ജി.വി.എച്ച്.എസ്. എസ് മുള്ളേരിയ/അക്ഷരവൃക്ഷം/ ಮನ ರಂಜಿಸುವ ಹವ್ಯಾಸಗಳು
ಮನ ರಂಜಿಸುವ ಹವ್ಯಾಸಗಳು ಬಿಡುವಿನ ವೇಳೆಯನ್ನು ಹೇಗೆ ಕಳೆಯುವುದೆಂಬುದೇ ನನ್ನ ಚಿಂತೆ…..!
ಬಿಡುವಿನ ವೇಳೆಯನ್ನು ಹೇಗೆ ಕಳೆಯುವುದು ಎಂಬುದರ ಮೇಲೆ ಒಬ್ಬರ ವ್ಯಕ್ತಿತ್ವವನ್ನುನಿರ್ಧರಿಸಬಹುದು. ಸೃಜನಾತ್ಮಕ ಉದ್ದೇಶಗಳಿಗೆ ಬಿಡುವಿನ ವೇಳೆಯನ್ನು ಉಪಯುಕ್ತ ರೀತಿಯಲ್ಲಿ ಬಳಸಿದಾಗ ಸೃಜನಶೀಲ ಉದ್ದೇಶಗಳು ಹವ್ಯಾಸಗಳೆನಿಸುತ್ತವೆ.ವಿದ್ಯಾರ್ಥಿಯ ಗುಣಮಟ್ಟವು ಅವನು ಬಿಡುವಿನ ವೇಳೆಯನ್ನು ಯಾವ ಉದ್ದೇಶಕ್ಕಾಗಿ ಉಪಯೋಗಿಸುತ್ತಾನೆ ಎಂಬುದನ್ನು ಅವಲಂಬಿಸಿರುತ್ತದೆ.ಶಾಲಾದಿನಗಳಲ್ಲಿ ರಜೆಗಳು ಸಿಗುವುದರಿಂದ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ.ಹವ್ಯಾಸಗಳಿಂದ ಬೌದ್ಧಕ ಲಾಭವೂ ಮನೋರಂಜನೆಯೂ ಸಿಗುತ್ತದೆ. ಒಳ್ಳೆಯ ಹವ್ಯಾಸಗಳುಜೀವನದ ಅಮೂಲ್ಯ ಆಸ್ತಿ.ಅವು ಒಬ್ಬರ ಉತ್ಕರ್ಷಕ್ಕೆ ನೆರವಾಗುತ್ತವೆ.ಪ್ರತಿಯೊಬ್ಬರಿಗೂ ಯಾವುದಾದರೂ ಒಂದು ಹವ್ಯಾಸವಿರಬೇಕಾದುದು ಅವಶ್ಯ.ಹಾಗೆ ಒಂದು ಹವ್ಯಾಸವುಳ್ಳವರು ಆಲಸಿಗಳಾಗಿರಬಾರದು. ಹವ್ಯಾಸಗಳು ಶಿಸ್ತನ್ನು ಬೆಳೆಸುತ್ತವೆ.ಸಾಮಾನ್ಯನಿಗಿಂತ ಒಬ್ಬನನ್ನು ಭಿನ್ನ ವ್ಯಕ್ತಿಯಾಗಿಸುತ್ತವೆ.ಹವ್ಯಾಸಗಳು ಕಾಲ ಕಳೆಯುವುದಕ್ಕಾಗಿರಬಾರದು.ಭವಿಷ್ಯದ ಬದುಕಿನಲ್ಲಿ ಅವು ನೆರವಾಗಬೇಕು.ಹವ್ಯಾಸಗಳು ಹತ್ತು ಹಲವು ಇವೆ. ಅಂಚೆ ಚೀಟಿ ಸಂಗ್ರಹ ಒಂದು ಒಳ್ಳೆಯ ಆನಂದದಾಯಕ ಹಾಗೂ ಕೆಲವೊಮ್ಮೆ ಲಾಭದಾಯಕ ಹವ್ಯಾಸ.ಇದನ್ನು ಹವ್ಯಾಸಗಳ ರಾಜ ಎನ್ನಬಹುದು.ಬೇರೆ ಬೇರೆ ದೇಶಗಳ ಅಂಚೆ ಚೀಟಿಗಳನ್ನು ಸಂಗ್ರಹಿಸಿ ಅದನ್ನು ಸುಂದರವಾಗಿ ಜೋಡಿಸುವುದು ಒಂದು ಕಲೆ. ಇದು ಒಬ್ಬರ ತಿಳುವಳಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ.ಇದೇ ರೀತಿ ಬೆಂಕಿಪೆಟ್ಟಿಗೆಗಳ ಮೇಲಿನ ಚಿತ್ರಗಳನ್ನು ಸಂಗ್ರಹಿಸುವುದೂ ಒಂದು ಒಳ್ಳೆಯ ಹವ್ಯಾಸ.ಎಲ್ಲರಿಗೂ ಈ ಹವ್ಯಾಸವನ್ನು ರೂಡಿಸಿಕೊಳ್ಳಬಹುದು.ಇದು ಮನಸ್ಸಿಗೆ ಸಂತೋಷವನ್ನೂ ಆನಂದವನ್ನೂ ನೀಡುತ್ತದೆ. ಮನೆಮುಂದೆ ಕೈತೋಟ ಮಾಡಿ ವಿವಿಧ ತರಕಾರಿ ಮತ್ತು ಹೂಗಿಡಗಳನ್ನು ಬೆಳೆಸಿ ಆನಂದ ಹೊಂದಬಹುದು. ಮನೆಯ ಉಪಯೋಗಕ್ಕೂ ಅವು ಒದಗುತ್ತವೆ.