ್ನೆ, ಚಿತ್ರ ರಚನೆ ಸ್ಪರ್ದೆ ಹಾಗೂ ನೆಹರು ಟೊಪ್ಪಿತಯಾರಿ ಕಾರ್ಯ ಗಾರ ನಡೆಲಾಯಿತು. ನಂತರ ಮಕ್ಕಳಿಗೆ ಬಾಲಸಭೆ ನದೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು

ರಹ್ಮತ್  ಟೀಚರ್ ರವರ  ನೇತೃತ್ವದಲ್ಲಿ ಜವಾಹರಲಾಲ್ ನೆಹರೂ ರವರ  ಟೊಪ್ಪಿ  ತಯಾರಿಸುವಿಕೆ

YOUTUBE LINK: https://youtu.be/tv2KHTJHUwg

ಮುಳಿಂಜ ಶಾಲೆಯಲ್ಲಿ “ನವಚೇತನಾ" ಕಾರ್ಯಕ್ರಮ::-ಕೊರೊನಾ ಕಾಲಘಟ್ಟದಿಂದಾಗಿ ಶಾಲಾ ವಿದ್ಯಾರ್ಥಿಗಳಲ್ಲಿ ಮೂಡಿರಬಹುದಾದ ಜಡತ್ವ, ಶಾರೀರಿಕ ಹಾಗೂ ಮಾನಸಿಕ ಬದಲಾವಣೆ, ಆಹಾರಾಭ್ಯಾಸ, ಅಶಿಸ್ತು ತೊಡೆದು ನವೋಲ್ಲಾಸದಿಂದ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ “ನವಚೇತನಾ” ಕಾರ್ಯಕ್ರಮವು ಇತ್ತೀಚೆಗೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಿಂಜದಲ್ಲಿ ಫಲಪ್ರದವಾಗಿ ಸಂಪನ್ನ ಗೊಂಡಿತು. ಶಾಲಾ ಶಿಕ್ಷಕವೃಂದ ತರಗತಿ ನಡೆಸಿಕೊಟ್ಟರು.

YOUTUBE LINK  ::

https://www.youtube.com/watch?v=StoLs6Pfxr8&list=PLCrkCUTvTdgVPWcBM_u-cZHFSzNnk1r53&index=2

ಇಂದು ಡಿಸೆಂಬರ್ 3 ವಿಶ್ವ ವಿಕಲಾಂಗ ದಿನ. ಇದರ ಅಂಗವಾಗಿ ಮಂಜೇಶ್ವರ ಬಿ.ಆರ್.ಸಿ ಮಟ್ಟದ "ಮಗುವಿನೊಂದಿಗೆ ಒಂದು ದಿನ " ಈ ಕಾರ್ಯಕ್ರಮವು ನಮ್ಮ ಮುಳಿಂಜ ಶಾಲೆಯ ವಿಶೇಷ ಸಾಮರ್ಥ್ಯದ ಮಗು ಅಲಿಯಾ ನಾಸ್ ಳ ಮನೆಯಲ್ಲಿ ಜರಗಿತು.ಮಂಗಲ್ಪಾಡಿ ಪಂಚಾಯತು ಅಧ್ಯಕ್ಷೆ ಖದೀಜತ್ ರಿಸಾನ ವಿದ್ಯಾಭ್ಯಾಸ ಹಾಗೂ ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಪನಾ ವಾರ್ಡ್ ಸದಸ್ಯ ಶರೀಫ್ ಶಾಲಾ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಹಿರಿಯ ಶಿಕ್ಷಕಿ ಪುಷ್ಪಲತಾ ಮತ್ತು ಮಂಜೇಶ್ವರ ಬಿ.ಆರ್.ಸಿ ಯ ಪ್ರೋಜೆಕ್ಟ್ ಕೋರ್ಡಿನೇಟರ್ ವಿಜಯ ಕುಮಾರ್, ವಿಶೇಷ ಮಕ್ಕಳ ಶಿಕ್ಷಕಿಯರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಮುಂದುವರಿದ ಕಾರ್ಯಕ್ರಮ -- ಮಗುವಿನೊಂದಿಗೆ ಒಂದು ದಿನ........ನಮ್ಮೀ ಶಾಲೆಯಲ್ಲಿ ಕಲಿಯುತ್ತಿರುವ 'ವಿಕಲ ಚೇತನ ಮಕ್ಕಳ ' ಮನೆ ಸಂದರ್ಶನ ಗೈದು ಅವರನ್ನು ಅವರ ಕುಟುಂಬವನ್ನು ಮಾನಸಿಕವಾಗಿ ದೈಹಿಕವಾಗಿ ಸುಭದ್ರಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಿದವು. ಆವರನ್ನು ಸಾಂತ್ವನ ನೀಡಿ ಬಲಿಷ್ಠರನ್ನಾಗಿ ಮಾಡುವಲ್ಲಿ ನಮ್ಮ ಶಾಲೆಯ ಒಂದು ಕಿಂಚಿತ್ತು ಸೇವೆ ಎನ್ನುವ ದೃಷ್ಟಿಕೋನವನ್ನು ಇಟ್ಟುಕೊಂಡು ಬೇಟಿ ನೀಡಿ ವಸ್ಸು ರೂಪದಲ್ಲೋ ನಗದು ರೂಪದಲ್ಲೋ ಕೈಲಾದ ಸಹಾಯ ನೀಡುವುದೆಂದು ತೀರ್ಮಾನಿಸಿದೆವು. ಆ ಪ್ರಯುಕ್ತ ನಮ್ಮೀ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಏಳು ಮಕ್ಕಳಲ್ಲಿ ಐದು ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದೆವು.


