ജി. എച്ച്. എസ്. എസ്. ബന്തടുക്ക/അക്ഷരവൃക്ഷം/ ಚಿಗುರಿದ ಗೆಳೆತನ...

Schoolwiki സംരംഭത്തിൽ നിന്ന്
ಚಿಗುರಿದ ಗೆಳೆತನ...

ಒಂದು ಕಾಡಿನಲ್ಲಿ ಒಂದು ಮಾವಿನ ಮರವಿತ್ತು. ಅದರಲ್ಲಿ ಒಂದು ಅಳಿಲು ಮರಿ ವಾಸಿಸುತ್ತಿತ್ತು. ಅಳಿಲು ಮರಿಗೂ ಮಾವಿನ ಮರಕ್ಕೂ ಆತ್ಮೀಯ ಗೆಳೆತನವಿತ್ತು. ಹೀಗಿರುವಾಗ ಅಳಿಲು ಮರಿ ಒಮ್ಮೆ ಸುತ್ತಾಡಲು ಹೋಗಿ ತಿರುಗಿ ಬಂದಾಗ ಮಾವಿನ ಮರವು ಅಳಿಲು ಮರಿಯೊಡನೆ: ‘ಪ್ರವಾಸ ಮುಗಿಸ್ಕೊಂಡ್ಯಾ?’ ಎಂದು ಕೇಳಿತು. ಆಗ ಅಳಿಲು ಮರಿ: `ಹೌದು, ಮುಗಿಸಿದೆ. ಚೆನ್ನಾಗಿತ್ತು' ಎಂದಿತು. ದಿನ ಕಳೆದಂತೆ ಅಳಿಲು ಮರಿ ಮತ್ತು ಮಾವಿನ ಮರದ ಸಂಬಂಧ ಗಾಢವಾಗುತ್ತಾ ಬಂತು. ಅಳಿಲು ಮರಿಯು ಮಾವಿನ ಮರದೊಡನೆ, `ಗೆಳೆಯಾ, ನಮ್ಮ ಈ ಗೆಳೆತನದಿಂದ ನಾನು ತುಂಬ ಸಂತೋಷದಿಂದಿದ್ದೇನೆ' ಎಂದಿತು. ಒಂದು ದಿನ ಹಲವಾರು ಹಕ್ಕಿಗಳು ಆ ಕಾಡಿಗೆ ವಲಸೆ ಬಂದುವು. ಮಾವಿನ ಮರವನ್ನು ನೋಡಿದ ಹಕ್ಕಿಗಳು ಅದರಲ್ಲಿ ಆಶ್ರಯ ಪಡೆಯಲು ತೀರ್ಮಾನಿಸಿದುವು. ಮಾವಿನ ಮರವೂ ಸಮ್ಮತಿಸಿತು. ಹಕ್ಕಿಗಳ ಚಿಲಿಪಿಲಿ ಶಬ್ದ, ಹಾರಾಟ, ಗದ್ದಲದಿಂದ ಮಾವಿನ ಮರಕ್ಕೆ ಅಹಂಕಾರ ಬಂತು. ಅದು ಅಳಿಲು ಮರಿಯೊಡನೆ ತಾತ್ಸಾರದಿಂದ ಇರತೊಡಗಿತು. ಇದರಿಂದ ಅಳಿಲುಮರಿಗೆ ಬೇಸರವಾಯಿತು. `ಗೆಳೆಯಾ ಯಾಕೆ ಹೀಗಿದ್ದೀಯಾ?’ ಎಂದಿತು. ಮಾವಿನ ಮರವು `ಇನ್ನು ಮುಂದೆ ನೀನಿಲ್ಲಿ ವಾಸಮಾಡಬೇಡ. ನಿನಗೆ ಇಲ್ಲಿ ಜಾಗವಿಲ್ಲ' ಎಂದಿತು. ಅಳಿಲುಮರಿ ಬೇಸರದಿಂದ ಬೇರೆ ಮರ ಹುಡುಕುತ್ತ ಹೋಯಿತು. ತಿಂಗಳುಗಳ ಬಳಿಕ ಮಾವಿನ ಮರದಲ್ಲಿದ್ದ ಹಣ್ಣುಗಳೆಲ್ಲ ಮುಗಿಯುತ್ತಾ ಬಂತು. ಹಕ್ಕಿಗಳು `ಇನ್ನು ಇಲ್ಲಿದ್ದರೆ ನಾವು ಹಸಿವಿನಿಂದ ಸಾಯಬೇಕಾದೀತು' ಎಂದು ಹೇಳಿ ಅಲ್ಲಿಂದ ಹೊರಟುಹೋದವು. ಹಕ್ಕಿಗಳ ಸದ್ದುಗದ್ದಲಗಳಿಲ್ಲದೆ ಮರಕ್ಕೆ ಬೇಸರವಾಯಿತು. ಏಕಾಕಿತನ ಕಾಡತೊಡಗಿತು. ಆಗ ಅಲ್ಲಿಗೆ ಬಂದ ಅಳಿಲು ಮರಿಯು `ಗೆಳೆಯಾ, ಯಾರೇ ನಿನ್ನಿಂದ ದೂರವಾದರೂ ನಾನು ಸದಾ ನಿನ್ನ ಜೊತೆಗೇ ಇರುವೆನು' ಎಂದಿತು. ಮಾವಿನ ಮರಕ್ಕೆ ತನ್ನ ತಪ್ಪಿನ ಅರಿವಾಯಿತು. ಅದು ಮತ್ತೆ ಅಳಿಲುಮರಿಯೊಡನೆ ತನ್ನ ಗೆಳೆತನವನ್ನು ಮುಂದುವರಿಸಿತು.

ಸುವಿಕ್ಷ ಕೆ ಆರ್
8 ಕನ್ನಡ ജി.എച്ച്.എസ്. എസ്. ബന്തടുക്ക
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കഥ


 സാങ്കേതിക പരിശോധന - Latheefkp തീയ്യതി: 01/ 02/ 2022 >> രചനാവിഭാഗം - കഥ