ಸಿ.ಡಿ ಸಂಗ್ರಹ, ಕಸೂತಿ, ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸುವುದು, ಚಿತ್ರಕಲೆ, ಜನಪದ ಗೀತೆಗಳ ಸಂಗ್ರಹ ಮತ್ತು ಗಾಯನ, ಬರವಣಿಗೆ, ನಾಣ್ಯ ಸಂಗ್ರಹ, ಕಾಮಿಡಿ ಓದುವುದು, ಜೀವನ ಚರಿತ್ರೆಗಳನ್ನು ಓದುವುದು, ಪರ್ವತಾರೋಹಣ, ಸೈಕ್ಲಿಂಗ್, ಅಗತ್ಯ ಮಾಹಿತಿಗಳ ಪೇಪರ್ ಕಟ್ಟಿಂಗ್ ಗಳ ಜೋಡಣೆ, ಪದಬಂಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಬೊಂಬೆಗಳ ತಯಾರಿ, ವಾದ್ಯಗಳನ್ನು ನುಡಿಸುವುದು, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ, ವಾಚನ ಸ್ಪರ್ಧೆಗಳಲ್ಲಿ ಭಾಗವಹಿವುವಿಕೆ, ರಂಗೋಲಿ, ಆಟೋಗ್ರಾಫ್ ಸಂಗ್ರಹ ಈ ಮೊದಲಾದ ಹವ್ಯಾಸಗಳು ಮುದ ನೀಡುತ್ತವೆ. ಒಬ್ಬ ವ್ಯಕ್ತಿ ಎಲ್ಲ ಹವ್ಯಾಸಗಳನ್ನು ಇಟ್ಟುಕೊಳ್ಳಲಾಗುವುದಿಲ್ಲ. ಯಾವುದರಲ್ಲಿ ವಿಶೇಷ ಪರಿಣತಿ ಇರುತ್ತದೆಯೋ ಆ ಹವ್ಯಾಸವನ್ನು ಬೆಳೆಸಬಹುದು. ಹವ್ಯಾಸಿಗಳಾಗಿ ತಯಾರಿಸಿದ ವಸ್ತುಗಳನ್ನು ವಸ್ತು ಪ್ರದರ್ಶನಗಳಲ್ಲಿ ಪ್ರದರ್ಶಿಸಬಹುದು. ಉದಾ:ಅಂಚೆ ಚೀಟಿ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಇತ್ಯಾದಿ. ಇದರಿಂದ ಸಾರ್ವಜನಿಕರಿಂದ ಪ್ರಶಂಸೆ ಪಡೆಯಬಹುದು.ಹವ್ಯಾಸಗಳು ಮುದ ನೀಡಬೇಕು. ಕಾಲವೇ ನಮ್ಮ ಪ್ರಗತಿಯನ್ನು ನಿರ್ಣಯಮಾಡುತ್ತದೆ. ಆದುದರಿಂದ ಹವ್ಯಾಸಗಳಿಗಾಗಿ ಸ್ವಲ್ಪ ಸಮಯವನ್ನಾದರೂ ಮೀಸಲಿಡಬೇಕು…
|
- അക്ഷരവൃക്ഷം പദ്ധതിയിലെ സൃഷ്ടികൾ
- കാസർഗോഡ് ജില്ലയിലെ അക്ഷരവൃക്ഷം-2020 സൃഷ്ടികൾ
- കുമ്പള ഉപജില്ലയിലെ അക്ഷരവൃക്ഷം-2020 സൃഷ്ടികൾ
- അക്ഷരവൃക്ഷം പദ്ധതിയിലെ ലേഖനംകൾ
- കാസർഗോഡ് ജില്ലയിലെ അക്ഷരവൃക്ഷം ലേഖനംകൾ
- കാസർഗോഡ് ജില്ലയിലെ അക്ഷരവൃക്ഷം സൃഷ്ടികൾ
- കുമ്പള ഉപജില്ലയിലെ അക്ഷരവൃക്ഷം-2020 ലേഖനംകൾ
- കാസർഗോഡ് ജില്ലയിൽ 06/ 05/ 2020ന് ചേർത്ത അക്ഷരവൃക്ഷം സൃഷ്ടികൾ
- അക്ഷരവൃക്ഷം 2020 പദ്ധതിയിൽ നാലാം ഘട്ടത്തിൽ പരിശോധിച്ച സൃഷ്ടികൾ
- അക്ഷരവൃക്ഷം 2020 പദ്ധതിയിൽ നാലാംഘട്ടത്തിൽ പരിശോധിച്ച ലേഖനം