ನಮ್ಮ ಸರಕಾರಿ ಕಿರಿಯಪ್ರಾಥಮಿಕ ಶಾಲೆ ಮುಳಿಂಜ ವಿದ್ಯಾಸಂಸ್ಥೆಯ ನವೀಕೃತ ಯೂಟ್ಯೂಬ್ ಚಾನಲ್ ಅನ್ನು ಇತ್ತೀಚೆಗೆ ಮಂಗಲ್ಪಾಡಿ ಪಂಚಾಯತ್ ನ ಉಪ್ಪಳ ಟೌನ್ ವಾರ್ಡ್ ಸದಸ್ಯ....ಶರೀಫ್. ಟಿ. ಯಂ ಉದ್ಘಾಟಿಸಿದರು .ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಾದ ನಾರಾಯಣ ದೇಲಂಪಾಡಿ, ಬಿ ರ್ ಸಿ ಯ ಬಿ. ಪಿ. ಸಿ. ವಿಜಯಕುಮಾರ್ ಪಾವಳ, ಶಿಕ್ಷಕ- ರಕ್ಷಕ ಸಂಘ ದ ಅಧ್ಯಕ್ಷರಾದ ಇಬ್ರಾಹಿಂ, ದಿನೇಶ್ ಮುಳಿಂಜ ಉಪಸ್ಥಿತರಿದ್ದರು.ನಮ್ಮದೊಂದು ಸಣ್ಣ ಪ್ರಯತ್ನ,, ನಿಮ್ಮ ಸಲಹೆ ಸಹಕಾರ ಸದಾ ನಮಗಿರಲಿ.

YOUTUBE LINK:: https://youtu.be/LS5ZCTKpNJk



ಇತ್ತೀಚೆಗೆ ನಡೆದ ಶಾಲಾ ತರಗತಿ ಪಿ,ಟಿ. ಎ. ಸಬೆಯಲ್ಲಿ " ಹೆಣ್ಣು ಮಕ್ಕಳ ಲೈಂಗಿಕ ಶೋಷಣೆ " ಬಗೆಗಿನ ಕೋಮಲ್ ವಿಡಿಯೋ ಪ್ರದರ್ಶಿಸಲಾಯಿತು.


ತರಗತಿ ಗ್ರಂಥಾಲಯವನ್ನು ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಉದ್ಘಾಟಿಸಿದ ಸಂದರ್ಭ.....


ನಮ್ಮ ಶಾಲೆಯಲ್ಲಿ 73 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಂಗಲ್ಪಾಡಿ ಪಂಚಾಯತ್ ನ ಉಪ್ಪಳ ಟೌನ್ ನ ಗ್ರಾಮ ಸದಸ್ಯರಾದ ಶರೀಪ್ ಟಿ.ಮ್ ಧ್ವಜಾರೋಹಣ ಗೈದರು. ಶಾಲಾ ಶಿಕ್ಷಕಿ ರೆಹಮತ್ ಗಣರಾಜ್ಯ ದಿನದ ಮಹತ್ವ ತಿಳಿಸಿದರು.ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿ ಹಿರಿಯ ಶಿಕ್ಷಕಿ ಪುಷ್ಪ ಲತ ಸೋಂಕಲ್ಲು ವಂದಿಸಿದರು.


ಬಾಲಸಭೆ  :: ಮಕ್ಕಳ ಪ್ರತಿಭೆಯನ್ನು ಹೊರತರುದರ ಜೊತೆಗೆ ವೇದಿಕೆಯ ಭಯವನ್ನು ಹೋಗಲಾಡಿಸಿ ನಿರ್ಭೀತಿಯಿಂದ ತಮ್ಮ ಕಲೆಯನ್ನು ಹೊರಹಾಕಲಿರುವ ಸೂಕ್ತ ವೇದಿಕೆಯೇ ಬಾಲಸಭೆ . ನಮ್ಮ ಶಾಲೆಯಲ್ಲಿ ಪ್ರತಿ ತಿಂಗಳಿಗೊಮ್ಮೆ  ನಡೆಸಲ್ಪಡುವ ಬಾಲಸಭೆ ಬಹಳ ಉತ್ತಮವಾಗಿ ನಡೆಸಲಾಗುತ್ತಿದೆ .ಮಕ್ಕಳಲ್ಲಿ ಕಲಿಕೆಗೆ ಉತ್ತೇಜನ ನೀಡಲು ನಮ್ಮೀ ಶಾಲೆಯಲ್ಲಿ ಪ್ರತಿವಾರ ವಿವಿಧ  ಚಟುವಟಿಕೆಗಳನ್ನು ನೀಡಿ ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ . ಅವುಗಳು .. ೧.ರಸಪ್ರಶ್ನೆ   ೨.ಒಗಟು ಸ್ಪರ್ಧೆ  ೩. ವಿನೋದ ಗಣಿತ  ೪. ಹಲೋ ಇಂಗ್ಲೀಷ್  ೫. ಅರೆಬಿಕ್ ಕಲಿಯೋಣ ವಾರದ ಮೊದಲ  ದಿನವಾದ  ಸೋಮವಾರ  ಚಟುವಟಿಕೆ ನಡೆಸಿ  ಸಂಬಂಧಪಟ್ಟ ಪ್ರಶ್ನೆಗಳನ್ನು ನೀಡುವುದು . ತದನಂತರ ಶ್ರುಕ್ರವಾರ ವಿಜೇತರಾದವರಿಗೆ ವಿಶೇಷ ಬಹುಮಾನ ನೀಡುವುದು . ಅಂದರೆ .

