എച്ച് എഫ് എ എസ് ബി എസ് കുമ്പള/അക്ഷരവൃക്ഷം/ ರಾಷ್ಟ್ರೀಯ ಭಾವೈಕ್ಯ (raastriya bhaaveikya)

Schoolwiki സംരംഭത്തിൽ നിന്ന്
ರಾಷ್ಟ್ರೀಯ ಭಾವೈಕ್ಯ (raastriya bhaaveikya)
ಭಾರತ ದೇಶವು ಭವ್ಯ ಸಂಸ್ಕೃತಿ ಪರಂಪರೆಯನ್ನು ಹೊತ್ತ ನಾಡಾಗಿದೆ. ಅನಾದಿ ಕಾಲದಿಂದಲೇ, ಇಲ್ಲಿ ಅನೇಕ ಜನಾಂಗದವರಿಂದ, ಸಂಸ್ಕೃತಿ ಯವರಿಂದ ಆಕ್ರಮಣವು ನಡೆಯಿತು. ಎಲ್ಲರನ್ನು ತನ್ನೊಡಲೊಳಗೆ ಸೇರಿಸಿಕೊಂಡು ಭಾರತವು ಇಂದಿಗೂ ಒಂದು ಅಖಂಡ ರಾಷ್ಟ್ರವಾಗಿ ನೆಲೆನಿಂತಿದೆ. ಭಾರತದೊಳಗಿನ ಏಕತೆಯ ಭಾವನೆ ಇದಕ್ಕೆ ಮುಖ್ಯ ಕಾರಣವಾಗಿದೆ. ಭಾರತಮಾತೆಯ ಒಡಲು ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ ಜನರು, ಬುದ್ಧರು, ಹೀಗೆ ಹಲವು ಧರ್ಮಗಳ ಆಗರವಾಗಿದೆ. ಇಲ್ಲಿ ಎಲ್ಲರೂ ಸಮಾನರು. ಸಮಾನತೆಯಿಂದ ಬಾಳುವವರು. ಬಿನ್ನ ಬಿನ್ನ ಜೀವನ ಸಂಸ್ಕೃತಿ ಗಳಿದ್ದರೂ ಎಲ್ಲರೂ ಸೌಹಾರ್ದತೆಯಿಂದ ಬಾಳುತ್ತಿರುವುದು ಇಲ್ಲಿಯ ಜನತೆಯ ಪರಿಣಾಮವಾಗಿದೆ.

ಸ್ವಾತಂತ್ರ್ಯದ ನಂತರ, ಉತ್ತರ ಭಾರತದಲ್ಲಿ ಮತ್ತು ಭಾರತದ ಹೆಚ್ಚಿನ ಭಾಗದಲ್ಲಿ ಹಿಂದಿ ಭಾಷೆಯನ್ನು ಮಾತನಾಡುವ ಜನರು ನೆಲೆಸಿರುವುದರಿಂದ ಹಿಂದಿ ರಾಷ್ಟ್ರಭಾಷೆಯನ್ನಾಗಿ ಸ್ವೀಕರಿಸಲಾಯಿತು ಹಾಗೂ ಇತರ ಭಾಷೆಗಳಿಗೂ ಪ್ರಾಧಾನ್ಯವು ದೊರೆಯಿತು. ಮುಂದಿನ ಜನಾಂಗ ವಾಗಿರುವ ಇಂದಿನ ಮಕ್ಕಳಲ್ಲಿ ಏಕತೆಯ ಭಾವನೆಯು ಹೆಚ್ಚಾಗಿ ಮೂಡಬೇಕಾಗಿದೆ. ಹೀಗೆ ವಿವಿಧ ಜಾತಿ, ಧರ್ಮ, ಭಾಷೆ ಮತ್ತು ಸಂಸ್ಕೃತಿಗಳು ನೆಲೆಸಿದ್ದರು, ಭಾರತೀಯರೆಂಬ ಏಕತೆಯ ಭಾವವು ರಾಷ್ಟ್ರವನ್ನು ರಕ್ಷಿಸುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ, ಎಲ್ಲರೂ ಏಕತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು. ವಿಶ್ವದೆಲ್ಲೆಡೆಯ ಭಾರತವು ಶಾಂತಿ ಪ್ರತೀಕದ ಒಂದು ಮಾದರಿ ರಾಷ್ಟ್ರವಾಗಿ ಮೆರೆಯಲಿ. "ಏಕತೆ ನಮ್ಮ ಮಂತ್ರ ಸಹಬಾಳ್ವೆ ಅದರ ತಂತ್ರ" ಜೈ ಹಿಂದ್.

SAHITHYA. V. RAI
4 B എച്ച് എഫ് എ എസ് ബി എസ് കുമ്പള ಎಚ್ ಎಫ್ ಎ ಎಸ್ ಬಿ ಎಸ್ ಕುಂಬಳೆ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം