"GLPS Kuloor/പ്രവർത്തനങ്ങൾ" എന്ന താളിന്റെ പതിപ്പുകൾ തമ്മിലുള്ള വ്യത്യാസം
GLPS Kuloor/പ്രവർത്തനങ്ങൾ (മൂലരൂപം കാണുക)
18:01, 23 മാർച്ച് 2024-നു നിലവിലുണ്ടായിരുന്ന രൂപം
, 23 മാർച്ച് 2024തിരുത്തലിനു സംഗ്രഹമില്ല
(ചെ.) (Schoolwikihelpdesk എന്ന ഉപയോക്താവ് G. L. P. S. Kuloor/പ്രവർത്തനങ്ങൾ എന്ന താൾ GLPS Kuloor/പ്രവർത്തനങ്ങൾ എന്നാക്കി മാറ്റിയിരിക്കുന്നു) |
No edit summary |
||
(ഒരേ ഉപയോക്താവ് ചെയ്ത ഇടയ്ക്കുള്ള 15 നാൾപ്പതിപ്പുകൾ പ്രദർശിപ്പിക്കുന്നില്ല) | |||
വരി 1: | വരി 1: | ||
{{PSchoolFrame/Pages}} | {{PSchoolFrame/Pages}} | ||
==ಪ್ರವೇಶೋತ್ಸವ 2023-24== | |||
<gallery> | |||
പ്രമാണം:11213-PRAVESHOTHSAVA-2023-24-1.jpg | |||
പ്രമാണം:11213-PRAVESHOTHSAVA-2023-24-2.jpg | |||
പ്രമാണം:11213-PRAVESHOTHSAVA-2023-24-3.jpg | |||
പ്രമാണം:11213-PRAVESHOTHSAVA-2023-24-4.jpg | |||
പ്രമാണം:11213-PRAVESHOTHSAVA-2023-24-5.jpg | |||
പ്രമാണം:11213-PRAVESHOTHSAVA-2023-24-6.jpg | |||
പ്രമാണം:11213-PRAVESHOTHSAVA-2023-24-7.jpg | |||
പ്രമാണം:11213-PRAVESHOTHSAVA-2023-24-8.jpg | |||
പ്രമാണം:11213-PRAVESHOTHSAVA-2023-24-9.jpg | |||
പ്രമാണം:11213-PRAVESHOTHSAVA-2023-24-10.jpg | |||
പ്രമാണം:11213-PRAVESHOTHSAVA-2023-24-11.jpg | |||
</gallery> | |||
ಮೀಂಜ ಪಂಚಾಯತು ಮಟ್ಟದ ಶಾಲಾ ಪ್ರವೇಶೋತ್ಸವ : | |||
ಕೇರಳದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಊರಿನ ಹೆಮ್ಮೆಯ ಕೇಂದ್ರಗಳನ್ನಾಗಿಸುವ ದೃಷ್ಟಿಯಿಂದ ಸಾರ್ವಜನಿಕರು ಶಾಲೆಗಳತ್ತ ಗಮನ ಸೆಳೆಯುವಂತೆ ಮಾಡಲು ಸರಕಾರವು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದರಂತೆ ಶಾಲಾರಂಭದ ದಿನವನ್ನು ಶಾಲಾ ಪ್ರವೇಶೋತ್ಸವ ಎಂಬ ಸಂಭ್ರಮದ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಸಂಬಂಧ ಮೀಂಜ ಪಂಚಾಯತು ಮಟ್ಟದ ಶಾಲಾ ಪ್ರವೇಶೋತ್ಸವವು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ ಜರಗಿತು. | |||
ಕಾರ್ಯಕ್ರಮದಂಗವಾಗಿ ನವಾಗತ ಮಕ್ಕಳನ್ನು ಚೆಂಡೆ ಮೇಳ, ಗೊಂಬೆ ಕುಣಿತದೊಂದಿಗೆ ಆಕರ್ಷಕ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. | |||
ಕಾರ್ಯಕ್ರಮವನ್ನು ಮೀಂಜ ಪಂಚಾಯತು ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಶ್ರೀಮತಿ ಅಶ್ವಿನಿ ಎಂ. ಎಲ್ ಆಗಮಿಸಿದ್ದರು. | |||
ಈ ವರ್ಷದ ಶಾಲಾ ಅಕಾಡೆಮಿಕ್ ಮಾಸ್ಟರ್ ಪ್ಲಾನ್ 2023-24 ನ್ನು ಮೀಂಜ ಗ್ರಾಮ ಪಂಚಾಯತಿನ ವಿದ್ಯಾಭ್ಯಾಸ ಹಾಗೂ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಸರಸ್ವತಿ ಕೆ ಬಿಡುಗಡೆಗೊಳಿಸಿದರು. | |||
ಕಾರ್ಯಕ್ರಮದಲ್ಲಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ರುಖ್ಯಾ ಸಿದ್ದೀಕ್, ಸದಸ್ಯರಾದ ಶ್ರೀಮತಿ ಮಿಸ್ರಿಯ, ಶ್ರೀ ಅಬ್ದುಲ್ ರಜಾಕ್ ಎಂ, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಸತೀಶ್ ಎಲಿಯಾಣ, ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುನೀತಾ, ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಕುಳೂರು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಸತ್ಯನಾರಾಯಣ ಶರ್ಮ ಪಿ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಶ್ರೀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಹಾಸಿನಿ ಉಪಸ್ಥಿತರಿದ್ದರು. | |||