  • MONDAY  ರಸಪ್ರಶ್ನೆ  ,
  • TUESDAY  ಒಗಟು ಸ್ಪರ್ಧೆ
  • WEDNESDAY   ವಿನೋದ ಗಣಿತ
  • THURSDAY  ಹಲೋ ಇಂಗ್ಲೀಷ್
  • FRIDAY    ಅರೆಬಿಕ್ ಕಲಿಯೋಣ

ಹೊಸ  ದಾಖಲಾತಿಗೆ  ಬೇಕಾಗಿ  ಮುಳಿಂಜ  ಶಾಲೆಯ  ಅಧ್ಯಾಪಕರು  ಮನೆ  ಮನೆಗೆ  ಭೇಟಿ

ICT ತರಗತಿ

ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಕಂಪ್ಯೂಟರ್ ಕಲಿಕೆ ಅಗತ್ಯವು ಅನಿವಾರ್ಯವೂ ಹೌದು,ಈ ಕಂಪ್ಯೂಟರ್ ನಲ್ಲಿ ಸಾಕ್ಷರರನ್ನಾಗಿ ಮಾಡಿಸಲು ಪಾಠ ಪುಸ್ತಕದ ಹೊರತಾಗಿ ಬಿಡುವಿನ ವೇಳೆಯಲ್ಲಿ ವಿಶೇಷ ತರಗತಿನಡೆಸುವುದು, ಅದಕ್ಕೆ ಸಮಯ ನಿಗದಿಪಡಿಸಲಾಗಿದೆ. ಸಣ್ಣ ಪುಟ್ಟ ಆಕರ್ಷಕ ಚಟುವಟಿಕೆಗಳನ್ನು ನೀಡುವುದು. ಸ್ಪರ್ಧೆ ನಡೆಸಿ ಬಹುಮಾನ ನೀಡುವುದು.

ಕಂಪ್ಯೂಟರ್ ತರಗತಿ

Monday 2 std

Tuesday 3 std

Wednesday 4 std

Thursday 3 std

Friday 1 std


ರಾಷ್ತ್ರೀಯ ವಿಜ್ಙಾನ ದಿನ

photo

link

text



ಮರಳಿ ಮೈದಾನಕ್ಕೆ


ಸುದೀರ್ಘ ಕಾಲದ ಬಳಿಕ ಮರಳಿ ಶಾಲೆಗೆ ಎನ್ನುವ ಘೋಷಣಾವಾಕ್ಯ ದೊಂದಿಗೆ ಕೇರಳ ರಾಜ್ಯಾದ್ಯಂತ ಶಾಲೆಗಳು ಆರಂಭಗೊಂಡಿತ್ತು ಆದರೆ ಮಕ್ಕಳಿಗೆ ಬೇಸರ. ಎಲ್ಲ ಮಕ್ಕಳಿಗೆ ಎಲ್ಲಾ ದಿವಸ ಶಾಲೆಗಳಿಲ್ಲ ಆಪ್ತರನ್ನು ಕಾಣುವ ಕೂಡಿಯಾಡುವ ಹಂಬಲ. ಎಲ್ಲರ ಒಡನಾಟ ಕಾಗಿ ಮನಸ್ಸು ಹಪಹಪಿಸುತ್ತಿದೆ..ಆದರೆ ಶಾಲೆಗಳು ಕಾರ್ಯವಹಿಸುದು ಮಧ್ಯಾಹ್ನದವರೆಗೆ ಎಂಬುದು ದುಃಖ ದ ವಿಷಯವಾಗಿತ್ತು. ಇದೀಗ ಮಕ್ಕಳಿಗೆ ಸಿಹಿ ವಿಷಯ. ಜನವರಿ 21 ರಿಂದ ಮತ್ತೆ ಯಥಾಪ್ರಕಾರ ಶಾಲೆ ಕೆಲಸಕಾರ್ಯಗಳಲ್ಲಿ ಚಟುವಟಿಕೆಗಳು ನಡೆಯಲಿದೆ.ಆಟವೆಂದರೆ ಮಕ್ಕಳಿಗೆ ಪಂಚ ಪ್ರಾಣ.ಇದೂ ಕಲಿಕೆಯ ಭಾಗ. ಸರಳ ವ್ಯಾಯಾಮ  ಆಟಗಳು ಉತ್ತಮ ಆರೋಗ್ಯದ ಭಾಗವಾಗಿದೆ.ಮಕ್ಕಳು ಆಟ ಆಡಬೇಕು ಪಾಠ ಕಲಿಯಬೇಕು. ಆರೋಗ್ಯವನ್ನು ಆರ್ಜಿಸಬೇಕು.  ಏನೆ ಆಗಲಿ ಮಕ್ಕಳೆಲ್ಲ ಮರಳಿ ಬರುವಂತಾಯಿತು,

