എ യു പി എസ് ധർമ്മത്തടുക്ക(ಎ.ಯು.ಪಿ.ಎಸ್ ಧರ್ಮತ್ತಡ್ಕ)/അക്ഷരവൃക്ഷം/ ಕೋವಿಡ್ 19 ಮಹಾಮಾರಿ

Schoolwiki സംരംഭത്തിൽ നിന്ന്
ಕೋವಿಡ್ 19 ಮಹಾಮಾರಿ
ಕೋವಿಡ್ 19 ಹೆಸರು ಕೇಳಿದರೆ ಎಲ್ಲರೂ ಭಯಪಡುವ ಒಂದು ಮಹಾ ರೋಗ.ಜಗತ್ತಿನಾದ್ಯಂತ ಈ ರೋಗವು ಬಹಳ ವೇಗವಾಗಿ ಹರಡುತ್ತಿದೆ.ವಿಶ್ವದ 200 ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಈ ರೋಗವು ಹರಡಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಮಹಾಮಾರಿ ಪಾಂಡಮಿಕ್ ಎಂದು ಕರೆದಿದೆ. ಚೀನಾ ದೇಶದ ವುಹಾನ್ ಎಂಬ ನಗರದಲ್ಲಿ 2019 ದಶಂಬರ್ ತಿಂಗಳಿನಲ್ಲಿ ಈ ರೋಗ ಹರಡಲು ಪ್ರಾರಂಭವಾಯಿತು. ಕೊರೊನಾ ಎಂಬ ವೈರಸ್ ನಿಂದ ಹರಡುವ ಕಾರಣ ಅದಕ್ಕೆ ಕೋವಿಡ್ 19 ( ಕೊರೊನಾ ವೈರಸ್ ಡಿಸೀಸ್ 19) ಎಂದು ಹೆಸರಿಟ್ಟರು. ಇಂದು ಈ ರೋಗವು ಅಮೆರಿಕ,ಇಟೆಲಿ, ಫ್ರಾನ್ಸ್, ಸ್ಪೈನ್, ಬ್ರಿಟನ್ ಮೊದಲಾದ ದೇಶಗಳಲ್ಲಿ ಭೀಕರ ಜೀವಹಾನಿಯನ್ನುಂಟುಮಾಡಿದೆ. ಈಗಾಗಲೇ 24 ಲಕ್ಷಕ್ಕೂ ಅಧಿಕ ಮಂದಿಗೆ ಈ ಕೊರೊನಾ ಸೋಂಕು ತಗಲಿದ್ದು, ಸುಮಾರು 1.65 ಲಕ್ಷಕ್ಕೂ ಅಧಿಕ ಮಂದಿ ಮರಣಹೊಂದಿದ್ದಾರೆ. ಕೊರೊನಾ ಎಂಬ ವರ್ಗಕ್ಕೆ ಸೇರಿದ ವೈರಸ್ ನಿಂದ ಈ ರೋಗ ಬರುತ್ತದೆ. ಸೋಂಕು ತಗಲಿದೆ ವ್ಯಕ್ತಿ ಸೀನುವಾಗ, ಕೆಮ್ಮುವಾಗ,ಜೊಲ್ಲುರಸದಿಂದ, ಇದು ಹರಡುತ್ತದೆ. ಸೋಂಕು ತಗಲಿ 14 ದಿನಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತೀವ್ರವಾದ ಜ್ವರ, ತಲೆನೋವು, ನೆಗಡಿ ಉಸಿರಾಟದ ತೊಂದರೆ ಇವುಗಳು ಪ್ರಧಾನವಾಗಿ ಕಂಡುಬರುವ ರೋಗಲಕ್ಷಣಗಳಾಗಿವೆ. ಈ ಲಕ್ಷಣಗಳು ಕಂಡುಬಂದರೆ ರೋಗಿಯು ಬೇರೊಬ್ಬರ ಸಂಪರ್ಕಕ್ಕೆ ಬರದಂತೆ 14 ದಿನ ಪ್ರತ್ಯೇಕವಾದ ಕೊನೆಯಲ್ಲಿ ಇರಬೇಕು. ಗಂಟಲು ಆರದಂತೆ ಆಗಾಗ ನೀರು ಕುಡಿಯಬೇಕು. ಈ ರೋಗಕ್ಕೆ ಪ್ರತ್ಯೇಕ ಔಷಧಿಯನ್ನು ಇನ್ನೂ ಕಂಡುಹಿಡಿಯಲು ಸಾಧ್ಯವಾಗಲಿಲ್ಲ.ಇದಕ್ಕೆ ಮಲೇರಿಯಾ ರೋಗಕ್ಕೆ ಕೊಡುವ ಹೈಡ್ರೋಕ್ಸಿಕ್ಲೋರೋಕ್ವೀನ್ ಸಲ್ಫೇಟ್ ಎಂಬ ಮಾತ್ರೆಯನ್ನು ನೀಡುತ್ತಾರೆ. ಈ ರೋಗವು ಹರಡದಂತೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು.ಮುಖ್ಯವಾಗಿ ಸಾಮಾಜಿಕ ಅಂತರವನ್ನು ಕಾಯಬೇಕು.ಮನೆಯಲ್ಲೇ ಇರಬೇಕು.ಅಗತ್ಯ ಇದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಬಹುದು.ಹೊರಗೆ ಹೋಗುವಾಗ ಮುಖಕ್ಕೆ ಮಾಸ್ಕ್ ಹಾಕಬೇಕು. ಹೊರಗೆ ಹೋಗಿ ಬಂದಬಳಿಕ ಕೈಗಳನ್ನು ಸಾಬೂನು ಅಥವಾ ಹ್ಯಾಂಡ್ ವಾಷ್ ಬಳಸಿ 20 ಸೆಕೆಂಡುಗಳ ಕಾಲ ಚೆನ್ನಾಗಿ ತೊಳೆಯಬೇಕು.ಅಥವಾ ಸಾನಿತೈಸರ್ ಬಳಸಿಯೂ ಕೈಗಳನ್ನು ಶುಚಿಗೊಳಿಸಬಹುದು. ಈ ರೀತಿಯಲ್ಲಿ ನಾವೆಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೆ ಈ ರೋಗದಿಂದ ಮುಕ್ತಿಹೊಂದಬಹುದು.
TANUSH KUMAR N
6 C എ യു പി എസ് ധർമ്മത്തടുക്ക(ಎ.ಯು.ಪಿ.ಎಸ್ ಧರ್ಮತ್ತಡ್ಕ)
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം


 സാങ്കേതിക പരിശോധന - Sathish.ss തീയ്യതി: 20/ 06/ 2020 >> രചനാവിഭാഗം - ലേഖനം