എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ/അക്ഷരവൃക്ഷം/ Corona virus (Covid - 19)

Schoolwiki സംരംഭത്തിൽ നിന്ന്
Corona virus (Covid - 19)

ಕೊರೋನಾ ವೈರಸ್ ಕೋವಿದ್-19 ಕೊರೋನಾ ವೈರಸ್ ಎಂಬ ಹೆಸರು ಲ್ಯಾಟಿನ್ ಭಾಷೆಯ 'ಕೊರೋನಾ'ಎಂಬ ಪದದಿಂದ ಬಂದಿದೆ.'ಕೊರೊನಾ' ಎಂದರೆ 'crown'ಅಂದರೆ 'ಕಿರೀಟ'ಎಂದು ಅರ್ಥ.ಕೊರೋನಾ ವೈರಸ್ ಎಂದರೆ ವೈರಸ್ ಗಳಲ್ಲಿ ಒಂದು ಗುಂಪು. ಸಾಮಾನ್ಯವಾಗಿ ಈ ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣ ಹೀಗೆ ಹೆಸರು ಇಡಲಾಗಿದೆ. ಕೊರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟುಮಾಡುವ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ,ಸಸ್ತನಿಗಳ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಕೊರೋನಾ ವೈರಸ್ ಎಂಬುದು ಪ್ರಾಣಿಗಳಲ್ಲಿ ಕಂಡುಬರುವ ಸೋಂಕು ಆಗಿದೆ. ಈಗ ಪ್ರಾಣಿಗಳಿಂದ ಮನುಷ್ಯರಿಗೂ ಈ ಸೋಂಕು ತಗಲುತ್ತಿದೆ.ಕೆಲವೊಂದು ಕೊರೋನಾ ವೈರಸ್ ಗಳು ಪ್ರಾಣಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಕೊರೋನಾ ವೈರಸ್ಅನ್ನು ಕೋವಿದ್-19 ಎಂದೂ ಕರೆಯಲಾಗುತ್ತದೆ. ಇದು ಮೊತ್ತ ಮೊದಲು ಚೀನಾದ ವುಹಾಂಗ್ ಎಂಬಲ್ಲಿ ಡಿಸೆಂಬರ್ 2019ರಲ್ಲಿ ಕಾಣಿಸಿಕೊಂಡಿತು. ಈ ರೋಗವು ಸಾಮಾನ್ಯ ಶೀತ ಮತ್ತು ಕೆಮ್ಮಿನಿಂದ ಆರಂಭವಾಗುತ್ತದೆ. ಕೊರೋನಾ ವೈರಸ್ ಗಾಳಿಯಲ್ಲಿ 3 ಗಂಟೆಗಳ ಕಾಲ ಇರುತ್ತದೆ.ತಾಮ್ರದಲ್ಲಿ4ಗಂಟೆಗಳು,ಕಾರ್ಡ್ ಬೋರ್ಡ್ ನಲ್ಲಿ24 ಗಂಟೆಗಳು,ಪ್ಲಾಸ್ಟಿಕ್ ವ ಮತ್ತು ಸ್ಟೀಲ್ ನಲ್ಲಿ 72ಗಂಟೆಗಳ ಕಾಲ ಇರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. ಲಕ್ಷಣಗಳು: ಕೋವಿದ್-19 ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದರಿಂದ,2ರಿಂದ 14ದಿನಗಳೊಳಗೆ ಇದರ ಲಘು ಅಥವಾ ತೀವ್ರತರದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಕೊರೋನಾ ವೈರಸ್ ನಿಂದಾಗಿ ಸಾಮಾನ್ಯ ಶೀತ,ನಿಮೋನಿಯಾ ಮತ್ತು ತೀವ್ರ ರೀತಿಯ. ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುತ್ತದೆ. ಮೊದಲು ಶೀತ ಕಾಣಿಸಿಕೊಳ್ಳುತ್ತದೆ. ಕ್ರಮೇಣವಾಗಿ ತಲೆನೋವು ಕಾಣಿಸಿಕೊಂಡು ಇಡೀ ದೇಹವನ್ನು ಆವರಿಸಿಕೊಳ್ಳುತ್ತದೆ.ಇದು ಸಾಮಾನ್ಯ ಶೀತದಂತಹ ಲಘು ಪ್ರಮಾಣದಿಂದ, ಮದ್ಯಮ ಪ್ರಮಾಣದ,ಮೇಲ್ಭಾಗದ ಶ್ವಾಸಕೋಶದ ಸೋಂಕನ್ನು ಉಂಟುಮಾಡುತ್ತದೆ. ಆದರೆ ಇದು ಕೆಲವೊಂದು ಸಲ ತೀವ್ರ ರೀತಿಯ ನಿಮೋನಿಯಾ ಮತ್ತು ಬ್ಯಾಂಕ್ರೈಟಿಸ್ ಉಂಟುಮಾಡುತ್ತದೆ.