  ಶಿಕ್ಷಕರ ಮುತುವರ್ಜಿಯಲ್ಲಿ  ಮಕ್ಕಳಿಂದ ಸರಳ ವ್ಯಾಯಾಮ ಸಡೆಸಿ ವಿವಿಧ ಆಟಗಳನ್ನು ಆಡಿಸಲಾಯಿತು.

photo

ಲಿಂಕ್-----games


ನಾವು ಬದುಕುವ ನಮ್ಮವರನ್ನೆಲ್ಲ ಬದುಕಿಸುವ---------

copy from hirime..


ನವಚೆತನಾ ....

ಈಗಾಗಲೇ ನಮ್ಮ ಶಾಲೆಯ 2021- 22ನೇ ಶೈಕ್ಷಣಿಕ ವರ್ಷದ ಹಿರಿಮೆ ಎನಿಸಿಕೊಂಡ ಚಟುವಟಿಕೆಯನ್ನು ನಿಮ್ಮೊಂದಿಗೆ ಹಂಚಿದ್ದೇವೆ. ಆದರೆ ಮುಂಬರುವ ವರ್ಷಗಳಲ್ಲಿ ಅಂದರೆ ಪಂಚವಾರ್ಷಿಕ ಯೋಜನೆಯಾಗಿ ನಮ್ಮ ಶಾಲೆಯ ಒಂದು ನೂತನ ಯೋಜನೆಯನ್ನು ಆರಿಸಿಕೊಂಡಿದ್ದೇವೆ. ಅದೊಂದು ಪಂಚವಾರ್ಷಿಕ ಯೋಜನೆಯಾಗಿದೆ. ಅದೇನೆಂದರೆ  “ನವಚೇತನ.” ಕಾರ್ಯಕ್ರಮ. ಹೆಸರೇ ಸೂಚಿಸಿದಂತೆ ಚೇತೋಹಾರಿಯಾಗಿ ನವೋಲ್ಲಾಸದಿಂದ ಮಗು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಯೋಜನೆ ಆಗಿದೆ. ನಮ್ಮೀ ನವಚೇತನ ಕಾರ್ಯಕ್ರಮ ಬದುಕಿಗಾಗಿ ಹೋರಾಟ ನಡೆಸುವ ಮಕ್ಕಳಿಗಾಗಿ ರೂಪಿಸಿದ ಚಟುವಟಿಕೆ. ಮಕ್ಕಳು ಚೇತೋಹಾರಿಯಾಗಿ ನಗುನಗುತ್ತಾ ಉಲ್ಲಾಸದಿಂದ ಇದ್ದರೆ ಮನೆಗೂ ಚಂದ, ಸಮಾಜಕ್ಕೂ ಅಂದ. ಮಗುವಿನಲ್ಲಿ ನಗು ಬರಬೇಕಾದರೆ ಖುಷಿ ತರಬೇಕಾದರೆ ,ಮಗುವನ್ನು ಪುಳಕಿತಗೊಳಿಸಬೇಕಾದರೆ ಮನಸ್ಸಿಗೆ ಮುದನೀಡುವ ಆಶ್ವಾಸ ಕೊಡುವ  ವಾತಾವರಣ  ಸೃಷ್ಟಿಆಗಬೇಕು. ಮಗುವಿಗೂ ಮನೆಗೂ ಭರವಸೆ ನೀಡುವ ಸುದೃಢ ಜೀವನ ನಡೆಸುವ ಧೈರ್ಯ ತುಂಬಬೇಕು.  ತಾನು ಒಂಟಿಯಲ್ಲ ನನಗೆ ಸಮಾಜವಿದೆ. ನನ್ನನ್ನು ಪ್ರೀತಿಸುವವರು ಇದ್ದಾರೆ,  ನನಗೂ ಸ್ಥಾನಮಾನವಿದೆ ಎಂಬ ಭಾವನೆಯನ್ನು ತುಂಬಿಸಬೇಕು.

   

