ಅಮ್ಮ ಎಂಬ ಎರಡಕ್ಷರವ
ಮರೆಯೆನು ನಾನು ದಿನದಿನವು
ಅಮ್ಮನ ತೋಳ ತೊಟ್ಟಿಲಲ್ಲಿ
ತೂಗಿದಳೆನ್ನ ಒಲವಿನಲಿ
ಅಮ್ಮನ ಜೊತೆಗೆ ಆಡಿದ ನೆನಪಲಿ
ಸಾಗುತಿದೆ ದಿನವು ಹರುಷದಲಿ
ಮುಂಜಾನೆ ಎದ್ದು ತಿಂಡಿಯ ಮಾಡಿ
ಕೊಡುವಳು ಅಮ್ಮ ನಮಗೆಲ್ಲ
ಕಷ್ಟ ಬಂದರೆ ಯಾರಿಗೂ ಹೇಳದೆ
ಎಲ್ಲರ ಜೊತೆಗೂ ನಗುತಿರುವೆ
ಕಂಡ ಕನಸನೆಲ್ಲ ನನಸಾಗಿಸುತ
ನಿನ್ನ ಹೃದಯದಿ ನಾನಿರುವೆ
ನಿನ್ನ ಸವಿನೆನಪಿನ ಜೇನು ಹೀರುತ
ಕೊನೆ ತನಕ ಬದುಕಿರುವೆ