ಇದೇ ಸಂದರ್ಭದಲ್ಲಿ ಗ್ರೀನ್ ಕ್ಯಾಂಪಸ್ ಯೋಜನೆಯ ಭಾಗವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಆಹಾರಕ್ಕಾಗಿ ಉಪಯೋಗಿಸುತ್ತಿದ್ದ ಪ್ಲಾಸ್ಟಿಕ್ ತಟ್ಟೆ, ಗ್ಲಾಸ್ ಗಳ ಉಪಯೋಗವನ್ನು ತಡೆಯಲು ಶಾಲಾ ಹಳೆ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಶ್ರೀ ಸುಧಾಕರ್ ಶೆಟ್ಟಿ ಎಲಿಯಾಣ ಹಾಗೂ ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ ಸುಧಾಕರ್ ಶೆಟ್ಟಿ ರವರು ತಮ್ಮ ಮಗಳಾದ ಕುಮಾರಿ ಸಾನ್ವಿ ಶೆಟ್ಟಿ ಯ ಹುಟ್ಟಿದ ಹಬ್ಬದ ನೆನಪಿಗಾಗಿ 200 ಸ್ಟೀಲ್ ಪ್ಲೇಟ್ ಹಾಗೂ ಸ್ಟೀಲ್ ಗ್ಲಾಸ್ ಗಳನ್ನು ಕೊಡುಗೆಯಾಗಿ ನೀಡಿದರು. ಜೊತೆಗೆ ಪ್ರೀ ಪ್ರೈಮರಿ ವಿಭಾಗದ ಮಕ್ಕಳಿಗೆ ಆಸನದ ವ್ಯವಸ್ಥೆಯಾಗಿ ಕುರ್ಚಿಗಳನ್ನು ಶಾಲಾ ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಶ್ರೀ ಚಿಕ್ಕಪ್ಪ ಶೆಟ್ಟಿ ಎಲಿಯಾಣ ಕೊಡುಗೆಯಾಗಿ ನೀಡಿದರು. | |||
ಪ್ರೀ ಪ್ರೈಮರಿ ಹಾಗೂ ಒಂದನೇ ತರಗತಿಯ ಮಕ್ಕಳಿಗೆ ಬ್ಯಾಗ್ ಗಳನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ, ಪ್ರೀ ಪ್ರೈಮರಿ ವಿಭಾಗದ ಮಕ್ಕಳಿಗೆ ಪಾಠ ಪುಸ್ತಕಗಳನ್ನು ಶತಮಾನೋತ್ಸವ ಸಮಿತಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶ್ರೀ ವಸಂತ ಪೂಜಾರಿ ಕುಳೂರು, ಪ್ರೀ ಪ್ರೈಮರಿ ಮಕ್ಕಳಿಗೆ ಸಮವಸ್ತ್ರವನ್ನು ಮಜಿಬೈಲು ಸಹಕಾರಿ ಬ್ಯಾಂಕ್ ನಿ. ಮಜಿಬೈಲು ಇವರು ಕೊಡುಗೆಯಾಗಿ ನೀಡಿದರು. | |||
ಉಳಿದಂತೆ ಮೆರವಣಿಗೆಗೆ ಇನ್ನಷ್ಟು ರಂಗು ತರಲು ಚೆಂಡೆಯ ವ್ಯವಸ್ಥೆಯನ್ನು ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಗೊಂಬೆ ಕುಣಿತದ ವ್ಯವಸ್ಥೆಯನ್ನು ಶಾಲಾ ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುನೀತಾ ಕುಳೂರು, ಸದಸ್ಯರಾದ ಶ್ರೀಮತಿ ಮೀನಾಕ್ಷಿ ಬೊಡ್ಡೋಡಿ, ಶ್ರೀಮತಿ ಹೇಮಲತ ಕುಳೂರು, ಸಿಹಿ ತಿಂಡಿಯ ವ್ಯವಸ್ಥೆಯನ್ನು ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು, ಲಘು ಉಪಹಾರದ ವ್ಯವಸ್ಥೆಯನ್ನು ಶಾಲಾ ಶಿಕ್ಷಕ ವೃಂದ ನೀಡಿ ಸಹಕರಿಸಿದರು. | |||
ಶಾಲಾ ಮುಖ್ಯ ಶಿಕ್ಷಕರ ಚಾರ್ಜ್ ಹೊಂದಿರುವ ಶ್ರೀಮತಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು. ಶಿಕ್ಷಕಿ ಶ್ರೀಮತಿ ನಯನ ಸತೀಶ್ ಕಾರ್ಯಕ್ರಮ ನಿರೂಪಿಸಿದರು. | |||
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಪ್ರವೇಶೋತ್ಸವದ ವೀಡಿಯೋ ಪ್ರದರ್ಶನ ಮಾಡಲಾಯಿತು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. | |||
==ವಿಶ್ವ ಪರಿಸರ ದಿನಾಚರಣೆ== | |||
<gallery> | |||
പ്രമാണം:11213-WORLD ENVIRONMENTAL DAY -2023-24-1.jpg | |||
</gallery> | |||
ವಿಶ್ವ ಪರಿಸರ ದಿನಾಚರಣೆ: | |||
ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. | |||
ಪರಿಸರ ಸಂರಕ್ಷಣೆಯ ಕುರಿತು ಮಕ್ಕಳಿಗೆ ಅರಿವು ಮೂಡಿಸಲಾಯಿತು. ಶಾಲಾ ಪರಿಸರದಲ್ಲಿ ಗಿಡ ನೆಡಲಾಯಿತು. ಮಕ್ಕಳಿಗೆ ಪೋಸ್ಟರ್ ತಯಾರಿ, ಚಿತ್ರ ರಚನೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನೂ ಆಯೋಜಿಸಲಾಯಿತು. | |||
ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಪರಿಸರವನ್ನು ಶುಚೀಕರಣ ಮಾಡಲಾಯಿತು. ಹಳೆ ವಿದ್ಯಾರ್ಥಿಗಳಾದ ಹರಿರಾಮ ಕುಳೂರು ಹಾಗೂ ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ ಜೊತೆಗಿದ್ದು ಸಹಕರಿಸಿದರು. ಶಾಲಾ ಶಿಕ್ಷಕ ವೃಂದ ಕಾರ್ಯಕ್ರಮವನ್ನು ಸಂಯೋಜಿಸಿದರು. | |||
==ವಾಚನಾ ವಾರಾಚರಣೆ== | |||
<gallery> | |||
പ്രമാണം:11213-VACHANA VAARA-2023-24-1.jpg | |||
</gallery> | |||
ವಾಚನ ದಿನಾಚರಣೆ: | |||
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇರಳದ ಗ್ರಂಥಾಲಯ ಪಿತಾಮಹ ಪಿ. ಎನ್. ಪಣಿಕ್ಕರ್ ರವರ ಚರಮ ದಿನವನ್ನು ವಾಚನ ದಿನಾಚರಣೆಯಾಗಿ ಆಚರಿಸಲಾಯಿತು. | |||
ಕಾರ್ಯಕ್ರಮವನ್ನು ಬರಹಗಾರ, ಮೀಯಪದವು ಉನ್ನತ ಪ್ರೌಢ ಶಾಲೆಯ ಪ್ರಾಧ್ಯಾಪಕ ಶ್ರೀ ಹರೀಶ್ ಜಿ ನಾಯಕ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು, ನಿವೃತ್ತ ಶಾಲಾ ಮುಖ್ಯ ಶಿಕ್ಷಕ ಶ್ರೀ ಸತ್ಯನಾರಾಯಣ ಶರ್ಮ ಪಿ ಆಗಮಿಸಿದ್ದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಪೊಯ್ಯೇಲ್, ಶತಮಾನೋತ್ಸವ ಸಮಿತಿಯ ಜತೆ ಕಾರ್ಯದರ್ಶಿ ಶ್ರೀ ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಹಾಸಿನಿ ಕುಳೂರು ಉಪಸ್ಥಿತರಿದ್ದರು. | |||