       ನವಚೇತನ ಕಾರ್ಯಕ್ರಮದ ಚೌಕಟ್ಟಿನಲ್ಲಿ ಬರುವ ಮಕ್ಕಳು,

1      ಕಡುಬಡತನದ ಮಕ್ಕಳು

2       ಅಪಘಾತಕ್ಕೆ ಸಿಲುಕಿ ಕಷ್ಟಪಡುವ ಮಕ್ಕಳು

3      ಹೆತ್ತವರನ್ನು ಕಳೆದುಕೊಂಡ ಮಕ್ಕಳು

4       ವಿಶೇಷ ಸಾಮರ್ಥ್ಯದ ಮಕ್ಕಳು ಇತ್ಯಾದಿ

ಉದ್ದೇಶಿಸಿದ ಚಟುವಟಿಕೆಗಳು

1. ಗೃಹ ಸಂದರ್ಶನ

2 ಕೈಲಾಗದವರಿಗೆ ಸಹಾಯ ನೀಡುವುದು

3 ಮನೆಯಲ್ಲೊಂದು ಸಾಂಸ್ಕೃತಿಕ ಕಾರ್ಯಕ್ರಮ

4  Corner PTA


       ಪ್ರಕ್ರಿಯೆ

1.    SMC ಯಲ್ಲಿ ನವಚೇತನ ಕಾರ್ಯಕ್ರಮದ ಉದ್ದೇಶವನ್ನು ತಿಳಿಸುವುದು.

2.     ಮಗುವಿನ ಜೀವನವನ್ನು ಬೆಳಕಾಗಿಸಲು ನಮ್ಮ ಶಾಲಾ ಹಳೆ ವಿದ್ಯಾರ್ಥಿಗಳನ್ನು ಒಳಗೊಂಡ ಶಾಲಾ ನಿರ್ವಾಹಕ ಸಮಿತಿ, ಶಾಲಾ ಬೆಂಬಲಿತ ಸಮಿತಿಯನ್ನೊಳಗೊಂಡ ಸಂರಕ್ಷಣಾ ಯಜ್ಞದ ಮಹಾಕೂಟ  -  ಒಟ್ಟಾಗಿ ಕೈಜೋಡಿಸುವುದು

3.    ಕೊಡುಗೈ ದಾನಿಗಳಿಂದ ನಗದು ರೂಪದಿಂದಲೂ  ವಸ್ತು ರೂಪದಿಂದಲೂ ಮಕ್ಕಳ ಮನೆಗೆ ಸಹಾಯ ನೀಡುವುದು.

4.    Smc, SSG, ಹಳೆ ವಿದ್ಯಾರ್ಥಿ ಸಂಘಟನೆಗಳ ಮೂಲಕ ಹಣ ಸಂಗ್ರಹಿಸುವುದು

5.    ಗೃಹ ಸಂದರ್ಶನ ನಡೆಸುವುದು. ಸಾಂತ್ವನ ನೀಡುವುದು.

6.    ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಜೀವನದ ಜಿಗುಪ್ಸೆಯನ್ನು ಹೋಗಲಾಡಿಸಿ ನೈತಿಕ ಬೆಂಬಲ ನೀಡುವ ಸಲುವಾಗಿ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು

7.     ಅಲ್ಲದೆ ಅಂತಹ ಪ್ರದೇಶಗಳಲ್ಲಿ Corner PTA ನಡೆಸುವುದು.

8.     

Photo corner pta 3

Vedio link

ಅಲ್ಲಿನ ಅಸುಪಾಸಿನ ಮನೆಯವರು ಭಾಗಿಯಾಗುವುದು. ಅಲ್ಲಿ ಪ್ರಾದೇಶಿಕ ಗ್ರಾಮ     ಪಂಚಾಯತು ಸದಸ್ಯರು ಹಾಗೂ SMC ಪ್ರತಿನಿಧಿಗಳನ್ನು ಒಳಗೊಂಡು ಕಾರ್ನರ್ ಪಿಟಿಎ ನಡೆಸುವುದು. ಈ ಮೂಲಕ ಮುಳಿಂಜ ಶಾಲೆಯ ಹಿರಿಮೆಯನ್ನು ತಿಳಿಸುವುದು ದಾಖಲಾತಿಯನ್ನು ಹೆಚ್ಚಿಸುವುದರ ಜೊತೆಗೆ ಮನೆಯವರಿಗೂ ಅಂಗೀಕಾರ ಲಭಿಸುತ್ತದೆ


ಒಟ್ಟಿನಲ್ಲಿ ಮಗುವನ್ನು ಕಲಿಕಾ ವಾಹಿನಿಯಲ್ಲಿ ತರುವುದು ಜೊತೆಗೆ ಸಾಮಾಜಿಕವಾಗಿ ಮಾನಸಿಕವಾಗಿ ದೃಡತೆಯನ್ನು ಕಲ್ಪಿಸಿಕೊಡುವುದು ತನ್ಮೂಲಕ ಶಾಲೆಯ ಹಿರಿಮೆಯನ್ನು ತಿಳಿಸುವುದು.ಹೀಗೆ ಶಾಲಾ ದಾಖಲಾತಿಯನ್ನು ಹೆಚ್ಚಿಸುವುದರ ಜೊತೆಗೆ ಮನೆಯವರಿಗೂ ಅಂಗೀಕಾರ ಲಭಿಸಿದಂತಾಗುತ್ತದೆ. ಏಕಾಂಗಿತನ ಸಂಕುಚಿತ ಮನೋಭಾವ ತೊಲಗುತ್ತದೆ

ಬೇಕಾದ ಕಾಲಾವಧಿ

ಯೋಜನೆ ಒಂದೆರಡು ದಿನಗಳಿಗೆ ಮೀಸಲಿಡದೆ ನಿರಂತರವಾಗಿ ನಡೆಸಬೇಕು ದಿನ ಬೆಳಗಾಗುವಾಗ ಆಗುವ ದಿಡೀರ್ ಬದಲಾವಣೆ ಅಲ್ಲ. ಇದಕ್ಕಾಗಿ 5 ವರ್ಷ ಸಮಯಾವಕಾಶ ಮೀಸಲಿಟ್ಟವು. ಶಾಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಲು ನಮ್ಮ ಸಾಧನೆ ಊರವರ ಸಹಕಾರ ಅಗತ್ಯ. ಶಾಲೆಯ ಹಿರಿಮೆಯನ್ನು ಊರಿನವರು ಅರಿತಾಗ ಶಾಲಾ ದಾಖಲಾತಿಯನ್ನು ಹೆಚ್ಚಿಸಬಹುದು


