എസ്. എന്. എച്ച്എസ്. പെർള/അക്ഷരവൃക്ഷം/ Shaalegalalli aatotagala pradhanyathe

Schoolwiki സംരംഭത്തിൽ നിന്ന്
Shaalegalalli aatotagala pradhanyathe


ಮಕ್ಕಳ ಲೋಕದಲ್ಲಿ ಆಟಗಳಿಗೆ ವಿಶೇಷ ವಾದ ಸ್ಥಾನವಿದೆ. ಆಟಗಳು ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಅತೀ ಅಗತ್ಯ ವಾಗಿದೆ. ದೇಹದಾಡ್ಯವನ್ನು ಪಡೆಯಲು ಆಟೋಟಗಳು ಅತೀ ಮುಖ್ಯ.ಕೇವಲ ಓದಿನಲ್ಲಿಯೇ ತೊಡಗಿ ಯಾವ ಆಟದಲ್ಲಿಯೂ ತೊಡಗಿಸಿಕೊಳ್ಳದಿದ್ದರೆ ಆ ಹುಡುಗ ಅಥವಾ ಹುಡುಗಿ ಮಂಕಾಗುತ್ತಾನೆ.ಗೆಲುವಾಗಿ ಇರಬೇಕಾದರೆ ಬೇರೆ ಬೇರೆ ಆಟಗಳಲ್ಲಿ ಭಾಗವಹಿಸುತ್ತಾ ಇರಬೇಕು.ಪ್ರತಿನಿತ್ಯ ಯಾವುದಾದರೂ ಆಟಗಳನ್ನು ಆಡಬೇಕು. ಶಾಲೆಗಳಲ್ಲಿ ಆಟೋಟಗಳಲ್ಲಿ ಭಾಗವಹಿಸುವ ಮಕ್ಕಳು ಸದಾ ಲವಲವಿಕೆಯಿಂದ ಕುಣಿಯುತ್ತಿರುತ್ತಾರೆ.ಆಟೋಟಗಳಲ್ಲಿ ಭಾಗವಹಿಸಿದಾಗ ನೀತಿ ನಿಯಮಗಳನ್ನು ಪಾಲಿಸಬೇಕು. ಇದರಿಂದ ಮುಂದೆಯೂ ಈ ಮನೋಭಾವ ಬೆಳೆದು ಜೀವನದುದ್ದಕ್ಕೂ ಎಲ್ಲಾ ಕ್ಷೇತ್ರದಲ್ಲೂ ನೀತಿಯುತವಾಗಿ ನಿಯಮಗಳನ್ನು ಉಲ್ಲಂಘಿಸದೆ ಬಾಳುವುದನ್ನು ಕಲಿಸುತ್ತದೆ. ಈಗ ಶಾಲೆಗಳಲ್ಲಿ ದೈಹಿಕ ಶಿಕ್ಷಣವನ್ನು ಕಡ್ಡಾಯ ಮಾಡಿದ್ದಾರೆ. ಇದರಲ್ಲಿ ಶಾಲೆಯ ಎಲ್ಲಾ ಮಕ್ಕಳೂ ಭಾಗವಹಿಸುತ್ತಾರೆ. ಆಟಗಳು ಹೆಚ್ಚು ಕಡಿಮೆ ಪಾಠಗಳಷ್ಟೇ ಪ್ರಧಾನ್ಯತೆಯನ್ನು ಪಡೆದಿದೆ. ಆಟಗಳಿಂದ ಮಕ್ಕಳಿಗೆ ಶಾರೀರಿಕ ವ್ಯಾಯಾಮ ಸಿಗುತ್ತದೆ. ಅಲ್ಲದೆ ಮಾನಸಿಕ ಲವಲವಿಕೆಯು ಉಂಟಾಗುತ್ತದೆ.


ASHA P
7 B എസ്. എന്. എച്ച്എസ്. പെർള
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - ലേഖനം