ಇದೇ ಸಂದರ್ಭದಲ್ಲಿ ಶಾಲಾ ಗ್ರಂಥಾಲಯ ಪುಸ್ತಕಗಳ ಪ್ರದರ್ಶನ ನಡೆಯಿತು. ವಾಚನ ದಿನಾಚರಣೆಯಂಗವಾಗಿ ಪ್ರತಿಜ್ಞೆಯನ್ನು ಶಿಕ್ಷಕಿ ಶ್ರೀಮತಿ ಅಶ್ವಿನಿ ಎಂ ವಾಚಿಸಿದರು. | |||
ಶಾಲಾ ಮುಖ್ಯ ಶಿಕ್ಷಕರ ಹೊಣೆಯನ್ನು ಹೊತ್ತಿರುವ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಕಿ ಶ್ರೀಮತಿ ನಯನ ಎಂ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಶ್ವೇತ ವಂದಿಸಿದರು. ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. | |||
==ಬಾಲಸಭೆ ಉದ್ಘಾಟನೆ== | |||
<gallery> | |||
പ്രമാണം:11213-BALASABHA INAUGURATION-2023-24-1.jpg | |||
</gallery> | |||
ವಾಚನ ವಾರಾಚರಣೆಯ ಸಮಾರೋಪ ಸಮಾರಂಭ; ಮಕ್ಕಳ ಬಾಲಸಭೆ ಉದ್ಘಾಟನೆ; ಕತೋತ್ಸವಕ್ಕೆ ಚಾಲನೆ: | |||
ಮಕ್ಕಳಲ್ಲಿ ಪುಸ್ತಕ ಓದುವಿಕೆಯ ಆಸಕ್ತಿಯನ್ನು ಮೂಡಿಸಲು ವಿವಿಧ ಚಟುವಟಿಕೆಗಳನ್ನು ವಾಚನ ವಾರಾಚರಣೆಯೆಂಬ ಕಾರ್ಯಕ್ರಮದಲ್ಲಿ ಅಳವಡಿಸಿ ಪುಸ್ತಕ ಓದಿನ ಮಹತ್ವದ ಅರಿವನ್ನು ಮೂಡಿಸಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನಲ್ಲಿ ವಾಚನ ವಾರಾಚರಣೆ ನಡೆಸಲಾಯಿತು. ಇದರ ಸಮಾರೋಪ ಸಮಾರಂಭ ಹಾಗೂ ಮಕ್ಕಳ ಬಾಲಸಭೆಯ ಉದ್ಘಾಟನೆಯು ಇಂದು ನಡೆಯಿತು. | |||
ಕಾರ್ಯಕ್ರಮವನ್ನು ಹವ್ಯಾಸಿ ಬರಹಗಾರ, ಎಸ್. ಎ. ಟಿ. ಪ್ರೌಢ ಶಾಲೆಯ ಶಿಕ್ಷಕ ಶ್ರೀ ಜಯಪ್ರಕಾಶ್ ಶೆಟ್ಟಿ ಅಂಗಡಿದಾರ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಸುಧಾಕರ್ ಶೆಟ್ಟಿ ಎಲಿಯಾಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಂಜೇಶ್ವರ ಬಿ. ಆರ್. ಸಿ ಯ ಸಿ. ಆರ್. ಸಿ ಕೋರ್ಡಿನೇಟರ್ ಶ್ರೀಮತಿ ಮೀನಾಕ್ಷಿ ಬೊಡ್ಡೋಡಿ, ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚರಿತ ಚಿನಾಲ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಚೈತ್ರ ಕಲ್ಕಾರ್ ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸೌಮ್ಯ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. | |||
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ರಚಿತವಾದ 'ಮಿನುಗು' ಎಂಬ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಜೊತೆಗೆ ವಾಚನ ವಾರಾಚರಣೆಯ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. | |||
ಶಾಲಾ ಮಕ್ಕಳ ಓದುವಿಕೆ ಹಾಗೂ ಬರವಣಿಗೆಯನ್ನು ಪ್ರೋತ್ಸಾಹಿಸಲು 'ಕತೋತ್ಸವ' ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. | |||
ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ ಎಂ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಶ್ವೇತ ಇ ವಂದಿಸಿದರು. ಶಿಕ್ಷಕಿ ಶ್ರೀಮತಿ ನಯನ ಎಂ ಕಾರ್ಯಕ್ರಮ ನಿರೂಪಿಸಿದರು. | |||
==ಸ್ವಾತಂತ್ರ್ಯ ದಿನಾಚರಣೆ 2023-24== | |||
<gallery> | |||
പ്രമാണം:11213-INDEPENDENCE DAY-2023-24-1.jpg | |||
</gallery> | |||
ಶತಮಾನೋತ್ಸವ ಸಂಭ್ರಮದಲ್ಲಿರುವ ಕುಳೂರು ಶಾಲೆಯಲ್ಲಿ ಸ್ಮರಣೀಯ ಸ್ವಾತಂತ್ರ್ಯೋತ್ಸವದ ಆಚರಣೆ: | |||
ದೇಶದ ಐಕ್ಯತೆಯನ್ನು ಒಂದೇ ಸೂರಿನಡಿಯಲ್ಲಿ ತರುವ ಭಾರತದ ಅಭಿಮಾನದ ಆಚರಣೆಯಾದ 77 ನೇ ಸ್ವಾತಂತ್ರ್ಯೋತ್ಸವವನ್ನು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. | |||
ಶತಮಾನೋತ್ಸವವನ್ನು ಆಚರಿಸುತ್ತಿರುವ ಕುಳೂರು ಶಾಲೆಯಲ್ಲಿ ಈ ವರ್ಷದ ಸ್ವಾತಂತ್ರ್ಯೋತ್ಸವವು ಸ್ಮರಣೀಯವಾಯಿತು. ಆಕರ್ಷಕ ಮೆರವಣಿಗೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಬಳಿಕ ಶಾಲಾ ಶತಮಾನೋತ್ಸವ ಸಮಿತಿಯವರು ಕೊಡುಗೆ ನೀಡಿದ ನೂತನ ಧ್ವಜಸ್ತಂಭದ ಲೋಕಾರ್ಪಣೆ ಮಾಡಲಾಯಿತು. ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲರವರು ನೂತನ ಧ್ವಜಸ್ತಂಭವನ್ನು ಅನಾವರಣಗೊಳಿಸಿದರು. ಬಳಿಕ ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿಯವರು ಧ್ವಜಾರೋಹಣ ಮಾಡಿದರು. | |||
