ಹೊನ್ನಿನ ಹೊಗೆಯಾಡಿದ ನಾಡು
ಕೃಷ್ಣ ದೇವರಾಯ ನಾಳಿದ ನಾಡು
ಹರಿಹರ ರಾಘವ ರನ್ನ..
ಪಂಪ ಪುರಂದರ ಬಸವಣ್ಣ..
ಸರ್ವಜ್ಞರು ಉದಿಸಿದ ನಾಡು
ಕನ್ನಡಿಗರ ಹೆಮ್ಮೆಯ ನಾಡು
ಸಂಗೀತ ಸಾಹಿತ್ಯ ಕಲೆಗಳ ಬೀಡು
ಕಣ್ಮನ ತಣಿಸುವ ಬೇಲೂರು ಹಳೆಬೀಡು
ಕನ್ನಡಿಗರ ಈ ಹೆಮ್ಮೆಯ ನಾಡು
ನೋಡಬೇಕು ಈ ಕನ್ನಡನಾಡು
ಹಾಡಬೇಕು ಹಾಡಬೇಕು
ಸಿರಿಗನ್ನಡ ನಾಡು..
ನೋಡಬೇಕು ನೋಡಬೇಕು
ನಮ್ಮೀ ಕನ್ನಡ ನಾಡು..
(ರಚನೆ: ಮನಿಷಾ 8 K)
ಜಿ ವಿ ಎಚ್ ಎಸ್ ಎಸ್ ಕಾರಡ್ಕ