ಸಾಧನೆಗಳು

Cwsn –house visit photo

ನವಚೇತನ ಕಾರ್ಯಕ್ರಮದ ಭಾಗವಾಗಿ ನಮ್ಮ ಏಳುಮಂದಿ ವಿಶೇಷ ಸಾಮರ್ಥ್ಯ ಗುಣ ವುಳ್ಳ 7 ಮಕ್ಕಳಲ್ಲಿ ಈ ವರ್ಷ ಮೂರು ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದೆವು. ಅಲಿಯಾಸ್ ನಾ ಸ್ ಅವಳ ಗೃಹ ಸಂದರ್ಶಿಸಿ ಸಹಾಯಧನವನ್ನು ನೀಡಿದೆವು.

Photo bhaushik father


ಬೆಂಕಿ ತಗಲಿ ಸಂಕಷ್ಟದಲ್ಲಿದ್ದ ಕೌಶಿಕ್ ಮನೆಗೆ ತೆರಳಿ ಕಿಂಚಿತ್ ಸಹಾಯವನ್ನು ನೀಡಿದೆವು.ಅದಲ್ಲದೆ ಕಡುಬಡತನದಲ್ಲಿ ಇರುವ ಮಕ್ಕಳ ಮನೆಗೆ ತೆರಳುವುದರ ಮೂಲಕ ಕಲಿಕೆಗೆ ಬೆಂಬಲವಾಗಿ ನಿಂತೆವು. ಅವರ ಕಲಿಕಾ ವೆಚ್ಚವನ್ನು ಅಲ್ಪಮಟ್ಟಿಗೆ ಪೂರೈಸಿದೆವು.ಇದರ ಭಾಗವಾಗಿ ಕಾರ್ನರ್ ಪಿಟಿಎ ನಡೆಸಿ ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಭರವಸೆಯನ್ನು ನೀಡಿದೆವು ಇಲ್ಲಿ ಒಳ್ಳೆಯ ಪ್ರತಿಕ್ರಿಯೆ ಲಭಿಸಿದ್ದು ಆ ಪ್ರದೇಶದ ಜನರಿಗೆ ನವೋಲ್ಲಾಸವನ್ನು ತಂದುಕೊಟ್ಟಿತು ಇದು ನಮ್ಮ S .M .C ಬೆಂಬಲವನ್ನು ಸ್ಮರಿಸಬಹುದು. ಮುಂಬರುವ ವರ್ಷಗಳಲ್ಲಿ ತಿಂಗಳಿಗೊಂದು ಕಾರ್ನರ್ ಮೀಟಿಂಗ್ ನಡೆಸಲು ನಿಶ್ಚಯಿಸಿದೆವು

.

ಲೋಪದೋಷಗಳು

ಈ ಶೈಕ್ಷಣಿಕ ವರ್ಷದ ಸರಿಯಾದ ಕಲಿಕೆ ನವೆಂಬರ್ ತಿಂಗಳಿಂದ ಆರಂಭವಾದ ಕಾರಣ ಯೋಜನಾಬದ್ಧವಾಗಿ, ಕ್ರಮಬದ್ಧವಾಗಿ ಕಾರ್ಯಕ್ರಮವನ್ನು ಮಾಡಲು ಕಷ್ಟವಾಯಿತು .ಸಾರ್ವಜನಿಕ ಸಂರಕ್ಷಣಾ ಯಜ್ಞ ಎಂಬ ಶಾಲಾ ಅಭಿವೃದ್ಧಿಯ ಮಹತ್ ಕೂಟವನ್ನು ಒಗ್ಗೂಡಿಸಲು ಕಷ್ಟ ಸಾಧ್ಯವಾಯಿತು.ಕೋರೋನ ತೀರ್ವಗತಿಗೆ ಬಂದಾಗ ಸರಕಾರ ರಜೆ ಘೋಷಿಸಿತು. ಈ ಅನಿರೀಕ್ಷಿತ ರಜೆಯಿಂದಾಗಿ ಎಲ್ಲರನ್ನೂ ಒಗ್ಗೂಡಿಸಿ ಯೋಜನೆಗಳನ್ನು ನಮ್ಮ ಯೋಚನೆಯಂತೆ ಕಾರ್ಯರೂಪಕ್ಕೆ ತರಲು ಆಗಲಿಲ್ಲ.