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು, ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಎಕ್ಸ್ಪರ್ಟ್ ಕಾಲೇಜು ಮಂಗಳೂರಿನ ಪ್ರಾಧ್ಯಾಪಕರಾದ ಶ್ರೀ ಬಾಲಕೃಷ್ಣ ಶೆಟ್ಟಿ ಎ ಎಲಿಯಾಣ, ಶಾಲಾ ಶತಮಾನೋತ್ಸವದ ಹಣಕಾಸು ಸಮಿತಿಯ ಅಧ್ಯಕ್ಷರಾದ ಶ್ರೀ ಪಿ. ಆರ್. ಶೆಟ್ಟಿ ಪೊಯ್ಯೇಲ್, ಅತಿಥಿ ಸತ್ಕಾರ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ ಪೊಯ್ಯೇಲ್, ಸನ್ಮಾನ ಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣ ನೈಕ್ ನಡುಹಿತ್ಲು, ಆರೋಗ್ಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಕೃಷ್ಣವೇಣಿ ಪಾದೆ ಕುಳೂರು, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸೌಮ್ಯ ಪಿ, ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚರಿತ ಚಿನಾಲ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಚೈತ್ರಾ ಕಲ್ಕಾರ್ ಉಪಸ್ಥಿತರಿದ್ದು ಶುಭ ಹಾರೈಸಿದರು. | |||
ಇದೇ ಸಂದರ್ಭದಲ್ಲಿ ಶಾಲಾ ಶತಮಾನೋತ್ಸವದ ಸವಿ ನೆನಪಿಗಾಗಿ ವಿವಿಧ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು. ದೊಡ್ಡ ಕಪಾಟನ್ನು ಶ್ರೀ ಬಾಲಕೃಷ್ಣ ಶೆಟ್ಟಿ ಎ ಎಲಿಯಾಣ, ವಾಟರ್ ಪ್ಯೂರಿಫಯರನ್ನು ಶ್ರೀ ದಿನೇಶ್ ಶೆಟ್ಟಿ ಕುಳೂರು ಪಾದೆ, ತಲಾ ಎರಡರಂತೆ ಸೀಲಿಂಗ್ ಫ್ಯಾನ್ ಗಳನ್ನು ಶ್ರೀ ರಂಜಿತ್ ಕುಮಾರ್ ಕರಿಪ್ಪಾರ್ ಕುಳೂರು, ಶ್ರೀ ರಾಜೇಶ್ ಶೆಟ್ಟಿ ಅಂಗಡಿದಾರು ಹಾಗೂ ಶ್ರೀ ಯತೀಶ್ ಶೆಟ್ಟಿ ಎಲಿಯಾಣ ರವರು ನೀಡಿದರು. ನೂತನ ಧ್ವಜಸ್ತಂಭಕ್ಕೆ ಕಂಬದ ವ್ಯವಸ್ಥೆಯನ್ನು ಮೀಯಪದವಿನ ಸಿಟಿ ಹಾರ್ಡ್ ವೇರ್ ನ ಶ್ರೀ ಅಶ್ರಫ್ ಒದಗಿಸಿದರು. ಲಘು ಉಪಹಾರದ ವ್ಯವಸ್ಥೆಯನ್ನು ಶ್ರೀ ಬಾಲಕೃಷ್ಣ ಶೆಟ್ಟಿ ಪೊಯ್ಯೇಲ್ ಹಾಗೂ ಶ್ರೀ ನಾರಾಯಣ ನೈಕ್ ನಡುಹಿತ್ಲು ಮಾಡಿದರು. ಮಕ್ಕಳ ಬಹುಮಾನದ ಪ್ರಾಯೋಜಕತ್ವವನ್ನು ಶಾಲಾ ಶತಮಾನೋತ್ಸವ ಸಮಿತಿ ವಹಿಸಿತ್ತು. ದಾನಿಗಳಿಗೆ ಶಾಲಾ ಪರವಾಗಿ ಧನ್ಯವಾದಗಳನ್ನು ಅರ್ಪಿಸಲಾಯಿತು. | |||
ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. | |||
ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಸ್ವಾಗತಿಸಿ, ಶಾಲಾ ಶಿಕ್ಷಕಿ ಶ್ರೀಮತಿ ಅಶ್ವಿನಿ ಎಂ ವಂದಿಸಿದರು. ಶಾಲಾ ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. | |||
ಬಳಿಕ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು. ಶಾಲಾ ಶತಮಾನೋತ್ಸವ ಸಮಿತಿಯ ಸದಸ್ಯರು ಹಾಗೂ ಶಿಕ್ಷಕ ವೃಂದ ಸಹಕರಿಸಿದರು. | |||
==ಓಣಂ ಆಚರಣೆ 2023-24== | |||
<gallery> | |||
പ്രമാണം:11213-ONAM CELEBRATION-2023-24-1.jpg | |||
</gallery> | |||
ಓಣಂ ಆಚರಣೆ: | |||
ಕೇರಳದ ಪ್ರಾಂತೀಯ ಹಬ್ಬವಾದ ಓಣಂ ಹಬ್ಬದ ಆಚರಣೆಯನ್ನು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರದಿಂದ ನಡೆಸಲಾಯಿತು. | |||
ಆ ಪ್ರಯುಕ್ತ ಆಕರ್ಷಕ ಹೂವಿನ ರಂಗೋಲಿಯನ್ನು ರಚಿಸಲಾಯಿತು. ಶಾಲಾ ಮಕ್ಕಳು ವಿವಿಧ ರೀತಿಯ ಹೂವಿನ ರಂಗೋಲಿಯನ್ನು ರಚಿಸುವ ಮೂಲಕ ಸಂಭ್ರಮಿಸಿದರು. ಓಣಂ ವಿಶೇಷ ಮಹಾಬಲಿಯ ವೇಷವನ್ನು ಹಾಕಿದ ಶಾಲಾ ನಾಯಕ ಚಾರ್ವಿನ್ ಆಳ್ನ ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳನ್ನು ತಿಳಿಸಿದನು. ಬಳಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸೌಮ್ಯ ಪಿ ಓಣಂ ಹಬ್ಬದ ಐತಿಹ್ಯವನ್ನು ಮಕ್ಕಳಿಗೆ ತಿಳಿಸಿದರು. | |||
ಓಣಂ ಹಬ್ಬದ ಸಲುವಾಗಿ ವಿಶೇಷ ಓಣಂ ಊಟವನ್ನು ಸವಿಯಲಾಯಿತು. ಬಳಿಕ ಶಾಲಾ ಮಕ್ಕಳಿಗೆ ಮನರಂಜನೆಯ ಆಟವನ್ನು ಆಡಿಸಲಾಯಿತು. ಶಾಲಾ ಸಿಬ್ಬಂದಿ ವರ್ಗ ಹಾಗೂ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. | |||
==ಮಕ್ಕಳ ದಿನಾಚರಣೆ== | |||
<gallery> | |||
