ರಜಾಕಾಲ
ಬಂದಿತು ಬಂದಿತು ರಜಾಕಾಲವು
ಅನಿರೀಕ್ಷಿತವಿದು ಮಕ್ಕಳಿಗೆ
ಪರೀಕ್ಷೆ ಇಲ್ಲದೆ ಪಾಠಗಳಿಲ್ಲದೆ
ಮಕ್ಕಳು ಮನೆಯಲಿ ಕುಳಿತಿಹರು
ಕೊರೋನ ಎಂಬ ಮಹಾಮಾರಿಯು
ಕಲಿಕೆಯ ಸಮಯವ ನುಂಗಿಬಿಟ್ಟಿತು
ಪರೀಕ್ಷೆ ಇಲ್ಲದೆ ತೇರ್ಗಡೆ ಎಂದು
ಮಕ್ಕಳಿಗೆಲ್ಲ ಖುಷಿಯ ಕೊಟ್ಟಿತು.
ರಜೆಯ ಮಜವನು ಸವಿಯಲು ನಾವು
ಹೊರಗಡೆ ಎಲ್ಲೂ ಹೋಗದಿರೋಣ
ಈ ರಜೆಯಲ್ಲಿ ಆಟಗಳೊಂದಿಗೆ
ಪಾಠಗಳನ್ನೂ ಕಲಿದುಬಿಡೋಣ
ಚಿಣ್ಣರ ಅಂಗಳ,ಅಕ್ಷರ ವೃಕ್ಷದ
ಚಟುವಟಿಕೆಗಳನು ಮಾಡೋಣ
ರಜಾಕಾಲದಲಿ ಆಟಗಳೊಂದಿಗೆ
ಜ್ಞಾನವ ನಾವು ತುಂಬೋಣ