ರೈತ

ಬೆಳ್ಳಂಬೆಳಗೆ ಏಳುವನು
ಹೊಲದ ಕಡೆಗೆ ಸಾಗುವನು
ನೊಗ ನೇಗಿಲು ಹಿಡಿಯುವನು
ಹೊಲದಲಿ ಮಣ್ಣನು ಉಳುವನು

ರೈತನೆ ನಮ್ಮ ಅನ್ನದಾತ
ಅವನೇ ನಮ್ಮ ಲೋಕದಾತ
ಲೋಕದ ಆಸ್ತಿಯೆ ಅವನಿಂದ
ಎಲ್ಲರ ಉಸಿರು ಅವನಿಂದ

ಹಚ್ಚ ಹಸುರಿನ ಪೈರನು ಬೆಳೆಸಿ
ಹಸಿವಿಂಗಿಸುವ ಶ್ರೇಷ್ಠನು ಅವನು
ಬೆಳ್ಳಂಬೆಳಗೆ ಏಳುವನು
ತಂಗಲು ಗಂಜಿ ಉಣ್ಣುವನು

ಭಾರತಮಾತೆಯ ಮಣ್ಣಿನ ಮಗನು
ಕಷ್ಟವೊ ನಷ್ಟವೊ ಬೆಳೆಸುವ ಬೆಳೆಯ
ತನ್ನಯ ಜೀವವ ಮುಡಿಪಾಗಿಡುತ
ಕಾಯಕ ನಿಷ್ಠೆಯ ಕಾಯುತಲಿರುವನು

ವಿನಯ ಬಿ.
X ജി.എച്ച്.എസ്. എസ്. മൊഗ്രാൽ പുത്തൂർ
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Latheefkp തീയ്യതി: 05/ 05/ 2020 >> രചനാവിഭാഗം - കവിത