പ്രമാണം:11213-CHILDRENS DAY-2023-24-1.jpg | |||
</gallery> | |||
ಕುಳೂರು ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ | |||
ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರುರವರ ಜನ್ಮದಿನಾಚರಣೆಯಾದ ಮಕ್ಕಳ ದಿನಾಚರಣೆಯನ್ನು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. | |||
ಕಾರ್ಯಕ್ರಮವನ್ನು ಮೀಂಜ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಸುಂದರಿ ಆರ್ ಶೆಟ್ಟಿಯವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿಯವರು ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮರವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ, ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಶತಮಾನೋತ್ಸವದ ಶಿಸ್ತು ಸಮಿತಿಯ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಅತಿಥಿ ಸತ್ಕಾರ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ ಪೊಯ್ಯೇಲು, ಸನ್ಮಾನ ಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣ ನೈಕ್ ನಡುಹಿತ್ಲು, ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಶ್ರೀ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾದ ಶ್ರೀ ಹರಿರಾಮ ಕುಳೂರು, ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಸುಚರಿತ ಚಿನಾಲ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಚೈತ್ರ ಕಲ್ಕಾರ್ ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರಮೇಳ ಹಾಗೂ ಕಲೋತ್ಸವದಲ್ಲಿ ಮಿಂಚಿದ ಶಾಲಾ ಪ್ರತಿಭೆಗಳನ್ನು ಸ್ಮರಣೆಕೆ ನೀಡಿ ಅಭಿನಂದಿಸಲಾಯಿತು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ರೀಮತಿ ನಯನ ಎಂ ಹಾಗೂ ಶ್ರೀಮತಿ ಶ್ವೇತಾ ರವರು ನಿರ್ವಹಿಸಿದರು. ಶಾಲಾ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ಶ್ರೀ ಅಬ್ದುಲ್ ಮಜೀದ್ ಸಾಹೇಬ್ ಸ್ವಾಗತಿಸಿ, ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ವಂದಿಸಿದರು. ಶಾಲಾ ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ಕಾರ್ಯಕ್ರಮ ಸಂಘಟಿಸಿದರು. ಶಾಲಾ ಶತಮಾನೋತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. | |||
==ಹೇರಂಭ ಸಂಸ್ಥೆಯ ಕೊಡುಗೆಯ ನೂತನ ಶಾಲಾ ವಾಹನ ಹಸ್ತಾಂತರ== | |||
<gallery> | |||
പ്രമാണം:11213-SPONSORED SCHOOL VAN HANDOVER-2023-24-1.jpg | |||
</gallery> | |||
ಹೇರಂಬ ಇಂಡಸ್ಟ್ರೀಸ್ ವತಿಯಿಂದ ಕೊಡುಗೈ ದಾನಿ ಶ್ರೀ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನ ಹಾಗೂ ಶ್ರೀ ರಘುರಾಮ್ ಕೆ ಶೆಟ್ಟಿ ಕುಳೂರು ಕನ್ಯಾನ ಇವರಿಂದ ಶಾಲೆಗೆ ನೂತನ ಶಾಲಾ ವಾಹನ ಕೊಡುಗೆ: | |||
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಈ ವರ್ಷ ಶತಮಾನೋತ್ಸವವನ್ನು ಆಚರಿಸುತ್ತಿದ್ದು ಪ್ರಯುಕ್ತ ಶಾಲಾ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನ ಹಾಗೂ ಶ್ರೀ ರಘುರಾಮ್ ಕೆ ಶೆಟ್ಟಿ ಕುಳೂರು ಕನ್ಯಾನರವರಿಂದ ಹೇರಂಬ ಇಂಡಸ್ಟ್ರೀಸ್ ಮುಂಬೈ ಇದರ ವತಿಯಿಂದ ಶಾಲಾ ವಾಹನದ ಕೊಡುಗೆಯು ಹಸ್ತಾಂತರವು ಇಂದು ಶಾಲೆಯಲ್ಲಿ ನಡೆಯಿತು. | |||
ಸಮಾಜದಲ್ಲಿ ಹಲವಾರು ಕೊಡುಗೆಗಳನ್ನು ನೀಡಿ ಕೊಡುಗೈ ದಾನಿ ಎಂದೇ ಗುರುತಿಸಿಕೊಂಡಿರುವ ಶ್ರೀ ಸದಾಶಿವ ಕೆ ಶೆಟ್ಟಿ ಹಾಗೂ ಅವರ ಸಹೋದರ ಶ್ರೀ ರಘುರಾಮ್ ಕೆ ಶೆಟ್ಟಿ ಕುಳೂರು ಕನ್ಯಾನರವರು ತಮ್ಮ ಸಂಸ್ಥೆಯಾದ ಹೇರಂಬ ಇಂಡಸ್ಟ್ರೀಸ್ ಮುಂಬೈ ಇದರ ವತಿಯಿಂದ ತಾವು ಕಲಿತಂತಹ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹಲವಾರು ಕೊಡುಗೆಗಳ ಜೊತೆಗೆ ಶತಮಾನೋತ್ಸವದ ಸವಿನೆನಪಿಗಾಗಿ ಶಾಲಾ ವಾಹನದ ಕೊಡುಗೆಯನ್ನು ನೀಡಿದ್ದು ಅದರ ಹಸ್ತಾಂತರವು ಇಂದು ಶಾಲೆಯಲ್ಲಿ ನಡೆಯಿತು. ನೂತನ ಶಾಲಾ ವಾಹನದ ಕೀ ಯನ್ನು ಅವರ ಮಾತೃಶ್ರೀಯಾದ ಶ್ರೀಮತಿ ಲೀಲಾವತಿ ಪಕೀರ ಶೆಟ್ಟಿ ಕುಳೂರು ಕನ್ಯಾನರವರು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ರವರಿಗೆ ಹಸ್ತಾಂತರಿಸುವ ಮೂಲಕ ನೆರವೇರಿಸಿ ಶುಭ ಹಾರೈಸಿದರು. | |||
