ജി.എച്ച്.എസ്. എസ്. ബേകൂർ/അക്ഷരവൃക്ഷം/ Ohdina Mahatva
Ohdina Mahatva
ಓದಿನ ಮಹತ್ವ ಓದು ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ ಒಯ್ಯುವಂತಹ ಒಂದು ದಾರಿದೀಪವಾಗಿದೆ. ಓದಿಲ್ಲದ ಮನೆ ಆತ್ಮವಿಲ್ಲದ ದೇಹದಂತೆ”. "ನೀರಿಗೆ ನೈದಿಲೆಯೆ ಶೃಂಗಾರ ಎಂಬಂತೆ ಮಾನವನಿಗೆ ಓದುವೇ ಶೃಂಗಾರ’. ಉತ್ತಮವಾದ ಓದುವೇ ಧರ್ಮಮಾರ್ಗಕ್ಕೆ ದಾರಿದೀಪಗಳು ಹಾಗೂ ಅವುಗಳೇ ಜ್ಞಾನದ ನಿಧಿ. ಓದಿದಾಗ ದೊರೆಯುವ ತಿಳುವಳಿಕೆಯಿಂದ ಮನೆಮಂದಿಯಲ್ಲಾ ಸಂಸ್ಕೃತಿ ಸಂಪನ್ನರಾಗಿ ಬದುಕೂದರಲ್ಲಿ ಯಾವ ಸಂದೇಹವಿಲ್ಲ. ಇದು ನಿತ್ಯ ಕಾಣುವ ಸತ್ಯವಾಗಿದೆ. ರಾಮಾಯಣ ಮಹಾಭಾರತದಂತಹ ಗ್ರಂಥಗಳು ನಮಗೆ ಧರ್ಮಮಾರ್ಗವನ್ನು ತಿಳಿ ಹೇಳಿದರೆ , ಜನಪದ, ವಚನ, ದಾಸ ಸಾಹಿತ್ಯದ ಗ್ರಂಥಗಳು ಲೋತದ ಅನುಭವವನ್ನು, ಭಕ್ತಿ ಮಾರ್ಗವನ್ನು ತಿಳಿ ಹೇಳುತ್ತದೆ. ಕಾದಂಬರಿಗಳ ತಿರುಳು ನಮ್ಮನ್ನು ಚಿಂತನಶೀಲರನ್ನಾಗಿಸುತ್ತದೆ. ಮಾತ್ರವಲ್ಲದೇ ಮತ್ತೆ ಮತ್ತೆ ಓದುವಂತೆ ಮಾಡುತ್ತದೆ. ಇವು ಅಮೂಲ್ಯವಾದ ರತ್ನಗಳು ಇದ್ದಂತೆ. ಓದುವುದು ಜನರಲ್ಲಿ ಹೊಣೆಗಾರಿಕೆಯ ಅರಿವನ್ನುಂಟುಮಾಡುತ್ತದೆ. ಓದು ನಮ್ಮ ಚಿತ್ತವನ್ನು ಆದರ್ಶದತ್ತ ಕರೆದೊಯ್ಯುತ್ತಲೆ ಬಾಳಿಗೆ ಬೆಳಕನ್ನು , ಜೀವಕ್ಕೆ ಹೊಳಪನ್ನು ನೀಡುವಂತವುಗಳಾಗಿವೆ. ಒಳ್ಳೆಯ ಮಹಾವೀರರ, ಸ್ವಾತಂತ್ಯ್ರ ಹೋರಾಟಗಾರರ ಕಥೆಗಳನ್ನು ಓದುದರಿಂದ ಅವರಲ್ಲಿರುವ ಧೈರ್ಯ ಸಾಹಸ ನಮ್ಮಲ್ಲಿಯೂ ಬರುವಂತಾಗುತ್ತದೆ.ದಿನಪತ್ರಿಕೆಗಳನ್ನು ಓದುದರಿಂದ ದಿನ ದಿನದ ವಿಷಯಗಳು ನಮಗೆ ತಿಳಿಯಲ್ಪಡುತ್ತದೆ. ಓದುದರಿಂದ ನಮ್ಮ ಬುಧ್ಧಿಶಕ್ತಿಯೂ ಹೆಚ್ಚಾಗುತ್ತದೆ. ಓದಿನ ಮಹತ್ವ ಎಷ್ಟು ಬರೆದರು ಸಾಲದು. ಶಾಸ್ತ್ರ ಗ್ರಂಥಗಳು ,ಲಕ್ಷಣ ಗ್ರಂಧಗಳು, ಇತಿಹಾಸದ ಪುಸ್ತಕಗಳು, ಸಂಶೋಧನ ಪ್ರಬಂಧಗಳು ನಾಡಿನ ಜ್ಞಾನ ಸಂಪತ್ತು ಎನಿಸಿ ಜ್ಞಾನ ದೀವಿಗೆ ಆಗಿವೆ. ಓದಿಲ್ಲದವರ ಬದುಕು ಹದ್ದಿಗಿಂತ ಕಡೆ ಓದುವೇ ಜ್ಞಾನದ ಜ್ಯೋತಿ ಅನನ್ಯ ೮ ಬಿ
|
വർഗ്ഗങ്ങൾ:
- അക്ഷരവൃക്ഷം പദ്ധതിയിലെ സൃഷ്ടികൾ
- കാസർഗോഡ് ജില്ലയിലെ അക്ഷരവൃക്ഷം-2020 സൃഷ്ടികൾ
- മഞ്ചേശ്വരം ഉപജില്ലയിലെ അക്ഷരവൃക്ഷം-2020 സൃഷ്ടികൾ
- അക്ഷരവൃക്ഷം പദ്ധതിയിലെ ലേഖനംകൾ
- കാസർഗോഡ് ജില്ലയിലെ അക്ഷരവൃക്ഷം ലേഖനംകൾ
- കാസർഗോഡ് ജില്ലയിലെ അക്ഷരവൃക്ഷം സൃഷ്ടികൾ
- മഞ്ചേശ്വരം ഉപജില്ലയിലെ അക്ഷരവൃക്ഷം-2020 ലേഖനംകൾ
- കാസർഗോഡ് ജില്ലയിൽ 17/ 04/ 2020ന് ചേർത്ത അക്ഷരവൃക്ഷം സൃഷ്ടികൾ