ದೇಶ ಕಾಯ್ವ ಸೈನಿಕ
ನಮ್ಮ ಪ್ರಾಣ ರಕ್ಷಕ
ನಿನ್ನ ಸೇವೆ ಎಷ್ಟೊಂದು
ಸಾಟಿಯಿಲ್ಲ ಇನ್ನೊಂದು |
ತನ್ನ ಪ್ರಾಣವ ಮುಡಿಪಾಗಿಟ್ಟು
ದೇಶ ರಕ್ಷಣೆಯ ಪಣವ ತೊಟ್ಟು
ಶತ್ರುಗಳೊಡನೆ ಗುಂಡಿನಾಟ
ಸಾವಿನೊಡನೆ ಸೆಣಸಾಟ |
ಹಗಲು ರಾತ್ರಿ ಭೇದವಿಲ್ಲ
ಬಂಧು ಬಳಗ ಜೊತೆಯಲಿಲ್ಲ
ನಮ್ಮ ನಾಳೆಗಾಗಿ ದುಡಿವೆ
ನಿನ್ನ ನಾಳೆಯನ್ನು ಮರೆವೆ ... |