എ യു പി എസ് ധർമ്മത്തടുക്ക(ಎ.ಯು.ಪಿ.ಎಸ್ ಧರ್ಮತ್ತಡ್ಕ)/അക്ഷരവൃക്ഷം/ ಕೋವಿಡ್ 19 ಎಂಬ ಮಹಾಮಾರಿ

Schoolwiki സംരംഭത്തിൽ നിന്ന്
ಕೋವಿಡ್ 19 ಎಂಬ ಮಹಾಮಾರಿ

ಕೊರೊನಾ ಹೆಸರು ಕೇಳಿದರೆ ಜಗತ್ತಿನಾದ್ಯಂತ ಎಲ್ಲರೂ ಭಯ ಪಡುತ್ತಿದ್ದಾರೆ.ಹೌದು ಇಂದು ವಿಶ್ವದಾದ್ಯಂತ ಹರಡಿರುವ ಒಂದು ಮಹಾಮಾರಿಯೇ ಕೋವಿಡ್ 19 ಅಥವಾ ಕೊರೊನಾ ವೈರಸ್ ಡಿಸೀಸ್ 19. ವಿಶ್ವದಾದ್ಯಂತ ಹರಡಿರುವ ಕಾರಣ ಇದನ್ನು ವಿಶ್ವ ಆರೋಗ್ಯ ಸಂಸ್ಥೆಯು ಪಾಂಡಮಿಕ್ ಎಂದು ಕರೆದಿದೆ.ಈ ರೋಗವು ಮೊಟ್ಟಮೊದಲು ಕಂಡುಬಂದುದು 2019 ದಶಂಬರ್ ತಿಂಗಳಿನಲ್ಲಿ ಚೀನಾ ದೇಶದ ವುಹಾನ್ ನಗರದಲ್ಲಿ. ಇದು ಕೊರೊನಾ ವರ್ಗಕ್ಕೆ ಸೇರಿದ ವೈರಸ್ ಗಳಿಂದ ಹರಡುತ್ತದೆ.ಆದುದರಿಂದಲೇ ಇದಕ್ಕೆ ಕೋವಿಡ್ 19 ಎಂದು ಹೆಸರಿಟ್ಟರು. ಇಂದು ಅಮೆರಿಕ,ಇಟೆಲಿ, ಫ್ರಾನ್ಸ್, ಸ್ಪೇನ್,ಜರ್ಮನಿ,ಬ್ರಿಟನ್ ಸಹಿತ ವಿಶ್ವದಾದ್ಯಂತ 200ಕ್ಕೂ ಹೆಚ್ಚು ದೇಶಗಳಲ್ಲಿ ಈ ಕೊರೊನಾ ಸೋಂಕು ಹರಡಿದೆ. ಈಗಾಗಲೇ 27 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು 1.90 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.ನಮ್ಮ ದೇಶದಲ್ಲೂ ಈ ರೋಗವು ಹರಡುತ್ತಿದೆ.ಈಗಾಗಲೇ 22 ಸಾವಿರದಷ್ಟು ಮಂದಿಗೆ ಸೋಂಕು ತಗಲಿದ್ದು 650 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಕೊರೊನಾ ಸೋಂಕು ತಗಲಿದ ವ್ಯಕ್ತಿಯು ಸೀನುವಾಗ, ಕೆಮ್ಮುವಾಗ,ಜೊಲ್ಲುರಸದಿಂದ ಈ ವೈರಸ್ ಗಳು ಹರಡುತ್ತವೆ.ಸೋಂಕು ತಗಲಿ 14 ದಿವಸದ ಬಳಿಕ ವ್ಯಕ್ತಿಯಲ್ಲಿ ರೋಗಲಕ್ಷಣಗಳು ಕಂಡುಬರುತ್ತವೆ.ಅತಿಯಾದ ಜ್ವರ, ತಲೆನೋವು, ನೆಗಡಿ, ಉಸಿರಾಟದ ತೊಂದರೆ ಈ ರೋಗದ ಲಕ್ಷಣಗಳಾಗಿವೆ. ರೋಗಲಕ್ಷಣಗಳು ಕಂಡುಬಂದರೆ ರೋಗಿಯು ಸ್ವತಃ ಇನ್ನೊಬ್ಬರ ಸಂಪರ್ಕಕ್ಕೆ ಬಾರದಂತೆ ಪ್ರತ್ಯೇಕವಾಗಿ 14 ದಿನ ಪ್ರತ್ಯೇಕವಾಗಿ ಇರಬೇಕು. ಇದಕ್ಕೆ ಪ್ರತ್ಯೇಕವಾದ ಔಷಧಿಯನ್ನು ಇದುವರೆಗೆ ಕಂಡುಹಿಡಿಯಲು ಸಾಧ್ಯವಾಗಲಿಲ್ಲ.ಈಗ ಮಲೇರಿಯಾ ರೋಗಕ್ಕೆ ಕೊಡುವ ಹೈಡ್ರೋಕ್ಸಿ ಕ್ಲೋರೋಕ್ವೀನ್ ಸಲ್ಫೇಟ್ ಎಂಬ ಮಾತ್ರೆಯನ್ನು ನೀಡುತ್ತಾರೆ.

ಇದನ್ನು ತಡೆಯಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದೇ ಪ್ರಧಾನ ಮಾರ್ಗವಾಗಿದೆ.ಆದಷ್ಟುಹೊರಗಡೆ ಹೋಗದೆ ಮನೆಯಲ್ಲೇ ಇರಬೇಕು. ಅಗತ್ಯ ಇದ್ದರೆ ಮಾತ್ರ ಹೊರಗೆ ಹೋಗಬಹುದು.ಹೊರಗೆ ಹೋಗುವಾಗ ಮುಖಕ್ಕೆ ಮಾಸ್ಕ್ ಧರಿಸಬೇಕು.ಹೊರಗೆ ಹೋಗಿ ಬಂದ ಮೇಲೆ ಕೈಗಳನ್ನು ಸಾಬೂನು ಅಥವಾ ಹ್ಯಾಂಡ್ ವಾಷ್ ಬಳಸಿ 20 ಸೆಕೆಂಡು ಚೆನ್ನಾಗಿ ತೊಳೆಯಬೇಕು.ಅಥವಾ ಸಾನಿತೈಸರ್ ಬಳಸಿ ಶುಚಿಗೊಳಿಸಬೇಕು.ಈ ರೀತಿಯಲ್ಲಿ ನಾವೆಲ್ಲರೂ ಕೋವಿಡ್ 19 ವಿರುದ್ಧ ಜಾಗೃತರಾಗಿರೋಣ ಸಮಾಜವನ್ನು ದೇಶವನ್ನು ಕೊರೊನ ಕಪಿಮುಷ್ಟಿಯಿಂದ ಬಿಡಿಸೋಣ.


TANISHA KUMAR N (ತನುಶ್ ಕುಮಾರ್ N)
6 C എ യു പി എസ് ധർമ്മത്തടുക്ക(ಎ.ಯು.ಪಿ.ಎಸ್ ಧರ್ಮತ್ತಡ್ಕ)
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം


 സാങ്കേതിക പരിശോധന - Sathish.ss തീയ്യതി: 20/ 06/ 2020 >> രചനാവിഭാഗം - ലേഖനം