ಮನುಷ್ಯರನ್ನು ಕಾಡುವಂತಹ ಕೊರೋನಾ ವೈರಸ್ ನಲ್ಲಿ ಹಲವು ವಿಧಗಳಿವೆ. ಇದರಲ್ಲಿ ಮೆರ್ಸ್ ಮತ್ತು ಸಾರ್ಸ್ ವೈರಸ್ ಸೇರಿದೆ. ಹರಡುವಿಕೆ: ರೋಗವಿರುವವರು ಕೆಮ್ಮಿದರೆ ,ಕೈ ಕುಲುಕಿದರೆ, ಯಾವುದೋ ವಸ್ತುವನ್ನು ಮುಟ್ಟಿ ಅಥವಾ ಪ್ರಾಣಿಗಳನ್ನು ಮುಟ್ಟಿ ಕೈ ತೊಳೆಯದೆ ಮುಖ್ಯ ಅಂಗಾಂಗಗಳನ್ನು ಅಥವಾ ಬಾಯಿ ಮುಟ್ಟಿದಾಗ ಈ ರೋಗ ಹರಡುವ ಸಾಧ್ಯತೆಗಳಿವೆ. ಚಿಕಿತ್ಸೆ ಅಥವಾ ಮುಂಜಾಗ್ರತಾ ಕ್ರಮಗಳು: ಈಗ ಸದ್ಯಕ್ಕೆ ಕೊರೋನಾ ವೈರಸ್ ಗೆ ಯಾವುದೇ ಔಷಧ ಹಾಗೂ ಲಸಿಕೆಯನ್ನು ಕಂಡುಹಿಡಿದಿಲ್ಲ.ಆದರೆ ಆ ಸೋಂಕು ಹರಡದಂತೆ ಕೊಂಚ ಮಟ್ಟಿಗೆ ತಡೆಗಟ್ಟಬಹುದು. ಕೈಕಾಲುಗಳನ್ನು ಸೋಪುನೀರಿನಿಂದ ಆಗಾಗ ತೊಳೆಯಬೇಕು. ನಾವು ಉಪಯೋಗಿಸುವ ಸಾನಿಟೈಸರ್ ಆಲ್ಕೋಹಾಲ್ ಆಧಾರಿತವಾಗಿರಬೇಕು.ಅದರಲ್ಲಿ 60% ಆಲ್ಕೋಹಾಲ್ ಇರಬೇಕು. ಕಣ್ಣು, ಬಾಯಿ, ಮೂಗನ್ನು ಕೈಯಿಂದ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಸೀನುವಾಗ,ಕೆಮ್ಮುವಾಗ ಟಿಶ್ಯೂ ಪೇಪರ್,ಕರವಸ್ತ್ರ ಅಥವಾ ಕೈಯನ್ನು ಅಡ್ಡ ಹಿಡಿಯಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಸೋಂಕಿನ ಲಕ್ಷಣಗಳು ಕಂಡುಬರುವವರಿಂದ ದೂರ ಇರಬೇಕು. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಬೇಕು. ಸಭೆ ಸಮಾರಂಭಗಳು ಮತ್ತು ಜನದಟ್ಟಣೆಯಿಂದ ದೂರವಿರಬೇಕು. ಸೋಂಕಿರುವ ಪ್ರದೇಶಗಳಿಗೆ ಅನಗತ್ಯ ಭೇಟಿ ನೀಡಬಾರದು. ಇಂತಹ ಲಕ್ಷಣಗಳು ಕಂಡು ಬಂದರೆ ಕ್ವಾರಂಟ್ಐನ್ ನಲ್ಲಿ ಇರಬೇಕು. ಸುತ್ತ ಮುತ್ತ ಜನರಿರುವಲ್ಲಿ ಮಾಸ್ಕ್ ಅನ್ನು ಧರಿಸಬೇಕು. ಆರೋಗ್ಯ ಪೂರ್ಣವಾದ ಆಹಾರವನ್ನು ಸೇವಿಸಬೇಕು. ಮೃತ ಹಾಗೂ ರೋಗಪೀಡಿತ ಪ್ರಾಣಿಗಳಿಂದ ದೂರವಿರಬೇಕು. ಸರಿಯಾಗಿ ಬೇಯಿಸಿದ ಆಹಾರವನ್ನೇ ಸೇವಿಸಬೇಕು. ಬಿಸಿಯಾದ ನೀರನ್ನೇ ಕುಡಿಯಬೇಕು.ತಂಪು ಪಾನೀಯಗಳಿಂದ ದೂರವಿರಬೇಕು. ರೋಗನಿರೋಧಕ ಶಕ್ತಿ ಹೆಚ್ಚಿಸುವುದರತ್ತ ಗಮನ ಹರಿಸಬೇಕು. ಇದು ಒಂದು ಹೊಸ ಸೋಂಕು ರೋಗವಾದ ಕಾರಣ ಇದಕ್ಕೆ ಔಷಧ ಕಂಡು ಹಿಡಿದು ಆಗಬೇಕಷ್ಟೆ.ಯಾವುದೇ ಪ್ಲೂವಿಗೆ ಸಂಬಂಧಿಸಿದ ಲಸಿಕೆಯು ನಮ್ಮನ್ನು ಕೊರೋನಾ ವೈರಸ್ ನಿಂದ ರಕ್ಷಿಸುವುದಿಲ್ಲ.ಆದುದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಸ್ವ ಇಚ್ಛೆಯಿಂದ ಮನೆಯಲ್ಲಿ ಇದ್ದು ತಮ್ಮನ್ನೂ,ಕುಟುಂಬವನ್ನೂ,ಸಮಾಜವನ್ನೂ,ದೇಶವನ್ನೂ ಹಾಗೂ ವಿಶ್ವವನ್ನು ಕೊರೋನಾ ವೈರಸ್ ಸೋಂಕಿನಿಂದ ರಕ್ಷಿಸುವಲ್ಲಿ ಜವಾಬ್ದಾರಿಯುತ ನಿಲುವನ್ನು ಹೊಂದಬೇಕು.


Poorvi.S.Bharanekhar
5 - എസ് വി എ യു പി എസ് സ്വർഗ്ഗ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - ലേഖനം