ಜನಪ್ರತಿನಿಧಿಗಳು,  ಸಾಮಾಜಿಕ ಸಾಧಕರು, SMC, School Development Committee, ಹಳೆ ವಿದ್ಯಾರ್ಥಿ ಸಂಘ ಹೀಗೆ ಎಲ್ಲರನ್ನೂ ಸೇರಿಸಿ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಹೋಗಲಾಗಲಿಲ್ಲ. ಹಾಗಾಗಿ ನಮ್ಮ ಅಧ್ಯಾಪಕ ವೃಂದದವರು ನಗದು ಸಹಾಯವನ್ನು ನೀಡಿದರು ಎಂಬುದು ಗಮನಾರ್ಹ . ಮುಂದಿನ ವರ್ಷಗಳಲ್ಲಿ ನವಚೇತನ ಕಾರ್ಯಕ್ರಮಕ್ಕೆ ವಸ್ತು ರೂಪದ ನಗದು ರೂಪದ ಸಂಗ್ರಹ ಸಂಗ್ರಹಕ್ಕಾಗಿ ಒಳ್ಳೆಯ ಸಮಿತಿಯ ರಚನೆಯಾಗಬೇಕು. ಅಂತಹ ಮಕ್ಕಳ ಮನೆಗೆ ಗೃಹ ಸಂದರ್ಶನವನ್ನು ನಡೆಸಿ ಸಹಾಯಹಸ್ತವನ್ನು ನೀಡಬೇಕು. ಬದುಕಿನ ಉಳಿವಿಗಾಗಿ ಹೋರಾಟ ನಡೆಸುವ ನಮ್ಮವರ ಹಿತಕ್ಕಾಗಿ ಮರುಭೂಮಿಯ ಓಯಸಿಸ್ ನಂತೆ ಪ್ರಯೋಜನವಾಗಲಿ. ಅವರ ಒಂಟಿ ತನವನ್ನು ಹೋಗಲಾಡಿಸೋಣ. ಒಲುಮೆಯ ಚಿಲುಮೆಯನ್ನು ಹರಿಸೋಣ. ಮಾನವೀಯತೆಯನ್ನು ಮೆರೆಯೋಣ

mail today 14-3-22

.



ಅತಿಜೀವನ ಕಾರ್ಯಕ್ರಮ


ಈಗಾಗಲೇ ನಮ್ಮೀ ಶಾಲೆಯ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಮಾನಸಿಕಮಾಗಿ ಹಾಗೂ ದೈಹಿಕವಾಗಿ ಸುಭದ್ರಗೊಳಿಸುವ ಈ ಅತಿಜೀವನ ಕಾರ್ಯಕ್ರಮದಡಿಯಲ್ಲಿ ಮಕ್ಕಳಿಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಅವುಗಳು

1 ಮನೆ ಸಂದರ್ಶನ ನಡೆಸುವುದು

2 ಕೈಲಾದ ಸಹಾಯ ನೀಡುವುದು

3 ಸಾಂತ್ವನ ನೀಡುವುದು.

4 ನಗದು ರೂಪದಲ್ಲೋ ವಸ್ತು ರೂಪದಲ್ಲೋ ಸಹಾಯ ನೀಡುವುದು

5 ಅಗತ್ಯ ಬಿದ್ದಲ್ಲಿ ಸಂಘ ಸಂಸ್ಶೆಗಳ ಸಹಾಯ ಕೋರುವುದು

6 ಅಧಿಕಾರಿಗಳ ಗಮನಕ್ಕೆ ತರುವುದು

7 ಊರಿನವರ ಸಾಮೀಪ್ಯವನ್ನು ಭದ್ರಗೊಳಿಸುವುದು

ಹೀಗೆ ಬಡ ಮಕ್ಕಳ ಮತ್ತು ಮಾನಸಿಕವಾಗಿ ನೊಂದವರಿಗೆ ಮರಳಿ ಜೀವನಕ್ಕೆ ನವೋಲ್ಲಾಸದಿಂದ ಧುಮುಕವಂತೆ ಪ್ರೇರೇಪಿಸುವುದು,ಅನಿರೀಕ್ಷಿತವಾಗಿ ಅಪಘಾತಕ್ಕೊಳಗಾದವರಿಗೆ ಹಾಗೂ ಆಘಾತಕ್ಕೊಳಗಾದವರಿಗೆ ಎಲ್ಲ ವಿಧದ ಸಹಕಾರ ನೀಡುವುದು

ಇದರ ಅಂಗವಾಗಿ ನಮ್ಮೀ ಶಾಲೆಯ ಭೌಶಿಕ್ ಮನೆಯವರಿಗೆ ನಗದು ಹಣ ನೀಡಲಾಯಿತು

ಅಲಿಯಾಸ್ ನಾಝ್ ಅವಳಿಗೂ ಹಣ ನೀಡಲಾಯಿತು

ನಾಲ್ಕು ವಿಕಲಚೇತನ ಮಕ್ಕಳ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದೆವು.



ಪುಟಾಣಿಗೊಂದು  ಪುಟ್ಟ  ಕಥೆ

ಪುಟಾಣಿಗೊಂದು  ಪುಟ್ಟ  ಕಥೆ ಮುಳಿಂಜ ಶಾಲೆಯ ಅಧ್ಯಾಪಕರ ಕಥೆಗಳು ಪ್ರಸಾರವಾಗುದು ಬಹಳ ಸಂತಸದ ವಿಷಯ . ಕೋರೋಣ ಕಾಲದಲ್ಲಿ  ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಿಕೊಡುವ  ಒಂದು ಕಾರ್ಯಕ್ರಮವಾಗಿದೆ ಪುಟಾಣಿಗೊಂದು  ಪುಟ್ಟ ಕಥೆ .. ಇದನ್ನು ಮಕ್ಕಳು ಅವರ ಬಿಡುವಿನ ವೇಳೆಯಲ್ಲಿ ಕೇಳುವರು ,ಇದರಿಂದ ಮಕ್ಕಳಿಗೆ  ಸಮಾಜದ  ಹಲವಾರು ವಿಷಯಗಳು ತಿಳಿಯುತ್ತವೆ.  ಆದುದರಿಂದ ನಮ್ಮ  ಶಾಲೆಯ  ಎಲ್ಲಾ  ಅಧ್ಯಾಪಕ ರು  ಕಥೆ  ಹೇಳಿ  ಸಹಕರಿಸಿದ್ದಾರ

