"എസ്. വി.വി.എച്ച്. എസ്. മിയാപദവ്/അക്ഷരവൃക്ഷം/ ಹರಡದೆ ಇರಲಿ ಕೊರೊನ" എന്ന താളിന്റെ പതിപ്പുകൾ തമ്മിലുള്ള വ്യത്യാസം

Schoolwiki സംരംഭത്തിൽ നിന്ന്
('{{BoxTop1 | തലക്കെട്ട്= ಹರಡದೆ ಇರಲಿ ಕೊರೊನ | color= 5 }} <center> <poem>...' താൾ സൃഷ്ടിച്ചിരിക്കുന്നു)
 
No edit summary
 
വരി 63: വരി 63:
| color= 2
| color= 2
}}
}}
{{verification4|name=pcsupriya|തരം= കവിത  }}
[[വർഗ്ഗം: അക്ഷരവൃക്ഷം 2020 കന്നട രചനകൾ]]

16:09, 5 മേയ് 2020-നു നിലവിലുള്ള രൂപം

ಹರಡದೆ ಇರಲಿ ಕೊರೊನ


ಹರಡದೆ ಇರಲಿ ಕೊರೋನ

ಕಣ್ಣಿಗೆ ಕಾಣಿಸದ ಸೂಕ್ಷ್ಮಾಣು
ಬದಲಿಸಿದೆ ಜಗತ್ತಿನ ಇತಿಹಾಸವನು
ಜೀವ ಜಾಲಗಳ ಬದುಕನ್ನು
ಸವಾಲಾಗಿದೆ ಕೊರೋನ

ವ್ಯಾಪಿಸುತ್ತಿದೆ ಕ್ಷಣಕ್ಷಣವೂ
ತತ್ತರಿಸಿದೆ ಮನುಕುಲವು
ಕಾಣದಾಗಿದೆ ಒಲವು ನಲಿವು
ಕಾಣಿಸುತ್ತಿದೆ ಸಾವು-ನೋವು

ಸ್ಪರ್ಶ ಕೆಮ್ಮು ಸೀನು
ಪಸರಿಸುವುದು ರೋಗಾಣು
ಕೊರೋನ ಹರಡುವ ರೀತಿ
ಮೂಡಿಸಿದೆ ಜನರ ಮನಸ್ಸಲ್ಲಿ ಭೀತಿ

ಹೆಚ್ಚುತ್ತಿದೆ ಕೊರೊನ ಸೋಂಕು
ಇದಕ್ಕೆದುರಾಗಿ ಹೋರಾಡಲೇಬೇಕು
ಹರಡದಂತೆ ಕೊರೊನ ವೈರಸ್
ಧರಿಸಿ ಸಾಗಿರಿ ಮಾಸ್ಕ್ ಗ್ಲೌಸ್
 
ಬೇಡ ಜನಸಂದಣಿ ನೂಕುನುಗ್ಗಲು
ಬಲಿಯಾದೀತು ಸೋಂಕಿಗೆ ಬಾಳು
ಇರಲಿ ಸಾಮಾಜಿಕ ಅಂತರ
ಮಾಡದಿರಿ ಅನಗತ್ಯ ಸಂಚಾರ

ಶುಚಿಗೊಳಿಸುತ್ತಿರಿ ಕೈಕಾಲು ದೇಹವನು
ಹರಡದೆ ಇರಲೆಂದು ರೋಗಾಣು
ಸ್ಪರ್ಶ ಹಸ್ತಲಾಘವ ಆಲಿಂಗನ
ಹಾಕಿರಿ ಎಲ್ಲದಕ್ಕೂ ಕಡಿವಾಣ

ಬೇಡ ಐಷಾರಾಮದ ಜೀವನ
ಮಾಡಿರಿ ಬಡಜನರಿಗೆ ದಾನ
ಇರಲಿ ಎಲ್ಲರಿಗೂ ಎಚ್ಚರಿಕೆ
ಇದುವೇ ನಮ್ಮ ಕೋರಿಕೆ

ಮನೆ ಮನೆಗಳ ನಡುವೆ
ಹಾಕಿರಿ ಇದೀಗ ಕಣಿವೆ
ಒಟ್ಟಾಗಿ ಓಡಿಸಿ ಕೊರೋನ
ಕಟ್ಟೋಣ ಮುಂದೆ ನಾವೆಲ್ಲ
ಕಣಿವೆಗೊಂದು ಸೇತುವೆ

DEEKSHITHA
10 C എസ്. വി.വി.എച്ച്. എസ്. മിയാപദവ്
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കവിത