ಕಾರ್ಯಕ್ರಮದಲ್ಲಿ ಮೀಂಜ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಸುಂದರಿ ಆರ್ ಶೆಟ್ಟಿ, ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮಹಮ್ಮದ್ ಹಾಜಿ ಕಂಚಿಲ, ಶ್ರೀ ಸದಾಶಿವ ಕೆ ಶೆಟ್ಟಿ ಕುಳೂರು ಕನ್ಯಾನರವರ ಸಹೋದರರಾದ ಶ್ರೀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ, ಶಾಲಾ ರಕ್ಷಕ ಶ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಸತೀಶ್ ಎಲಿಯಾಣ, ಶತಮಾನೋತ್ಸವದ ಅತಿಥಿ ಸತ್ಕಾರ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ ಪೊಯ್ಯೆ ಪೊಯ್ಯೇಲು, ಶತಮಾನೋತ್ಸವದ ಸನ್ಮಾನ ಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣ ನೈಕ್ ನಡುಹಿತ್ಲು, ಶತಮಾನೋತ್ಸವ ಸಮಿತಿಯ ಕೋಶಾಧಿಕಾರಿ ಶ್ರೀ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ ಶೆಟ್ಟಿ ಚಾರ್ಲ, ಕಾರ್ಯಕ್ರಮ ಸಮಿತಿ ಅಧ್ಯಕ್ಷರಾದ ಶ್ರೀ ಹರಿರಾಮ ಕುಳೂರು, ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ಶ್ರೀ ಅಬ್ದುಲ್ ಮಜೀದ್ ಸಾಹೇಬ್, ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚರಿತ ಚಿನಾಲ ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಚೈತ್ರ ಕಲ್ಕಾರ್, ಶತಮಾನೋತ್ಸವ ಸಮಿತಿಯ ಸದಸ್ಯರು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. | |||
==ನೂತನ ಭೋಜನ ಶಾಲೆಯ ಉದ್ಘಾಟನೆ== | |||
<gallery> | |||
പ്രമാണം:11213-NEW KITCHEN CUM DINING HALL INAUGURATION-2023-24-1.jpg | |||
</gallery> | |||
ಮಂಜೇಶ್ವರ ಶಾಸಕರಿಂದ ಕುಳೂರು ಶಾಲಾ ನೂತನ ಕಟ್ಟಡದ ಉದ್ಘಾಟನೆ: | |||
ಮಂಜೇಶ್ವರ : ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಯೋಜನೆಯಡಿ ಮಂಜೂರಾಗಿ ನಿರ್ಮಾಣಗೊಂಡ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಅಡುಗೆ ಕೋಣೆ ಹಾಗೂ ಊಟದ ಸಭಾಂಗಣ ಕಟ್ಟಡದ ಉದ್ಘಾಟನಾ ಸಮಾರಂಭ ಇಂದು ನಡೆಯಿತು. ಉದ್ಘಾಟನೆಯನ್ನು ಮಂಜೇಶ್ವರದ ಶಾಸಕರಾದ ಶ್ರೀ ಎ.ಕೆ.ಎಂ ಅಶ್ರಫ್ ರವರು ನೆರವೇರಿಸಿದರು. | |||
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀಂಜ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಸುಂದರಿ ಆರ್ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆಯಾದ ಶ್ರೀಮತಿ ಕಮಲಾಕ್ಷಿ, ಮಂಜೇಶ್ವರ ಬ್ಲಾಕ್ ಪಂಚಾಯತಿನ ಸದಸ್ಯೆಯಾದ ಶ್ರೀಮತಿ ಅಶ್ವಿನಿ ಎಂ.ಎಲ್ ಆಗಮಿಸಿದ್ದರು. ಮೀಂಜ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಶ್ರೀ ಜಯರಾಮ ಬಲ್ಲಂಗುಡೇಲ್, ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯೀ ಸಮಿತಿಯ ಅಧ್ಯಕ್ಷೆಯಾದ ಶ್ರೀಮತಿ ಸರಸ್ವತಿ ಕೆ, ಕ್ಷೇಮ ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ರೀ ಬಾಬು ಸಿ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ರೀಮತಿ ರುಕ್ಯಾ ಸಿದ್ಧಿಕ್, ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ, ಮಂಜೇಶ್ವರ ಉಪಜಿಲ್ಲಾ ಪ್ರಭಾರ ಶಿಕ್ಷಣಾಧಿಕಾರಿಗಳಾದ ಶ್ರೀ ಜಿತೇಂದ್ರ ಎಸ್ ಎಚ್, ಮೀಂಜ ಪಂಚಾಯತ್ ಅಸಿಸ್ಟಂಟ್ ಎಂಜಿನಿಯರ್ ಶ್ರೀ ರೆಂಜಿ ಕ್ಸೇವಿಯರ್, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಪಿ, ಶಾಲಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ, ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮಹಮ್ಮದ್ ಹಾಜಿ ಕಂಚಿಲ, ಮಾಜಿ ಸದಸ್ಯರು ಹಾಗೂ ಸಮಾಜ ಸೇವಕರಾದ ಶ್ರೀ ಮಹಮ್ಮದ್ ಕುಂಞಿ, ಶಾಲಾ ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚರಿತ ಚಿನಾಲ, ಪ್ರಿ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಚೈತ್ರ ಕಲ್ಕಾರ್ ಉಪಸ್ಥಿತರಿದ್ದು ಶುಭ ಹಾರೈಸಿದರು. | |||