ಕಥೆ :ಬಸ್ಮಾಸುರ ವಧೆ

ಕಥೆ  ಹೇಳುವವರು : ಪುಷ್ಪಲತಾ ಸೋಂಕಾಲ್ YOUTUBE LINK : https://youtu.be/cjBPnIXK60U


ಕಥೆ :ನೀ  ನನಗಿದ್ದರೆ  ನಾ  ನಿನಗೆ

ಕಥೆ  ಹೇಳುವವರು : ಚಿತ್ರಾವತಿ  ಚಿಗುರುಪಾದೆ

YOUTUBE LINK :https://youtu.be/Kz5tT6pSeEg


ಕಥೆ :കോഴിയുടെ കഥ

ಕಥೆ  ಹೇಳುವವರು :റഹ്മത്

YOUTUBE LINK:https://youtu.be/EshSSdgf4K0


കുട്ടി കവിത

കവിതാലാപനം   :  സുഹേഷ്

YOUTUBE LINK : https://youtu.be/2rHEqZB_CXg

ಕಥೆ : ಬಕಾಸುರ  ವಧೆ

ಕಥೆ  ಹೇಳುವವರು : ಚಿತ್ರಾವತಿ  ಚಿಗುರುಪಾದೆ

YOUTUBE LINK :: https://youtu.be/FnL9cO0NjQA

ಮಕ್ಕಳ ವಿಡಿಯೋ

ಒಂದನೇ ತರಗತಿಯ ಮಾಲಾ ಹಾಡಿದ ಮನೆಯ ಹಾಡು"

https://www.youtube.com/watch?v=wNL3o6ipsnk&list=PLCrkCUTvTdgWmeYzFNMal27EamIcoNSEp

Number counting by 2 std student

https://www.youtube.com/watchv=hTNhdpLLGQc&list=PLCrkCUTvTdgWM1VRBgq_04C20oTwu4lrW&index=2


Malayalam Action Song

https://www.youtube.com/watchv=hTNhdpLLGQc&list=PLCrkCUTvTdgWM1VRBgq_04C20oTwu4lrW&index=2 ----


ಮುಳಿಂಜ ಶಾಲೆಯಲ್ಲಿ  ವಿಶ್ವ  ಮಾತೃ  ಭಾಷಾ  ದಿನದ ಅಂಗವಾಗಿ  ಮಕ್ಕಳಿಗೆ  ವಿಶ್ವ  ಮಾತೃ  ಭಾಷಾ ಪ್ರತಿಜ್ಞೆ  ಹೇಳಿಕೊಡಲಾಯಿತು


ಶಾಲಾ ಪ್ರಾರಂಭದ ಮೊದಲ ಅಸೆಂಬ್ಲಿಯ ನ್ನು  ಮುಖ್ಯ ಶಿಕ್ಷಕಿ  ಚಿತ್ರಾವತಿ ರವರ  ನೇತೃತ್ವದಲ್ಲಿ  ನಡೆಸಲಾಯಿತು .


ಮಂಜೇಶ್ವರ ಉಪಜಿಲ್ಲಾ  ವಿದ್ಯಾಧಿಕಾರಿ ಶ್ರೀಯುತ  ದಿನೇಶ್ ವಿ ರವರು  ಮುಳಿಂಜ  ಶಾಲೆಗೆ ಭೇಟಿ ನೀಡಿದರು

ಮುಳಿಂಜ ಶಾಲೆಯಲ್ಲಿ ಸ್ಕೂಲ್ ವಿಕ್ಕಿ  ಪೋರ್ಟಲ್ ನ  ಉದ್ಘಾಟನಾ ಕಾರ್ಯಕ್ರಮ

ಉದ್ಘಾಟನೆ : ರಿಸಾನಾ ಸಾಬಿರ್ (ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷರು. )

ಉಪಸ್ಥಿತಿ  :: ಅಬ್ದುಲ್ ಶರೀಪ್ (ಮಂಗಲ್ಪಾಡಿ ಗ್ರಾಮ ಸದಸ್ಯಸರು )

ವಿಜಯ ಕುಮಾರ್ ( ಬಿಪಿಸಿ - ಮಂಜೇಶ್ವರ )

paper new----add

ಕೈಟ್ ಮಾಸ್ಟರ್ ಟ್ರೈನರ್ ರಾದಂತಹ  ಅಬ್ದುಲ್ ಜಮಾಲ್  ಮಾಸ್ಟರ್  ಮುಳಿಂಜ ಶಾಲೆಗೆ  ಭೇಟಿ  ನೀಡಿದರು



photo and text


farewell function

photo text


lss ---krithika

phot-text