ಇದೇ ಸಂದರ್ಭದಲ್ಲಿ ನೂತನ ಕಟ್ಟಡದ ಕಾಮಗಾರಿಯನ್ನು ಅಚ್ಚುಕಟ್ಟಾಗಿ ನೆರವೇರಿಸಿದ ಬಿಲ್ಡಿಂಗ್ ಕಾಂಟ್ರಾಕ್ಟರ್ ಶ್ರೀ ಹುಸೇನ್ ಕುಂಞಿ ಹಾಗೂ ಪಿ.ಡಬ್ಲ್ಯೂ.ಡಿ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಶ್ರೀ ಗಿರೀಶ್ ಇವರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. | |||
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ವಂದಿಸಿದರು. ಶಾಲಾ ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶತಮಾನೋತ್ಸವ ಸಮಿತಿಯ ಸದಸ್ಯರು, ಶಿಕ್ಷಕ ವೃಂದ ಉಪಸ್ಥಿತರಿದ್ದು ಸಹಕರಿಸಿದರು. | |||
==ಭಾಷೋತ್ಸವ 2023-24== | |||
<gallery> | |||
പ്രമാണം:11213-BHASHOTHSAVA-2023-24-1.jpg | |||
</gallery> | |||
==ಸಂಯುಕ್ತ ಡೈರಿ 2023-24== | |||
<gallery> | |||
പ്രമാണം:11213-SAMYUKTHA DIARY-2023-24-1.jpg | |||
</gallery> | |||
ಶಾಲಾ ಮಕ್ಕಳ ರಚನೆಯ ಸಂಯುಕ್ತ ಡೈರಿ ಬಿಡುಗಡೆ ಕಾರ್ಯಕ್ರಮ: | |||
ಇಂದು ನಮ್ಮ ಶಾಲೆಯ ಒಂದು ಮತ್ತು ಎರಡನೇ ತರಗತಿ ಮಕ್ಕಳ ರಚನೆಯ ಸಂಯುಕ್ತ ಡೈರಿ ಬಿಡುಗಡೆ ಕಾರ್ಯಕ್ರಮ ನಡೆಯಿತು. | |||
ಆ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಒಂದನೇ ತರಗತಿಯ ಮಕ್ಕಳಿಂದ ರಚಿತವಾದ 'ಮೆಲುಕು' ಸಂಯುಕ್ತ ಡೈರಿಯನ್ನು ರಕ್ಷಕರಾದ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ರವರು ಬಿಡುಗಡೆಗೊಳಿಸಿದರು. | |||
ಎರಡನೇ ತರಗತಿಯ ಮಕ್ಕಳಿಂದ ರಚಿತವಾದ 'ಹುರುಪ್' ಸಂಯುಕ್ತ ಡೈರಿಯನ್ನು ರಕ್ಷಕರಾದ ಶ್ರೀಮತಿ ಉಷಾ ಆದರ್ಶ ನಗರ ರವರು ಬಿಡುಗಡೆಗೊಳಿಸಿದರು. | |||
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ರವರು ಶುಭ ಹಾರೈಸಿದರು. ರಕ್ಷಕರು ಹಾಗೂ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದು ಸಹಕರಿಸಿದರು. | |||
ಇದೇ ಸಂದರ್ಭದಲ್ಲಿ ಮಕ್ಕಳ ರಚನೆಯ ವೀಡಿಯೋ ಪ್ರದರ್ಶನ ನಡೆಯಿತು. | |||
ಶಾಲಾ ಶಿಕ್ಷಕಿ ಶ್ರೀಮತಿ ನಯನ ಎಂ ಸ್ವಾಗತಿಸಿ, ಶ್ರೀಮತಿ ಶ್ವೇತ ಇ ವಂದಿಸಿದರು. | |||
==ಶೈಕ್ಷಣಿಕ ಪ್ರವಾಸ 2023-24== | |||
<gallery> | |||
പ്രമാണം:11213-EDUCATIONAL TOUR-2023-24-1.jpg | |||
</gallery> | |||
ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ: | |||
2023-24 ನೇ ಸಾಲಿನ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ದಿನಾಂಕ 23-01-2024 ನೇ ಮಂಗಳವಾರದಂದು ನಡೆಸಲಾಯಿತು. | |||
ಈ ವರ್ಷದ ಶೈಕ್ಷಣಿಕ ಪ್ರವಾಸದಲ್ಲಿ ಮೂಡಬಿದ್ರೆ ಸಾವಿರ ಕಂಬದ ಬಸದಿ, ಕಡಲಕೆರೆ ಉದ್ಯಾನ, ಸಾಲು ಮರದ ತಿಮ್ಮಕ್ಕನ ಉದ್ಯಾನವನ, ಕಾರ್ಕಳ ಬಾಹುಬಲಿ ಬೆಟ್ಟ, ಮಣಿಪಾಲ ಹಸ್ತ ಹೆರಿಟೇಜ್ ವಿಲ್ಲೇಜ್, ಮಲ್ಪೆ ಬೀಚ್ ಮೊದಲಾದ ಸ್ಥಳಗಳಿಗೆ ಭೇಟಿ ನೀಡಲಾಯಿತು. | |||
ಶಾಲಾ ಮುಖ್ಯ ಶಿಕ್ಷಕಿ, ಶಿಕ್ಷಕ ವೃಂದ ಹಾಗೂ ರಕ್ಷಕರು ನೇತೃತ್ವ ವಹಿಸಿದ್ದರು. | |||
==ಪ್ರಜಾಪ್ರಭುತ್ವ ದಿನಾಚರಣೆ== | |||
<gallery> | |||
പ്രമാണം:11213-REPUBLIC DAY-2023-24-1.jpg | |||
</gallery> | |||
75 ನೇ ಗಣರಾಜ್ಯೋತ್ಸವ ಆಚರಣೆ: | |||
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. | |||
ಇದರಂಗವಾಗಿ ನಡೆದ ಧ್ವಜಾರೋಹಣವನ್ನು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ಸತೀಶ್ ಎಲಿಯಾಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ವಾರ್ಡ್ ಸದಸ್ಯ ಶ್ರೀ ಜನಾರ್ಧನ ಪೂಜಾರಿಯವರು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತೀಯರನ್ನು ಸಮಾನತೆಯಿಂದ ಕಾಣುವಂತಾಗಲು ಕಾರಣರಾದ ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ರವರನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಶತಮಾನೋತ್ಸವ ಅತಿಥಿ ಸತ್ಕಾರ ಸಮಿತಿ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ ಪೊಯ್ಯೇಲ್, ಕಾರ್ಯಕ್ರಮ ಸಮಿತಿ ಅಧ್ಯಕ್ಷರಾದ ಶ್ರೀ ಹರಿರಾಮ ಕುಳೂರು, ಆಹಾರ ಸಮಿತಿ ಅಧ್ಯಕ್ಷರಾದ ಶ್ರೀ ರಘುರಾಮ ಶೆಟ್ಟಿ ಎಲಿಯಾಣ, ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ಕಾರ್ಯದರ್ಶಿ ಶ್ರೀ ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ ಉಪಸ್ಥಿತರಿದ್ದು ಶುಭ ಕೋರಿದರು. ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕಿ ಕುಮಾರಿ ಭಾಗ್ಯಲಕ್ಷ್ಮಿ ಪಿ ರವರು ಹಾಡಿದ ದೇಶಭಕ್ತಿ ಗೀತೆ ಎಲ್ಲರ ಮನಗೆದ್ದಿತು. ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಶ್ವೇತ ವಂದಿಸಿದರು. ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಿಹಿತಿಂಡಿ ವಿತರಿಸಲಾಯಿತು. | |||
==ಶಾಲೆಯ ನೂತನ ರಸ್ತೆಯ ಉದ್ಘಾಟನೆ== | |||
<gallery> | |||
പ്രമാണം:11213-NEW SCHOOL ROAD INAUGURATION-2023-24-1.jpg | |||
</gallery> | |||
ನೂತನ ಪ್ರವೇಶ ಮಾರ್ಗ ನವೀಕರಣದ ಉದ್ಘಾಟನೆ : | |||
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರವೇಶ ಮಾರ್ಗದ ನವೀಕರಣ ಕಾಮಗಾರಿಯ ಉದ್ಘಾಟನೆಯು ಇಂದು ನಡೆಯಿತು. | |||
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಮಂಜೂರಾಗಿ ನವೀಕರಣವಾದ ಪ್ರವೇಶ ಮಾರ್ಗವನ್ನು ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ಕಾರ್ಯದರ್ಶಿ ಶ್ರೀ ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ, ಶತಮಾನೋತ್ಸವ ಅತಿಥಿ ಸತ್ಕಾರ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿ ಪೊಯ್ಯೇಲ್, ಸನ್ಮಾನ ಸಮಿತಿಯ ಅಧ್ಯಕ್ಷರಾದ ಶ್ರೀ ನಾರಾಯಣ ನೈಕ್ ನಡುಹಿತ್ಲು, ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾದ ಶ್ರೀ ಹರಿರಾಮ ಕುಳೂರು, ಆರೋಗ್ಯ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣವೇಣಿ ಕುಳುರು ಪಾದೆ, ಆಹಾರ ಸಮಿತಿ ಅಧ್ಯಕ್ಷರಾದ ಶ್ರೀ ರಘುರಾಮ ಶೆಟ್ಟಿ ಎಲಿಯಾಣ ಹಾಗೂ ಸದಸ್ಯರು ಉಪಸ್ಥಿತರಿದ್ದರು. | |||
ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ವಂದಿಸಿದರು. | |||
==ಕಲಿಕೋತ್ಸವ 2023-24== | |||
<gallery> | |||
പ്രമാണം:11213-KALIKOTHSAVA-2023-24-1.jpg | |||
പ്രമാണം:11213-KALIKOTHSAVA-2023-24-2.jpg | |||
പ്രമാണം:11213-KALIKOTHSAVA-2023-24-3.jpg | |||
</gallery> | |||
ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24 ನೇ ಸಾಲಿನ ಶಾಲಾ ಮಟ್ಟದ ಕಲಿಕೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ವಾರ್ಡ್ ಸದಸ್ಯ ಶ್ರೀ ಜನಾರ್ಧನ ಪೂಜಾರಿ ಕುಳೂರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಎಲಿಯಾಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಂಜೇಶ್ವರ ಬಿ.ಆರ್.ಸಿ. ಯ ಸಿ.ಆರ್.ಸಿ. ಕೋರ್ಡಿನೇಟರ್ ಶ್ರೀಮತಿ ಮೋಹಿನಿ ಆಗಮಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಹಾಜಿ ಕಂಚಿಲ, ಪ್ರಧಾನ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಸುಚರಿತ ಚಿನಾಲ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಚೈತ್ರ ಕಲ್ಕಾರ್ ಉಪಸ್ಥಿತರಿದ್ದರು. | |||
ಶಾಲಾ ಶಿಕ್ಷಕಿ ಕುಮಾರಿ ಭಾಗ್ಯಲಕ್ಷ್ಮಿ ಪಿ ಕಲಿಕೋತ್ಸವ ಗೀತೆಯನ್ನು ಹಾಡಿದರು. ಶಿಕ್ಷಕ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ಶಾಲಾ ಹಿರಿಮೆ ವರದಿಯನ್ನು ಮಂಡಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಶ್ವೇತ ಇ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಅಶ್ವಿನಿ ಎಂ ವಂದಿಸಿದರು. ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಕಾರ್ಯಕ್ರಮ ನಿರೂಪಿಸಿದರು. | |||
ಬಳಿಕ ಶಾಲಾ ಮಕ್ಕಳಿಂದ ವಿವಿಧ ಕಲಿಕಾ ಪ್ರದರ್ಶನವು ನಡೆಯಿತು. |